english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ದೇವರ ಭಾಷೆಯಾದ ಅನ್ಯಭಾಷೆಗಳು
ಅನುದಿನದ ಮನ್ನಾ

ದೇವರ ಭಾಷೆಯಾದ ಅನ್ಯಭಾಷೆಗಳು

Sunday, 1st of February 2026
2 0 47
Categories : ಭಾಷೆ(Language)
ಕರ್ತನಾದ ಯೇಸು ಪರಲೋಕಕ್ಕೆ ಏರಿಹೋಗುವ ಮೊದಲು ಒಂದು ಪ್ರಬಲವಾದ ಹೇಳಿಕೆಯನ್ನು ನೀಡಿದನು: 
“ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು, ಹೊಸ ಭಾಷೆಗಳಲ್ಲಿ ಮಾತನಾಡುವರು;  ಹಾವುಗಳನ್ನು ಕೈಗಳಿಂದ ಎತ್ತಿಕೊಳ್ಳುವರು; ವಿಷಪದಾರ್ಥಗಳನ್ನೇನಾದರು ಕುಡಿದರೂ ಅವರಿಗೆ ಯಾವ ಹಾನಿಯೂ ಆಗುವುದಿಲ್ಲ. ಅವರು ರೋಗಿಗಳ ಮೇಲೆ ಕೈಯಿಟ್ಟರೆ ಅವರಿಗೆ ಸ್ವಸ್ಥವಾಗುವುದು” ಎಂದು ಹೇಳಿದನು.
(ಮಾರ್ಕ 16:17–18) 

ಬಹಳ ಮುಖ್ಯವಾದದ್ದನ್ನು ಗಮನಿಸಿ. ಈ ಸೂಚಕಕಾರ್ಯಗಳು ಅಪೊಸ್ತಲರು, ಪ್ರವಾದಿಗಳು, ಪಾಸ್ಟರ್ ಗಳು ಅಥವಾ ಸುವಾರ್ತಾಬೋಧಕರನ್ನು ಮಾತ್ರ ಅನುಸರಿಸುತ್ತವೆ ಎಂದು ಕರ್ತನಾದ ಯೇಸು ಹೇಳಲಿಲ್ಲ. ಆದರೆ ಆತನು "ನಂಬುವವರು" ಎಂದು ಸ್ಪಷ್ಟವಾಗಿ ಹೇಳಿದನು.ಇಲ್ಲಿ ಉಲ್ಲೇಖಿಸಲಾದ ಏಕೈಕ ಅರ್ಹತೆ ನಂಬಿಕೆ. ಇದರರ್ಥ ಕರ್ತನಾದ ಯೇಸು ಕ್ರಿಸ್ತನಲ್ಲಿ ಪ್ರತಿಯೊಬ್ಬ ನಿಜವಾದ ನಂಬಿಕೆಯುಳ್ಳವನು ಈ ವಾಗ್ದಾನದಲ್ಲಿ ಸೇರಿದ್ದಾನೆ. 

ಬಲವು ಬಿರುದಿನಲ್ಲಿ ಅಲ್ಲ, ನಂಬುವುದರಲ್ಲಿದೆ.
ಅನೇಕ ಕ್ರೈಸ್ತರು ಅದ್ಭುತಗಳು ಮತ್ತು ಆತ್ಮೀಕ ವರಗಳು ವಿಶೇಷ ಗುಂಪಿನ ಜನರಿಗೆ ಮಾತ್ರ ಎಂದು ಭಾವಿಸುತ್ತಾರೆ. ಧರ್ಮಗ್ರಂಥವು ಈ ಕಲ್ಪನೆಯನ್ನು ಬೆಂಬಲಿಸುವುದಿಲ್ಲ.

"ಈ ಸೂಚಕಕಾರ್ಯಗಳೆಲ್ಲ ನಾಯಕರಿಂದ ಉಂಟಾಗುತ್ತವೆ" ಎಂದು ಬೈಬಲ್ ಹೇಳುವುದಿಲ್ಲ. "ಈ ಸೂಚಕಕಾರ್ಯಗಳು ನಂಬುವವರಿಂದ ಉಂಟಾಗುತ್ತವೆ" ಎಂದು ಅದು ಹೇಳುತ್ತದೆ.ಇದಕ್ಕೆ ನಂಬಿಕೆ ಮುಖ್ಯವೇ ಹೊರತು ಸ್ಥಾನ, ವಯಸ್ಸು, ಶಿಕ್ಷಣ ಅಥವಾ ಹಿನ್ನೆಲೆ ಅಲ್ಲ.

ಯಹೂದಿ ಒಳನೋಟ: “ದೇವರ ಭಾಷೆ”
ದೇವರ ಗೌರವಾನ್ವಿತ ಮನುಷ್ಯನೊಬ್ಬ ಒಮ್ಮೆ ಆಕರ್ಷಕ ಯಹೂದಿ ಸಂಪ್ರದಾಯವನ್ನು ಹಂಚಿಕೊಂಡಿದ್ದ. 

ಪ್ರಾಚೀನ ಯಹೂದಿ ನಂಬಿಕೆಯ ಪ್ರಕಾರ, ಮಹಾಯಾಜಕನು ಪ್ರಾಯಶ್ಚಿತ್ತದ ದಿನದಂದು ಪವಿತ್ರ ಸ್ಥಳವನ್ನು ಪ್ರವೇಶಿಸಿದಾಗ, ಅವನು ದೇವರು ಮತ್ತು  ಪಾಸ್ಟರ್ ಮಾತ್ರ ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ದೇವರೊಂದಿಗೆ ಸಂವಹನ ನಡೆಸಬಲ್ಲನು. ಈ ಸಾಮರ್ಥ್ಯವು ಪವಿತ್ರ ಸ್ಥಳದ ಒಳಗೆ ಮಾತ್ರ ಇತ್ತು. ಪಾಸ್ಟರ್ ಹೊರಬಂದ ನಂತರ, ಅವನು ಇನ್ನು ಮುಂದೆ ಆ ಪರಲೋಕದ ಭಾಷೆಯನ್ನು ಮಾತನಾಡಲು ಸಾಧ್ಯವಾಗಲಿಲ್ಲ.

ನಂತರ, ಯಹೂದಿ ರಬ್ಬಿಗಳು ಈ ಅನುಭವವನ್ನು “ದೇವರ ಭಾಷೆ” ಎಂದು ಉಲ್ಲೇಖಿಸಿದರು. ಇದು ಗಮನಾರ್ಹವಲ್ಲವೇ?

ಹಳೆಯ ಒಡಂಬಡಿಕೆಯಲ್ಲಿ, ವರ್ಷಕ್ಕೊಮ್ಮೆ ಒಬ್ಬ ಮನುಷ್ಯನು ಮಾತ್ರ ಇದನ್ನು ಅನುಭವಿಸಬಹುದು. ಹೊಸ ಒಡಂಬಡಿಕೆಯಲ್ಲಿ, ಪ್ರತಿಯೊಬ್ಬ ವಿಶ್ವಾಸಿಯು ಪವಿತ್ರಾತ್ಮನ ಮೂಲಕ ದೇವರ ಸಾನಿಧ್ಯಕ್ಕೆ ಪ್ರವೇಶವನ್ನು ಹೊಂದಿರುತ್ತಾನೆ.

ಯಾರು ಅನ್ಯಭಾಷೆಗಳಲ್ಲಿ ಮಾತನಾಡಬಲ್ಲರು? 
ಈ ಪ್ರಶ್ನೆಯನ್ನು ಹೆಚ್ಚಾಗಿ ಕೇಳಲಾಗುತ್ತದೆ ಮತ್ತು ಅದಕ್ಕೆ ಉತ್ತರವು ತುಂಬಾ ಸರಳವಾಗಿದೆ. 

ಯೇಸು ಕ್ರಿಸ್ತನನ್ನು :
  1. ಕರ್ತನು ಮತ್ತು ರಕ್ಷಕನೆಂದು ನಂಬಿದ ಪವಿತ್ರಾತ್ಮನ 
  2. ದೀಕ್ಷಾಸ್ನಾನವನ್ನು ಪಡೆದ ಯಾರಾದರೂ ಅನ್ಯಭಾಷೆಗಳಲ್ಲಿ ಮಾತನಾಡಬಲ್ಲರು. 
ಈ ವರಕ್ಕೆ ಬೇರೆ ಯಾವುದೇ ಸತ್ಯವೇದ ವಿಧಾನದ ಆಧಾರವಿಲ್ಲ ಮತ್ತು ಬೇರೆ ಯಾವುದೇ ಕ್ರೈಸ್ತರ ವಿಶೇಷ ವರ್ಗವಿಲ್ಲ. 
"ಯಾರು ದೇವರ ಆತ್ಮಾನುಸಾರವಾಗಿ ನಡೆದುಕೊಳ್ಳುತ್ತಾರೋ, ಅವರು ದೇವರ ಮಕ್ಕಳಾಗಿದ್ದಾರೆ".(ರೋಮನ್ನರು 8:14) 

ಅನ್ಯಭಾಷೆಗಳು ಪ್ರಬುದ್ಧತೆಗೆ ಸಿಕ್ಕ ಪ್ರತಿಫಲವಲ್ಲ; ಅವು ವಿಶ್ವಾಸಿಗಳಿಗೆ ಅನುಗ್ರಹಿಸಲ್ಪಟ್ಟ ವರವಾಗಿದೆ. 

ಕರ್ತನಾದ ಯೇಸು ಅದನ್ನು ಸ್ಪಷ್ಟವಾಗಿ ವಿವರಿಸಿದನು. ಆತನು ಹೇಳಿದ್ದೇನೆಂದರೆ: 
“ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ನನ್ನಲ್ಲಿ ಯಾವನು ನಂಬಿಕೆಯಿಡುವನೋ ಅವನೊಳಗಿನಿಂದ ಜೀವಕರವಾದ ನೀರಿನ ಬುಗ್ಗೆಗಳು ಹರಿಯುವವು” ಎಂದು ಕೂಗಿ ಹೇಳಿದನು. (ಯೋಹಾನ 7:38) 
" ಆದರೆ ಯೇಸು ತನ್ನನ್ನು ನಂಬುವವರು ಹೊಂದಲಿರುವ ಪವಿತ್ರಾತ್ಮವರವನ್ನು ಕುರಿತು ಹೀಗೆ ಹೇಳಿದನು. ಯೇಸು ಇನ್ನೂ ಮಹಿಮೆಯನ್ನು ಹೊಂದಿರಲಿಲ್ಲವಾದ ಕಾರಣ ಪವಿತ್ರಾತ್ಮವರವು ಇನ್ನೂ ಕೊಡಲ್ಪಟ್ಟಿರಲಿಲ್ಲ." ಎಂದುಬೈಬಲ್ ನಂತರ ವಿವರಿಸುತ್ತದೆ (ಯೋಹಾನ 7:39) 

ಅನ್ಯಭಾಷೆಗಳು —ಮನಸ್ಸಿನಿಂದಲ್ಲ, ಭಾವನೆಗಳಿಂದಲ್ಲ, ಆದರೆ ವಿಶ್ವಾಸಿಯೊಳಗಿನ ದೇವರ ಆತ್ಮದ ಒಳಗಿನಿಂದ ಹರಿಯುತ್ತವೆ 

ಅನ್ಯಭಾಷೆಗಳಲ್ಲಿ ಮಾತನಾಡುವುದು ಏಕೆ ಮುಖ್ಯ.
ಅನ್ಯಭಾಷೆಗಳಲ್ಲಿ ಮಾತನಾಡುವುದು: 
  • ನಿಮ್ಮ ಚೈತನ್ಯವನ್ನು ಬಲಪಡಿಸುತ್ತದೆ 
  • ಮಾನವ ಮಿತಿಗಳನ್ನು ಮೀರಿ ಪ್ರಾರ್ಥಿಸಲು
  • ನಿಮಗೆ ಸಹಾಯ ಮಾಡುತ್ತದೆ ದೇವರೊಂದಿಗಿನ ನಿಮ್ಮ ಅನ್ಯೋನ್ಯತೆಯನ್ನು ಆಳಗೊಳಿಸುತ್ತದೆ.
“ಅನ್ಯಭಾಷೆಯಲ್ಲಿ ಮಾತನಾಡುವವನು ತನ್ನ ಭಕ್ತಿ ವೃದ್ಧಿ ಮಾಡಿಕೊಳ್ಳುತ್ತಾನೆ.” (1 ಕೊರಿಂಥ 14:4) 
ಒಂದು ಕಾಲದಲ್ಲಿ ಪವಿತ್ರ ಸ್ಥಳಕ್ಕೆ ಮಾತ್ರ ಸೀಮಿತವಾಗಿದ್ದ ವಿಷಯವು ಈಗ ಪ್ರತಿಯೊಬ್ಬ ವಿಶ್ವಾಸಿಗೂ ಲಭ್ಯವಿದೆ - ಏಕೆಂದರೆ ಅದಕ್ಕಾಗಿ ಯೇಸು ಮಾರ್ಗ ಮಾಡಿಕೊಟ್ಟನು.

ನೀವು ಇದನ್ನು ತಿಳಿದುಕೊಳ್ಳಲೇಬೇಕು.
ಅನ್ಯಭಾಷೆಯು ವಿಚಿತ್ರವಲ್ಲ, ಭಾವನಾತ್ಮಕವಲ್ಲ ಅಥವಾ ಹಳೆಯದಲ್ಲ. ಅವು ನಂಬುವವರಿಗೆ ಸಂಕೇತವಾಗಿದೆ. 

ನಿಜವಾದ ಪ್ರಶ್ನೆ "ಇದು ಇವತ್ತಿಗೂ ಇದೆಯೇ?" ಎಂಬುದಲ್ಲ. ನಿಜವಾದ ಪ್ರಶ್ನೆ: "ಯೇಸು ಹೇಳಿದ್ದನ್ನು ನಾನು ನಂಬುತ್ತೇನೆಯೇ? 

Bibie Reading: Exodus 39-40
ಪ್ರಾರ್ಥನೆಗಳು
ತಂದೆಯೇ, ನಾನು ಅನ್ಯ ಭಾಷೆಯ ಮೂಲಕ ಪ್ರಾರ್ಥಿಸುವಾಗ ದೇವರ ಹೃದಯಕ್ಕನುಸಾರ ಪ್ರಾರ್ಥಿಸಲು ಯೇಸುನಾಮದಲ್ಲಿ ನನಗೆ ಸಹಾಯ ಸಿಗುತ್ತದೆ.

Join our WhatsApp Channel


Most Read
● ಸಾಮಾನ್ಯ ಪಾತ್ರೆಗಳ ಮೂಲಕ ಮಹತ್ತರ ಕೆಲಸ
● ಅಶ್ಲೀಲ ಸಾಹಿತ್ಯ
● ದಿನ 40:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಜೀವನದ ದೊಡ್ಡ ಬಂಡೆಗಳನ್ನು ಗುರುತಿಸುವುದು ಮತ್ತು ಆದ್ಯತೆ ನೀಡುವುದು
● ಅಸಾಮಾನ್ಯ ಆತ್ಮಗಳು
● ಗೌರವ ಮತ್ತು ಮೌಲ್ಯ
● ದೇವರ 7 ಆತ್ಮಗಳು: ಆಲೋಚನೆ ನೀಡುವ ಆತ್ಮ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2026 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್