english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಸುಂದರ ದ್ವಾರ
ಅನುದಿನದ ಮನ್ನಾ

ಸುಂದರ ದ್ವಾರ

Sunday, 5th of October 2025
0 0 5
Categories : ಗೇಟ್ಸ್ (Gates)
ನೀವು ಎಂದಾದರೂ ನಿಮ್ಮ ಜೀವಿತದಲ್ಲಿ ಒಂದು ವಿಷಯವನ್ನು ಅದು ಸಿಕ್ಕಿದರೆ ಸಾಕಪ್ಪ ಎಂದು ನಿರೀಕ್ಷಿಸಿ, ಆದರೆ ಅದಕ್ಕಿಂತ ಉತ್ತಮವಾದದ್ದನ್ನು ಪಡೆದ ಸ್ಥಿತಿಯನ್ನು ಅನುಭವಿಸಿದ್ದೀರಾ? ಸುಂದರ ದ್ವಾರದಲ್ಲಿ  ಕೂತಿದ್ದ ಕುಂಟ ಭಿಕ್ಷುಕನಿಗೆ ನಿಖರವಾಗಿ ಅದೇ ಸಂಭವಿಸಿತು. 

ನಮಗಾಗಿ ದೇವರ ಯೋಜನೆಗಳು ನಾವು ಬೇಡುವುದಕ್ಕಿಂತಲೂ ಅಥವಾ ಯೋಚಿಸುವುದಕ್ಕಿಂತಲೂ ಹೆಚ್ಚಾಗಿರುತ್ತದೆ (ಎಫೆಸ 3:20).ಎಂಬುದನ್ನು ಉತ್ತೇಜಿಸಲು ಮತ್ತು ದೃಢೀಕರಿಸಲು ಇಂದಿನ ಭಕ್ತಿವೃದ್ಧಿ ವಾಕ್ಯ ವಿವರಣೆಯ ಮೂಲಕ ಈ ಒಂದು ಅದ್ಭುತ ಕಥೆಯಲ್ಲಿ ನಾವು ಮಿಂದೇಳಬಹುದು.

 ಒಂದಾನೊಂದು ದಿವಸ ಪೇತ್ರ ಯೋಹಾನರು ಮಧ್ಯಾಹ್ನದ ಮೇಲೆ ಮೂರು ಘಂಟೆಗೆ ನಡೆಯ ತಕ್ಕ ಪ್ರಾರ್ಥನೆಗಾಗಿ ದೇವಾಲಯಕ್ಕೆ ಹೋಗುತ್ತಿರಲು ಹುಟ್ಟುಕುಂಟನಾಗಿದ್ದ ಒಬ್ಬ ಮನುಷ್ಯನನ್ನು ಯಾರೋ ಹೊತ್ತುಕೊಂಡು ಬಂದರು. "(ಅಪೊಸ್ತಲರ ಕೃತ್ಯಗಳು 3:)

ಪೇತ್ರ ಮತ್ತು ಯೋಹಾನರು ತಮ್ಮ ಆತ್ಮೀಕ ಶಿಸ್ತಿನ ಕುರಿತು ಗಂಭೀರವಾಗಿದ್ದರು ಎಂಬುದನ್ನು ಇಲ್ಲಿ ಗಮನಿಸಿ. ದಿನಕ್ಕೆ ಮೂರು ಬಾರಿ ಪ್ರಾರ್ಥಿಸುವ ದಾನಿಯೇಲನಂತೆ ಅವರೂ ಸಹ ಪ್ರಾರ್ಥನೆಗಾಗಿ ಒಂದು ನಿಗದಿತ ಸಮಯವನ್ನು ಹೊಂದಿದ್ದರು (ದಾನಿಯೇಲ 6:10). 

ಒಂಬತ್ತನೇ ಗಂಟೆ ಎನ್ನುವುದು ನಮ್ಮ ಮಧ್ಯಾಹ್ನದ 3 ಗಂಟೆಯಾಗಿದೆ - ಇದು ಯಹೂದಿಗಳ ದೈನಂದಿನ ಸಂಧ್ಯಾ ನೈವೇದ್ಯ ಅರ್ಪಿಸಿ ಪ್ರಾರ್ಥಿಸುವ ಸಮಯವಾಗಿದ್ದು  ಶಿಲುಬೆಯಲ್ಲಿ ಯೇಸು ಮರಣಿಸಿದಂತ ಸಮಯವೂ ಅದೇ ಆಗಿತ್ತು. ನಿಮ್ಮ ಪ್ರಾರ್ಥನಾ ಜೀವನದಲ್ಲಿರುವ ನಿಮಗಿರುವ ಸ್ಥಿರತೆಯೇ ಅದ್ಭುತಗಳು ಸಂಭವಿಸಲು ವೇದಿಕೆಯನ್ನು ಸಿದ್ದಪಡಿಸುವಂತದ್ದಾಗಿದೆ. 

ಆ ಕುಂಟನನ್ನು "ಸುಂದರ ದ್ವಾರ" ಎಂದು ಕರೆಯಲ್ಪಡುವ ದೇವಾಲಯದ ದ್ವಾರದಲ್ಲಿ ಪ್ರತಿದಿನ ಕೂಡಿಸಲಾಗುತಿತ್ತು(ಅ.ಕೃ 3:2). ನಮ್ಮ ಜೀವನದಲ್ಲಿ ನಾವು ಸಿಲುಕಿಕೊಂಡಿರುವ ಸಂಗತಿಗಳಿಗೆ ಸುಂದರ ದ್ವಾರ  ಎಂಬುದು ಒಂದು ಉತ್ತಮ ರೂಪಕವಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ಅವೇ ನಮಗೆ ಅದ್ಭುತವಾಗಿ ಕಾಣುತ್ತಿರಬಹುದು. ದೇವರು ನಮ್ಮ ಜೀವನಕ್ಕೆ ಅತ್ಯುತ್ತಮವಾದದ್ದನ್ನು ಇಟ್ಟಿರುವಾಗ ಅದಕ್ಕಿಂತ ಕೆಳಮಟ್ಟದನ್ನು ಸ್ವೀಕರಿಸಿ ಸಂತೃಪ್ತರಾಗುವುದು ಸುಲಭವೇ.

ಆ ಮನುಷ್ಯನು ನಿರೀಕ್ಷೆಯಲ್ಲಿ ಭಿಕ್ಷೆ ಬೇಡುವಾಗ, ಪೇತ್ರನು ಅವನಿಗೆ, “ನಮ್ಮನ್ನು ನೋಡು” ಎಂದು ಆಜ್ಞಾಪಿಸುತ್ತಾನೆ (ಅ.ಕೃ. 3:4).

ಕೆಲವೊಮ್ಮೆ, ನಾವು ನಮ್ಮ ಕೊರತೆ ಅಥವಾ ಸಮಸ್ಯೆಯ ಮೇಲೆಯೇ ಹೆಚ್ಚು ಗಮನಹರಿಸುವವರಾಗಿ, ಪರಿಹಾರವನ್ನು ಕಳೆದುಕೊಳ್ಳುತೇವೆ. ಏಳು, ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ." ಎಂದು ಯೆಶಾಯ 60:1 ಹೇಳುತ್ತದೆ. 

ಆ ಮನುಷ್ಯನು ತನ್ನ ಸ್ಥಿತಿಯಿಂದ ಪರಿಹಾರದ ಕಡೆಗೆ - ಕ್ರಿಯೆಯಲ್ಲಿ ನಂಬಿಕೆಯ ಕಡೆಗೆ - ತನ್ನ ಗಮನವನ್ನು ಬದಲಾಯಿಸಬೇಕೆಂದು ಪೇತ್ರನು ಬಯಸಿ. "ಬೆಳ್ಳಿ ಮತ್ತು ಬಂಗಾರವಂತೂ ನನ್ನಲ್ಲಿಲ್ಲ, ಆದರೆ ನನ್ನಲ್ಲಿರುವದನ್ನು ನಾನು ನಿನಗೆ ಕೊಡುತ್ತೇನೆ: ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲಿ, ಎದ್ದು ನಡೆದಾಡು" (ಅ.ಕೃ. 3:6) ಎಂದನು. 

ಆ ಮನುಷ್ಯನು ನಾಣ್ಯಗಳನ್ನು ಅವನಿಂದ ನಿರೀಕ್ಷಿಸಿದನು ಆದರೆ ಆ ಹಣದಿಂದ ಖರೀದಿಸಲು ಸಾಧ್ಯವಾಗದ ರೂಪಾಂತರವನ್ನು ಪಡೆದುಕೊಂಡನು. ಇದು ದೇವರ ಸಂಗತಿ ಯಂತೆಯೇ ಅಲ್ಲವೇ? ಯೇಸು ನೀರನ್ನು ದ್ರಾಕ್ಷಾರಸವಾಗಿ ಪರಿವರ್ತಿಸಸುವುದನ್ನು ನೋಡುವಾಗ ನಮಗಿದಾದರೆ ಸಾಕು ಎಂದು ನಾವು ಭಾವಿಸುವುದಕ್ಕಿಂತಲೂ ಹೆಚ್ಚಿನದನ್ನು ಆತನು ನಮಗೆ ನೀಡಲು ಸಿದ್ದವಿದ್ದಾನೆ ಅದು ಈ ಲೋಕದ ದ್ರಾಕ್ಷಾರಸವನ್ನಲ್ಲ, ಆದರೆ ಅತ್ಯುತ್ತಮವಾದ ದ್ರಾಕ್ಷಾರಸವನ್ನು (ಯೋಹಾನ 2:1-10). 

"ಮತ್ತು ಅವನು ಅವನನ್ನು ಬಲಗೈಯಿಂದ ಹಿಡಿದು ಮೇಲಕ್ಕೆತ್ತಿದನು, ತಕ್ಷಣವೇ ಅವನ ಪಾದಗಳು ಮತ್ತು ಕಣಕಾಲಿನ ಮೂಳೆಗಳು ಬಲಗೊಂಡವು" (ಅ.ಕೃ. 3:7). ದೇವರು ಕಾರ್ಯ ಮಾಡುವಾಗ, ರೂಪಾಂತರಗಳು ತಕ್ಷಣವೇ ಆಗಬಹುದು. 

ಇಲ್ಲಿ ಒಂದು ಪ್ರಬಲ ಉದಾಹರಣೆ ಇದೆ: ಈ ಮನುಷ್ಯನಿಗೆ ಒಂದು ದೈವೀಕ ಸ್ಪರ್ಶದ, ಅವನನ್ನು ಕೈಹಿಡಿದು ಮೇಲೇತ್ತುವ ಒಂದು ಕೈಗಳ ಅಗತ್ಯವಿತ್ತು. ನಿಮ್ಮ ಜೀವನದಲ್ಲಿ ಪೇತ್ರ ಅಥವಾ ಯೋಹಾನರಂತೆ ಯಾರಾದರೂ ಇದ್ದಾರೆಯೇ, ನಿಮ್ಮನ್ನು ಮೇಲಕ್ಕೆತ್ತಲು ಸಹಾಯ ಮಾಡಲು ಯಾರಾದರೂ ನಿಮಗಾಗಿ ಇದ್ದಾರೆಯೇ?

"ಆಗ ಅವನು, ಹಾರಿ, ನಿಂತು, ನಡೆದು, ಅವರೊಂದಿಗೆ ದೇವಾಲಯದೊಳಗೆ ಪ್ರವೇಶಿಸಿದನು - ನಡೆಯುತ್ತಾ, ಹಾರುತ್ತಾ, ದೇವರನ್ನು ಸ್ತುತಿಸುತ್ತಾ" (ಅ. ಕೃ 3:8). ಆ ಮನುಷ್ಯನು ಮೊದಲು ನಡೆಯದೇ; ಮೊದಲು ಹಾರಿದನು! ಅವನ ನಂಬಿಕೆಯ ಧೈರ್ಯಶಾಲಿ ಜಿಗಿತದಲ್ಲಿ ನಂಬಲಾಗದಷ್ಟು ಆಳವಾದ ಏನೋ ಇತ್ತು. ತನ್ನಪೂರ್ಣ ಶಕ್ತಿಯಿಂದ ಕರ್ತನ ಮುಂದೆ ನೃತ್ಯ ಮಾಡಿದ ದಾವೀದನಂತೆ ಅವನ ಸಂತೋಷವನ್ನು ಹಿಡಿದಿಡಲು ಸಾಧ್ಯವಾಗಲಿಲ್ಲ (2 ಸಮುವೇಲ 6:14). 

ಇಂದು, ನೀವು ನಿಮಗಿರುವ "ಸುಂದರ ದ್ವಾರ"ದಲ್ಲಿ ನಿಮ್ಮನ್ನು ಕಂಡುಕೊಂಡರೆ, ಹಾದುಹೋಗುವಾಗ ಸಾಕಷ್ಟು ನಿರೀಕ್ಷೆಯಿಂದ ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ. ದೇವರು ನಿಮಗಾಗಿ ಹೆಚ್ಚಿನದನ್ನು ಹೊಂದಿದ್ದಾನೆ. ಎದ್ದು ಯೋಹಾನ 10:10 ರಲ್ಲಿ ಅವನು ವಾಗ್ದಾನ ಮಾಡಿದ ಸಮೃದ್ಧಿಯಾದ ಜೀವನಕ್ಕೆ ನಡೆಯಲು ಇದು ಸಮಯವಾಗಿದೆ: 

"ನೀವು ಜೀವವನ್ನು ಹೊಂದಬೇಕೆಂದೂ ಅದು ಸಮೃದ್ಧಿಯಾಗಿರಬೇಕೆಂದು ನಾನು ಬಂದಿದ್ದೇನೆ." 

Bible Reading: Haggai 2; Zechariah 1-4
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಮ್ಮ ಜೀವನದಲ್ಲಿ ನೀನಿಟ್ಟಿರುವ  "ಸುಂದರ ದ್ವಾರಗಳನ್ನು" ಗುರುತಿಸದೇ ನಿಮ್ಮ ಕೃಪೆಯನ್ನು ಕಡೆಗಣಿಸಿರುವ ನೀನಿಟ್ಟಿರುವ ಆಶೀರ್ವಾದಕ್ಕಿಂತ ಕಡಿಮೆಯಾದದಕ್ಕೆ  ಹೊಂದಾಣಿಕೆ ಮಾಡಿಕೊಂಡಿರುವ ಪ್ರದೇಶಗಳನ್ನು ಗುರುತಿಸಿಕೊಳ್ಳಲು ನಮಗೆ ಸಹಾಯ ಮಾಡಿ. ನಮ್ಮ ಕಥೆಗಳಲ್ಲಿ ನಿಮ್ಮ ದಯೆಯನ್ನು  ಇತರರು ಕಂಡುಕೊಳ್ಳಲು ಪ್ರೇರೇಪಿಸುವಂತೆ ನಾವು ಜೀವನದಲ್ಲಿ ಎದ್ದೇಳಲು, ನಡೆಯಲು ಮತ್ತು ನಂಬಿಕೆಯಲ್ಲಿ ಜಿಗಿಯಲು ನಮಗೆ ಬಲವನ್ನು ಯೇಸುನಾಮದಲ್ಲಿ ಅನುಗ್ರಹಿಸಿ ಆಮೆನ್.

Join our WhatsApp Channel


Most Read
● ನೀವು ಯುದ್ಧರಂಗದಲ್ಲಿರುವಾಗ: ಒಳನೋಟ
● ನಿಮ್ಮ ಮಾನದಂಡಗಳನ್ನು ಹೆಚ್ಚಿಸಿ
● ಸೆರೆಯಲ್ಲಿ ದೇವರ ಸ್ತೋತ್ರ
● ಈ ದಿನಮಾನಗಳಲ್ಲಿ ಕಾಣುವ ಅಪರೂಪದ ಸಂಗತಿ
● ನಿಮ್ಮ ದೌರ್ಬಲ್ಯಗಳನ್ನು ದೇವರಿಗೆ ಒಪ್ಪಿಸಿ
● ಅಲೆದಾಡುವುದನ್ನು ನಿಲ್ಲಿಸಿ
● ಸರಿಪಡಿಸಿಕೊಳ್ಳಿರಿ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್