ಅನುದಿನದ ಮನ್ನಾ
ಆ ವಾಕ್ಯವನ್ನು ಹೊಂದಿಕೊಳ್ಳಿರಿ
Tuesday, 15th of October 2024
3
1
188
Categories :
ದೇವರವಾಕ್ಯ ( Word of God )
ಪ್ರವಾದನ ವಾಕ್ಯ (Prophetic word)
"ಯೆಹೋವನು ಇಂತೆನ್ನುತ್ತಾನೆ - ಜೆರುಬ್ಬಾಬೆಲನೇ, ಈಗ ಧೈರ್ಯವಾಗಿರು; ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವನೇ, ಧೈರ್ಯವಾಗಿರು; ದೇಶೀಯರೇ, ನೀವೆಲ್ಲರೂ ಧೈರ್ಯಗೊಂಡು ಕೆಲಸ ನಡಿಸಿರಿ; ಇದು ಯೆಹೋವನ ನುಡಿ; ನಾನು ನಿಮ್ಮೊಂದಿಗೆ ಇದ್ದೇನೆಂದು ಸೇನಾಧೀಶ್ವರ ಯೆಹೋವನು ನುಡಿಯುತ್ತಾನೆ. "(ಹಗ್ಗಾಯ 2:4)
ಯೆರೋಸಲೇಮಿನಲ್ಲಿರುವ ದೇವರ ಆಲಯವು ಬಹಳ ಕಾಲದಿಂದಲೂ ಪಾಳು ಬಿದ್ದಿತ್ತು. ಯಹೂದ್ಯರು ಅದನ್ನು ಮರು ನಿರ್ಮಾಣ ಮಾಡುವ ಕೆಲಸವನ್ನು ಮತ್ತೆ ಆರಂಭಿಸಿದರು. ಆದರೆ ಅವರು ಎದುರಿಸಿದಂತ ಪ್ರಚಂಡ ಸವಾಲುಗಳು ಮತ್ತು ಟೀಕೆಗಳ ಕಾರಣದಿಂದ ಆ ಯೋಜನೆಯನ್ನು 14 ವರ್ಷಗಳವರೆಗೂ ಪೂರೈಸಲು ಆಗದೆ ನಿಲ್ಲಿಸಿಬಿಟ್ಟರು.
ಒಂದನ್ನು ನೆನಪಿಡಿರಿ: ನೀವು ಏನಾದರೂ ಒಳ್ಳೆಯದನ್ನು ಮಾಡಲು ಹೊರಟಾಗ ಯಾವಾಗಲೂ ಒಂದಲ್ಲ ಒಂದು ಸವಾಲುಗಳು ಟೀಕೆಗಳು ಬಂದೇ ಬರುತ್ತವೆ. ಹಿಂದಿ ಭಾಷೆಯಲ್ಲಿ ಒಂದು ಮಾತಿದೆ ಅದೇನಂದರೆ "ಜನರು ಯಾವಾಗಲೂ ಹಣ್ಣುಗಳು ತುಂಬಿದ ಮರಕ್ಕೆ ಕಲ್ಲನ್ನು ಎಸೆಯುತ್ತಾರೆ" ಎಂದು.
ಆದ್ದರಿಂದ ಈ ಹಿನ್ನೆಲೆಯಲ್ಲಿ ದೇವರು ಪ್ರವಾದಿಯಾದ ಹಗ್ಗಾಯನನ್ನು ಯಹೂದ್ಯರೊಂದಿಗೆ ಮಾತನಾಡಿ ಈ ಕಾರ್ಯಕ್ಕಾಗಿ ಅವರನ್ನು ಸಜ್ಜುಗೊಳಿಸಲು ಕಳುಹಿಸಿದನು! ಈ ಪ್ರವಾದನ ವಾಕ್ಯ, ರೇಮವಾಕ್ಯ (ಈಗ ದೇವರ ವಾಕ್ಯವು) ಯೆಹೂದ್ಯರು ಅಷ್ಟು ದಿನದವರೆಗೂ ಎದುರಿಸುತ್ತಿದ್ದ ಸವಾಲುಗಳು ಟೀಕೆಗಳನ್ನು ಜಯಿಸಲು ಅವರಿಗೆ ಸಹಾಯ ಮಾಡಿತು. ಇದೇ ರೇಮ ವಾಕ್ಯವು ಪ್ರತಿ ಸವಾಲನ್ನು ಜಯಿಸಲು ನಿಮಗೂ ಸಹ ಸಹಾಯ ಮಾಡುತ್ತದೆ.
ಕರ್ತನಾದ ಯೇಸು ಅರಣ್ಯದಲ್ಲಿ ಸೈತಾನನಿಂದ ಶೋಧಿಸಲ್ಪಡುವಾಗ ಆತನು ರೇಮವಾಕ್ಯವನ್ನು ಹೇಳುವ ಮೂಲಕ ಪ್ರತಿಯೊಂದು ಶೋಧನೆಯನ್ನು ಜಯಿಸಿದನು. " ಮನುಷ್ಯನು ಕೇವಲ ರೊಟ್ಟಿ ತಿಂದ ಮಾತ್ರಕ್ಕೆ ಬದುಕುವುದಿಲ್ಲ ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಬದುಕುತ್ತಾನೆ " ಎಂದು ಯೇಸು ಮತ್ತಾಯ 4:4 ರಲ್ಲಿ ಹೇಳುತ್ತಾನೆ. ಯೇಸು ಆ ಪರಿಸ್ಥಿತಿಗೆ ಬೇಕಾದ ಬರೆದಿಟ್ಟ ದೇವರ ವಾಕ್ಯವನ್ನು ಹೇಳಿದನು. ಆದ್ದರಿಂದ ರೇಮಾವಾಕ್ಯವು ದೇವರಾಡುವ ಮಾತಾಗಿದೆ.
ನಮಗೆ ಅಸ್ತಿವಾರವಾಗಿ ಬರೆದಿಡಲ್ಪಟ್ಟ ದೇವರ ವಾಕ್ಯ ಬೇಕು. ಆದರೆ ಮಾರ್ಗದರ್ಶನಕ್ಕಾಗಿ ದೇವರಾಡುವ ವಾಕ್ಯವು ರೇಮ ನಮಗೆ ಬೇಕಾಗಿದೆ. ನಾವು ನೆಲೆ ನಿಲ್ಲಲು ಬರೆದಿಟ್ಟ ದೇವರ ವಾಕ್ಯವನ್ನೂ ಹೊಂದಿದ್ದೇವೆ. ಹಾಗೆಯೇ ನಮಗೆ ದೇವರ ಬಾಯಿಂದ ಹೊರಡುವ ವಾಕ್ಯವಾದ ರೇಮ ಸಹ ಇದೆ.
ಆದುದರಿಂದಲೇ ನಮಗೆ ಏನು ಮಾಡಬೇಕು, ನಾವು ಎಲ್ಲಿಗೆ ಹೋಗಬೇಕು ಎಂಬುದು ನಮಗೆ ತಿಳಿದದೆ
ಆದರೆ ಇಲ್ಲಿ ದೇವರ ಆಲಯವನ್ನು ತಿರುಗಿ ಕಟ್ಟಲು ಅಸ್ತಿವಾರ ಹಾಕಲು ಆರಂಭಿಸಿದ ಕೆಲವರು ಮತ್ತೆ ಎದೆಗುಂದಿದ್ದರು.
"ಆದರೆ ಯಾಜಕರಲ್ಲಿಯೂ ಲೇವಿಯರಲ್ಲಿಯೂ ಗೋತ್ರ ಪ್ರಧಾನರಲ್ಲಿಯೂ ಅನೇಕರು ಅಂದರೆ ಮುಂಚಿನ ದೇವಾಲಯವನ್ನು ನೋಡಿದ್ದ ಮುದುಕರು ತಮ್ಮ ಕಣ್ಣು ಮುಂದೆ ದೇವಾಲಯದ ಅಸ್ತಿವಾರವು ಹಾಕಲ್ಪಡುವದನ್ನು ನೋಡುವಾಗ ಬಹಳವಾಗಿ ಅತ್ತರು; ಬೇರೆ ಹಲವರು ಹರ್ಷಧ್ವನಿಯಿಂದ ಆರ್ಭಟಿಸಿದರು." ಎಂದು ಎಜ್ರನು 3:12 ದಾಖಲಿಸುತ್ತದೆ.
ಹೊಸ ಆಲಯವು ಪೂರ್ಣಗೊಳ್ಳಲು ಇನ್ನೂ ಬಹಳ ಸಮಯ ಬೇಕಾಗಿತ್ತು. ಆದರೆ ದೇವರು ತಮ್ಮ ಮಧ್ಯೆ ಮಾಡುತ್ತಿರುವ ಕಾರ್ಯಗಳಿಗಾಗಿ ದೇವರನ್ನು ಸ್ತುತಿಸುವ ಬದಲು ಈ ಜನರು ಅಳುತ್ತಾ ಉಳಿದವರನ್ನು ಸಹ ಎದೆಗುಂದುವಂತೆ ಮಾಡುವವರಾದರು.
ಎದೆಗುಂಧಿಸುವಿಕೆ ಎಂಬುದು ಶತ್ರುವಾದ ಸೈತಾನನು ದೇವ ಜನರ ವಿರುದ್ಧ ಬಳಸುವ ಅತ್ಯಂತ ಶಕ್ತಿಶಾಲಿ ವಿನಾಶಕಾರಿ ಸಾಧನಗಳಲ್ಲಿ ಒಂದಾಗಿದೆ. ಇಂತಹ ಸಮಯಗಳಲ್ಲಿ ನೀವು ಮಾಡಬೇಕಾದದ್ದು ಆರಾಧನೆ ಮತ್ತು ದೇವರ ವಾಕ್ಯ ಧ್ಯಾನ. ಆಗ ದೇವರು ನಿಮ್ಮೊಂದಿಗೆ ಮಾತನಾಡಲು ಆರಂಭಿಸುತ್ತಾನೆ. ದೇವರು ಮಾತನಾಡಲು ಆರಂಭಿಸಿದಾಗ ಆ ವಾಕ್ಯವನ್ನು (ರೇಮಾವನ್ನು) ಗಟ್ಟಿಯಾಗಿ ಹಿಡಿದುಕೊಳ್ಳಿ. ಸೈತಾನನು ಒಡ್ಡುವ ಪ್ರತಿಯೊಂದು ಅಡಚಣೆಯನ್ನು ಜಯಿಸಲು ಇದು ನಿಮಗೆ ಸಹಾಯಮಾಡುತ್ತದೆ.
ಪ್ರಾರ್ಥನೆಗಳು
ಯೇಸು ನಾಮದಲ್ಲಿ ನಾನು ಬಲಶಾಲಿಯೂ ಧೈರ್ಯಶಾಲಿಯೂ ಆಗಿದ್ದೇನೆ. ನಾನು ಹೆದರುವುದಿಲ್ಲ ಭಯಪಡುವುದಿಲ್ಲ ಏಕೆಂದರೆ ನಾನು ಹೋಗುವ ಕಡೆಯೆಲ್ಲಾ ನನ್ನ ದೇವರಾದ ಯೆಹೋವನು ನನ್ನೊಂದಿಗೆ ಇದ್ದಾನೆ.
Join our WhatsApp Channel
Most Read
● ನಂಬಿಕೆಯಿಂದ ಹೊಂದಿಕೊಳ್ಳುವುದು● ಹೊಗಳಿಕೆವಂಚಿತ ನಾಯಕರು
● ಮರೆಯಾದ ಸ್ಥಳವನ್ನು ಆಶ್ರಯಿಸಿಕೊಳ್ಳುವುದು.
● ಬೀಜದಲ್ಲಿರುವ ಶಕ್ತಿ-1
● ದಿನ 05:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಇದು ನಿಜಕ್ಕೂ ಮುಖ್ಯವಾದ ಸಂಗತಿಯಾ?
● ಕರ್ತನೇ, ನನ್ನ ಚಿತ್ತ- ಚಂಚಲಗೊಳಿಸುವ ಸಂಗತಿಗಳಿಂದ ನನ್ನನ್ನು ಬಿಡಿಸು.
ಅನಿಸಿಕೆಗಳು