ಅನುದಿನದ ಮನ್ನಾ
1
2
74
ಅಗಾಪೆ ಪ್ರೀತಿಯಲ್ಲಿ ಬೆಳೆಯುವುದು ಹೇಗೆ?
Wednesday, 1st of October 2025
Categories :
ಆತ್ಮನ ಫಲ (Fruit of the Spirit)
ಪ್ರೀತಿ (Love)
ಅಗಾಪೆ ಪ್ರೀತಿಯು ಅತ್ಯುನ್ನತ ರೀತಿಯ ಪ್ರೀತಿಯಾಗಿದೆ. ಇದನ್ನು 'ದೇವರ ರೀತಿಯ ಪ್ರೀತಿ' ಎಂದು ಕರೆಯಲಾಗುತ್ತದೆ. ಪ್ರೀತಿಯ ಎಲ್ಲಾ ಇತರ ರೂಪಗಳು ಪರಸ್ಪರ ಕೊಡುವಿಕೆ -ಕೊಳ್ಳುವಿಕೆ ಅಥವಾ ನಿಗದಿತ ಷರತ್ತುಗಳ ಮೇಲೆ ಆಧಾರಿತವಾಗಿವೆ.ಆದರೆ ಅಗಾಪೆ ಪ್ರೀತಿಯು ಬೇಷರತ್ತಾದ ಪ್ರೀತಿ. ಇದು ದೇವರು ತನ್ನ ಮಕ್ಕಳಾದ ಎಲ್ಲಾ ಕ್ರೈಸ್ತರು ಹಂಚಿಕೊಳ್ಳಬೇಕೆಂದು ಬಯಸುವ ಪ್ರೀತಿಯ ಪ್ರಕಾರವಾಗಿದೆ.
ನಿಜವಾದ ಅಗಾಪೆ ಪ್ರೀತಿ ಯಾವಾಗಲೂ ಒಂದು ವರವಾಗಿದೆ. ಆದರೆ ನಾವು ಇನ್ನೂ ಪಾಪಿಗಳಾಗಿದ್ದಾಗಲೇ, ಕ್ರಿಸ್ತನು (ಮೆಸ್ಸೀಯ, ಅಭಿಷಿಕ್ತ) ನಮಗಾಗಿ ತನ್ನ ಪ್ರಾಣ ಕೊಟ್ಟನು ಎಂಬ ಅಂಶದಿಂದ ದೇವರು ನಮಗಾಗಿ ತನ್ನ [ಸ್ವಂತ] ಪ್ರೀತಿಯನ್ನು (ಅಗಾಪೆ) ತೋರಿಸಿ ಸ್ಪಷ್ಟವಾಗಿ ಸಾಬೀತುಪಡಿಸಿದ್ದಾನೆ. (ರೋಮ 5:8 ವರ್ಧಿತ)
ದೇವರು ನಮಗಾಗಿ ತನ್ನ ಅಗಾಪೆ ಪ್ರೀತಿಯನ್ನು ತೋರಿಸಿದಾಗ, ನಾವು ಇನ್ನೂ ಪಾಪಿಗಳಾಗಿಯೇ ಇದ್ದೆವು. ಆತನ ಪ್ರೀತಿಯ ಕೃಪೆಗೆ ಬದಲಾಗಿ ನಾವು ದೇವರಿಗೆ ನೀಡಲು ನಮ್ಮಲ್ಲಿ ಏನೂ ಇರಲಿಲ್ಲ.
ಆದರೆ ದೇವರಾತ್ಮನಿಂದ ಉಂಟಾಗುವ ಫಲವೇನಂದರೆ - ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ ಇಂಥವುಗಳೇ.(ಗಲಾತ್ಯ 5:22-23)
ಆತ್ಮನ ಫಲದ ಪಟ್ಟಿಯಲ್ಲಿ ಅಗಾಪೆ ಪ್ರೀತಿಯನ್ನು ಮೊದಲು ಉಲ್ಲೇಖಿಸಲಾಗಿದೆ ಏಕೆಂದರೆ ಅದು ಎಲ್ಲದರ ಅಡಿಪಾಯವಾಗಿದೆ. ಪ್ರೀತಿಯು ಆತ್ಮನ ಫಲ ಮಾತ್ರವಲ್ಲದೇ; ಅದು ಇತರ ಎಲ್ಲಾ ಫಲಗಳನ್ನು ಉತ್ಪಾದಿಸುವ ಮೂಲವೂ ಆಗಿದೆ.
ಪ್ರೀತಿಯು ಸಂತೋಷ, ಶಾಂತಿ, ದೀರ್ಘಶಾಂತಿ, ದಯೆ, ಒಳ್ಳೆಯತನ, ನಂಬಿಕೆ, ದೀನತೆ ಮತ್ತು ಸ್ವನಿಯಂತ್ರಣದ ಪ್ರಮುಖ ಮೂಲವಾಗಿದೆ. ಆತ್ಮನ ಫಲಗಳು ಪವಿತ್ರಾತ್ಮನಿಂದಲೇ ಹೊರಹೊಮ್ಮುವಂತವುಗಳಾಗಿವೆ. ನಾವು ಪವಿತ್ರಾತ್ಮನೊಂದಿಗೆ ನಮ್ಮ ದೈನಂದಿನ ಅನ್ಯೋನ್ಯತೆ ಕಾಪಾಡಿಕೊಳ್ಳಲು ಜಾಗರೂಕರಾಗಿರುವಂತೆ ಆತನು ನಮ್ಮ ಹೃದಯಗಳಲ್ಲಿ ದೇವರ ಅಗಾಪೆ ಪ್ರೀತಿಯನ್ನು ಸುರಿಯುತ್ತಾನೆ. (ರೋಮನ್ನರು 5:5 ಓದಿ)
Bible Reading: Jonah 2-4; Micah1-3
ಪ್ರಾರ್ಥನೆಗಳು
ತಂದೆಯೇ, ನನ್ನ ಪೂರ್ಣ ಹೃದಯದಿಂದ, ನನ್ನ ಪೂರ್ಣ ಆತ್ಮದಿಂದ, ನನ್ನ ಪೂರ್ಣ ಮನಸ್ಸಿನಿಂದ ಮತ್ತು ನನ್ನ ಸಂಪೂರ್ಣ ಶಕ್ತಿಯಿಂದ ನಿನ್ನನ್ನು ಪ್ರೀತಿಸುವುದನ್ನು ಯೇಸುನಾಮದಲ್ಲಿ ನನಗೆ ಕಲಿಸಿಕೊಡಿ.ಆಮೆನ್.
Join our WhatsApp Channel

Most Read
● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ದೇವರ ಕೃಪೆಯನ್ನು ಸೇದುವುದು
● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೇವರ ರೀತಿಯ ನಂಬಿಕೆ
● ಹೋರಾಡಿ
● ಪ್ರೀತಿಯ ಭಾಷೆ
● ಉತ್ತೇಜನಕಾರಿಯಾಗಿ ವಿವೇಕ ಮತ್ತು ಪ್ರೀತಿ
ಅನಿಸಿಕೆಗಳು