ಅನುದಿನದ ಮನ್ನಾ
3
0
83
ಸಾಮಾನ್ಯ ಪಾತ್ರೆಗಳ ಮೂಲಕ ಮಹತ್ತರ ಕೆಲಸ
Tuesday, 15th of July 2025
Categories :
ವಿಧೇಯತೆ (Obedience)
ನ್ಯಾಯಸ್ಥಾಪಕರು ಪುಸ್ತಕದಾದ್ಯಂತ, ದೇವರು ತನಗೆ ವಿಧೇಯರಾದ ದುರ್ಬಲರಾಗಿದ್ದ ಮತ್ತು ಅತ್ಯಲ್ಪರಾಗಿದ್ದ ವ್ಯಕ್ತಿಗಳ ಮೂಲಕ ಅತ್ಯಂತ ಶಕ್ತಿಶಾಲಿ ನಿರಂಕುಶಾಧಿಕಾರಿಗಳನ್ನು ಕೆಳಗೆ ಉರುಳಿಸುವುದನ್ನು ನಾವು ಪದೇ ಪದೇ ನೋಡುತ್ತೇವೆ. ಎಡಚನಾದ ಎಹೂದ್, ಗಿದ್ಯೋನ್ ಮತ್ತು ಡೇರೆ ಗೂಟವನ್ನು ಹಿಡಿದ ಗೃಹಿಣಿ ಯಾಯೀಲಾ ಇವರುಗಳ ಕೆಲವು ಗಮನಾರ್ಹ ಉದಾಹರಣೆಗಳನ್ನು ಹೊಂದಿರುವ ನ್ಯಾಯಸ್ಥಾಪಕರು ಪುಸ್ತಕದ ಮೂಲಕ ದೇವರು ನಮಗೆ ಏನನ್ನೋ ಹೇಳುತ್ತಿದ್ದಾನೆಂದು ನಾನು ನಂಬುತ್ತೇನೆ.
ಆತನಿಗೆ ನಮ್ಮ ಸಾಮರ್ಥ್ಯದ ಅಗತ್ಯವಿಲ್ಲ; ಆತನಿಗೆ ನಮ್ಮ ಲಭ್ಯತೆ ಬೇಕು ಅಷ್ಟೇ. ಸಾಮರ್ಥ್ಯ ಮತ್ತು ಲಭ್ಯತೆಯ ನಡುವೆ ದೊಡ್ಡ ವ್ಯತ್ಯಾಸವಿದೆ. ಒಬ್ಬ ವ್ಯಕ್ತಿಯು ಏನನ್ನಾದರೂ ಮಾಡುವ ಸಾಮರ್ಥ್ಯವನ್ನು ಹೊಂದಿರಬಹುದು ಆದರೆ ಒಂದು ನಿರ್ದಿಷ್ಟ ಅವಕಾಶದಲ್ಲಿ ತನ್ನ ಪ್ರತಿಭೆ ಮತ್ತು ವರಗಳನ್ನು ಬಳಸಿಕೊಳ್ಳಲು ಆ ವ್ಯಕ್ತಿ ದೇವರಿಗೆ ಲಭ್ಯವಿರದೇ ಹೋಗಬಹುದು. ದೇವರು ನಿಮ್ಮನ್ನು ಯಾವುದನ್ನಾದರೂ ಮಾಡಲು ಕರೆದಿರಬಹುದು, ಮತ್ತು ನೀವು ಆ ಕೆಲಸಕ್ಕೆ ಸಂಪೂರ್ಣವಾಗಿ ಅಸಮರ್ಥರೆಂದು ಭಾವಿಸಿ :
• “ನನಗೆ ಸಾಕಷ್ಟು ಅರ್ಹತೆ ಇಲ್ಲ…”
• “ನನಗೆ ಸಾಮರ್ಥ್ಯವಿಲ್ಲ…”
• “ನನಗೆ ಸರಿಯಾದ ತರಬೇತಿ ಇಲ್ಲ…”
• “ನಾನು ಸುಂದರವಾಗಿಲ್ಲ ಮತ್ತು ಸಾಕಷ್ಟು ಬುದ್ಧಿವಂತನಲ್ಲ…”
• “ಜನರ ಮುಂದೆ ಹೋಗಲು ನನಗೆ ಸಾಕಷ್ಟು ಆತ್ಮವಿಶ್ವಾಸವಿಲ್ಲ…”
• “ನನಗೆ ಚೆನ್ನಾಗಿ ಮಾತನಾಡಲು ಬರುವುದಿಲ್ಲ…”
ಎಂದು ಹೇಳುವ ಮೂಲಕ ಬಹುಶಃ ನೀವು ದೇವರ ಕರೆಗೆ ಪ್ರತಿಕ್ರಿಯಿಸಿರಬಹುದು.
ಆದರೆ ಬೈಬಲ್ ಏನು ಹೇಳುತ್ತದೆ ಎಂಬುದನ್ನು ನೋಡಿ:
"ಸಹೋದರರೇ, ದೇವರು ನಿಮ್ಮನ್ನು ಕರೆದಾಗ ಎಂಥವರನ್ನು ಕರೆದನೆಂದು ಆಲೋಚಿಸಿರಿ. ನಿಮ್ಮೊಳಗೆ ಲೌಕಿಕ ದೃಷ್ಟಿಯಲ್ಲಿ ಜ್ಞಾನಿಗಳೂ ಅನೇಕರಿಲ್ಲ, ಅಧಿಕಾರಿಗಳೂ ಅನೇಕರಿಲ್ಲ, ಕುಲೀನರೂ ಅನೇಕರಿಲ್ಲ. ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಬಲಿಷ್ಠರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಈ ಲೋಕದ ಕುಲಹೀನರನ್ನೂ ಅಸಡ್ಡೆಯಾದವರನ್ನೂ ಆರಿಸಿಕೊಂಡದ್ದಲ್ಲದೆ ಗಣ್ಯರನ್ನು ಇಲ್ಲದಂತೆ ಮಾಡುವದಕ್ಕಾಗಿ ಗಣನೆಗೆ ಬಾರದವರನ್ನು ಆರಿಸಿಕೊಂಡಿದ್ದಾನೆ."(1 ಕೊರಿಂಥ 1:26-28)
ದೇವರು ಈ ಸಂಗತಿಗಳನ್ನು ಆಗ ಮಾಡಿದ್ದರೆ, ಆತನು ಅದನ್ನು - ನಿಮ್ಮ ಮೂಲಕ ಇಂದೂ ಮಾಡುತ್ತಾನೆ . ನಾವು ವಿಧೇಯತೆ ತೋರುವಾಗ ನಾವು ಗಳಿಸಬಹುದಾದದ್ದಕ್ಕಿಂತ ಹೆಚ್ಚಿನದನ್ನು ಕಳೆದುಕೊಳ್ಳುತ್ತೇವೆ ಎಂದು ನಂಬುವಂತೆ ಯಾವುದಾದರಿಂದ/ ಯಾರಾದರಿಂದ ನಾವು ಪ್ರಚೋದಿಸಲ್ಪಟ್ಟಾಗ ವಿಧೇಯತೆ ಎನ್ನುವಂತದ್ದು ನಿಜವಾದ ಹೋರಾಟವಾಗಬಹುದು.
ಆದಾಗ್ಯೂ, ನಾವು ಕರ್ತನೊಂದಿಗೆ ಒಂದು ಒಡಂಬಡಿಕೆಯಲ್ಲಿ ನಡೆಯಬೇಕಾದರೆ, ಕೇವಲ ಪ್ರಲೋಭನೆಯ ಸಮಯದಲ್ಲಿ ಮಾತ್ರವಲ್ಲದೇ, ಎಲ್ಲಾ ಸಮಯದಲ್ಲೂ.ವಿಧೇಯತೆ ಅತ್ಯಗತ್ಯ. (ಆಮೋಸ್ 3:3 ನೋಡಿ)
ಅವಿಧೇಯತೆಯು ಕರ್ತನಿಗೆ 'ನಾವು ಆತನಿಗಿಂತ ಚೆನ್ನಾಗಿ ತಿಳಿದಿದ್ದೇವೆ'ಎಂದು ಘೋಷಿಸುವ ಸಂದೇಶವನ್ನು ಪ್ರಸಾರ ಮಾಡುತ್ತದೆ.
ಪ್ರಿಯ ದೇವರ ಮಗುವೇ, ದೇವರೇ ನಿಮ್ಮ ಸಾಮರ್ಥ್ಯವಾಗಿರುತ್ತಾನೆ. ಆತನೇ ನಿಮ್ಮ ಸಮರ್ಪಕತೆಯಾಗಿದ್ದಾನೆ. ಹಾಗಾಗಿ ಮುನ್ನಡೆಯಿರಿ ಆತನಿಗೆ ವಿಧೇಯರಾಗಿರ್ರಿ. ಆಗ ನೀವು ಎಂದಿಗೂ ವಿಷಾದಪಡುವುದಿಲ್ಲ.
Bible Reading: Proverbs 7-11
ಅರಿಕೆಗಳು
ನನ್ನ ಜೀವನದ ಧ್ಯೇಯವೆಂದರೆ ನನ್ನಲ್ಲಿರುವ ಎಲ್ಲರಿಂದ ಕರ್ತನ ಸೇವೆ ಮಾಡುವುದೇ ಆದ್ದರಿಂದ ಇಂದು, ನಾನು ಕರ್ತನಿಗೆ ನನ್ನನ್ನು ಲಭ್ಯವಾಗಿಸಿಕೊಳ್ಳುತ್ತೇನೆ. ವಾಕ್ಯವು ಏನು ಹೇಳುತ್ತದೆಯೋ ಅದೇ ನಾನಾಗುತ್ತೇನೆ ಆಗ ಆತನ ವಾಕ್ಯವು ಏನು ಹೇಳುತ್ತದೆಯೋ ಅದು ನನ್ನ ಜೀವನದಲ್ಲಿ ಯೇಸುನಾಮದಲ್ಲಿ ನಿಜವಾಗುತ್ತದೆ.ಆಮೆನ್.
Join our WhatsApp Channel

Most Read
● ಸಮರುವಿಕೆಯ( ಕಳೆ ಕೀಳುವ ) ಕಾಲ -1● ಆಲಸ್ಯದ ದೈತ್ಯನನ್ನು ಕೊಲ್ಲುವುದು
● ಸಮಾಧಾನ - ದೇವರ ರಹಸ್ಯ ಆಯುಧ
● ದೇವರು ಹೇಗೆ ಒದಗಿಸುತ್ತಾನೆ #4
● ನಿಮ್ಮ ದಿನವೇ ನಿಮ್ಮನ್ನು ವ್ಯಾಖ್ಯಾನಿಸುತ್ತದೆ
● ದಿನ 15:40 ದಿನಗಳ ಉಪವಾಸ ಮತ್ತು ಪಾರ್ಥನೆ
● ದಿನ 14:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು