ಅನುದಿನದ ಮನ್ನಾ
4
3
113
ಈ ಹೊತ್ತು ನಿಮ್ಮನ್ನು ನೀವು ಶುದ್ದೀರಿಕರಿಸಿಕೊಳ್ಳಿ, ಕರ್ತನು ನಾಳೆ ಅದ್ಭುತಗಳನ್ನು ಮಾಡುವನು.
Thursday, 25th of September 2025
ಇಸ್ರಾಯೇಲ್ ಮಕ್ಕಳು ತಮ್ಮ ಅತ್ಯಂತ ಮಹತ್ವದ ವಿಜಯಗಳಲ್ಲಿ ಒಂದನ್ನು ಸಮೀಪಿಸುತ್ತಿದ್ದರು. ಈ ಕ್ಷಣದಲ್ಲಿಯೇ ಯೆಹೋಶುವನು ಇಸ್ರಾಯೇಲ್ ಜನರಿಗೆ ಹೇಳಿದ್ದೇನೆಂದರೆ "ನಿಮ್ಮನ್ನು ಪವಿತ್ರಗೊಳಿಸಿಕೊಳ್ಳಿರಿ, ಏಕೆಂದರೆ ನಾಳೆ ಕರ್ತನು ನಿಮ್ಮ ನಡುವೆ ಅದ್ಭುತಗಳನ್ನು ಮಾಡುವನು." (ಯೆಹೋಶುವ 3:5)
ಯೆಹೋಶುವನಿಗೆ ಇದೇನು ಹೊಸ ತತ್ವವಾಗಿರಲಿಲ್ಲ. ಈ ತತ್ವವನ್ನು ತನ್ನ ಮಾರ್ಗದರ್ಶಕನಾಗಿದ್ದ ದೇವರ ಮನುಷ್ಯನಾದ ಮೋಶೆಯು ಕಾರ್ಯಗತಗೊಳಿಸುತ್ತಿರುವುದನ್ನು ಅವನು ಆಗಲೇ ನೋಡಿದ್ದನು. ದೇವರು ತನ್ನ ಜನರ ಮಧ್ಯದಲ್ಲಿ ದೊಡ್ಡಕಾರ್ಯವನ್ನು ಮಾಡಲು ಸಿದ್ಧವಾಗುತ್ತಿದ್ದಾಗಲೆಲ್ಲಾ, ಕರ್ತನು ಅವರಿಗೆ ತಮ್ಮನ್ನು ಪವಿತ್ರಗೊಳಿಸಿಕೊಳ್ಳುವಂತೆ ಹೇಳುತ್ತಿದ್ದನು.
ಮುಂದಿನ ವಚನಗಳಲ್ಲಿ, ಕರ್ತನು ಇಸ್ರಾಯೇಲ್ ಮಕ್ಕಳಿಗೆ ವೈಯಕ್ತಿಕವಾಗಿ ಕಾಣಿಸಿಕೊಳ್ಳಲು ಬಯಸಿ ಆದ್ದರಿಂದ ಆತನು ಅವರನ್ನು ತಮ್ಮನ್ನು ಪವಿತ್ರಗೊಳಿಸಿಕೊಳ್ಳುವಂತೆ ಹೇಳಿದನು.
"ಮೋಶೆ ಜನರ ಮಾತುಗಳನ್ನು ಯೆಹೋವನಿಗೆ ಅರಿಕೆಮಾಡಲಾಗಿ ಯೆಹೋವನು ಅವನಿಗೆ ಹೇಳಿದ್ದೇನಂದರೆ - ನೀನು ಜನರ ಬಳಿಗೆ ಹೋಗಿ ಈ ಹೊತ್ತು ನಾಳೆ ಅವರನ್ನು ಪರಿಶುದ್ಧಗೊಳಿಸು; ಅವರು ತಮ್ಮ ಬಟ್ಟೆಗಳನ್ನು ಮಡಿಮಾಡಿಕೊಂಡು ಮೂರನೆಯ ದಿನದಲ್ಲಿ ಸಿದ್ಧರಾಗಿರಬೇಕು. ಮೂರನೆಯ ದಿನದಲ್ಲಿ ಯೆಹೋವನು ಸಮಸ್ತಜನರಿಗೂ ಪ್ರತ್ಯಕ್ಷನಾಗಿ ಸೀನಾಯಿ ಬೆಟ್ಟದ ಮೇಲಕ್ಕೆ ಇಳಿದುಬರುವನು."
(ವಿಮೋಚನಕಾಂಡ 19:10-11)
ಇದು ನಮಗೆ ಹೇಳುವುದೇನೆಂದರೆ, ನಾವು ಕರ್ತನ ದರ್ಶನ ಹೊಂದಬೇಕಾದರೆ, ಅಶುದ್ಧವಾದ ಮತ್ತು ಭಕ್ತಿಹೀನವಾದ ಎಲ್ಲದರಿಂದ ನಮ್ಮನ್ನು ನಾವು ಪ್ರತ್ಯೇಕಿಸಿಕೊಳ್ಳಬೇಕು.ಇದು ಯೆಹೋಶುವನಿಗೆ ಸಹ ತಿಳಿದಿತ್ತು, ಅವರು ತಮ್ಮ ಮಧ್ಯದಲ್ಲಿ ದೇವರ ಅದ್ಭುತಗಳನ್ನು ನೋಡಬೇಕಾದರೆ, ದೇವರು ತಮ್ಮ ಮಧ್ಯದಲ್ಲಿ ಕೆಲಸ ಮಾಡುವುದನ್ನು ಸ್ವೀಕರಿಸಲು,ಅದನ್ನು ಅರ್ಥಮಾಡಿಕೊಳ್ಳಲು ಅವರು ಆತ್ಮೀಕವಾಗಿ ಸಿದ್ಧರಾಗಿರಬೇಕು.
ತಂದೆ ತಾಯಿಗಳೇ, ನಿಮ್ಮನ್ನು ಪವಿತ್ರಗೊಳಿಸಿಕೊಳ್ಳುವ ಸಮಯ ಇದು - ದೇವರು ನಿಮ್ಮ ಮನೆಯನ್ನು ಮತ್ತು ನಿಮ್ಮ ಮಕ್ಕಳನ್ನು ಭೇಟಿ ಮಾಡಲು ಬಯಸುತ್ತಾನೆ. ಆತನು ಅವರನ್ನು ಸ್ಪರ್ಶಿಸಲಿದ್ದಾನೆ. ನಿಮ್ಮ ಪೀಳಿಗೆಗಳು ಆಶೀರ್ವದಿಸಲ್ಪಡುತ್ತವೆ.
ಪಾಸ್ಟರ್ ಗಳೇ ಮತ್ತು ನಾಯಕರೇ, ನಿಮ್ಮನ್ನು ಪವಿತ್ರಗೊಳಿಸಿಕೊಳ್ಳುವ ಸಮಯ ಇದು - ನಿಮ್ಮ ಅಡಿಯಲ್ಲಿರುವ ಜನರು ಕುರಿಗಳಂತೆ ವೃದ್ದೀಕರಿಸಲಿದ್ದಾರೆ. ನಿಮ್ಮ ಅಡಿಯಲ್ಲಿರುವ ಜನರು ದೇವರಿಗಾಗಿ ಬೆಂಕಿಯೋಪಾದಿಯಲ್ಲಿ ಉರಿಯಲಿದ್ದಾರೆ.
ಯುವಜನರೇ, ನಿಮ್ಮನ್ನು ಪವಿತ್ರಗೊಳಿಸಿಕೊಳ್ಳು ಸಮಯ ಇದು. ಆಂತರ್ಯದಲ್ಲಿ ಮೌನವಾಗಿ ದೇವರಿಗೆ ಮೊರೆಯಿಡುವ ಪೀಳಿಗೆಯನ್ನು ಸ್ಪರ್ಶಿಸಲು ದೇವರು ನಿಮ್ಮನ್ನು ಬಳಸ ಬಯಸುತ್ತಿದ್ದಾನೆ ಆಗ ನೀವು ಯೋಸೇಫನಂತೆ ಇರುತ್ತೀರಿ. ನಿಮ್ಮ ಕಾರಣದಿಂದಾಗಿ, ಅನೇಕರು ದೈಹಿಕವಾದ ಮತ್ತು ನಿತ್ಯ ಮರಣದಿಂದ ರಕ್ಷಿಸಲ್ಪಡುತ್ತಾರೆ.
"ಇಸ್ರಾಯೇಲ್ಯರೇ ನಾಳೆಗೋಸ್ಕರ ಇಂದು ನಿಮ್ಮನ್ನು ಶುದ್ದಿಪಡಿಸಿಕೊಳ್ಳಬೇಕೆಂದು.."ಅವರಿಗೆ ಆಜ್ಞಾಪಿಸಬೇಕು
(ಯೆಹೋಶುವ 7:13 NLT)
ಆದರೂ, ಇನ್ನೊಂದು ಸಂದರ್ಭದಲ್ಲಿ, ದೇವರು ಜನರಿಗೆ, “ಜನರು ತಮ್ಮನ್ನು ಶುದ್ಧೀಕರಿಸಿಕೊಳ್ಳಲು (ಪವಿತ್ರಗೊಳಿಸಿಕೊಳ್ಳಲು) ಆಜ್ಞಾಪಿಸಿರಿ” ಎಂದು ಹೇಳಿದನು. ಇದರರ್ಥ ಪವಿತ್ರೀಕರಣವು ಕೇವಲ ಸಲಹೆ ಅಥವಾ ಅಭಿಪ್ರಾಯವಲ್ಲ; ಅದು ಸ್ವತಃ ಕರ್ತನ ಆಜ್ಞೆಯಾಗಿದೆ.
ಹೊಸ ಒಡಂಬಡಿಕೆಯು ಅದೇ ಸತ್ಯವನ್ನು ಪ್ರತಿಧ್ವನಿಸುತ್ತದೆ.
"ದೇವರ ಚಿತ್ತವೇನಂದರೆ ನೀವು ಶುದ್ಧರಾಗಿ ಇರಬೇಕೆಂಬದೇ. ಆದದರಿಂದ ಹಾದರಕ್ಕೆ ದೂರವಾಗಿರಬೇಕು". (1 ಥೆಸಲೊನೀಕ 4:3)
ಇದಲ್ಲದೆ, ಧರ್ಮಗ್ರಂಥವು ಹೇಳುತ್ತದೆ, “ನಾಳೆಯ ಸಿದ್ಧತೆಯಾಗಿ ತಮ್ಮನ್ನು ಶುದ್ಧೀಕರಿಸಿಕೊಳ್ಳಿ (ಪವಿತ್ರಗೊಳಿಸಿಕೊಳ್ಳಿ)” [ಯೆಹೋಶುವ 7:13 NLT]
ಹಾಗಾದರೆ, ಪವಿತ್ರೀಕರಣವು ನಾಳೆಗಾಗಿ ಸಿದ್ಧತೆಯೂ ಆಗಿದೆ. ನಾಳೆ ನಮ್ಮ ದಾರಿಯಲ್ಲಿ ಎದುರಾಗುವಂತದಕ್ಕೆ ಇಂದೇ ನಾವು ಆತ್ಮೀಕವಾಗಿ ಸಿದ್ಧರಾಗಿರಬೇಕು ಎಂದು ಕರ್ತನು ಬಯಸುತ್ತಾನೆ ಎಂದು ನಾನು ನಂಬುತ್ತೇನೆ. ಯುದ್ಧವು ಕರ್ತನದೇ, ಆದರೆ ಕ್ರಿಸ್ತನಲ್ಲಿ ನಮಗೆ ಈಗಾಗಲೇ ವಾಗ್ದಾನ ಮಾಡಲಾದ ವಿಜಯಕ್ಕಾಗಿ ನಾವು ನಮ್ಮನ್ನು ಸರಿಯಾಗಿ ಇರಿಸಿಕೊಳ್ಳಬೇಕು.
Bible Reading: Daniel 12; Hosea 1-4
ಅರಿಕೆಗಳು
ತಂದೆಯೇ, ಇಂದಿನಿಂದ ಪ್ರಜ್ಞಾಪೂರ್ವಕವಾಗಿ ಶುದ್ಧತೆಯಲ್ಲಿ ನಡೆಯಲು ಮತ್ತು ಸೂಚಕಕಾರ್ಯಗಳ ಮತ್ತು ಅದ್ಭುತಗಳ ಅಂತ್ಯವಿಲ್ಲದ ಸಮಯವನ್ನು ಪ್ರಾರಂಭಿಸಲು ಯೇಸುನಾಮದಲ್ಲಿ ನನಗೆ ಬಲವನ್ನು ಅನುಗ್ರಹಿಸಿ. ಆಮೆನ್!
Join our WhatsApp Channel

Most Read
● ಜನರು ನೆಪಗಳನ್ನು ಹೇಳಲು ಇರುವ ಕಾರಣಗಳು : ಭಾಗ 2● ಆತನ ಪರಿಪೂರ್ಣ ಪ್ರೀತಿಯಲ್ಲಿರುವ ಬಿಡುಗಡೆಯನ್ನು ಕಂಡುಕೊಳ್ಳುವುದು
● ಉದ್ಯೋಗದ ಸ್ಥಳದಲ್ಲಿ ಮಿಂಚುವ ತಾರೆಯಾಗುವುದು-ll
● ದೈನಂದಿನ ಮನ್ನಾ
● ಕಾಮದ ದುರಿಚ್ಛೆಗಳಿಂದ ಹೊರಬರುವುದು
● ಭಯಪಡಬೇಡ.
● ದೈನಂದಿನ ಮನ್ನಾ
ಅನಿಸಿಕೆಗಳು