ಅನುದಿನದ ಮನ್ನಾ
1
0
109
ನಮ್ಮ ಮಧ್ಯದಲ್ಲಿ ಬೀಡುಬಿಟ್ಟಿರುವ ದೇವದೂತರು
Thursday, 31st of July 2025
Categories :
ದೇವದೂತರು (Angels)
ಈ ಅಂತ್ಯ ಕಾಲದಲ್ಲಿ, ಅನೇಕರು ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ. ನೀವು ಕಠಿಣ ಪರಿಸ್ಥಿತಿಯ ಕುರಿತು ಅಥವಾ ನಿಮ್ಮ ವೃತ್ತಿ, ಉದ್ಯೋಗ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ಅನಿಶ್ಚಿತತೆಗಳ ಕುರಿತು ಪ್ರಾರ್ಥಿಸುತ್ತಿರಬಹುದು. ಇಂದಿನ ಸಂದೇಶವು ನಿಮ್ಮ ಪರಿಸ್ಥಿತಿಯಲ್ಲಿ ಒಂದು ಪ್ರಗತಿಯನ್ನು ತರುತ್ತದೆ ಎಂಬುದನ್ನು ನಾನು ನಂಬುತ್ತೇನೆ.
ಆದಿಕಾಂಡ 32 ಪ್ರಾರಂಭವಾಗುತ್ತಿದ್ದಂತೆ, ಯಾಕೋಬನು ಈಗ ತನ್ನ ತಂದೆಯ ಮನೆಗೆ ಹಿಂದಿರುತ್ತಿದ್ದಾನೆ. ಅವನ ಕುಟುಂಬಕ್ಕೆ ಏನಾಗಬಹುದು ಎಂಬುದರ ಖಚಿತತೆ ಅವನಿಗಿಲ್ಲ. ಅವನು ಅಪರಿಚಿತರನ್ನು ಎದುರಿಸುವುದಕ್ಕೂ ಈಗ ಅವನಿಗೆ ಭಯವಿದೆ. "ಯಾಕೋಬನು ಮುಂದೆ ಪ್ರಯಾಣಮಾಡಲು ದೇವದೂತರು ಅವನೆದುರಿಗೆ ಬಂದರು.ಅವನು ಅವರನ್ನು ನೋಡಿದಾಗ - ಅದು ದೇವರ ಪಾಳೆಯ ಎಂದು ಹೇಳಿ ಆ ಸ್ಥಳಕ್ಕೆ ಮಹನಯಿಮ್ ಎಂದು ಹೆಸರಿಟ್ಟನು.(ಆದಿಕಾಂಡ 32:1-2)
"ಮಹನಯಿಮ್". ಹೆಸರಿನ ಅರ್ಥ "ಎರಡು ಪಟ್ಟು ಪಾಳೆಯ ". ಯಾಕೋಬ, ಅವನ ಕುಟುಂಬ ಮತ್ತು ಅವನ ಸ್ವಾಸ್ತ್ಯ ಸಮೇತ ಅಲ್ಲಿ ಬಿಡಾರ ಹೂಡಿವೆ, ಮತ್ತು ಅಲ್ಲಿ ದೇವದೂತರ ಗುಂಪೂ ಸಹ ಇದೆ.
ಬಹುಶಃ, ಯಾಕೋಬನಂತೆ, ನೀವು ಯಾವುದಾದರೊಂದರ "ದಾರಿಯಲ್ಲಿ" ಇರಬಹುದು ಅಥವಾ, ಈ ಮೂಲಕ ದೇವರು ನಿಮ್ಮ ಪ್ರಸ್ತುತ ಪರಿಸ್ಥಿತಿಯ ಕುರಿತು ನಿಮ್ಮೊಂದಿಗೆ ಮಾತನಾಡಲು ಬಯಸುತ್ತಿರಬಹುದು.
"ಇದು ಎರಡು ಪಾಳೆಯ. ನಾನು ನಿಮಗೆ ದೇವದೂತರನ್ನು ನೇಮಿಸಿದ್ದೇನೆ, ಅವರು ನಿಮ್ಮ ಸುತ್ತಲೂ ಮತ್ತು ನಿಮ್ಮ ಪರವಾಗಿ ಕಾರ್ಯ ಮಾಡುತ್ತಿದ್ದಾರೆ" ಎಂದು ಕರ್ತನು ನಿಮಗೆ ಹೇಳುತ್ತಿದ್ದಾನೆಂದು ನಾನು ನಂಬುತ್ತೇನೆ.ದಯವಿಟ್ಟು ಈ ಪ್ರಕಟಣೆಯನ್ನು ನಿಮ್ಮ ಆತ್ಮದಲ್ಲಿ ಗ್ರಹಿಸಿಕೊಳ್ಳಿ.
ಒಂದು ದಿನ ಶತ್ರು ಪಡೆಗಳು ಎಲೀಷ ಮತ್ತು ಅವನ ಸೇವಕನನ್ನು ಸುತ್ತುವರೆದವು. ಎಲೀಷನು ಪ್ರವಾದನಾತ್ಮಕವಾಗಿ ಮಾತನಾಡುತ್ತಾ, "ನಮ್ಮೊಂದಿಗಿರುವವರು ಅವರೊಂದಿಗಿರುವವರಿಗಿಂತ ಹೆಚ್ಚಾಗಿದ್ದಾರೆ" ಎಂದು ಹೇಳಿದನು. (2 ಅರಸುಗಳು 6:16)
ಎಲೀಷನ ಸೇವಕನು ಅವರ ಸುತ್ತಲೂ ಸಾವಿರಾರು ದೇವದೂತರು ಬೀಡುಬಿಟ್ಟಿರುವುದನ್ನು ನೋಡುವಾಗ ಇದು ಸಂಭವಿಸಿತು. ಇಂದು ಯಾವುದಾದರೂ ವಿಚಾರದಲ್ಲಿ ನೀವು ಧೈರ್ಯಕಳೆದುಕೊಂಡು ಹಿಂದೆಸರಿಯುವ ಅಂಚಿನಲ್ಲಿದ್ದರೆ, ಈ ಏರಿಳಿತ ಬದಲಾಗಲಿದೆ ಎಂದು ನಾನು ನಿಮಗೆ ಹೇಳಲು ಬಂದಿದ್ದೇನೆ.
Bible Reading: lsaiah 28-30
ಅರಿಕೆಗಳು
ನನ್ನೊಂದಿಗಿರುವವರು ಅವರೊಂದಿಗಿರುವವರಿಗಿಂತ ಹೆಚ್ಚಿನವರಾಗಿದ್ದಾರೆ ಮತ್ತು ದೊಡ್ಡವರಾಗಿದ್ದಾರೆ. (ದಿನವಿಡೀ ಇದನ್ನು ಹೇಳುತ್ತಲೇ ಇರಿ)
Join our WhatsApp Channel

Most Read
● ಪರಲೋಕ ಎಂದು ಕರೆಯಲ್ಪಡುವ ಸ್ಥಳ● ಸಾಧನೆಯ ಪರೀಕ್ಷೆ.
● ವಿವೇಕಿಯಾಗಿರಿ
● ದಿನ 28:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಪವಿತ್ರಾತ್ಮನಿಗಿರುವ ಹೆಸರುಗಳು ಮತ್ತು ಬಿರುದುಗಳು
● ಇತರರಿಗಾಗಿ ಪ್ರಾರ್ಥಿಸುವುದು
● ನಿಮ್ಮ ಹೃದಯವನ್ನು ಕಾಪಾಡಿಕೊಳ್ಳುವುದು ಹೇಗೆ?
ಅನಿಸಿಕೆಗಳು