english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ನೀತಿಯುತ ಕೋಪವನ್ನು ಅಪ್ಪಿಕೊಳ್ಳುವುದು
ಅನುದಿನದ ಮನ್ನಾ

ನೀತಿಯುತ ಕೋಪವನ್ನು ಅಪ್ಪಿಕೊಳ್ಳುವುದು

Monday, 9th of February 2026
1 1 42
Categories : ಗುಣ(character) ಭಾವನೆ (Emotion) ಸ್ವಯಂ ಪರಿಶೀಲನೆ (Self Examination)
ಕೋಪವು ಒಂದು ನೈಸರ್ಗಿಕ ಭಾವನೆಯಾಗಿದ್ದು, ಇದು ವಿಶೇಷವಾಗಿ ಕ್ರೈಸ್ತ ಸನ್ನಿವೇಶದಲ್ಲಿ ನಕಾರಾತ್ಮಕ ಅರ್ಥವನ್ನು ಹೊಂದಿರುತ್ತದೆ. ಆದಾಗ್ಯೂ, ಬೈಬಲ್ ಎರಡು ರೀತಿಯ ಕೋಪಗಳ ನಡುವೆ ವ್ಯತ್ಯಾಸವನ್ನು ತೋರಿಸುತ್ತದೆ: ಅವು ಪಾಪದ ಕೋಪ ಮತ್ತು ನೀತಿಯುತ ಕೋಪ. ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಕ್ರೈಸ್ತರ ಆತ್ಮೀಕ ಪ್ರಯಾಣಕ್ಕೆ ನಿರ್ಣಾಯಕವಾಗಿದೆ. ಎಫೆಸ 4:26 " ಕೋಪಮಾಡಿಕೊಳ್ಳಬೇಕಾದರೂ ಪಾಪ ಮಾಡಬೇಡಿ" ಎಂದು ಸೂಚಿಸುತ್ತದೆ, ಇದು ಕೋಪವು ಸ್ವತಃ ಅಂತರ್ಗತವಾಗಿ ನೇರವಾಗಿ ಪಾಪವಲ್ಲ ಎಂಬುದನ್ನು ಸೂಚಿಸುತ್ತದೆ. 

1) ದೈವಿಕ ಕೋಪ
ನೀತಿಯುತ ಕೋಪದ ಪರಿಕಲ್ಪನೆಯು ದೇವರ ಸ್ವಭಾವದಲ್ಲಿ ಆಳವಾಗಿ ಬೇರೂರಿದೆ. ಕೀರ್ತನೆ 7:11 ದೇವರನ್ನು ನೀತಿವಂತ ನ್ಯಾಯಾಧೀಶನಾಗಿ ಚಿತ್ರಿಸುತ್ತದೆ, "ದೇವರು ನ್ಯಾಯಕ್ಕೆ ಸರಿಯಾಗಿ ತೀರ್ಪುಕೊಡುವವನು; ಆತನು ಯಾವಾಗಲೂ ದುಷ್ಟರ ವಿಷಯದಲ್ಲಿ ಕೋಪವುಳ್ಳವನು." ಎಂದು ಹೇಳುತ್ತದೆ. ಈ ವಾಕ್ಯವು ದೇವರ ಕೋಪವು ಆತನ ನ್ಯಾಯ ಮತ್ತು ಪವಿತ್ರತೆಯ ವಿಸ್ತರಣೆಯಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ.ವಾಸ್ತವವಾಗಿ, ದೇವರವಾಕ್ಯವು ದೇವರ ಕೋಪವನ್ನು ನೂರಕ್ಕೂ ಹೆಚ್ಚು ಬಾರಿ ಉಲ್ಲೇಖಿಸುತ್ತಾ, ಯಾವಾಗಲೂ ಅದನ್ನು ಆತನ ಪರಿಪೂರ್ಣ ಸ್ವಭಾವದೊಂದಿಗೆ ಹೊಂದಿಸುತ್ತದೆ, ಹೀಗಾಗಿ ಅದನ್ನು ಪಾಪದಿಂದ ಬೇರ್ಪಡಿಸುತ್ತದೆ.

2) ಸತ್ಯವೇದದಲ್ಲಿ ನೀತಿಯುತವಾಗಿ ಕೋಪಗೊಂಡ ವ್ಯಕ್ತಿಗಳು 
ಬೈಬಲ್‌ನಲ್ಲಿನ ಹಲವಾರು ವ್ಯಕ್ತಿಗಳು ನೀತಿಯುತ ಕೋಪವನ್ನು ಉದಾಹರಿಸಿ, ಇದು ನೈತಿಕ ಮತ್ತು ಆತ್ಮೀಕ ಸಮಗ್ರತೆಯ ಸ್ಥಳದಲ್ಲೂ ಉದ್ಭವಿಸಬಹುದು ಎಂಬುದನ್ನು ಪ್ರದರ್ಶಿಸಿದರು. ಉದಾಹರಣೆಗೆ,  ಇಸ್ರೇಲೀಯರು ಚಿನ್ನದ ಕರುವಿನ ವಿಗ್ರಹಾರಾಧನೆಯ ಮಾಡುವಾಗ ಮೋಶೆಯು ನೀತಿಯುತ ಕೋಪವನ್ನು ತೋರಿಸಿದನು. 
“ಮೋಶೆಯು ಪಾಳೆಯದ ಹತ್ತಿರಕ್ಕೆ ಬಂದು ಆ ಹೋರಿಕರುವನ್ನೂ ಮತ್ತು ಜನರು ಕುಣಿದಾಡುವುದನ್ನೂ ಕಂಡಾಗ ಬಹು ಕೋಪಗೊಂಡು ಕೈಯಲ್ಲಿದ್ದ ಶಿಲಾಶಾಸನಗಳನ್ನು ಬೆಟ್ಟದ ತಗ್ಗಿನಲ್ಲಿ ನೆಲಕ್ಕೆ ಹಾಕಿ ಒಡೆದುಬಿಟ್ಟನು."(ವಿಮೋಚನಕಾಂಡ 32:19). 
“ ದಾವೀದನು, “ಜೀವಸ್ವರೂಪನಾದ ದೇವರ ಸೈನ್ಯವನ್ನು ಹೀಯಾಳಿಸುವುದಕ್ಕೆ ಸುನ್ನತಿಯಿಲ್ಲದ ಈ ಫಿಲಿಷ್ಟಿಯನು ಎಷ್ಟರವನು? ಇವನನ್ನು ಕೊಂದು ಇಸ್ರಾಯೇಲ್ಯರಿಗೆ ಬಂದಿರುವ ನಿಂದೆಯನ್ನು ತೆಗೆದುಹಾಕುವವನಿಗೆ ಏನು ಸಿಕ್ಕುವುದು ಹೇಳಿರಿ” ಎಂದು ತನ್ನ ಬಳಿಯಲ್ಲಿ ನಿಂತಿದ್ದ ಮನುಷ್ಯರನ್ನು ಕೇಳಿದನು, (1 ಸಮುವೇಲ 17:26) 

ಗೋಲಿಯಾತ್  ಮೇಲಿನ ದಾವೀದನ ಕೋಪವು ದೇವರ ಗೌರವಕ್ಕಾಗಿ ಉಮ್ಮಸ್ಸಿನಿಂದ ನಡೆಸಲ್ಪಟ್ಟಿತು. ಈ ನಿದರ್ಶನಗಳು ದೇವರ ಮೌಲ್ಯಗಳು ಮತ್ತು ತತ್ವಗಳಿಗೆ ಆಳವಾದ ಬದ್ಧತೆಯಿಂದ ನೀತಿಯುತ ಕೋಪವು ಉದ್ಭವಿಸುತ್ತದೆ ಎಂಬುದನ್ನು ತೋರಿಸುತ್ತದೆ.

3) ಕರ್ತನಾದ ಯೇಸುವಿನ ಜೀವನದಲ್ಲಿ ನೀತಿಯುತ ಕೋಪ.
ಕರ್ತನಾದ ಯೇಸು ಕ್ರಿಸ್ತನು ತನ್ನ ಐಹಿಕ ಸೇವೆಯಲ್ಲಿ ನೀತಿಯುತ ಕೋಪದ ಅತ್ಯಂತ ಪರಿಪೂರ್ಣ ಉದಾಹರಣೆಗಳನ್ನು ಒದಗಿಸಿದನು. ಫರಿಸಾಯರನ್ನು ಅವರ ನಿಯಮ ಬದ್ಧತೆಗಾಗಿ, ವಿಶೇಷವಾಗಿ ಅವರ ಸಂಪ್ರದಾಯಗಳು ಸಬ್ಬತ್ ದಿನದಂದು ಸ್ವಸ್ತ ಪಡಿಸುವ ಕರುಣೆಯ ಕ್ರಿಯೆಗಳಿಗೆ ಅಡ್ಡಿಯಾದಾಗ ಅವರನ್ನು ಖಂಡಿಸಿದನು. 
“ ಆಗ ಅವರಿಗೆ, “ಸಬ್ಬತ್ ದಿನದಲ್ಲಿ ಧರ್ಮಸಮ್ಮತವಾದದು ಯಾವುದು? ಮೇಲನ್ನು ಮಾಡುವುದೋ, ಕೇಡನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ, ತೆಗೆಯುವುದೋ?” ಎಂದು ಹೇಳಲು ಅವರು ಸುಮ್ಮನಿದ್ದರು. ಆಗ ಯೇಸು ಅವರ ಹೃದಯ ಕಾಠಿಣ್ಯಕ್ಕಾಗಿ ದುಃಖಪಟ್ಟು, ಕೋಪದಿಂದ ಸುತ್ತಲೂ ಅವರನ್ನು ದೃಷ್ಟಿಸಿ ನೋಡಿ ಆ ಮನುಷ್ಯನಿಗೆ, “ನಿನ್ನ ಕೈ ಚಾಚು” ಎಂದು ಹೇಳಲು ಅವನು ಕೈ ಚಾಚಿದನು; ಅವನ ಕೈ ವಾಸಿಯಾಯಿತು. ” (ಮಾರ್ಕ್ 3:5).
“ ಆದರೆ ಯೇಸು ಅದನ್ನು ಕಂಡು ಕೋಪಗೊಂಡು ಅವರಿಗೆ, “ಚಿಕ್ಕ ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ; ಏಕೆಂದರೆ ದೇವರ ರಾಜ್ಯವು ಇಂಥವರದೇ.” (ಮಾರ್ಕ್ 10:14) 

ಮಕ್ಕಳು ತನ್ನ ಬಳಿಗೆ ಬರುವುದನ್ನು ತಡೆದಿದ್ದಕ್ಕಾಗಿ ಅವನ ಶಿಷ್ಯರ ಮೇಲಿನ ಆತನ ಕೋಪವು ಆತನು ಮುಗ್ಧತೆ ಮತ್ತು ನಂಬಿಕೆಯ ಮೇಲೆ ಇಟ್ಟಿದ್ದ ಮೌಲ್ಯವನ್ನು ಒತ್ತಿಹೇಳುತ್ತದೆ.

ಅನ್ಯಾಯದ ವಿರುದ್ಧದ ಕೋಪ
ಮುಖ್ಯವಾಗಿ, ದೇವಾಲಯವನ್ನು ಶುದ್ಧೀಕರಿಸುವ ಮೂಲಕ ಅನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧದ ಕೋಪವನ್ನು ವಿವರಿಸಲಾಗಿದೆ. 
“ ಅವರು ಯೆರೂಸಲೇಮಿಗೆ ಬಂದಾಗ ಯೇಸು ದೇವಾಲಯಕ್ಕೆ ಹೋಗಿ ಅದರಲ್ಲಿ ಮಾರುತ್ತಿದ್ದವರನ್ನೂ, ಕೊಳ್ಳುತ್ತಿದ್ದವರನ್ನೂ ಹೊರಡಿಸಿಬಿಡುವುದಕ್ಕೆ ತೊಡಗಿದನು; ನಾಣ್ಯಗಳನ್ನು ವಿನಿಮಯಮಾಡುತ್ತಿದ್ದ ವ್ಯಾಪಾರಿಗಳ ಮೇಜುಗಳನ್ನು ಕೆಡವಿಹಾಕಿದನು; ಪಾರಿವಾಳಗಳನ್ನು ಮಾರುವವರ ಮಣೆಗಳನ್ನು ಉರುಳಿಸಿದನು;ಒಬ್ಬನನ್ನಾದರೂ ಸಾಮಾನುಗಳನ್ನು ಹೊತ್ತುಕೊಂಡು ದೇವಾಲಯದೊಳಕ್ಕೆ ಹಾದು ಹೋಗಗೊಡಿಸಲಿಲ್ಲ.  ಮತ್ತು ಆತನು ಉಪದೇಶಮಾಡಿ, “‘ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವೆನಿಸಿಕೊಳ್ಳುವುದು’ ಎಂದು ಬರೆದಿದೆಯಲ್ಲಾ? ಆದರೆ ‘ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ’” ಎಂದು ಹೇಳಿದನು. (ಮಾರ್ಕ 11:15-17)

ಎಚ್ಚರಿಕೆ ಮತ್ತು ಮಾರ್ಗದರ್ಶಿ ತತ್ವ 
ವಿಶ್ವಾಸಿಗಳಾದ ನಾವು, ದೇವರನ್ನು ಕೋಪಗೊಳಿಸುವ ಸಂಗತಿಗಳೊಂದಿಗೆ ನಮ್ಮ ಕೋಪವನ್ನು ಹೊಂದಿಸುವುದು ಅತ್ಯಗತ್ಯ. 
"ಏಕೆಂದರೆ ಮನುಷ್ಯನು ಕೋಪಗೊಂಡಾಗ ದೇವರು ಬಯಸುವ ನೀತಿ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ." ಎಂದು ಯಾಕೋಬ 1:20 ನಮಗೆ ನೆನಪಿಸುತ್ತದೆ,
ನೀತಿಯುತ ಕೋಪವು ನಮ್ಮನ್ನು ವಿನಾಶಕಾರಿ ಪ್ರತಿಕ್ರಿಯೆಗಳಿಗಿಂತ ಸೃಜನಾತ್ಮಕ ಕ್ರಿಯೆಗೆ ಕರೆದೊಯ್ಯಬೇಕು. ಅದು ಪ್ರೀತಿ, ನ್ಯಾಯ ಮತ್ತು ದೇವರ ಸತ್ಯವು ಮೇಲುಗೈ ಸಾಧಿಸಬೇಕೆಂಬ ಬಯಕೆಯಿಂದ ಪ್ರೇರೇಪಿಸಲ್ಪಡಬೇಕು.

ಪ್ರಾಯೋಗಿಕ ಹಂತಗಳು
1. ಸ್ವಯಂ ಪರಿಶೋಧನೆ
ನಿಮ್ಮ ಕೋಪದ ಪ್ರತಿಕ್ರಿಯೆಗಳು ಸ್ವಾರ್ಥಮಯವೋ ಅಥವಾ ದೇವರ ನೀತಿಯ ಮೇಲೆ ಕೇಂದ್ರಿತವಾಗಿವೆಯೇ ? ಎಂದು ನಿಮ್ಮ ಹೃದಯ ಮತ್ತು ಪ್ರೇರಣೆಗಳನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ.  

2. ಧರ್ಮಗ್ರಂಥದ ಹೊಂದಾಣಿಕೆ
ದೇವರ ವಾಕ್ಯದ ಆಧಾರ ಮಾಡಿಕೊಂಡುಅದು ಬೈಬಲ್ ತತ್ವಗಳು ಮತ್ತು ಮೌಲ್ಯಗಳೊಂದಿಗೆ ಹೊಂದಿಕೆಯಾಗುತ್ತದೆಯೇ?  ಎಂದು ನಿಮ್ಮ ಕೋಪವನ್ನು ಅಳೆಯಿರಿ. 

3. ಪ್ರಾರ್ಥನಾಪೂರ್ವಕ ಮಾರ್ಗದರ್ಶನ
ನಿಮ್ಮ ಭಾವನೆಗಳನ್ನು ಆತನಿಗೆ ಗೌರವ ತರುವ ರೀತಿಯಲ್ಲಿ ವಿವೇಚಿಸಲು ಮತ್ತು ನಿರ್ವಹಿಸಲು ಪ್ರಾರ್ಥನೆಯ ಮೂಲಕ ದೇವರ ಮಾರ್ಗದರ್ಶನವನ್ನು ಪಡೆಯಿರಿ.

ನೀತಿವಂತಿಕೆಯ ಸಾಧನವಾಗಿ ಕೋಪ 
ನೀತಿಯುತ ಕೋಪವನ್ನು ಸರಿಯಾಗಿ ನಿರ್ದೇಶಿಸಿದಾಗ, ಅದು ಸಕಾರಾತ್ಮಕ ಬದಲಾವಣೆಗೆ ಪ್ರಬಲ ಶಕ್ತಿಯಾಗಿರಬಹುದು. ಅದು ಅನ್ಯಾಯಗಳನ್ನು ಎದುರಿಸಲು, ಸತ್ಯಕ್ಕಾಗಿ ನಿಲ್ಲಲು ಮತ್ತು ಪತನಗೊಂಡ ಜಗತ್ತಿನಲ್ಲಿ ದೈವಿಕ ತತ್ವಗಳನ್ನು ಎತ್ತಿಹಿಡಿಯಲು ನಮ್ಮನ್ನು ಪ್ರೇರೇಪಿಸುತ್ತದೆ. ನಮ್ಮ ಕೋಪವನ್ನು ಪಾಪದ ಆಯುಧವಾಗಿ ಬಳಸದೆ, ನೀತಿವಂತಿಕೆಯ ಸಾಧನವಾಗಿ ಬಳಸಿಕೊಂಡು ಕರ್ತನಾದ ಯೇಸು ಕ್ರಿಸ್ತನು ಇಟ್ಟ ಮಾದರಿಗಳನ್ನು ಪ್ರತಿಬಿಂಬಿಸಲು ನಾವು ಶ್ರಮಿಸೋಣ. 

Bible Reading: Leviticus 18-20
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನೀತಿಯುತ ಮತ್ತು ಪಾಪಪೂರ್ಣ ಕೋಪದ ನಡುವೆ ವಿವೇಚಿಸಲು ನನಗೆ ಜ್ಞಾನವನ್ನು ಅನುಗ್ರಹಿಸಿ. ನನ್ನ ಹೃದಯವು ನಿನ್ನ ಹೃದಯವನ್ನು ಪ್ರತಿಧ್ವನಿಸಲಿ, ಅನ್ಯಾಯ ಮತ್ತು ಅಸತ್ಯದ ಬಗ್ಗೆ ಕೋಪಗೊಳ್ಳಲಿ, ಆದರೆ ಯಾವಾಗಲೂ ಪ್ರೀತಿ ಮತ್ತು ನಿನ್ನ ಚಿತ್ತಕ್ಕಾಗಿ ಬಯಕೆಯಿಂದ ಯೇಸುನಾಮದಲ್ಲಿ ಮಾರ್ಗದರ್ಶಿಸಲ್ಪಡಲಿ. ಆಮೆನ್.

Join our WhatsApp Channel


Most Read
● ನೀವು ಅವರ ಮೇಲೆ ಪ್ರಭಾವ ಬೀರಬೇಕು
● ಪ್ರಾರ್ಥನೆಯಲ್ಲಿ ಗೊಂದಲಗಳನ್ನು ನಿವಾರಿಸುವುದು ಹೇಗೆ?
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - II
● ದೇವರ ವಾಕ್ಯವನ್ನು ಹೊಂದಿಕೊಳ್ಳಿರಿ.
● ಪಾಪ ಕೋಪದ ಪದರಗಳ ಅನಾವರಣ
● ನಿಮ್ಮ ಮೇರೆಯಲ್ಲಿಯೇ ಇರಿ
● ಕರ್ತನೇ, ನನ್ನ ಚಿತ್ತ- ಚಂಚಲಗೊಳಿಸುವ ಸಂಗತಿಗಳಿಂದ ನನ್ನನ್ನು ಬಿಡಿಸು.
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2026 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್