ಅನುದಿನದ ಮನ್ನಾ
1
1
137
ಪತನದಿಂದ ವಿಮೋಚನೆ ಕಡೆಗಿನ ಒಂದು ಪಯಣ
Saturday, 25th of October 2025
Categories :
ದೇವರವಾಕ್ಯ ( Word of God )
ಪಶ್ಚಾತ್ತಾಪ (Repentance)
2 ಸಮುವೇಲ 11:1-5 ಸ್ವಾರ್ಥತೃಪ್ತಿ, ಪ್ರಲೋಭನೆ ಮತ್ತು ಪಾಪ ಎನ್ನುವ ಆಂತರಿಕ ವಿರೋಧಿಗಳೊಂದಿಗೆ ಮನುಷ್ಯನಿಗಿರುವ ಕಾಲಾತೀತ ಹೋರಾಟದ ಕುರಿತು ಹೇಳುತ್ತದೆ. ತಪ್ಪು ಹೆಜ್ಜೆಗಳ ಸರಣಿಯಿಂದ ಗುರುತಿಸಲ್ಪಟ್ಟ ದಾವೀದನ ಪ್ರಯಾಣವನ್ನು ವಿವರಿಸುತ್ತಾ, ನಾವು ಸರಿಯಾದ ಸ್ಥಳದಲ್ಲಿ, ಸರಿಯಾದ ಸಮಯದಲ್ಲಿ, ಸರಿಯಾದ ಮನಸ್ಥಿತಿಯೊಂದಿಗೆ, ದೇವರ ವಾಕ್ಯಕ್ಕೆ ಅಂಟಿಕೊಳ್ಳುವ ಪ್ರಾಮುಖ್ಯತೆಯನ್ನು ವಿವರಿಸುತ್ತದೆ.
1. ಸರಿಯಾದ ಸ್ಥಳದಲ್ಲಿರುವುದರ ಮಹತ್ವ
ದೇವರ ಹೃದಯಕ್ಕೆ ಹತ್ತಿರವಾಗಿದ್ದ ಮನುಷ್ಯನಾದ ದಾವೀದನು ಇಸ್ರೇಲ್ ಇತಿಹಾಸದಲ್ಲಿ ಒಂದು ನಿರ್ಣಾಯಕ ಸಮಯದಲ್ಲಿ ತನ್ನನ್ನು ತಾನು ತಪ್ಪು ಸ್ಥಳದಲ್ಲಿ ಕಂಡುಕೊಂಡನು.ಅದು ರಾಜರು ಯುದ್ಧಕ್ಕೆ ಹೋಗುವ ಸಮಯವಾಗಿತ್ತು ಎಂದು ಧರ್ಮಗ್ರಂಥಗಳು ತಿಳಿಸುತ್ತವೆ, ಆದರೆ ದಾವೀದನು ತನ್ನ ಅರಮನೆಯಲ್ಲಿಯೇ ಉಳಿದುಕೊಂಡನು, ಯುದ್ಧಭೂಮಿಯಲ್ಲಿನ ಅವನ ಅನುಪಸ್ಥಿತಿಯು ದೈವಿಕ ಕರೆಯಿಂದ ಅವನು ವಿಚಲನಗೊಂಡಿದ್ದನ್ನು ಸೂಚಿಸುತ್ತದೆ. (2 ಸಮುವೇಲ 11:1).
ದೇವರು ನಮ್ಮನ್ನು ಎಲ್ಲಿ ಇರಬೇಕೆಂದು ಬಯಸುತ್ತಾನೋ ಅಲ್ಲಿಂದ ನಾವು ದೂರವಾದಾಗ, ನಾವು ನಮ್ಮ ಆತ್ಮಗಳನ್ನು ದುರ್ಬಲತೆಗೆ ಒಡ್ಡಿಕೊಳ್ಳುತ್ತೇವೆ. " ನಮಗೆ ಹೋರಾಟವಿರುವುದು ಮನುಷ್ಯಮಾತ್ರದವರ ಸಂಗಡವಲ್ಲ. ರಾಜತ್ವಗಳ ಮೇಲೆಯೂ, ಅಧಿಕಾರಿಗಳ ಮೇಲೆಯೂ, ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ, ಆಕಾಶ ಮಂಡಲಗಳಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ." ಎಂದು ಎಫೆಸ 6:12 ನಮಗೆ ನೆನಪಿಸುತ್ತದೆ. ನಮ್ಮ ಸರಿಯಾದ ಸ್ಥಳವು ದೇವರ ಚಿತ್ತಕ್ಕೆ ಅನುಗುಣವಾಗಿದ್ದಾಗ, ದೇವರ ಸಂಪೂರ್ಣ ರಕ್ಷಾಕವಚದಿಂದ ಶಸ್ತ್ರಸಜ್ಜಿತವಾಗಿರುತ್ತೇವೆ.
2. ಸಮಯದ ಮಹತ್ವ
ದಾವೀದನು "ಸಂಜೆಯ ಇಳಿ ಸಮಯದಲ್ಲಿ" ಎದ್ದನು, ಇದು ಸ್ವಾರ್ಥ ಸಂತೃಪ್ತಿ ಮತ್ತು ಆತ್ಮೀಕ ನಿದ್ರೆಯನ್ನು ಸೂಚಿಸುತ್ತದೆ. ದೇವರನ್ನು ತೀವ್ರವಾಗಿ ಹುಡುಕುತ್ತಿದ್ದ ದಾವೀದನು (ಕೀರ್ತನೆ 63:1) ಈಗ ತನ್ನ ಆತ್ಮೀಕ ಕಾವಲುಗಾರನಿಂದ ದೂರವಾಗಿದ್ದನು. ಮಧ್ಯಾಹ್ನ ಮೇಲೆ ತಡವಾಗಿ ಎಚ್ಚರಗೊಂಡರೂ ದೇವರ ಉದ್ದೇಶಗಳೊಂದಿಗೆ ತನ್ನನ್ನು ಹೊಂದಿಸಿ ಕೊಳ್ಳಬೇಕಿತ್ತು ಎಂದು ಧರ್ಮಗ್ರಂಥವು ಸೂಚಿಸುತ್ತದೆ. ದೇವರ ಸಮಯವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದನ್ನು ಗೌರವಿಸುವುದು ಬಹಳ ಮುಖ್ಯ.
"ಆಕಾಶದ ಕೆಳಗೆ ಪ್ರತಿಯೊಂದು ಉದ್ದೇಶಕ್ಕೂ ಎಲ್ಲದಕ್ಕೂ ಒಂದು ಕಾಲ ಮತ್ತು ಸಮಯವಿದೆ."ಎಂದು ಪ್ರಸಂಗಿ 3:1 ಘೋಷಿಸುತ್ತದೆ.ನಮ್ಮ ಆತ್ಮೀಕ ಜಾಗರೂಕತೆ ಮತ್ತು ದೇವರ ಸಮಯದೊಂದಿಗಿನ ಹೊಂದಾಣಿಕೆಯು ಶತ್ರುಗಳ ಬಲೆಗಳಿಂದ ನಮ್ಮನ್ನು ರಕ್ಷಿಸಿ ನಮ್ಮನ್ನು ನೀತಿಯ ಹಾದಿಯಲ್ಲಿ ನಡೆಸುತ್ತದೆ.
3. ಸರಿಯಾದ ಆಲೋಚನೆಗಳನ್ನು ಬೆಳೆಸಿಕೊಳ್ಳುವುದು
ಸ್ನಾನ ಮಾಡುತ್ತಿದ್ದ ಮಹಿಳೆ ಬತ್ಷೆಬೆಯತ್ತ ಬೀರಿದ ದಾವೀದನ ನೋಟವು ಅವನನ್ನು ಹಾನಿಕಾರಕ ಆಲೋಚನೆಗಳ ಸುಂಟರಗಾಳಿಗೆ ತಳ್ಳಿತು. ಜನರ ಮೇಲೆ ಅಧಿಕಾರಿ ಸ್ಥಾನ ಪಡೆದ ಅವನ ಉನ್ನತ ನಿಲುವು ಈಗ ಪ್ರಲೋಭನೆಗೆ ವೇದಿಕೆಯಾಗಿ ಅವನ ಆಲೋಚನೆಗಳು ಅವನ ಮನದಲ್ಲಿ ಹುಚ್ಚುಚ್ಚಾಗಿ ಓಡತೊಡಗಿದವು. ಆದರಿಂದಲೇ ದೇವರವಾಕ್ಯಗಳು ಆಲೋಚನೆಗಳಿಗಿರುವ ಶಕ್ತಿ ಮತ್ತು ನಮ್ಮ ಮನಸ್ಸನ್ನು ಅದರಲ್ಲಿ ಹತೋಟಿಗೆ ತರಬೇಕಾದ ಮಹತ್ವವನ್ನು ಒತ್ತಿಹೇಳುತ್ತವೆ.
"ಬಹು ಜಾಗ್ರತೆಯಿಂದ ನಿನ್ನ ಹೃದಯವನ್ನು ಕಾಪಾಡಿಕೋ; ಏಕೆಂದರೆ ಅದರೊಳಗಿಂದ ನಿನ್ನ ಕೃತ್ಯಗಳು ಜೀವಧಾರೆಯಾಗಿ ಹೊರಡುತ್ತವೆ.."ಎಂದು ಜ್ಞಾನೋಕ್ತಿ 4:23 ಸಲಹೆ ನೀಡುತ್ತದೆ.ನಮ್ಮ ಆಲೋಚನೆಗಳು ನಮ್ಮ ಕ್ರಿಯೆಗಳನ್ನು ರೂಪಿಸಿ ಅವುಗಳನ್ನು ದೇವರ ವಾಕ್ಯದೊಂದಿಗೆ ಜೋಡಿಸುವಂತೆ ಮಾಡಿ ನೀತಿಯಲ್ಲಿ ನಡೆಯುವಂತೆ ನಮ್ಮನ್ನು ರಕ್ಷಿಸುವಲ್ಲಿ ಅತ್ಯಂತ ಮುಖ್ಯ ಕಾರ್ಯ ಮಾಡುತ್ತದೆ.
ವಿಮೋಚನೆಯ ಹಾದಿ
ದಾವೀದನ ಪ್ರಯಾಣವು ಹಲವು ಏಳುಬೀಳುಗಳಿಂದ ಗುರುತಿಸಲ್ಪಟ್ಟಿದ್ದರೂ, ದೇವರ ವಿಮೋಚನಾ ಕೃಪೆಗೆ ಅದು ಸಾಕ್ಷಿಯಾಗಿದೆ. ಪ್ರವಾದಿಯಾದ ನಾತಾನನು ದಾವೀದನನ್ನು ಭೇಟಿಯಾಗಲು ಬಂದಾಗ, ದಾವೀದನು ತನ್ನ ಪಾಪವನ್ನು ಬಚ್ಚಿಟ್ಟುಕೊಳ್ಳದೆ ತಕ್ಷಣ ತನ್ನ ಪಾಪದರಿಕೆ ಮಾಡಿದ್ದು ಅವನ ಯಥಾರ್ಥವಾದ ಪಶ್ಚಾತ್ತಾಪವು ದೇವರ ಹೇಳಿ ಮನವರಿಕೆ ಮಾಡಿಸುವ ಕಾರ್ಯಕ್ಕೆ ಸ್ಪಂದಿಸುವ ಅವನ ಹೃದಯವನ್ನು ಪ್ರಕಟ ಪಡಿಸುತ್ತದೆ (2 ಸಮುವೇಲ 12:13).
ನಮ್ಮ ನಡೆಯಲ್ಲೂ ಸಹ, ದಾವೀದನಂತೆಯೇ, ಏಳುಬೀಳುವಿಕೆಗಳು ಮತ್ತು ವಿಚಲನಗಳನ್ನು ನಾವು ಎದುರಿಸಬಹುದು, ಆದರೆ ದೇವರ ಕೃಪೆಯೇ ನಮಗೆ ಭರವಸೆಯ ದಾರಿದೀಪವೂ, ಪುನಃಸ್ಥಾಪನೆಯ ಮೂಲ ಆಧಾರವೂ ಆಗಿದೆ. "ನಾವು ನಮ್ಮ ಪಾಪಗಳನ್ನು ಒಪ್ಪಿಕೊಂಡರೆ, ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿ ಎಲ್ಲಾ ಅಪರಾಧಗಳಿಂದ ನಮ್ಮನ್ನು ಶುದ್ಧೀಕರಿಸುತ್ತಾನೆ." ಎಂದು 1 ಯೋಹಾನ 1:9 ಭರವಸೆ ನೀಡುತ್ತದೆ.
ನಮ್ಮ ಪ್ರಾಮಾಣಿಕ ಪಶ್ಚಾತ್ತಾಪದಲ್ಲಿ, ನಾವು ದೇವರ ಮಿತಿಯಿಲ್ಲದ ಕರುಣೆಯನ್ನು ಅನುಭವಿಸಿ ನವೀಕರಣ ಮತ್ತು ಪವಿತ್ರೀಕರಣದ ಪ್ರಯಾಣವನ್ನು ಪ್ರಾರಂಭಿಸುತ್ತೇವೆ.
ಪ್ರಯಾಣಕ್ಕಾಗಿ ಪಾಠಗಳು
ದಾವೀದನ ಜೀವನವು ಜಾಗರೂಕತೆ, ನಮ್ರತೆ ಮತ್ತು ಪಶ್ಚಾತ್ತಾಪದಲ್ಲಿರುವ ಕಾಲಾತೀತ ಪಾಠಗಳನ್ನು ನಮಗೆ ಬೋದಿಸುತ್ತದೆ. ಅವನ ಪತನವು ನಾವು ನಮ್ಮ ಆತ್ಮೀಕತೆಯ ಕಾವಲು ಕಾಯಬೇಕಾದ, ದೇವರ ನಿಗದಿತ ಸಮಯದಲ್ಲಿ ಸರಿಯಾದ ಸ್ಥಳದಲ್ಲಿರಬೇಕಾದ ಮತ್ತು ದೇವರ ವಾಕ್ಯದ ಮೇಲೆ ಕೇಂದ್ರೀಕೃತವಾದ ಮನಸ್ಸನ್ನು ಬೆಳೆಸಿಕೊಳ್ಳಬೇಕಾದ ಮಹತ್ವವನ್ನು ಒತ್ತಿಹೇಳುತ್ತವೆ.
ಈ ಭೂಮಿಯ ಮೇಲಿನ ನಮ್ಮ ಪ್ರಯಾಣವನ್ನು ಪರಿಣಾಮಕಾರಿಯಾಗಿ ಸಾಗಿಸಲು, ನಾವು ನಿರಂತರವಾಗಿ ದೇವರ ವಾಕ್ಯದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು, ಅದನ್ನು ನಮ್ಮ ಪಾದಗಳಿಗೆ ದೀಪವಾಗಿ ಮತ್ತು ನಮ್ಮ ಹಾದಿಗೆ ಬೆಳಕಾಗಿ ಸ್ವೀಕರಿಸಬೇಕು (ಕೀರ್ತನೆ 119:105). ಪ್ರಾರ್ಥನೆಯ ಮೂಲಕ ದೇವರೊಂದಿಗೆ ನಿಯಮಿತ ಸಂಪರ್ಕವು ನಮ್ಮ ಆತ್ಮಗಳನ್ನು ಬಲಪಡಿಸುತ್ತದೆ, ದೇವರ ಸ್ವರ ಮತ್ತು ಮಾರ್ಗದರ್ಶನಕ್ಕೆ ನಮ್ಮನ್ನು ಒಗ್ಗೂಡಿಸುತ್ತದೆ.
Bible Reading: Mark 13-14
ಪ್ರಾರ್ಥನೆಗಳು
ತಂದೆಯೇ, ನಿಮ್ಮ ಹೇರಳವಾದ ಪ್ರೀತಿ ಮತ್ತು ಕರುಣೆಯನ್ನು ಸದಾ ಗುರುತಿಸುತ್ತಾ, ಎಚ್ಚರವಾಗಿರುವ ಹೃದಯಗಳು, ಪವಿತ್ರ ಮನಸ್ಸುಗಳು ಮತ್ತು ವಿಮೋಚನೆಗೊಂಡ ಆತ್ಮಗಳೊಂದಿಗೆ ನಮ್ಮ ಪ್ರಯಾಣವನ್ನು ನಡೆಸಲು ಯೇಸುವಿನ ಹೆಸರಿನಲ್ಲಿ ನಮಗೆ ಕೃಪೆಯನ್ನು ನೀಡು.ಆಮೆನ್.
Join our WhatsApp Channel
Most Read
● ಪರಿಣಾಮಕಾರಿಯಾಗಿ ಸತ್ಯವೇದವನ್ನು ಓದುವುದು ಹೇಗೆ● ಅದ್ಭುತಗಳಲ್ಲಿ ಕಾರ್ಯ ಮಾಡುವುದು - ಕೀಲಿಕೈ #2
● ಉದ್ಯೋಗದ ಸ್ಥಳದಲ್ಲಿ ಮಿಂಚುವ ತಾರೆಯಾಗುವುದ -I
● ದಿನ 15:40 ದಿನಗಳ ಉಪವಾಸ ಮತ್ತು ಪಾರ್ಥನೆ.
● ಪ್ರಾರ್ಥನೆಯ ಪರಿಮಳ
● ಪರಿಸ್ಥಿತಿಯ ದಯೆಯಲ್ಲಿ ಇರಬೇಡಿರಿ
● ವಿಶ್ವಾಸಿಗಳ ರಾಜತ್ವ ಯಾಜಕತ್ವ
ಅನಿಸಿಕೆಗಳು
