ಅನುದಿನದ ಮನ್ನಾ
3
2
61
ಸಮಯೋಚಿತ ವಿಧೇಯತೆ
Wednesday, 18th of February 2026
Categories :
ವಿಧೇಯತೆ (Obedience)
ಮತ್ತಾಯ 2:13 ನಮಗೆ ಬಹಳ ತುರ್ತು ಕ್ಷಣದ ಕುರಿತಾಗಿ ಹೇಳುತ್ತದೆ.
"ಅವರು ಹೋದ ಮೇಲೆ ಕರ್ತನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು - ನೀನು ಎದ್ದು ಈ ಕೂಸನ್ನೂ ಇದರ ತಾಯಿಯನ್ನೂ ಕರಕೊಂಡು ಐಗುಪ್ತದೇಶಕ್ಕೆ ಓಡಿಹೋಗಿ ನಾನು ನಿನಗೆ ಹೇಳುವ ತನಕ ಅಲ್ಲೇ ಇರು; ಹೆರೋದನು ಈ ಕೂಸನ್ನು ಕೊಲ್ಲಬೇಕೆಂದು ಅದನ್ನು ಹುಡುಕುತ್ತಿರುವನು ಅಂದನು."
ಪರಲೋಕವು ಬೆಳಗಿನ ಜಾವವಾಗಲಿ ಎಂದು ಕಾಯಲಿಲ್ಲ. ಅಪಾಯವು ಈಗಾಗಲೇ ಒದಗಿ ಬರುತ್ತಿದ್ದರಿಂದ ರಾತ್ರಿಯಲ್ಲಿಯೇ ಸಂದೇಶ ಬಂದಿತು. ಹೆರೋದನು ಕೇವಲ ಅಸಮಾಧಾನಗೊಂಡಿರಲಿಲ್ಲ - ಅವನು ಮಗುವನ್ನು ಕೊಲ್ಲಲು ತೀವ್ರವಾಗಿ ಬಯಸಿದ್ದನು. ಈಗ ದೇವರ ವಾಗ್ದಾನವು ದಾಳಿಗೆ ಒಳಗಾಗಿತ್ತು.
ಆದರೆ ಇಲ್ಲಿ ಹೆಚ್ಚು ಎದ್ದು ಕಾಣುವುದು ಎಚ್ಚರಿಕೆ ಸಂದೇಶವಲ್ಲ. ಅದು ಯೋಸೇಫನ ಪ್ರತಿಕ್ರಿಯೆ.
ತ್ವರಿತವಾದ ಮತ್ತು ಅತಿ ಬೆಲೆಬಾಳುವ ವಿಧೇಯತೆ
ಮತ್ತಾಯ 2:14 ಹೇಳುತ್ತದೆ: "ಅವನು ಎದ್ದು ರಾತ್ರಿಯಲ್ಲಿಯೇ ಆ ಸಣ್ಣ ಕೂಸನ್ನೂ ಮತ್ತು ಅದರ ತಾಯಿಯನ್ನು ಕರೆದುಕೊಂಡು ಐಗುಪ್ತಕ್ಕೆ ಹೋದನು." ಎಂದು.
ಯೋಸೇಫನು ವಾದಿಸಲಿಲ್ಲ. ಅವನು ತಡಮಾಡಲಿಲ್ಲ. ಅವನು ಇನ್ನೊಂದು ಸೂಚಕಕಾರ್ಯವನ್ನು ಕೇಳಲಿಲ್ಲ. ಅವನು ಎದ್ದು ತಕ್ಷಣವೇ ಹೊರಟುಹೋದನು. ಬೈಬಲ್‌ನಲ್ಲಿ ನಿಜವಾದ ವಿಧೇಯತೆ ಎಂದರೆ ಸರಿಯಾದ ಕೆಲಸವನ್ನು ಮಾಡುವುದು ಮಾತ್ರವಲ್ಲದೆ ಅದನ್ನು ಸರಿಯಾದ ಸಮಯದಲ್ಲಿ ಮಾಡುವುದೂ ಕೂಡ ಆಗಿದೆ.
"ನಿನ್ನ ಆಜ್ಞೆಗಳನ್ನು ಅನುಸರಿಸುವದರಲ್ಲಿ ಆಸಕ್ತನಾದೆನು; ಆಲಸ್ಯಮಾಡಲಿಲ್ಲ"ಎಂದು ಕೀರ್ತನೆ 119:60 ಹೇಳುತ್ತದೆ. ಯೋಸೇಫನು ಮಾಡಿದ್ದು ಅದನ್ನೇ. ಇದು ಅವನಿಗೆ ಏನನ್ನು ಅರ್ಥೈಸಿತ್ತು ಎಂಬುದರ ಕುರಿತು ಯೋಚಿಸಿ.
ಅವನಿಗೆ ಒಂದು ಚಿಕ್ಕ ಕುಟುಂಬವಿತ್ತು. ಪ್ರಯಾಣವು ದೀರ್ಘವಾಗಿತ್ತು. ಈಜಿಪ್ಟ್ ವಿದೇಶಿ ದೇಶವಾಗಿತ್ತು. ಅಲ್ಲಿ ಅನೇಕ ವೆಚ್ಚಗಳು, ಅನಿಶ್ಚಿತತೆ ಮತ್ತು ಅಪಾಯವಿರುತ್ತದೆ. ಆದರೂ ಯೋಸೇಫನು ನೆಪಗಳಿಗಿಂತ ವಿಧೇಯತೆಯನ್ನು ಆರಿಸಿಕೊಂಡನು. ಮತ್ತು ಆ ವಿಧೇಯತೆಯಿಂದಾಗಿ,: "ನಾನು ನನ್ನ ಮಗನನ್ನು ಐಗುಪ್ತದಿಂದ ಕರೆದೆನು" ಎಂಬ ಪ್ರವಾದನೆಯು ನೆರವೇರಿತು.(ಮತ್ತಾಯ 2:15, ಹೋಶೇಯ 11:1 ಉಲ್ಲೇಖ).
ದೇವರು ಒಮ್ಮೆ ಇಸ್ರಾಯೇಲ್ಯರನ್ನು ಐಗುಪ್ತದಿಂದ ಹೊರಗೆ ತಂದಂತೆ, ಈಗ ಆತನು ತನ್ನ ಮಗನನ್ನು ಐಗುಪ್ತದಿಂದ ಹೊರಗೆ ತರುವನು. ಯೇಸು ದೇವರ ದೊಡ್ಡ ಯೋಜನೆಯನ್ನು ಪೂರೈಸುತ್ತಿದ್ದನು.
ಸಮಯಪ್ರಜ್ಞೆ ಎಂಬುದು ಇಲ್ಲಿನ ವಿಷಯ.
ಬೈಬಲ್‌ನಾದ್ಯಂತ, ಸಮಯವು ಎಷ್ಟು ಮುಖ್ಯವಾದದೆಂದು ನಾವು ನೋಡುತ್ತೇವೆ.
ಮಳೆ ಪ್ರಾರಂಭವಾಗುವ ಮೊದಲೇ ನೋಹನು ನಾವೆಯನ್ನು ನಿರ್ಮಿಸಿದನು (ಆದಿಕಾಂಡ 6–7). ದೇವರು ಸಮಯ ಎಂದು ಹೇಳಿದಾಗ ಮೋಶೆ ಇಸ್ರಾಯೇಲ್ಯರನ್ನು ಹೊರಗೆ ಕರೆದೊಯ್ದನು (ವಿಮೋಚನಕಾಂಡ 12–14). ಯೇಸು ಅವರನ್ನು ಕರೆದ ತಕ್ಷಣ ಶಿಷ್ಯರು ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು (ಮತ್ತಾಯ 4:20).
ವಿಳಂಬಿತ ವಿಧೇಯತೆಯು ಅವಿಧೇಯತೆಯಾಗಬಹುದು.
ಪ್ರಸಂಗಿ 3:1 "ಆಕಾಶದ ಕೆಳಗೆ ಪ್ರತಿಯೊಂದು ಉದ್ದೇಶಕ್ಕೂ ಒಂದು ಸಮಯವಿದೆ" ಎಂದು ಹೇಳುತ್ತದೆ. ಇದು ಕೇವಲ ಸಲಹೆಯಲ್ಲ - ಇದು ಪ್ರತಿಕ್ರಿಯೆ ತೋರಲು ಅಗತ್ಯವಿರುವ ಕ್ಷಣ ಎಂದು ಯೋಸೇಫನು ಅರ್ಥಮಾಡಿಕೊಂಡನು.
ಗದ್ದಲದ ಜಗತ್ತಿನಲ್ಲಿ ದೇವರ ಸ್ವರವನ್ನು ಆಲಿಸುವುದು.
ಇಂದು, ನಮ್ಮ ಜೀವನವು - ಫೋನ್‌ಗಳು, ಸುದ್ದಿಗಳು, ಸಾಮಾಜಿಕ ಮಾಧ್ಯಮ, ನಿರಂತರ ಚಟುವಟಿಕೆಗಳ ಶಬ್ದದಿಂದ ತುಂಬಿದೆ. ಆದರೆ 1 ಅರಸುಗಳು 19:12 ದೇವರು ಆಗಾಗ "ನಿಶ್ಚಲವಾದ ಸಣ್ಣ ಧ್ವನಿಯಲ್ಲಿ" ಮಾತನಾಡುತ್ತಾನೆ ಎಂದು ನಮಗೆ ನೆನಪಿಸುತ್ತದೆ.
ಯೋಸೇಫನು ಕನಸಿನಲ್ಲಿಯೂ ದೇವರ ಸ್ವರವನ್ನು ಆಲಿಸಿದನು. ಅದು ಸಮಾಧಾನದಿಂದ ಕೂಡಿದ್ದು ವೈಯಕ್ತಿಕವಾಗಿತ್ತು. ನಂತರ ಯೇಸು, "ನನ್ನ ಕುರಿಗಳು ನನ್ನ ಸ್ವರವನ್ನು ಆಲಿಸುತ್ತವೆ" ಎಂದು ಹೇಳಿದನು (ಯೋಹಾನ 10:27).
ಇಲ್ಲಿ ನಿಜವಾದ ಪ್ರಶ್ನೆ ದೇವರು ಮಾತನಾಡುತ್ತಾನೆಯೇ ಎಂಬುದು ಅಲ್ಲ. ಪ್ರಶ್ನೆ ಏನೆಂದರೆ ನಾವು ಆಲಿಸುತ್ತಿದ್ದೇವೆಯೇ ಮತ್ತು ಅದನ್ನು ಪಾಲಿಸಲು ಸಿದ್ಧರಿದ್ದೇವೆಯೇ ಎಂಬುದಾಗಿದೆ.
ವಿಧೇಯತೆಯು ಬಚ್ಚಿಟ್ಟ ಫತಿಫಲ ಹೊಂದಿದೆ.
ಯೋಸೇಫನು ತನ್ನ ಈ ತ್ವರಿತ ವಿಧೇಯತೆಯು ಲೋಕ ರಕ್ಷಕನನ್ನೇ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಅವನಿಗೆ ಬಹುಶಃ ತಿಳಿದಿರಲಿಲ್ಲ. ಆದರೆ ವಿಧೇಯತೆಯು ಯಾವಾಗಲೂ ನಾವು ನೋಡಬಹುದಾದ ಫಲಿತಾಂಶಗಳನ್ನು ಮೀರಿದ್ದಾಗಿರುತ್ತದೆ.
ಇಬ್ರಿಯ 11:8 ಹೇಳುವಂತೆ ಅಬ್ರಹಾಮನು ಎಲ್ಲಿಗೆ ಹೋಗುತ್ತಿದ್ದಾನೆಂದು ತಿಳಿಯದಿದ್ದರೂ ಸಹ ವಿಧೇಯನಾದನು. ನಂಬಿಕೆಯು ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಮೊದಲು ಕಾರ್ಯ ಆರಂಭಿಸುತ್ತದೆ.
ಯೋಸೇಫನ ಜೀವನವು ನಮಗೆ ಸರಳವಾದ ಆದರೆ "ದೇವರು ಹೇಳುವಾಗ, ಅದರಂತೆ ಪ್ರವರ್ತಿಸಿ. ಆತನು ನಿಮ್ಮ ಹೃದಯದಲ್ಲಿ ಯಾವುದೋ ವಿಚಾರಕ್ಕೆ ಒತ್ತಡ ನೀಡುವಾಗ, ಅದನ್ನು ಮಾಡಿ. ಇಂದು ನೀವು ತೋರುವ ನಿಮ್ಮ ವಿಧೇಯತೆ ನಿಮ್ಮ ನಾಳೆಯನ್ನು ರಕ್ಷಿಸಬಹುದು ಅಥವಾ ಆಶೀರ್ವದಿಸಬಹುದು ಎಂಬ ಪ್ರಬಲವಾದ ಪಾಠವೊಂದನ್ನು ಕಲಿಸುತ್ತದೆ.
ಕೆಲವೊಮ್ಮೆ ಮಧ್ಯರಾತ್ರಿಯಲ್ಲಿಯೂ ಪರಲೋಕ ಚಾಲ್ತಿ ಯಲ್ಲಿರುತ್ತದೆ.
ಆದರೆ ನಾವು ಎದ್ದೇಳಲು ಸಿದ್ದರಿದ್ದೇವೆಯೇ?
Bible Reading: Number 11-13
ಪ್ರಾರ್ಥನೆಗಳು
ತಂದೆಯೇ, ನಿಮ್ಮ ಧ್ವನಿಯನ್ನು ಸ್ಪಷ್ಟವಾಗಿ ಕೇಳುವಂತೆ ನಮಗೆ ಕಿವಿಗಳನ್ನೂ ಮತ್ತು ನಿಮ್ಮ ಸೂಚನೆಯ ಮೇರೆಗೆ ತ್ವರಿತವಾಗಿ ಕಾರ್ಯನಿರ್ವಹಿಸುವಂತೆ ವಿಧೇಯತೆಯ ಹೃದಯಗಳನ್ನೂ ನಮಗೆ ಯೇಸುನಾಮದಲ್ಲಿ ಅನುಗ್ರಹಿಸಿ. ಆಮೆನ್!
Join our WhatsApp Channel
Most Read
● ಅಧರ್ಮಗಳ ಆಳ್ವಿಕೆಯ ಬಲವನ್ನು ಮುರಿಯುವುದು - I● ಕೆಟ್ಟ ನಡವಳಿಕೆಗಳಿಂದ ಬಿಡುಗಡೆ
● ನಿಮ್ಮ ಮನಸ್ಸನ್ನು ಶಿಸ್ತುಗೊಳಿಸಿ
● ನೆಪ ಹೇಳುವ ಕಲೆ
● ಸಭೆಯ ಎತ್ತಲ್ಪಡುವಿಕೆ ( ರಾಪ್ಚರ್) ಯಾವಾಗ ಸಂಭವಿಸುತ್ತದೆ?
● ಎರಡು ಸಾರಿ ಸಾಯಬೇಡಿರಿ
● ದೈವಿಕ ಅನುಕ್ರಮ - 1
ಅನಿಸಿಕೆಗಳು
