ಅರಸನಾದ ಯೆಹೋಷಾಫಾಟನು ತನ್ನ ಸೈನ್ಯದ ಮುಂದೆ ದೇವರಿಗೆ ಸ್ತುತಿಗೀತೆಗಳನ್ನು ಹಾಡುವ ಒಂದು ಗಾಯಕವೃಂದವನ್ನು ಹಾಡುತ್ತಾ ಹೋಗಬೇಕೆಂದು ಕಳುಹಿಸಿದನು. ಸೈನ್ಯವನ್ನು ಮುನ್ನಡೆಸುವ ಗಾಯಕವೃಂದವನ್ನು ಊಹಿಸಿಕೊಳ್ಳಿ.
ಅವನು ನಿಸ್ಸಂದೇಹವಾಗಿ ಸ್ತುತಿಗಾರರನ್ನು ಅವರು ಮುಂದೆ ಹೋಗಿ ಸಾಯಲಿ ಎಂದು ಕಳುಹಿಸುತ್ತಿರಲಿಲ್ಲ. ಅರಸನಿಗೆ ಪ್ರವಾದನ ಸ್ತುತಿಗೀತೆಗಳು ಏನು ಮಾಡಬಲ್ಲವು ಎಂಬ ಪ್ರಕಟಣೆ ಇತ್ತು. ದೇವರ ವಾಕ್ಯದ ಮೂಲಕ ಅವನು ಈಗಾಗಲೇ ತಾವು ವಿಜಯವನ್ನು ಹೊಂದಿದ್ದೇವೆ ಎಂಬುದನ್ನು ಘೋಷಿಸಲು ಅವನು ಅವರನ್ನು ಮುಂದುಗಡೆಯಲ್ಲಿ ಕಳುಹಿಸಿದನು.ಆದರಿಂದ ನೀವು ಸಹ ಹೀಗೆಯೇ ಮಾಡಬೇಕು.
ಅವರು ಹಾಡುವುದಕ್ಕೂ, ಸ್ತುತಿಸುವುದಕ್ಕೂ ಆರಂಭಿಸಿದಾಗಲೇ ಯೆಹೋವ ದೇವರು ಯೆಹೂದದ ಮೇಲೆ ಬಂದ ಅಮ್ಮೋನ್, ಮೋವಾಬ್, ಸೇಯೀರ್ ಪರ್ವತಗಳ ಜನರನ್ನು ಸೋಲಿಸುವುದಕ್ಕೆ ಅವರಲ್ಲಿಯೇ ಹೊಂಚಿಕೊಳ್ಳುವವರನ್ನು ಇರಿಸಿದ್ದನು.
ಅಮ್ಮೋನಿಯರು, ಮೋವಾಬ್ಯರು ಸೇಯೀರ್ ಪರ್ವತದ ನಿವಾಸಿಗಳನ್ನು ಸಂಪೂರ್ಣವಾಗಿ ನಾಶಮಾಡಲು ನಿಂತರು. ಅವರು ಸೇಯೀರನ ನಿವಾಸಿಗಳನ್ನು ಪೂರ್ಣವಾಗಿ ವಧಿಸಿದ ತರುವಾಯ, ತಮ್ಮಲ್ಲಿ ತಾವೇ ಒಬ್ಬರನ್ನೊಬ್ಬರು ಕೊಂದುಕೊಳ್ಳುವುದಕ್ಕೆ ಪ್ರಾರಂಭಿಸಿದರು.(2ಪೂರ್ವಕಾಲವೃತ್ತಾಂತ 20:22-23)
ಅವರು ಪ್ರವದನಾ ಸ್ತುತಿಸ್ತೋತ್ರ ಹಾಡಲು ಪ್ರಾರಂಭಿಸಿದಾಗ, ಅವರ ಶತ್ರುಗಳು ಪರಸ್ಪರ ಹೊಡೆದುಕೊಳ್ಳಲು ಪ್ರಾರಂಭಿಸಿದರು. ಶತ್ರು ಶಿಬಿರದಲ್ಲಿ ಗೊಂದಲ ಉಂಟಾಯಿತು. ದೇವರಿಗೆ ಸ್ತುತಿಗೀತೆಯನ್ನು ಹಾಡುವುದನ್ನು ಹೊರತುಪಡಿಸಿ ಯಾವುದೇ ಆಯುಧವಿಲ್ಲದೆ ಗೆಲುವು ಸಾಧಿಸಲಾಯಿತು.
ಇದು ಕಡೆಯ ಕಾಲದಲ್ಲಿ ಸಂಭವಿಸಲಿದೆ. ಸಭೆಯು ಪ್ರವಾದನಾ ಆರಾಧನೆಯ ಕ್ಷೇತ್ರವನ್ನು ಪ್ರವೇಶಿಸಲು ಪ್ರಾರಂಭಿಸಿದಾಗ, ಶತ್ರುಗಳ ಪಾಳೆಯದಲ್ಲಿ ಗೊಂದಲ ಉಂಟಾಗುತ್ತದೆ. ಅವರು ತಮ್ಮೊಳಗೆ ಹೋರಾಡಿ ಕೊಳ್ಳಲಿದ್ದಾರೆ.
ನಿಮ್ಮ ವಿರುದ್ಧ ನರಕವೆಲ್ಲವೂ ಎದುರು ಬೀಳುತ್ತಿದೆ ಎಂದು ನಿಮಗೆ ಅನಿಸಿದಾಗ, ಶತ್ರುಗಳ ವಿರುದ್ಧ ಪರಲೋಕವನ್ನು ಸಡಿಲಿಸಿ ಮತ್ತು ಪ್ರವಾದನಾ ಸ್ತುತಿಗೀತೆಯೊಂದಿಗೆ ಶತ್ರುವನ್ನು ಜಯಿಸಿ.
ಕೀರ್ತನೆಗಳು 149:5-9
"ಭಕ್ತರು ತಮಗುಂಟಾದ ಮಹಿಮೆಯಲ್ಲಿ ಹಿಗ್ಗಲಿ; ಹಾಸಿಗೆಯ ಮೇಲಿರುವಾಗಲೂ ಉತ್ಸಾಹಧ್ವನಿ ಮಾಡಲಿ. ಅವರ ಬಾಯಲ್ಲಿ ಯೆಹೋವನ ಸ್ತೋತ್ರವೂ ಕೈಯಲ್ಲಿ ಇಬ್ಬಾಯಿಕತ್ತಿಯೂ ಇರಲಿ. ಅವರು ಜನಾಂಗಗಳಿಗೆ ಮುಯ್ಯಿತೀರಿಸುವರು; ಅನ್ಯಜನಗಳನ್ನು ದಂಡಿಸುವರು; ಅವರ ರಾಜರನ್ನು ಸಂಕೋಲೆಯಿಂದ ಬಂಧಿಸುವರು; ಪ್ರಭುಗಳಿಗೆ ಕಬ್ಬಿಣದ ಬೇಡಿಗಳನ್ನು ಹಾಕುವರು. ಲಿಖಿತದಂತೆ ಅವರಿಗೆ ಶಿಕ್ಷೆಯನ್ನು ವಿಧಿಸುವರು; ಇದು ಆತನ ಭಕ್ತರೆಲ್ಲರಿಗೆ ಗೌರವವಾಗಿರುವದು. ಯಾಹುವಿಗೆ ಸ್ತೋತ್ರ!" ಎಂದು ನಮಗೆ ಹೇಳುತ್ತದೆ.
ಸ್ತುತಿಗೀತೆಯನ್ನು ಹಾಡುವಂತದ್ದು ಏನೋ ಒಳ್ಳೆಯದನ್ನು ಅನುಭವಿಸುತ್ತೇವೆ ಎನ್ನುವುದರ ಕುರಿತಲ್ಲ ಅಲ್ಲ ಮತ್ತು ಖಂಡಿತವಾಗಿಯೂ ಒಳ್ಳೆಯದನ್ನೇ ಧ್ವನಿಸಬೇಕು ಎನ್ನುವುದಷ್ಟೇ ಅಲ್ಲ. ದೇವರಿಗೆ ಸ್ತುತಿಗೀತೆ ಹಾಡಲು ನೀವು ಗಾಯಕ ಅಥವಾ ಸಂಗೀತಗಾರನಾಗಿರಬೇಕಾಗಿಲ್ಲ. ಪವಿತ್ರಾತ್ಮನು ನಿಮ್ಮನ್ನು ತುಂಬಿ ಆತನಿಗಾಗಿ ಪರಲೋಕದ ಸ್ತುತಿ ಗೀತೆಗಳನ್ನು ನಿಮ್ಮೊಳಗೆ ಬಿಡುಗಡೆ ಮಾಡಲಿ. ಏನೋ ಒಂದು ದೊಡ್ಡ ಸಂಗತಿ ಸಂಭವಿಸಲಿದೆ!
Bible Reading: Isaiah 6-9
ಪ್ರಾರ್ಥನೆಗಳು
ಪರಿಶುದ್ಧನಾದ ಪವಿತ್ರಾತ್ಮನು ಯೇಸುನಾಮದಲ್ಲಿ ನನ್ನನ್ನು ತುಂಬಿ ನನ್ನಲ್ಲಿ ಸ್ತುತಿಗೀತೆಯನ್ನು ಹುಟ್ಟುಹಾಕಲಿ. ನನ್ನ ಸ್ತುತಿ ನಿನ್ನ ದೃಷ್ಟಿಯಲ್ಲಿ ಸ್ವೀಕಾರಾರ್ಹವಾಗಲಿ. (ಈಗ ಹಾಡಿನಿಂದ ಕರ್ತನನ್ನು ಶ್ರವ್ಯವಾಗಿ ಆರಾಧಿಸುವ ಸಮಯವಾಗಿ ಕಳೆಯಿರಿ)
Join our WhatsApp Channel

Most Read
● ಆರಂಭಿಕ ಹಂತದಲ್ಲಿಯೇ ಕರ್ತನನ್ನು ಕೊಂಡಾಡಿರಿ● ದೇವರು ಹೇಗೆ ಒದಗಿಸುತ್ತಾನೆ #4
● ನಿಮ್ಮ ದೌರ್ಬಲ್ಯಗಳನ್ನು ದೇವರಿಗೆ ಒಪ್ಪಿಸಿ
● ತಪ್ಪು ಆಲೋಚನೆಗಳು
● ಅಂತ್ಯಕಾಲದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು : #1
● ಮುಂದಿನ ಹಂತಕ್ಕೆ ಹೋಗುವುದು
● ಪರಿಪೂರ್ಣ ಬ್ರ್ಯಾಂಡ್ ನಿರ್ವಾಹಕ.
ಅನಿಸಿಕೆಗಳು