english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ನಿಮ್ಮ ಸಂಪರ್ಕವನ್ನು ಕಳೆದುಕೊಳ್ಳಬೇಡಿರಿ
ಅನುದಿನದ ಮನ್ನಾ

ನಿಮ್ಮ ಸಂಪರ್ಕವನ್ನು ಕಳೆದುಕೊಳ್ಳಬೇಡಿರಿ

Friday, 24th of July 2026
2 1 51
Categories : ಸಂಪರ್ಕಿಸಲಾಗಿದೆ (Connected)
ಇಂದಿನ ಕಾಲಮಾನದಲ್ಲಿ ನಮ್ಮ ಬಳಿ ಅದ್ಭುತವಾದ ಸೆಲ್ ಫೋನ್ ಗಳಿವೆ. ಕೆಲವು ಸೆಲ್ ಫೋನ್ ಗಳು ಬಹಳ ದುಬಾರಿಯಾದವು ಮತ್ತು ಕೆಲವು ಅಷ್ಟೇನೂ ದುಬಾರಿ ಅಲ್ಲದ್ದು  ಮತ್ತು ನಮ್ಮ ಕೈಗೆಟುಕುವ ಬೆಲೆಯುಳ್ಳವು. ಈಗ ನೀವು ನಿಮ್ಮ ಬಳಿಯಲ್ಲಿ ಇಡೀ ಲೋಕದಲ್ಲಿಯೇ ದುಬಾರಿಯಾದ ಮೊಬೈಲ್ ಫೋನನ್ನು ಹೊಂದಿರಬಹುದು. ಆದರೆ ಅದು ಸಂಪರ್ಕ ಜಾಲಕ್ಕೆ ಸಂಪರ್ಕ ಹೊಂದದಿದ್ದರೆ ಅದರಲ್ಲಿ ಒಳ್ಳೆಯದೇನಿಲ್ಲ. ಅದರಲ್ಲಿ ಕೆಲವು ಆಟವಾಡುವುದನ್ನು ಬಿಟ್ಟು ಮತ್ಯಾವುದೇ ರೀತಿಯ ಲಾಭದಾಯಕ ಕಾರ್ಯ ಮಾಡಲು ಸಾಧ್ಯವಿಲ್ಲ. ಸಂಪರ್ಕ ಹೊಂದಿರಬೇಕಾಗಿರುವುದೇ ನಿಜವಾದ ಕೀಲಿ ಕೈ.
"ನೀವು ನನ್ನಲ್ಲಿ ನೆಲೆಗೊಂಡಿರ್ರಿ, ನಾನೂ ನಿಮ್ಮಲ್ಲಿ ನೆಲೆಗೊಂಡಿರುವೆನು. ಕೊಂಬೆಯು ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲಕೊಡಲಾರದೋ ಹಾಗೆಯೇ ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ."(ಯೋಹಾನ 15:4)

ಕೊಂಬೆಯು ದ್ರಾಕ್ಷಿಬಳ್ಳಿಯಲ್ಲಿ ನೆಲೆಗೊಂಡಿದ್ದರೆ ಮಾತ್ರ ಅದಕ್ಕೆ ಜೀವ.

ದ್ರಾಕ್ಷಾಬಳ್ಳಿಯಲ್ಲಿ ನೆಲೆಗೊಂಡಿರುವ ಕೊಂಬೆಯು ಮಾತ್ರವೇ ಫಲವನ್ನು ಬಿಡುತ್ತದೆ.

ನಮ್ಮ ಜೀವಿತದಲ್ಲಿ ಕಪಟವಾಗಿ ಮಾಡಲಾಗದಂತ ಕೆಲವು ವಿಚಾರಗಳಿವೆ. ಅದರಲ್ಲಿ ಒಂದು ಯೇಸುವಿನೊಂದಿಗೆ ಸಂಪರ್ಕ ಹೊಂದಿರುವೆವೆಂದು ಹೇಳುವಂತಾದ್ದಾಗಿದೆ.
ಕೆಲವರು ಆ ರೀತಿ ನಟಿಸಲು ಪ್ರಯತ್ನಿಸುತ್ತಾರೆ. ಆದರೆ ಸ್ವಲ್ಪ ಕಾಲವಾದ ಮೇಲೆ ಸಿಕ್ಕಿ ಬೀಳುತ್ತಾರೆ.

ನಾನು ಒಂದು  ಕೊಂಬೆಯನ್ನು ತೆಗೆದುಕೊಂಡು ಒಂದು ಮರಕ್ಕೆ ಅಂಟಿನಿಂದ ಅಂಟಿಸಿದರೆ ಅದು ಬೆಳೆದು, ಎಲೆ ಬಿಟ್ಟು,ಹಣ್ಣು ಕೊಡುವುದೇ?  ಇಲ್ಲ. ಅದು ಸತ್ತು ಹೋಗಿರುವಂಥದ್ದು. ನಾವು ಅದನ್ನು ಮರಕ್ಕೆ ಅಂಟಿಸಿದ ಮಾತ್ರಕ್ಕೆ ಅದು ಆ ಮರದಲ್ಲಿ ನೆಲೆಗೊಂಡಿದೆ ಎಂದು ಅರ್ಥವಲ್ಲ. ಮರದ ಜೀವನಾಳದಲ್ಲಿ ನೆಲೆಗೊಂಡಿದ್ದರೇ  ಮಾತ್ರವೇ ಆ ಕೊಂಬೆಯೂ ಸಹ ಜೀವಂತವಾಗಿರಬಲ್ಲದು.

ನಾವು ಯೇಸುವಿನಲ್ಲಿ ನೆಲೆಗೊಂಡಿದ್ದೇವೆ ಎಂದು ಕಾಣುವ ಹಾಗೆ ಇರುವಂತದ್ದು ಬಹಳ ಸುಲಭ. ಆದರೆ ನಾವು ನಿಜವಾಗಿಯೂ ಆತನ ವಾಕ್ಯ ಹಾಗೂ ಪವಿತ್ರ 
ಅನ್ಯೋ ನ್ಯತೆಯ ಮೂಲಕ ಕ್ರಿಸ್ತನಲ್ಲಿ ಸಂಪರ್ಕ ಹೊಂದಿರದಿದ್ದರೆ, ನಾವೂ ಸಹ ಆ ದ್ರಾಕ್ಷಾಬಳ್ಳಿಯಲ್ಲಿ ನೆಲೆಗೊಂಡಿರದ ಕೊಂಬೆಯ ಹಾಗೆ ನಮ್ಮ ನಂಬಿಕೆಯೂ ಕುಂದಿ ಹೋಗುತ್ತದೆ.

ನಮ್ಮ ಸಭೆಯ ಸೇವಾ ಕೂಟಕ್ಕೆ ಅನೇಕ ಮಂದಿ ಬರುತ್ತಾರೆ. ನಾನು ಅದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ಆದಾಗಿಯೂ ಆರಾಧನೆ ಸಮಯದಲ್ಲಿ ಅವರಲ್ಲಿ ಬಹುತೇಕರು ಅತ್ತಿತ್ತ ನೋಡುತ್ತಾ ಇರುವುದನ್ನು ನಾನು ಆಗಾಗ್ಗೆ ನೋಡುತ್ತಿರುತ್ತೇನೆ. ಅವರು ಬಹಳ ಬೇಗನೆ ಚಂಚಲರಾಗುತ್ತಾರೆ ಮತ್ತು ಇತರರೊಂದಿಗೆ ಮಾತನಾಡುತ್ತಿರುತ್ತಾರೆ.ಇತ್ಯಾದಿ.

 ಹಾಜರಾತಿಯು ಕೇವಲ ಧಾರ್ಮಿಕ ನಿಬಂಧನೆಯನ್ನು ಪೂರೈಸುತ್ತದೆ ಅಷ್ಟೇ. ಆದರೆ ಬಾಂಧವ್ಯವೇ  ಬದಲಾವಣೆಯನ್ನು ತರುವಂತದ್ದಾಗಿದೆ.  ಮತ್ತು ಆ ಬಾಂಧವ್ಯವನ್ನು ನಾವು ಬೆಳೆಸಿಕೊಳ್ಳುವುದಾದರೂ ಹೇಗೆ? ನಿರಂತರವಾಗಿರುವ ಸಂಪರ್ಕವೇ ಬಾಂಧವ್ಯಗಳನ್ನು ಬೆಳೆಸುವುದಕ್ಕೂ ನೆಲೆಗೊಳಿಸುವುದಕ್ಕೂ ಸಾಧನವಾಗಿದೆ.

ಹಾಗಾಗಿ ನೀವು ಸಭೆಯ ಸೇವಾ ಕೂಟಕ್ಕೆ ಹೋದಾಗ ದೇವರಾತ್ಮನೊಂದಿಗೆ ಸಂಪರ್ಕ ಸಾಧಿಸಿರಿ. ನೀವು ದೇವರ ವಾಕ್ಯವನ್ನು ಓದುವಾಗ- ಪ್ರಾರ್ಥಿಸುವಾಗ ಆತನೊಂದಿಗೆ ಸಂಪರ್ಕ ಸಾಧಿಸಿರಿ. ಇದನ್ನು ಪ್ರಯತ್ನಿಸಿ ಮತ್ತು ಎಲ್ಲಾ ಚಂಚಲಗೊಳಿಸುವ ಸಂಗತಿಗಳಿಂದ ವಿಮುಕ್ತರಾಗಿರಿ. ಆಗ ನೀವು ಬೇಗನೇ ಫಲಿತಾಂಶವನ್ನು ಕಾಣುವಿರಿ.

Bible Reading: Song of Solomon 5-8; Isaiah 1
ಪ್ರಾರ್ಥನೆಗಳು
ಕರ್ತನಾದ ಯೇಸುವೆ, ನೀನೇ ನಿಜವಾದ ದ್ರಾಕ್ಷಾಬಳ್ಳಿ. ನಾನು ಯಾವಾಗಲೂ ನಿನ್ನಲ್ಲಿ ನೆಲೆಗೊಂಡಿರುವಂತೆ ಸಹಾಯ ಮಾಡು. ನನ್ನ ಜೀವಿತವು ನಿನ್ನ ಫಲವನ್ನು ಕೊಟ್ಟು ನಿನಗೆ ಘನವನ್ನು- ಮಹಿಮೆಯನ್ನು ಯೇಸುನಾಮದಲ್ಲಿ ತರಲಿ. ಆಮೆನ್.


Join our WhatsApp Channel


Most Read
● ದೂರದಿಂದ ಹಿಂಬಾಲಿಸುವುದು
● ಹೊಸ ಒಡಂಬಡಿಕೆಯ ನಡೆದಾಡುವ ದೇವಾಲಯ.
● ಸ್ತ್ರೀ ಪುರುಷರು ಏಕೆ ಪತನಗೊಳ್ಳುವರು- 5
● ಮಾನವನು ಮಾಡುವ ಪ್ರಮಾದಗಳ ನಡುವೆಯೂ ದೇವರ ಬದಲಾಗದ ಸ್ವಭಾವ.
● ಕರ್ತನು ಎಂದಿಗೂ ಕೈ ಬಿಡುವುದಿಲ್ಲ
● ಯೇಸುವಿನ ರಕ್ತವನ್ನು ಹಚ್ಚುವುದು
● ಆರಾಧನೆಯನ್ನು ಜೀವನಶೈಲಿಯನ್ನಾಗಿ ಮಾಡಿಕೊಳ್ಳುವುದು.
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2026 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್