ಅನುದಿನದ ಮನ್ನಾ
0
0
2
ಸಮಾಧಾನಕ್ಕಾಗಿರುವ ದರ್ಶನ
Wednesday, 28th of January 2026
Categories :
ಸಮಾಧಾನ(Peace)
ಯೇಸು ಪಟ್ಟಣವನ್ನು ನೋಡಿ ಕಣ್ಣೀರಿಟ್ಟಾಗ.
ಕರ್ತನಾದ ಯೇಸು ಯೆರೂಸಲೇಮಿನ ಹತ್ತಿರ ಬಂದಾಗ, ಅನಿರೀಕ್ಷಿತವಾದದ್ದೇನೋ ಒಂದು ಸಂಭವಿಸಿತು.
ಸತ್ಯವೇದ ಹೇಳುತ್ತದೆ:
“’ ತರುವಾಯ ಆತನು ಸಮೀಪಕ್ಕೆ ಬಂದಾಗ ಪಟ್ಟಣವನ್ನು ನೋಡಿ ಅದರ ವಿಷಯವಾಗಿ ಅತ್ತು - ನೀನಾದರೂ ಸಮಾಧಾನಕ್ಕೆ ಬೇಕಾದದ್ದನ್ನು ಇದೇ ದಿನದಲ್ಲಿ ತಿಳಿದುಕೊಂಡರೆ ಎಷ್ಟೋ ಒಳ್ಳೇದು. ಆದರೆ ಈಗ ಅದು ನಿನ್ನ ಕಣ್ಣಿಗೆ ಮರೆಯಾಗಿದೆ.....”(ಲೂಕ 19:41–42 ) ಎಂದನು
ಇದು ಒಂದು ಪ್ರಬಲವಾದ ಕ್ಷಣ. ಕೆಲವೇ ನಿಮಿಷಗಳ ಹಿಂದೆ, ಜನರು ಅವನನ್ನು ಅರಸನಾಗಿ ಸ್ತುತಿಸುತ ಸಂಭ್ರಮಿಸುತ್ತಿದ್ದರು. ಆದರೆ ಯೇಸು ಸಂಭ್ರಮಿಸದೇ ಅಳುತ್ತಿದ್ದನು. ಏಕೆ? ಏಕೆಂದರೆ ಜನರು ರಕ್ಷಣೆ ಅತ್ಯಂತ ಸಮೀಪದಲ್ಲಿದ್ದರೂ ಆತನನ್ನು ಗುರುತಿಸಲಿಲ್ಲ.
ಅದು ಪ್ರೀತಿಯಿಂದ ಬಂದ ಕಣ್ಣೀರಾಗಿತ್ತು.
ಯೆರೂಸಲೇಮ್ ಪಾಪಗಳಿಂದ ತುಂಬಿಹೋಗಿದ್ದರಿಂದ ಯೇಸು ಅಳದೇ, ತಮ್ಮ ದೇವರು ಅವರ ಬಳಿಗೆ ನರರೂಪದಲ್ಲಿ ಬಂದು ಸಮಾಧಾನ, ಕ್ಷಮೆ ಮತ್ತು ಪುನಃಸ್ಥಾಪನೆಯನ್ನು ನೀಡುತ್ತಿದ್ದ ಕ್ಷಣವನ್ನು ಅವರು ಕಳೆದುಕೊಂಡಿದ್ದರಿಂದ ಆತನು ಅತ್ತನು.
ಆದರೂ ಜನರು ಅದನ್ನು ಗಮನಿಸಲಿಲ್ಲ. ಇದು ನಮಗೆ ಒಂದು ಮುಖ್ಯವಾದ ವಿಷಯವನ್ನು ತೋರಿಸುತ್ತದೆ: ದೇವರು ಜನರಿಗೆ ಸಮಾಧಾನ ತರಬಲ್ಲ ವಿಷಯಗಳನ್ನು ಜನರು ನಿರ್ಲಕ್ಷಿಸಿದಾಗ ದೇವರ ಹೃದಯವು ಒಡೆಯುತ್ತದೆ.
ಇಂದಿಗೂ ಸಹ, ಅನೇಕ ಜನರು ಕಾರ್ಯನಿರತರು, ಯಶಸ್ವಿಯಾದವರು ಅಥವಾ ವಿದ್ಯಾವಂತರು ಇದ್ದರೂ ಒಳಗೆ ಪ್ರಕ್ಷುಬ್ಧರು ಮತ್ತು ಆತಂಕಕ್ಕೊಳಗಾದವರು ಆಗಿದ್ದಾರೆ. ಆದರಿಂದ ವಿಭಿನ್ನವಾಗಿರಲು ಆಯ್ಕೆಮಾಡಿ!!
ಯೇಸು ಹೇಳಿದ್ದು "ನಿಮ್ಮ ಸಮಾಧಾನಕ್ಕೆ ಬೇಕಾದ ವಿಷಯಗಳು." ಎಂದು. ಅಂದರೆ ಅಲ್ಲಿ ಸಮಾಧಾನ ಲಭ್ಯವಿತ್ತು - ಆದರೆ ಅದು ಕಡೆಗಣಿಸಲ್ಪಟ್ಟಿತು.
"ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ." — 1 ಕೊರಿಂಥ 14:33
ಎಂದು ಸತ್ಯವೇದ ನಮಗೆ ನೆನಪಿಸುತ್ತದೆ.
ಹಣ, ಸ್ಥಾನಮಾನ, ಪರಿಪೂರ್ಣ ಆರೋಗ್ಯ ಅಥವಾ ಸಮಸ್ಯೆ-ಮುಕ್ತ ಜೀವನದ ಮೂಲಕ ಸಮಾಧಾನ ಸಿಗುತ್ತದೆ ಎಂದು ನಾವು ಆಗಾಗ್ಗೆ ಭಾವಿಸುತ್ತೇವೆ. ಆದರೆ ದೇವರ ಮಾರ್ಗವು ಸರಳವಾಗಿದೆ. ಯೇಸು ನಮ್ರತೆ, ಕ್ಷಮೆ, ಕರುಣೆ, ದೇವರಲ್ಲಿ ನಂಬಿಕೆ ಎಂಬ ಸರಳ ಸತ್ಯಗಳನ್ನು ಕಲಿಸಿದನು .
ಪರಮಾನಂದದ ( ಪರ್ವತ ಪ್ರಸಂಗದ)ವಾಕ್ಯಗಳು ಇದನ್ನು ಸ್ಪಷ್ಟವಾಗಿ ತೋರಿಸುತ್ತವೆ:
“ದೀನತೆವುಳ್ಳವರು ಧನ್ಯರು… ಕರುಣೆ ತೋರಿಸುವಂತವರು ಧನ್ಯರು… ಶಾಂತರು ಧನ್ಯರು.” ಮತ್ತಾಯ 5:5,7,9
ಇವು ಸರಳ ವರ್ತನೆಗಳಾದರೂ. ಆಳವಾದ ಫಲಿತಾಂಶಗಳನ್ನು ತರುತ್ತವೆ.
ನಾವು ಸರಳ ಸತ್ಯಗಳನ್ನು ಏಕೆ ಕಡೆಗಣಿಸುತ್ತೇವೆ?
ಆರಂಭದಿಂದಲೂ, ಮಾನವರು ಸರಳತೆಯೊಂದಿಗೆ ಹೋರಾಡಿದ್ದಾರೆ. ಏದೆನ್‌ನಲ್ಲಿ, ದೇವರು ಒಂದು ಸರಳ ಸೂಚನೆಯನ್ನು ಕೊಟ್ಟನು, ಆದರೆ ಸರ್ಪವು ಅದನ್ನು ಸಂಕೀರ್ಣಗೊಳಿಸಿತು:
“.... ಸರ್ಪವು ಸ್ತ್ರೀಯ ಬಳಿಗೆ ಬಂದು - ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ ಎಂದು ಕೇಳಲು... ” ಆದಿಕಾಂಡ 3:1
ಇಂದೂ ಹೀಗೆ ಸಂಭವಿಸುತ್ತದೆ. ನಾವು ಯಾವುದು ಕೆಲಸ ಮಾಡುತ್ತದೆ ಎಂಬುದನ್ನು ನಿರ್ಲಕ್ಷಿಸಿ ಪ್ರಭಾವಶಾಲಿಯಾಗಿ ಕಾಣುವುದನ್ನು ಬೆನ್ನಟ್ಟುತ್ತೇವೆ.
ನಾಮಾನನು ನಾಟಕೀಯ ಪವಾಡವನ್ನು ನಿರೀಕ್ಷಿಸಿದನು, ಆದರೆ ದೇವರು ಸರಳ ಸೂಚನೆಯ ಮೂಲಕ ಅವನನ್ನು ಗುಣಪಡಿಸಿದನು:
“ಹೋಗಿ ಯೋರ್ದನ್ ನದಿಯಲ್ಲಿ ಏಳು ಬಾರಿ ಮುಳುಗೇಳು... ಮತ್ತು ನಿನ್ನ ದೇಹವು ಮೊದಲಿನಂತಾಗುವುದು.”( 2 ಅರಸುಗಳು 5:10)
ಎಂಬ ಪರಿಹಾರ ಸರಳವಾಗಿತ್ತು - ಆದರೆ ಹೆಮ್ಮೆಯು ಅದನ್ನು ಬಹುತೇಕ ನಿರ್ಬಂಧಿಸಿಯೇ ಬಿಟ್ಟಿತ್ತು.
ಸ್ಪಷ್ಟವಾಗಿ ನೋಡಲು ನಮ್ಮ ಕಣ್ಣುಗಳನ್ನು ತೆರೆಯಿರಿ.
ಅವರ ಕಣ್ಣುಗಳು ಮುಚ್ಚಲ್ಪಟ್ಟಿದ್ದರಿಂದ ಕರ್ತನಾದ ಯೇಸು ಕಣ್ಣೀರಿಟ್ಟನು. ಇದು ನಮಗೆ
"ಕರ್ತನೇ, ಅವನು ನೋಡುವಂತೆ ಅವನ ಕಣ್ಣುಗಳನ್ನು ತೆರೆಯಬೇಕೆಂದು ನಾನು ಪ್ರಾರ್ಥಿಸುತ್ತೇನೆ.." 2 ಅರಸುಗಳು 6:17
ಎಂಬ ಎಲೀಷನ ಪ್ರಾರ್ಥನೆಯನ್ನು ನೆನಪಿಸುತ್ತದೆ.
ಸಾಮಾನ್ಯ ಕ್ಷಣಗಳಲ್ಲಿ ದೇವರ ಸಾನಿಧ್ಯ, ಸರಳ ವಿಧೇಯತೆ ಮತ್ತು ಶಾಂತ ನಂಬಿಕೆಯನ್ನು ಗುರುತಿಸಲು ನಮಗೆ ತೆರೆದ ಕಣ್ಣುಗಳು ಸಹ ಬೇಕು.
"ನಾವು ನೋಡುವವರಾಗಿ ನಡೆಯದೇ, ನಂಬಿದವರಾಗಿ ನಡೆಯುತ್ತೇವೆ." — 2 ಕೊರಿಂಥ 5:7
ಕರ್ತನಾದ ಯೇಸು ಐಷಾರಾಮಿಯಾಗೋ ಅಥವಾ ಬಲವಂತದಿಂದಲೋ ಬರಲಿಲ್ಲ. ಆತನು ಗೋದಲಿಯಲ್ಲಿ ಜನಿಸಿದನು, ಬಡಗಿಯಾಗಿ ವಾಸಿಸಿದನು ಮತ್ತು ಶಿಲುಬೆಯ ಮೇಲೆ ಸತ್ತನು.
"ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು." (ಫಿಲಿಪ್ಪಿ 2:8)
ಮತ್ತು ಆತನು ಬೋಧಿಸಿದ ಸಂದೇಶವು ಸ್ಪಷ್ಟ ಮತ್ತು ಸರಳವಾಗಿತ್ತು ಅದೇನೆಂದರೆ:
"ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡು, ಆಗ ನೀನು ರಕ್ಷಣೆ ಹೊಂದುವೆ." — ಅಪೊಸ್ತಲರ ಕೃತ್ಯಗಳು 16:31
ಮಗುವಿನಂತಹ ನಂಬಿಕೆಯೊಂದಿಗೆ ಬದುಕಲು ಕಲಿಯುವುದು.
" ನೀವು ತಿರುಗಿಕೊಂಡು ಚಿಕ್ಕ ಮಕ್ಕಳಂತೆ ಆಗದೆ ಹೋದರೆ ನೀವು ಪರಲೋಕರಾಜ್ಯದಲ್ಲಿ ಸೇರುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಎಂದು ಕರ್ತನಾದ ಯೇಸು ಹೇಳಿದನು. ಮತ್ತಾಯ 18:3
ಮಕ್ಕಳು ಸುಲಭವಾಗಿ ನಂಬುತ್ತಾರೆ. ಅವರು ಅತಿಯಾಗಿ ಯೋಚಿಸುವುದಿಲ್ಲ. ದೇವರು ನಮ್ಮನ್ನು ಅದೇ ರೀತಿಯ ನಂಬಿಕೆಗೆ ಆಹ್ವಾನಿಸುತ್ತಾನೆ. ನಾವು ದೇವರೊಂದಿಗೆ ಸರಳವಾಗಿ ಜೀವಿಸಿದಾಗ, ಸಮಾಧಾನ ತಾನಾಗೇ ಬರುತ್ತದೆ
“ಆದರೆ ಪವಿತ್ರಾತ್ಮನ ಫಲವೆಂದರೆ ಪ್ರೀತಿ, ಸಂತೋಷ, ಸಮಾಧಾನ...” — ಗಲಾತ್ಯ 5:22
ನಮಗೆ ಸಮಾಧಾನವನ್ನು ತರಬಹುದಾದದ್ದನ್ನು ನಾವು ಕಳೆದುಕೊಂಡಾಗ ಯೇಸು ನ್ಯಾಯತೀರ್ಪು ಮಾಡಲು ಅಳದೆ , ಪ್ರೀತಿಗಾಗಿ - ಅತ್ತನು ಎಂಬುದು ನಿಮಗೆ ತಿಳಿದಿದೆಯೇ.
ಯೇಸುವಿನ ಧ್ವನಿಯನ್ನು ಕೇಳಿ ಆತನನ್ನು ಹಿಂಬಾಲಿಸಿದ ಬಾರ್ತಿಮಯನಂತೆ ನಮ್ಮ ಕಣ್ಣುಗಳು ತೆರೆಯಲ್ಪಡಲಿ:
“ಹೋಗು; ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಪಡಿಸಿದೆ.” — ಮಾರ್ಕ 10:52
ಸಮಾಧಾನದ ಹಾದಿಯು ಹತ್ತಿರವಾಗಿದೆ - ಅದು ನೀವು ಯೋಚಿಸುವುದಕ್ಕಿಂತ ಸರಳವಾಗಿದೆ.
ಪ್ರಾರ್ಥನೆಗಳು
ತಂದೆಯೇ, ನಿಮ್ಮ ಸತ್ಯದ ಸರಳತೆ ಮತ್ತು ವೈಭವವನ್ನು ಕಾಣುವಂತೆ ನಮ್ಮ ಕಣ್ಣುಗಳನ್ನು ತೆರೆಯಿರಿ.ಯೇಸುನಾಮದಲ್ಲಿ ನಿಮ್ಮ ಮಾರ್ಗಗಳ ಸರಳತೆಯಲ್ಲಿ ನಾವು ಸಮಾಧಾನ ಕಂಡುಕೊಳ್ಳುವಂತೆಯೂ ನಿಮ್ಮ ದೃಷ್ಟಿಯ ಸ್ಪಷ್ಟತೆಯಿಂದ ಗುರುತಿಸಲ್ಪಟ್ಟ ಜೀವನವನ್ನು ನಡೆಸುವಂತೆಯೂ ಆಗಲಿ. ಆಮೆನ್.
Join our WhatsApp Channel
Most Read
● ಇಸ್ಕಾರಿಯೋತಾ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು - 1● ದೇವರು ಹೇಗೆ ಒದಗಿಸುತ್ತಾನೆ #3
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಕರ್ತನಿಗೆ ಮೊರೆಯಿಡಿರಿ.
● ಸುಳ್ಳುಗಳನ್ನು ಬಯಲು ಮಾಡಿ ಸತ್ಯವನ್ನು ಅಪ್ಪಿಕೊಳ್ಳುವುದು.
● ಶತ್ರುವಿನ ಮಾರ್ಗ ರಹಸ್ಯವಾಗಿದೆ
● ದೇವರು ಒದಗಿಸುವನು
ಅನಿಸಿಕೆಗಳು
