ಅನುದಿನದ ಮನ್ನಾ
1
1
153
ಗತಕಾಲದ ಕಪಾಟನ್ನು ತೆರೆಯುವುದು
Friday, 24th of October 2025
Categories :
ಕ್ಷಮೆ (Forgiveness)
ಪ್ರತಿಯೊಬ್ಬ ವ್ಯಕ್ತಿಯು ಸೂರ್ಯನ ಬೆಳಕು ಮತ್ತು ಕತ್ತಲಿನ ಮಿಶ್ರಣದೊಂದಿಗೆ ತನ್ನ ಜೀವನ ಪ್ರಯಾಣವನ್ನು ನಡೆಸುತ್ತಿರುತ್ತಾನೆ. ಅನೇಕರಿಗೆ, ಗತಕಾಲವು ಒಂದು ಗುಪ್ತ ಕೋಣೆಯಾಗಿಯೇ ಉಳಿದಿದ್ದು,ಅವು ಪಾಪ, ವಿಷಾದ ಮತ್ತು ನೋವಿನ ಅಸ್ಥಿಪಂಜರಗಳು ಇರುವ ರಹಸ್ಯ ಕಪಾಟಾಗಿರುತ್ತದೆ . ಈ ಅಸ್ಥಿಪಂಜರಗಳು ಹೆಚ್ಚಾಗಿ ನಗುವಿನ ಮತ್ತು ದಯೆ ತೋರುವ ಕ್ರಿಯೆಗಳ ಹಿಂದೆ ಎಚ್ಚರಿಕೆಯಿಂದ ಮರೆಮಾಡಲ್ಪಡುತ್ತವೆ, ಏಕೆಂದರೆ ಅವು ಆತ್ಮವನ್ನು ಭಯ ಮತ್ತು ಖಂಡನೆಯ ಸರಪಳಿಗಳಲ್ಲಿ ಆವರಿಸಿಕೊಂಡಿರುತ್ತವೆ.
"ಎಲ್ಲರೂ ಪಾಪ ಮಾಡಿ ದೇವರ ಮಹಿಮೆಯನ್ನು ಹೊಂದಲು ವಿಫಲರಾಗಿದ್ದಾರೆ"ಎಂದು (ರೋಮನ್ನರು 3:23)ದೇವರ ವಾಕ್ಯವು ನಮಗೆ ಹೇಳುತ್ತದೆ. ಅಪೂರ್ಣತೆಯು ನಮ್ಮ ಮಾನವ ಅಸ್ತಿತ್ವದ ಭಾಗವಾಗಿದೆ ಎಂದು ಅದು ನಮಗೆ ನೆನಪಿಸುತ್ತದೆ. ಆದಾಗ್ಯೂ, ಗತಕಾಲವು ನಿಮಗೆ ಒಂದು ಸೆರೆಮನೆ ಆಗಬೇಕಾಗಿಲ್ಲ. ದೈವಿಕ ಅನುಗ್ರಹದ ಪಿಸುಮಾತಿನ ತಂಗಾಳಿ ಮತ್ತು ದೇವರ ಸರ್ವವ್ಯಾಪಿ ಪ್ರೀತಿಯು ಈ ಕಪಾಟುಗಳನ್ನು ಅನಾವರಣ ಮಾಡಲು, ಅಲ್ಲಿರುವ ಕಾರ್ಗತ್ತಲನು ಹೋಗಲಾಡಿಸಲು ಮತ್ತು ಪೀಡಿಸಲ್ಪಟ್ಟ ಆತ್ಮಗಳನ್ನು ಮುಕ್ತಗೊಳಿಸಲು ಸದಾ ಸಿದ್ಧವಾಗಿದೆ.
"ಆತನು ಮುರಿದ ಮನಸ್ಸುಳ್ಳವರನ್ನು ವಾಸಿಮಾಡುತ್ತಾನೆ; ಅವರ ಗಾಯಗಳನ್ನು ಕಟ್ಟುತ್ತಾನೆ."ಎಂದು ಕೀರ್ತನೆ 147:3 ನಮಗೆ ಭರವಸೆ ನೀಡುತ್ತದೆ,.ನಮ್ಮ ಅಸ್ತಿತ್ವದ ಆಳವಾದ ಆಂತರ್ಯದಲ್ಲಿ, ನಮ್ಮ ಅಸ್ಥಿಪಂಜರಗಳನ್ನು ಬಿಡುಗಡೆ ಗೊಳಿಸಲು, ನಮ್ಮ ಗತಕಾಲದ ಕಪಾಟನ್ನು ತೆರೆದು ಆತನ ಪ್ರೀತಿಯ ರೂಪಾಂತರ ಶಕ್ತಿಯನ್ನು ಸ್ವೀಕರಿಸಬೇಕೆಂದು ಕರ್ತನು ನಮ್ಮನ್ನು ಕರೆಯುತ್ತಾನೆ.
ಅದನ್ನು ಗುರುತಿಸಿಕೊಳ್ಳುವುದು ಮಖ್ಯ ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷವಿುಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವನು. (1 ಯೋಹಾನ 1:9).
ದುಃಖಕರವಿಷಯವೆಂದರೆ, ಅನೇಕರು ತಮ್ಮ ಹಿಂದಿನ ಕಾಲದ ಸರಪಳಿಗಳಿಂದ ಬಂಧಿಸಲ್ಪಟ್ಟಿದ್ದಾರೆ, ಅಪರಾಧ ಮತ್ತು ಖಂಡನೆಯ ಕಾರ್ಗತ್ತಲು ಅವರ ಮೇಲೆ ಆವರಿಸಿಕೊಂಡಿವೆ. ಆದಾಗ್ಯೂ, ಈ ಮಾನಸಿಕ ಸೆರೆಮನೆಯಿಂದ ದೈವಿಕರೀತಿಯಲ್ಲಿ ಪಾರಾಗಲು ಕ್ರಿಸ್ತ ಯೇಸುವಿನಲ್ಲಿ ವಿಮೋಚನೆ ಇದೆ.
"ಆದದರಿಂದ ಕ್ರಿಸ್ತ ಯೇಸುವಿನಲ್ಲಿ ಇರುವವರಿಗೆ ಅಪರಾಧನಿರ್ಣಯವು ಈಗ ಇಲ್ಲವೇ ಇಲ್ಲ. ಯಾಕಂದರೆ ಜೀವವನ್ನುಂಟುಮಾಡುವ ಪವಿತ್ರಾತ್ಮನಿಂದಾದ ನಿಯಮವು ನಿನ್ನನ್ನು ಪಾಪಮರಣಗಳಿಗೆ ಕಾರಣವಾದ ನಿಯಮದಿಂದ ಕ್ರಿಸ್ತ ಯೇಸುವಿನ ಮೂಲಕ ಬಿಡಿಸಿತು." ಎಂದು ರೋಮನ್ನರು 8:1-2 ಘೋಷಿಸುತ್ತದೆ.ಮುಕ್ತರಾಗುವ ಕೀಲಿಕೈಯು ಶಿಲುಬೆಯಿಂದ ಹರಿದು ಬರುವ ಕ್ಷಮೆಯನ್ನು ಸ್ವೀಕರಿಸಿ ಕ್ರಿಸ್ತನ ಪ್ರೀತಿಯಲ್ಲಿ ನಮ್ಮ ಆತ್ಮಗಳನ್ನು ಮೀಯಲು ಅವಕಾಶ ನೀಡುವುದು.
ಸ್ವಸ್ಥತೆಯ ಪ್ರಯಾಣವು ಸುಲಭವಲ್ಲ. ಅಸ್ಥಿಪಂಜರಗಳನ್ನು ಎದುರಿಸಲು, ಗತಕಾಲದ ಕಪಾಟನ್ನು ತೆರೆದು ನೋವು ಮತ್ತು ಪಾಪದ ಪ್ರತಿಯೊಂದು ಕಣವನ್ನು ದೇವರಿಗೆ ಒಪ್ಪಿಸಲು ಇಲ್ಲಿ ಬದ್ಧತೆಯ ಅಗತ್ಯವಿದೆ."ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ." ಎಂದು ಕೀರ್ತನೆ 34:18 ನಮಗೆ ನೆನಪಿಸುತ್ತದೆ, ನೀವು ಮಾಡುವ ಪ್ರತಿಯೊಂದು ಪ್ರಾರ್ಥನೆಯಲ್ಲಿ, ನೀವು ಸುರಿಸುವ ಪ್ರತಿಯೊಂದು ಕಣ್ಣೀರಿನಲ್ಲಿ, ಕರ್ತನು ಪ್ರತ್ಯಕ್ಷನಾಗಿದ್ದು, ನಿಮ್ಮ ನೋವನ್ನು ಶಕ್ತಿಯಾಗಿ ಮತ್ತು ದುಃಖವನ್ನು ಸಂತೋಷವಾಗಿ ಪರಿವರ್ತಿಸಲು ಕಾರ್ಯ ಮಾಡುತ್ತಿದ್ದಾನೆ.
ಅಲ್ಲದೆ, ಹಿಂದಿನ ಸಂಕೋಲೆಗಳನ್ನು ಜಯಿಸಲು ಮನಸ್ಸು ಮತ್ತು ಚೈತನ್ಯವನ್ನು ನವೀಕರಿಸುವುದು ಅತ್ಯಗತ್ಯ. ದೇವರ ವಾಕ್ಯವು ನಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಮರುರೂಪಿಸಬೇಕೆಂದು ನಾವು ಅನುಮತಿಸಿ ಕೊಡುವಾಗ, ನಾವು ಹೊಸ ಅಸ್ತಿತ್ವವನ್ನು ಸ್ವೀಕರಿಸುತ್ತೇವೆ. ರೋಮನ್ನರು 12:2, ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ."ಎಂದು ಉತ್ತೇಜಿಸುತ್ತದೆ. ಈ ರೂಪಾಂತರವು ಖಂಡನೆಯಿಂದ ಪವಿತ್ರೀಕರಣದತ್ತ ಪ್ರಯಾಣ ಮಾಡಲಿರುವ ಬಿಡುಗಡೆಯ ಕೀಲಿಯಾಗಿದೆ,
Bible Reading: Mark 11-12
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಮ್ಮ ಹಿಂದಿನ ಸರಪಳಿಗಳನ್ನೆಲ್ಲಾ ಮುರಿದು ನಿಮ್ಮ ಪ್ರಕಾಶಮಾನವಾದ ಬೆಳಕಿನಿಂದ ನಮ್ಮನ್ನು ತುಂಬಿಸಿ. ನಮ್ಮ ಅಸ್ಥಿಪಂಜರಗಳನ್ನು ಎದುರಿಸಲು ನಮಗೆ ಶಕ್ತಿಯನ್ನು, ನಿಮ್ಮ ಸತ್ಯವನ್ನು ಹುಡುಕಲು ಜ್ಞಾನವನ್ನು ಮತ್ತು ನಿಮ್ಮ ಬೇಷರತ್ತಾದ ಪ್ರೀತಿ ಮತ್ತು ಕ್ಷಮೆಯನ್ನು ಸ್ವೀಕರಿಸಲು ಧೈರ್ಯವನ್ನು ಯೇಸುನಾಮದಲ್ಲಿ ಅನುಗ್ರಹಿಸಿ. ನಮ್ಮ ಗಾಯಗೊಂಡ ಆತ್ಮಗಳಿಗೆ ಜೀವ ತುಂಬುವ ಮೂಲಕ ನಮ್ಮ ಆತ್ಮಗಳನ್ನು ಯೇಸುನಾಮದಲ್ಲಿ ಪರಿವರ್ತಿಸಿ. ಆಮೆನ್.
Join our WhatsApp Channel
Most Read
● ಕರ್ತನ ಸೇವೆ ಮಾಡುವುದು ಎಂದರೇನು-I● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಜಯಶಾಲಿಗಳಿಗಿಂತ ಹೆಚ್ಚಿನವರು.
● ಆತ್ಮವಂಚನೆ ಎಂದರೇನು? - II
● ಕೃಪೆಯ ಮೇಲೆ ಕೃಪೆ
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿಕೊಳ್ಳುವುದು ಹೇಗೆ-2
ಅನಿಸಿಕೆಗಳು
