ಅನುದಿನದ ಮನ್ನಾ
2
0
70
ನಿಮ್ಮ ಮಾನದಂಡಗಳನ್ನು ಹೆಚ್ಚಿಸಿ
Monday, 14th of July 2025
Categories :
ಶ್ರೇಷ್ಠತೆ (Excellence)
"ಯೆಹೋವನು ಹೀಗನ್ನುತ್ತಾನೆ - ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ. ಭೂವಿುಯ ಮೇಲೆ ಆಕಾಶವು ಎಷ್ಟು ಉನ್ನತವೋ ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ " . (ಯೆಶಾಯ 55:9)
ದೇವರು ಮನುಷ್ಯನಿಗಿಂತ ವಿಭಿನ್ನವಾಗಿ ಯೋಚಿಸುತ್ತಾನೆ ಎಂದು ಈ ಶಾಸ್ತ್ರವು ನಮಗೆ ಹೇಳುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ದೇವರಿಗೆ ವಿಶಿಷ್ಟವಾದ ಆಲೋಚನಾ ಮಾನದಂಡವಿದೆ. ಸತ್ಯವೆಂದರೆ ನಾವು ದೇವರೊಂದಿಗೆ ನಡೆಯಬೇಕಾದರೆ, ಆತನ ಸಾನಿಧ್ಯವನ್ನು ಅನುಭವಿಸಬೇಕಾದರೆ, ನಾವು ಆತನ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕೇ ವಿನಃ ದೇವರನ್ನು ನಮ್ಮ ಮಾನದಂಡಗಳಿಗೆ ಇಳಿಸಬಾರದು - ಹಾಗೆ ಮಾಡಿದರೆ ಅದು ರಾಜಿಯಾದಂತೆ.
ನಮ್ಮಲ್ಲಿ ಬಹುತೇಕರು ನಮ್ಮ ಸುತ್ತಲೂ ನಾವು ನೋಡುವ ಮತ್ತು ಕೇಳುವ ಸಂಗತಿಗಳ ಆಧಾರದ ಮೇಲೆ ನಮ್ಮ ಜೀವನವನ್ನು ಕಳೆಯುತ್ತೇವೆ. ನಮ್ಮ ಸುತ್ತಲಿನ ಸಂದರ್ಭಗಳು ಅಥವಾ ಜನರೇ ಹೆಚ್ಚಾಗಿ ನಮ್ಮ ಮಾನದಂಡಗಳನ್ನು ನಿರ್ದೇಶಿಸುತ್ತಾರೆ.
ಆದರೆ ನೀವು ವ್ಯತ್ಯಾಸವನ್ನು ಮಾಡಲು ಬಯಸಿದರೆ, ದೇವರು ನಿಮಗಾಗಿ ಹೊಂದಿರುವ ಎಲ್ಲವನ್ನೂ ನಮೂದಿಸಲು ಬಯಸಿದ್ದರೆ, ಸಮಾಜವು ನಿಮ್ಮ ಮಾನದಂಡಗಳನ್ನು ನಿರ್ದೇಶಿಸಲು ಬಿಡಬೇಡಿ. ಕರ್ತನು ಮತ್ತು ಆತನ ವಾಕ್ಯವು ನಿಮ್ಮ ಮಾನದಂಡಗಳನ್ನು ವ್ಯಾಖ್ಯಾನಿಸಲಿ.
ನಾವು ದೇವರಿಂದ ಆರಿಸಿಕೊಂಡ ಜನರೂ, ದೇವರ ರಾಜಮನೆತನದ ಯಾಜಕರೂ, ದೇವರ ಸ್ವಂತ ಆಸ್ತಿಯೂ ಆಗಿದ್ದೇವೆ. ನಾವು ಕೇವಲ ಸಾಮಾನ್ಯ ವ್ಯಕ್ತಿಗಳಲ್ಲ. (1 ಪೇತ್ರ 2:9)
ಅದರಿಂದ ನೀವು ದೇವರ ಪ್ರೀತಿ ಮತ್ತು ಪವಿತ್ರತೆಗೆ ಅನುಗುಣವಾಗಿ ನೀತಿಯುತ ಜೀವನವನ್ನು ನಡೆಸಬೇಕು. ನಿಮ್ಮ ಮಾನದಂಡಗಳನ್ನು ಹೆಚ್ಚಿಸಿ ದೇವರ ಶಕ್ತಿಯ ಸಂಪೂರ್ಣತೆಯನ್ನು ಅನುಭವಿಸಬೇಕು.
ನಿಮ್ಮ ಜೀವನದಲ್ಲಿ ನೀವು ನಿಜವಾಗಿಯೂ ಬದಲಾವಣೆಯನ್ನು ಬಯಸಿದರೆ, ನೀವು ನಿಮ್ಮ ಮಾನದಂಡಗಳನ್ನು ಹೆಚ್ಚಿಸಬೇಕಾಗುತ್ತದೆ. ಉದಾಹರಣೆಗೆ, ನಿಮ್ಮ ಭೇಟಿ ಮಾಡಬೇಕಾದ ಸ್ಥಳಕ್ಕೆ(ಸಭಾ ಸೇವೆಗಳನ್ನು ಒಳಗೊಂಡಂತೆ) ಸಮಯಕ್ಕೆ ಸರಿಯಾಗಿ ತಲುಪುವುದು ಅಥವಾ ಗಾಳಿ ತುಂಬಿದ ತಂಪು ಪಾನೀಯಗಳನ್ನು ಸೇವಿಸದಿರುವುದು ಅಥವಾ ಪ್ರತಿದಿನ ನಿಯಮಿತ ಸಮಯಕ್ಕೆ ಸರಿಯಾಗಿ ಮಲಗುವುದು ಮತ್ತುಸಮಯಕ್ಕೆ ಸರಿಯಾಗಿ ಎಚ್ಚರಗೊಳ್ಳುವುದು ಅಥವಾ ಪ್ರತಿದಿನ ನಿಗದಿತ ಸಮಯದಲ್ಲಿ ಪ್ರಾರ್ಥಿಸುವುದು ಇತ್ಯಾದಿ ನಿಮ್ಮ ಮಾನದಂಡಗಳಾಗಿರಬಹುದು.
ಅದು ಆರೋಗ್ಯವಾಗಿರಲಿ, ಸಂಬಂಧಗಲಾಗಿರಲಿ ಅಥವಾ ಕರ್ತನ ಸೇವೆಯಾಗಿರಲಿ; ನೀವು ಮಾನದಂಡವನ್ನು ಹೆಚ್ಚಿಸಿಕೊಳ್ಳಬೇಕು. "ಆದಕಾರಣ ನೀವು ಕ್ರಿಸ್ತನೊಂದಿಗೆ ಎಬ್ಬಿಸಲ್ಪಟ್ಟಿರುವದರಿಂದ ಮೇಲಿರುವವುಗಳನ್ನು ಹುಡುಕಿರಿ; ಅಲ್ಲಿ ಕ್ರಿಸ್ತನು ದೇವರ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ. ಮೇಲಿರುವಂಥವುಗಳ ಮೇಲೆ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಇಡಬೇಡಿರಿ. ಯಾಕಂದರೆ ನೀವು ಸತ್ತಿರಲ್ಲಾ, ನಿಮ್ಮ ಜೀವವು ಕ್ರಿಸ್ತನೊಂದಿಗೆ ದೇವರಲ್ಲಿ ಮರೆಯಾಗಿಟ್ಟದೆ.ನಮಗೆ ಜೀವವಾಗಿರುವ ಕ್ರಿಸ್ತನು ಪ್ರತ್ಯಕ್ಷನಾಗುವಾಗ ನೀವು ಸಹ ಆತನ ಜೊತೆಯಲ್ಲಿ ಪ್ರಭಾವದಿಂದ ಕೂಡಿದವರಾಗಿ ಪ್ರತ್ಯಕ್ಷರಾಗುವಿರಿ." ಎಂದು ಕೊಲೊಸ್ಸೆ 3:1-4 ರಲ್ಲಿ ಪೌಲನು ಬರೆಯುತ್ತಾನೆ.
ಸರಳವಾಗಿ ಹೇಳುವುದಾದರೆ, ಅಪೊಸ್ತಲನಾದ ಪೌಲನು ಒಬ್ಬ ಕ್ರೈಸ್ತನಾಗಿ, ನಾವು ಕ್ರಿಸ್ತನ ಜೀವಂತ ಜಾಹೀರಾತುಗಳಾಗಬೇಕೆಂದರೆ ಗುಣಮಟ್ಟವನ್ನು ಪರಿಣಾಮಕಾರಿಯಾಗಿ ಹೆಚ್ಚಿಸಿಕೊಳ್ಳ ಬೇಕಾಗಿದೆ ಎಂದು ಹೇಳುತ್ತಿದ್ದನು. ಅದಕ್ಕಾಗಿ ನೀವು ಇನ್ನು ಮುಂದೆ ಜಡವಾದ ಜೀವನವನ್ನು ನಡೆಸುವುದಿಲ್ಲ ಎಂದು ನಿರ್ಧರಿಸಿ. ನಿಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನೀವು ಶ್ರೇಷ್ಠತೆಯತ್ತ ಸಾಗಲಿದ್ದೀರಿ.
ಕರ್ತನು ನಿಮ್ಮ ಪರವಾಗಿರುವಾಗ ನೀವು ಖಂಡಿತವಾಗಿಯೂ ಅದನ್ನು ಮಾಡಬಹುದು.
Bible Reading: Proverbs 2-6
ಅರಿಕೆಗಳು
ನನಗೆ ಕ್ರಿಸ್ತನ ಮನಸ್ಸು ಇರುವುದರಿಂದ ನಾನು ಆತನ ಹೃದಯದ ಆಲೋಚನೆಗಳು, ಭಾವನೆಗಳು ಮತ್ತು ಉದ್ದೇಶಗಳನ್ನು ಯೇಸುನಾಮದಲ್ಲಿ ಕಾಯ್ದಿಟ್ಟುಕೊಳ್ಳುತ್ತೇನೆ.
ದೇವರ ವಾಕ್ಯವೇ ನನ್ನ ಜೀವನ ಮಟ್ಟವಾಗಿದೆ. ಪವಿತ್ರಾತ್ಮನು ವಾಕ್ಯದ ಮೂಲಕ ನನ್ನ ಜೀವನದ ಎಲ್ಲಾ ಕ್ಷೇತ್ರಗಳನ್ನು ಯೇಸುನಾಮದಲ್ಲಿ ನಿರ್ದೇಶಿಸುತ್ತಾನೆ. ಆಮೆನ್
Join our WhatsApp Channel

Most Read
● ನಂಬಿಕೆಯ ಜೀವಿತ● ಕಾವಲುಗಾರನು
● ನಿಮ್ಮ ಕೆಲಸದ ಕುರಿತ ಒಂದು ರಹಸ್ಯ
● ಕೃಪೆಯ ಮೇಲೆ ಕೃಪೆ
● ಮಹಾತ್ತಾದ ಕಾರ್ಯಗಳು
● ಸ್ವಸ್ಥ ಚಿತ್ತತೆ ಎಂಬುದು ಒಂದು ವರ
● ಶಾಪಗ್ರಸ್ತ ವಸ್ತುವನ್ನು ತೆಗೆದುಹಾಕಿ .
ಅನಿಸಿಕೆಗಳು