ಅನುದಿನದ ಮನ್ನಾ
ನಿರುತ್ಸಾಹ ಪಡಿಸುವ ಬಾಣಗಳನ್ನು ಜಯಿಸುವುದು-1
Tuesday, 11th of June 2024
2
1
249
Categories :
ನಿರುತ್ಸಾಹ ಪಡಿಸು (Discouragement)
ಬಿಡುಗಡೆ (Deliverance)
"ಇದಲ್ಲದೆ ಜನರು ತಮ್ಮ ಗಂಡುಹೆಣ್ಣು ಮಕ್ಕಳಿಗಾಗಿ ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡು ದಾವೀದನನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದದರಿಂದ ಅವನು ಬಲು ಇಕ್ಕಟ್ಟಿನಲ್ಲಿ ಬಿದ್ದನು. ಆದರೂ ಅವನು ತನ್ನ ದೇವರಾದ ಯೆಹೋವನಲ್ಲಿ ತನ್ನನ್ನು ಬಲಪಡಿಸಿಕೊಂಡನು..."(1 ಸಮುವೇಲನು 30:6)
ಈ ಭೂಮಿಯ ಮೇಲೆ ಒಂದಲ್ಲ ಒಂದು ರೂಪದಲ್ಲಿ ನಿರಾಶೆಯ ಹಾದಿಯನ್ನು ದಾಟದಂತ ಒಬ್ಬ ಮನುಷ್ಯನಾದರೂ ಇಲ್ಲ. ಕೆಲವೊಂದು ಸಂಗತಿಗಳು ನಾವು ಯೋಜಿಸಿದಂತೆ ಆಗದಿದ್ದರೆ ನಾವು ನಿರಾಶೆಗೂ ನಿರುತ್ಸಾಹಕ್ಕೂ ಒಳಗಾಗುತ್ತೇವೆ. ನಿರಾಶೆಯನ್ನು ಮೊಗ್ಗಿನಲ್ಲಿಯೇ ಚಿವುಟಿ ಹಾಕದಿದ್ದರೆ ಅದು ನಿರುತ್ಸಾಹಕ್ಕೆ ಕೊಂಡೊಯ್ಯುತ್ತದೆ. ನಿರಾಶೆಯೇ ನಿರುತ್ಸಾಹಕ್ಕೆ ಬೇರಾಗಿದೆ. ಈ ಅಂತ್ಯಕಾಲದ ಸಮಯದಲ್ಲಿ ಸೈತಾನನ ಅಗ್ರ ಶತ್ರುಗಳಾದ ದೇವರ ಮಕ್ಕಳು ಮುಗ್ಗರಿಸಿಬೀಳುವಂತೆ ಸೈತಾನನು ಉಪಯೋಗಿಸುವ ಒಂದು ಬಹುದೊಡ್ಡ ಅಸ್ತ್ರವೆಂದರೆ ಅದು ನಿರುತ್ಸಾಹ.
ಈ ಒಂದು ಕಾರಣದಿಂದಲೇ "ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮದಿಂದಲೂ ಬಲದಿಂದಲೂ ಅಭಿಷೇಕಿಸಿದನು; ದೇವರು ಆತನ ಸಂಗಡ ಇದ್ದದರಿಂದ ಆತನು ಉಪಕಾರಗಳನ್ನು ಮಾಡುತ್ತಾ ಸೈತಾನನಿಂದ ಬಾಧಿಸಲ್ಪಡುತ್ತಿರುವವರೆಲ್ಲರನ್ನು ಗುಣಮಾಡುತ್ತಾ ಸಂಚರಿಸಿದನು; ಇದೆಲ್ಲಾ ನಿಮಗೆ ಗೊತ್ತಾಗಿರುವದಷ್ಟೆ."(ಅಪೊಸ್ತಲರ ಕೃತ್ಯಗಳು 10:38)
ಕರ್ತನಾದ ಯೇಸುವು ತನ್ನ ಭೂಯಾತ್ರೆಯ ಸಮಯದಲ್ಲಿ ಸುತ್ತಮುತ್ತಲಿರುವ ಎಲ್ಲಾ ಕಡೆಗೂ ಹೋಗಿ ದೇವರ ಬಲದಿಂದ ಸೈತಾನನ ಬಂಧನಕ್ಕೊಳಗಾದ ಜನರನ್ನು ಬಿಡಿಸುತ್ತಿದ್ದನು. ಒಂದು ಶುಭ ಸುದ್ದಿ ಏನೆಂದರೆ ನಿರತ್ಸಾಹಕ್ಕಿಂತಲೂ ಉನ್ನತವಾಗಿರುವ ಅದೇ ದೇವರ ಬಲವೂ ಇಂದು ನಮಗೆಲ್ಲಾ ದೊರೆಯುವಂತದ್ದಾಗಿದೆ. ನೀವು ನಿರುತ್ಸಾಹದಲ್ಲಿ ಬಿದ್ದು ಹೊರನಾಡುವಂಥದ್ದು,ನೀವು ಪೀಡನೆಗೆ ಒಳಗಾಗುವುದೂ, ಹತಾಶೆಗೊಳಗಾಗುವುದು ದೇವರ ಚಿತ್ತವಲ್ಲ ಎಂಬುದನ್ನು ಅರಿತುಕೊಳ್ಳಿ.
ನಿರುತ್ಸಾಹದ ಒಂದು ಬಹುದೊಡ್ಡ ಅಪಾಯವೆಂದರೆ ಒಬ್ಬ ವ್ಯಕ್ತಿಯು ನಿರುತ್ಸಾಹಕ್ಕೆ ಒಳಗಾದರೆ ಅವನು ಅಥವಾ ಅವಳು ಅವರು ನಿಂತಲ್ಲೇ ನಿಂತುಬಿಡುತ್ತಾರೆ. ಅವರು ಬೆಳೆಯದೇ ಅದೇ ಮಟ್ಟದಲ್ಲಿ ನಿಂತುಬಿಡುತ್ತಾರೆ. ಒಂದು ಮಿತಿಯೂ ಒಂದು ತಡೆಗೋಡೆಯೂ ಅಲ್ಲಿ ನಿರ್ಮಾಣವಾಗಿಬಿಡುತ್ತದೆ. ಅಂತಹ ವ್ಯಕ್ತಿಯು ದೇವರು ಅವರಿಗಾಗಿ ಕೂಡಿಟ್ಟ ಕನಸುಗಳನ್ನಾಗಲೀ ದರ್ಶನಗಳನ್ನಾಗಲೀ ಸಾಕಾರಗೊಳಿಸಲಾಗುವುದಿಲ್ಲ. ನನ್ನ ಸೇವಾ ಅವಧಿಯಲ್ಲಿ ನಿರುತ್ಸಾಹದ ಬಾಣದ ಬಡಿತಕ್ಕೆ ತುತ್ತಾದ ಇಂತಹ ಅನೇಕ ವ್ಯಕ್ತಿಗಳನ್ನು ನೋಡಿದ್ದೇನೆ.
ನೀವು ಈ ಭಕ್ತಿವೃದ್ಧಿ ಮಾಡುವ ವಾಕ್ಯಗಳನ್ನು ಓದುವಾಗಲೇ ಇದನ್ನು ಜಯಿಸುವಂತಹ ಅಭಿಷೇಕವು ಯೇಸು ನಾಮದಲ್ಲಿ ನಿಮ್ಮ ಮೇಲೆ ಇಳಿದು ಬರಲಿದೆ.
ಪ್ರಾರ್ಥನೆಗಳು
ತಂದೆಯೇ, ನನಗೆ ವಿರುದ್ಧವಾಗಿ ಏಳುವ ಪ್ರತಿಯೊಂದೂ ನಿರುತ್ಸಾಹ ಪಡಿಸುವ ಕೆಡುಕನ ಬಾಣಗಳನ್ನು ಯೇಸು ನಾಮದಲ್ಲಿ ಸುಟ್ಟು ಬೂದಿ ಮಾಡು.
ನನ್ನ ವಿರುದ್ಧವಾಗಿ ಏಳುವ ಪ್ರತಿಯೊಂದೂ ರೂಪದ ನಿರುತ್ಸಾಹದ, ವೈಫಲ್ಯದ ಬಾಣಗಳನ್ನು ನಾನು ಯೇಸುನಾಮದಲ್ಲಿ ತಿರಸ್ಕರಿಸುತ್ತೇನೆ.
ತಂದೆಯೇ, ನೀನು ನನಗಾಗಿ ಇಟ್ಟಿರುವ ಕರೆಯನ್ನು ಪೂರೈಸಲು ಧೈರ್ಯದ- ಬಲದ ಆತ್ಮವನ್ನು ಅಭಿಷೇಕಿಸು ಎಂದು ಯೇಸು ನಾಮದಲ್ಲಿ ಬೇಡುತ್ತೇನೆ.
ನನ್ನ ವಿರುದ್ಧವಾಗಿ ಏಳುವ ಪ್ರತಿಯೊಂದೂ ರೂಪದ ನಿರುತ್ಸಾಹದ, ವೈಫಲ್ಯದ ಬಾಣಗಳನ್ನು ನಾನು ಯೇಸುನಾಮದಲ್ಲಿ ತಿರಸ್ಕರಿಸುತ್ತೇನೆ.
ತಂದೆಯೇ, ನೀನು ನನಗಾಗಿ ಇಟ್ಟಿರುವ ಕರೆಯನ್ನು ಪೂರೈಸಲು ಧೈರ್ಯದ- ಬಲದ ಆತ್ಮವನ್ನು ಅಭಿಷೇಕಿಸು ಎಂದು ಯೇಸು ನಾಮದಲ್ಲಿ ಬೇಡುತ್ತೇನೆ.
Join our WhatsApp Channel
Most Read
● ಸ್ವಸ್ಥ ಬೋಧನೆಯ ಪ್ರಾಮುಖ್ಯತೆ● ದೇವರು ಹೇಗೆ ಒದಗಿಸುತ್ತಾನೆ #4
● ನೂತನ ಆತ್ಮೀಕ ವಸ್ತ್ರಗಳನ್ನು ಧರಿಸಿಕೊಳ್ಳಿ
● ದೇವರ ರೀತಿಯ ಪ್ರೀತಿ
● ಕೃಪೆಯ ಉಡುಗೊರೆ
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಕರ್ತನೇ ನನ್ನ ದೀಪವನ್ನು ಬೆಳಗಿಸು.
ಅನಿಸಿಕೆಗಳು