ಅನುದಿನದ ಮನ್ನಾ
ಇಸ್ಕಾರಿಯೋತ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು- 3
Friday, 25th of October 2024
1
0
111
Categories :
ಶರಣಾಗತಿ (Surrender)
ನಾವು ಇಸ್ಕಾರಿಯೋತ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು ಎಂಬ ನಮ್ಮ ಸರಣಿಯನ್ನು ಮುಂದುವರಿಸುತ್ತಿದ್ದೇವೆ.
"ಆತನು ಬೇಥಾನ್ಯದಲ್ಲಿದ್ದ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ ಒಬ್ಬ ಸ್ತ್ರೀಯು ಬಹು ಬೆಲೆಯುಳ್ಳ ಸ್ವಚ್ಛ ಜಟಮಾಂಸಿ ತೈಲದ ಭರಣಿಯನ್ನು ತೆಗೆದುಕೊಂಡು ಬಂದು ಅದನ್ನು ಒಡೆದು ತೈಲವನ್ನು ಯೇಸುವಿನ ತಲೆಯ ಮೇಲೆ ಸುರಿದಳು. ಕೆಲವರು ತಮ್ಮೊಳಗೆ ಕೋಪಗೊಂಡು, “ಈ ತೈಲವನ್ನು ಹೀಗೆ ವ್ಯರ್ಥಮಾಡಿದ್ದೇಕೆ?ಇದನ್ನು ಮುನ್ನೂರು ಬೆಳ್ಳಿನಾಣ್ಯಗಳಿಗಿಂತ ಹೆಚ್ಚಿನ ಬೆಲೆಗೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ?” ಎಂದು ಹೇಳಿ ಆಕೆಯನ್ನು ದೂಷಿಸಿದರು." (ಮಾರ್ಕ್ 14: 3-5)
ಆ ಸ್ತ್ರೀಯು ಕರ್ತನಾದ ಯೇಸುವಿನ ತಲೆಯ ಮೇಲೆ ಬೆಲೆಬಾಳುವ ತೈಲವನ್ನು ಸುರಿದಾಗ, ಯೂದನು ತುಂಬಾ ಅಸಮಾಧಾನಗೊಂಡನು. ಯೇಸುವಿಗೆ ಏನನ್ನಾದರೂ ಆ ಸ್ತ್ರೀಯು ಕೊಡುವಂತದ್ದು ಅವನಿಗಿಷ್ಟವೇ - ಆದರೆ ಈ ರೀತಿ ಕೊಡುವುದು ಅವನಿಗೆ ಇಷ್ಟವಾಗಲಿಲ್ಲ. ನಾನು ಯೇಸುವಿಗೆ ಎಲ್ಲವನ್ನೂ ಕೊಡುತ್ತೇನೆ ಎಂದು ಹೇಳುತ್ತಾ ಮತ್ತು ಕೆಲವನ್ನು ಮಾತ್ರ ನನಗೆ ಕೊಡಲಿಷ್ಟವಿಲ್ಲ ಎಂಬ ಮನೋಭಾವವನ್ನು ಹೊಂದಿರುವಾಗ, ಅಂತಹ ವ್ಯಕ್ತಿಯು ಎಲ್ಲವನ್ನೂ ಕಳೆದುಕೊಳ್ಳಬಹುದು. ವಸ್ತುಸ್ಥಿತಿ ಏನೆಂದರೆ; ಯೂದನು ಎಂದಿಗೂ ಸಹ ಯೇಸುವಿಗೆ ಸಂಪೂರ್ಣವಾಗಿ ಶರಣಾಗಲಿಲ್ಲ. ಅವನು ಯಾವಾಗಲೂ ತನ್ನದೇ ಆದ ಒಂದು ಅಜೆಂಡಾವನ್ನು ಹೊಂದಿದ್ದನು.
ಇಂದಿಗೂ, ಯೇಸುವಿಗೆ ಸಂಪೂರ್ಣವಾಗಿ ಶರಣಾಗುತ್ತೇನೆ ಆದರೆ ನನ್ನ ಜೀವನವನ್ನು ತೊಂದರೆಗೊಳಿಸಿಕೊಳ್ಳುವಷ್ಟು ಶರಣಾಗಲು ಇಷ್ಟವಿಲ್ಲದಂತಹ, ಆದರೂ ನಾವು ಪರಲೋಕಕ್ಕೆ ಹೋಗುತ್ತೇವೆ ಎಂದುಕೊಳ್ಳುವ ಅನೇಕ ಜನರಿದ್ದಾರೆ. ಅಂತಹ ಜನರು ಯೇಸುವನ್ನು ನಿತ್ಯತ್ವಕ್ಕೆ ನಂಬುತ್ತಾರೆ, ಆದರೆ ದಿನನಿತ್ಯಕ್ಕಾಗಿ ಅಲ್ಲ. ಯೇಸು ಯಾವುದನ್ನೆಲ್ಲಾ ನೀವು ಸಮರ್ಪಣೆ ಮಾಡಬೇಕೆಂದು ಬಯಸುವ ಎಲ್ಲಾ ವಿಚಾರಗಳನ್ನೂ ನೀವು ಸಮರ್ಪಿಸಲು ಸಿದ್ದರಿರಬೇಕು!
ಎರಡನೆಯದಾಗಿ, ಆ ಸ್ತ್ರೀಯ ಆರಾಧನೆಯು ಯೂದನ ದೃಷ್ಟಿಯಲ್ಲಿ ವ್ಯರ್ಥಕಾರ್ಯವಾಗಿ ಪರಿಗಣಿಸಲ್ಪಟ್ಟಿತು . ದುಃಖಕರವೆಂದರೆ, ಇಂದಿನ ಕಾಲದಲ್ಲಿಯೂ ಸಹ, ಹೊರನೊಟಕ್ಕೆ ಕ್ರಿಸ್ತನಿಗೆ ಬದ್ಧರಾಗಿರುವಂತೆ ತೋರುವ ಅನೇಕ ಜನರು ಆರಾಧನೆಯನ್ನು ವ್ಯರ್ಥವೆಂದು ಪರಿಗಣಿಸುತ್ತಾರೆ. ತಮ್ಮ ವೈಯಕ್ತಿಕ ಪ್ರಾರ್ಥನೆಯ ಸಮಯದಲ್ಲಿ, ಅವರು ಎಂದಿಗೂ ಕರ್ತನನ್ನು ಆರಾಧಿಸುವುದಿಲ್ಲ. ಅವರು ಪ್ರಾರ್ಥಿಸಬಹುದು ಆದರೆ ಎಂದಿಗೂ ಆರಾಧಿಸುವುದಿಲ್ಲ.
ಅವರು ಚರ್ಚ್ ಸೇವೆಗಳಿಗೆ (ಆನ್‌ಲೈನ್ ಅಥವಾ ಭೌತಿಕವಾಗಿ) ಹಾಜರಾಗುತ್ತಾರೆ. ಆದರೆ ಆರಾಧನೆ ಸಮಯಕ್ಕೆ ಹೋಗುವುದಿಲ್ಲ. ಏಕೆ ಎಂದು ಅವರನ್ನು ಪ್ರಶ್ನಿಸಿದಾಗ, "ನಾನು ಬರೀ ವಾಕ್ಯಕೇಳಲು ಬಂದಿದ್ದೇನೆ" ಎಂದು ತುಂಬಾ ಆತ್ಮೀಕ ವ್ಯಕ್ತಿಗಳಂತೆ ಉತ್ತರವನ್ನು ನೀಡುತ್ತಾರೆ. ಚರ್ಚ್ ಸೇವೆಗಳಿಗೆ (ಆನ್‌ಲೈನ್ ಅಥವಾ ಭೌತಿಕ) ನೀವು" ನಾನು ಇನ್ನು ಮುಂದೆ ಯಾವಾಗಲೂ ಸಮಯಕ್ಕೆ ಸರಿಯಾಗಿ ಹೋಗುತ್ತೇನೆ" ಎಂದು ಇಂದೇ ನಿರ್ಧಾರ ಮಾಡಿ ಮತ್ತು ಆತನನ್ನು ಆರಾಧಿಸಿ.
ಈ ಸ್ತ್ರೀಗೆ ತಾನು ಯಾವ ರೀತಿಯಲ್ಲಿ ಎಷ್ಟು ಕ್ಷಮಿಸಲ್ಪಟ್ಟಿದ್ದೇನೆ ಎಂಬ ಸ್ಪಷ್ಟವಾದ ತಿಳುವಳಿಕೆ ಇತ್ತು ಮತ್ತು ಆಕೆಯು ಅದರ ಕುರಿತು ಆತನಿಗೆ ಅಭಾರಿಯಾಗಿದ್ದಳು. ನಾವು ಎಷ್ಟು ಕ್ಷಮಿಸಲ್ಪಟ್ಟಿದ್ದೇವೆ ಮತ್ತು ಆತನು ನಮ್ಮನ್ನು ಎಷ್ಟು ಪ್ರೀತಿಸುತ್ತಾನೆ ಎಂಬುದನ್ನು ನಾವು ನಿಜವಾಗಿಯೂ ಗ್ರಹಿಸಿದರೆ; ಆಗ ನಾವೂ ಸಹ ಕರ್ತನನ್ನು ಹೆಚ್ಚು ಹೆಚ್ಚಾಗಿ ಆರಾಧಿಸುತ್ತೇವೆ.
ಅರಿಕೆಗಳು
ಪರಲೋಕದ ತಂದೆಯೇ, ನಾನು ಎಲ್ಲಿಗೆ ಹೋದರೂ ನಿಮ್ಮ ಯೋಜನೆಗಳಿಗೇ ನಾನು ಶರಣಾಗುತ್ತೇನೆ, ಕರ್ತನೇ; ನನ್ನನ್ನು ಕೈಹಿಡಿದು ನಿನ್ನ ಚಿತ್ತದಂತೆ ಉಪಯೋಗಿಸು ಎಂದು ಬೇಡಿಕೊಳ್ಳುತ್ತೇನೆ. ಯಾವಾಗಲೂ ನೀವು ಬಯಸುವ ವ್ಯಕ್ತಿಯಾಗಿರಲು ನನಗೆ ಸಹಾಯ ಮಾಡಿ ಎಂದು ಯೇಸುವಿನ ಹೆಸರಿನಲ್ಲಿ ನಾನು ಪ್ರಾರ್ಥಿಸುತ್ತೇನೆ ತಂದೆಯೇ .ಆಮೆನ್
Join our WhatsApp Channel
Most Read
● ಮೂರ್ಖತನದಿಂದ ನಂಬಿಕೆಯನ್ನು ಪ್ರತ್ಯೇಕಿಸುವುದು● ನಿಮ್ಮ ಗತಿಸಿ ಹೋದ ಕಾಲವು ನಿಮ್ಮ ಹೆಸರಾಗುವುದಕ್ಕೆ ಅವಕಾಶ ಕೊಡಬೇಡಿರಿ.
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - III
● ನೀವು ದೇವರಿಂದ ನೇಮಿಸಲ್ಪಡುವ ಮುಂದಿನ ಬಿಡುಗಡೆ ನಾಯಕರು ನೀವಾಗಬಹುದು
● ಪುರುಷರು ಏಕೆ ಪತನಗೊಳ್ಳುವರು -6
● ಮತ್ತೊಬ್ಬರ ಪಾತ್ರೆಯನ್ನು ತುಂಬಿಸುವುದನ್ನು ಬಿಟ್ಟು ಬಿಡಬೇಡಿರಿ.
● ಅದ್ಭುತಗಳಲ್ಲಿ ಕಾರ್ಯ ಮಾಡುವುದು - ಕೀಲಿಕೈ #1
ಅನಿಸಿಕೆಗಳು