"ಕಳ್ಳನಾದರೋ ಕದ್ದುಕೊಳ್ಳುವುದಕ್ಕೂ, ಕೊಯ್ಯುವುದಕ್ಕೂ ಮತ್ತು ನಾಶಮಾಡುವುದಕ್ಕೂ ಬರುತ್ತಾನೆಯೇ ಹೊರತು ಮತ್ತಾವುದಕ್ಕೂ ಬರುವುದಿಲ್ಲ. ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿರಬೇಕೆಂತಲೂ ಬಂದೆನು.ಯೋಹಾನ 10:10)
ದೇವರು ನೀಡಿದ ಕನಸುಗಳಿಗೆ ನಿಮ್ಮನ್ನು ಚಂಡಮಾರುತದಿಂದಲೂ ಮತ್ತು ಪ್ರವಾಹದಿಂದಲೂ ಎಳೆಯುವ ತಾಕತ್ತಿದೆ. ನಿಮ್ಮ ಸುತ್ತಲಿರುವ ಪ್ರಪಂಚವು ಕುಸಿಯುತ್ತಿರುವಂತೆ ತೋರುತ್ತಿರುವಾಗ ಅದು ನಿಮಗೆ ಅಗತ್ಯವಿರುವ ಭರವಸೆ ಮತ್ತು ಉತ್ತೇಜನವನ್ನು ನೀಡುತ್ತದೆ. ಆದಾಗ್ಯೂ, ಅನೇಕರು ತಮ್ಮ ಕನಸುಗಳನ್ನು ಮಸುಕಾಗುವಂತೆ ಹಾಗೆಯೇ ಬಿಟ್ಟು ಬಿಟ್ಟಿದ್ದಾರೆ ಅಥವಾ ಅವುಗಳನ್ನು ಕೊಲ್ಲಲು ಅವಕಾಶ ಮಾಡಿಕೊಟ್ಟಿದ್ದಾರೆ. ನಿಮ್ಮ ಕನಸುಗಳ ಜೀವಂತಿಕೆಯನ್ನು ಕಸಿದುಕೊಳ್ಳಲು ಇಚ್ಛೆಸುವ ಕನಸಿನ ಕೊಲೆಪಾತಕರ ಕುರಿತು ಜಾಗರೂಕರಾಗಿರಿ. ದಯವಿಟ್ಟು ಎಷ್ಟೇ ಕಷ್ಟವಾದರೂ ಹಾಗೆ ಮಾಡಲು ಅಂತವರಿಗೆ ಅನುಮತಿಸಬೇಡಿರಿ.
"ಒಂದು ದಿನ ಯೋಸೇಫನು ಕನಸು ಕಂಡು ಅದನ್ನು ತನ್ನ ಅಣ್ಣಂದಿರಿಗೆ ತಿಳಿಸಿದಾಗ ಅವರು ಅವನನ್ನು ಇನ್ನೂ ಹೆಚ್ಚಾಗಿ ದ್ವೇಷಿಸಿದರು. (ಆದಿಕಾಂಡ 37:5). ಯೋಸೆಫನು ಆರಂಭದಲ್ಲಿ ಅಪಕ್ವನಾಗಿದ್ದನು ಆದ್ದರಿಂದಲೇ ಅವನು ತನ್ನ ಕನಸುಗಳನ್ನು ತಪ್ಪಾದ ಜನರೊಂದಿಗೆ ಹಂಚಿಕೊಂಡನು. ಹಾಗಾಗಿ ಅವರು ಯೋಸೆಫನ ಕನಸುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು.
ಯೋಸೆಫನ ಸಹೋದರರು ಕನಸುಗಳ ಕೊಲೆಪಾತಕರಿಗೆ ಒಂದು ಶ್ರೇಷ್ಠ ಉದಾಹರಣೆಯಾಗಿದ್ದಾರೆ.
ಕರ್ತನು ನಿಮಗೆ ಪ್ರಾರ್ಥನೆಯಲ್ಲಿಯೋ ಕನಸಿನಲ್ಲಿಯೋ ಏನನ್ನಾದರೂ ಪ್ರಕಟ ಪಡಿಸಿದಾಗ ಅಥವಾ ದೇವಮನುಷ್ಯರ ಮೂಲಕ ಏನನ್ನಾದರೂ ಪ್ರಕಟ ಪಡಿಸಿದಾಗ; ಅದನ್ನು ಎಲ್ಲಾ ಕಡೆ ಹೇಳುತ್ತಾ ಹೋಗಬೇಡಿ. ಅದು ಅಪರಿಪಕ್ವವಾದ ಕಾರ್ಯವಾಗಿದ್ದು ಅದು ನಿಮ್ಮೊಳಗೆ ಗುಪ್ತವಾಗಿ ಅಡಗಿರುವ ಹೆಮ್ಮೆಯ ಸುಳಿವಾಗಿರುತ್ತದೆ. ನಿಮ್ಮ ಕನಸಗಳನ್ನು , ನಿಮ್ಮ ದೇವರು ನಿಮಗೆ ಕೊಟ್ಟಿರುವ ರಹಸ್ಯಗಳನ್ನು ಆತ್ಮದಲ್ಲಿ ಪ್ರಬುದ್ಧರಾದ ಜನರ ಮುಂದೆ ಮಾತ್ರ ಬಹಿರಂಗಪಡಿಸಿ.
ನಿಮ್ಮ ಸುತ್ತಲಿರುವ ಎಲ್ಲರೂ ನಿಮ್ಮ ಕನಸುಗಳು ನನಸಾಗಬೇಕೆಂದು ಬಯಸುವವರಾಗಿರುದಿಲ್ಲ. ಅವರು ನಿಮ್ಮ ಮುಂದೆ ಹಾಗೆ ನಟಿಸಬಹುದು, ಆದರೆ ಕಡೆಗೆ ಒಮ್ಮೆ, ಆ ಸತ್ಯ ನಿಮಗೆ ತಿಳಿದು ಬರುತ್ತದೆ. ಹೇಗೆ? ಅವರ ಮಾತುಗಳಿಂದ. ಇದು ನಿಮಗೆ ಅಸಾಧ್ಯ, ನೀವು ಸಾಕಷ್ಟು ಬುದ್ಧಿವಂತರಲ್ಲ ಅಥವಾ ಹಿಂದೆಂದೂ ಈ ಕಾರ್ಯ ನೀವು ಮಾಡಿದವರಲ್ಲ ನಿಮಗೆ ಅನುಭವ ಇಲ್ಲ ಇತ್ಯಾದಿ.. ಎಂದು ಅವರು ನಿಮಗೆ ಹೇಳಬಹುದು.
ಅಲ್ಲದೆ, ಭಯವು ನಿಮ್ಮನ್ನು ಆವರಿಸಿ ; ಹೆದರಿಕೆ, ಅನುಮಾನ ಮತ್ತು ಹಣಕಾಸಿನ ಕೊರತೆಗಳು ನಿಮ್ಮ ಕನಸನ್ನು ನೀವು ಪೂರೈಸಲು ಸಾಧ್ಯವಿಲ್ಲ ಎಂದು ನಿಮಗೆ ಹೇಳುತ್ತಿರುತ್ತದೆ. ಈ ಕನಸುಗಳ ಕೊಲೆಗಾರರೊಂದಿಗೆ ಮತ್ತೆ ಮಾತನಾಡಿ.
ದಾವೀದನು ಗೊಲ್ಯಾತನಿಗೆ ಹಿಂತಿರುಗಿ ಮಾತನಾಡಿದನು. ಅದರಂತೆ ನೀವು "ನನ್ನ ದೇವರು ಕೊಟ್ಟಿರುವ ಗಮ್ಯವನ್ನು ಕ್ರಿಸ್ತ ಯೇಸುವಿನಲ್ಲಿ ನಾನು ಪೂರೈಸುತ್ತೇನೆ" ಎಂದು ಕನಸುಗಳ ಕೊಲೆಗಾರರಿಗೆ ಹೇಳಿರಿ. ನೀವು ಇದನ್ನು ಪ್ರತಿದಿನ ಮಾಡಬೇಕಾಗಬಹುದು, ಆದರೆ ಅದು ಸರಿಯಾದದ್ದೇ. ನೀವು ಈ ರೀತಿ ಹೆಚ್ಚು ಮಾತನಾಡಿದಷ್ಟೂ ಕನಸುಗಳು ನಿಮ್ಮೊಳಗೆ ಹುಲುಸಾಗಿ ಬೆಳೆಯಲಾರಾಂಭಿಸಿ ನಿಮ್ಮೊಳಗೆ ಸುರಕ್ಷಿತವಾಗಿರುತ್ತದೆ.
"ನಾನು ನಿಮ್ಮನ್ನು ಕಟಾಕ್ಷಿಸಿ, ಈ ಸ್ಥಳಕ್ಕೆ ತಿರುಗಿ ಬರಮಾಡುವೆನೆಂಬ ನನ್ನ ಶುಭವಾಕ್ಯವನ್ನು ನಿಮಗಾಗಿ ನೆರವೇರಿಸುವೆನು. ಇವರಿಗೆ ಒಳ್ಳೆಯದಾಗಲಿ, ನಿರೀಕ್ಷೆಯಿರಲಿ ಎಂದು ನಾನು ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆನು; ಅವು ಅಹಿತದ ಯೋಚನೆಗಳಲ್ಲ, ಹಿತದ ಯೋಚನೆಗಳೇ."
ಎಂದು ಕರ್ತನು ನಮಗೆ ವಾಗ್ದಾನ ಮಾಡಿದ್ದಾನೆ. (ಯೆರೆಮಿಯಾ 29:10-11)
ಯಾವಾಗಲೂ ನೆನಪಿಡಿ, ದೇವರಲ್ಲಿ, ಕನಸು ಕಾಣಲು ಅಥವಾ ದೇವರು ನಿಮಗೆ ನೀಡಿದ ಕನಸಗಳನ್ನು ಮುಂದುವರಿಸಲು ಮತ್ತು ಅದನ್ನು ಪೂರೈಸಲು ಎಂದಿಗೂ ಸಮಯ ಮೀರಿ ಹೋಗಿಲ್ಲ. ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು ಕಾರ್ಯಗತರಾಗಿ. ನಿಮ್ಮ ಪಾಲಿನ ಕಾರ್ಯವನ್ನು ನೀವು ಮಾಡಿ; ದೇವರು ಆತನ ಪಾಲಿನ ಕಾರ್ಯವನ್ನು ಆತ ಮಾಡುತ್ತಾನೆ.
Bible Reading: Genesis 37-39
ಪ್ರಾರ್ಥನೆಗಳು
ನಾನು ಕ್ರಿಸ್ತ ಯೇಸುವಿನಲ್ಲಿ ನನ್ನ ದೇವರು ನನಗೆ ನೀಡಿದ ಕರೆಯನ್ನು ಪೂರೈಸುತ್ತೇನೆ, ಏಕೆಂದರೆ ನನ್ನನ್ನು ಬಲಪಡಿಸುವ ಕ್ರಿಸ್ತನ ಮೂಲಕ ನಾನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದೇನೆ .
Join our WhatsApp Channel
Most Read
● ಕುಟುಂಬಕ್ಕಾಗಿ ಇರುವ ಗುಣಮಟ್ಟದ ಸಮಯ● ಇತರರಿಗಾಗಿ ಪ್ರಾರ್ಥಿಸುವುದು
● ದೈವಿಕ ಶಾಂತಿಯನ್ನು ಪ್ರವೇಶಿಸುವುದು ಹೇಗೆ
● ಕೃತಜ್ಞತಾ ಸ್ತೋತ್ರ ಸಲ್ಲಿಸುವುದರಲ್ಲಿರುವ ಬಲ
● ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ಕೊಟ್ಟನು
● ಭಾನುವಾರದ ಬೆಳಗ್ಗೆ ನಿಗದಿತ ಸಮಯಕ್ಕೆ ಸಭೆಗೆ ಹೋಗುವುದು ಹೇಗೆ
● ದೇವರವಾಕ್ಯವನ್ನು ನಿಮ್ಮ ಹೃದಯದಾಳದಲ್ಲಿ ಬಿತ್ತಿರಿ.
ಅನಿಸಿಕೆಗಳು