ಅನುದಿನದ ಮನ್ನಾ
ಮರೆಯಾದ ಸ್ಥಳವನ್ನು ಆಶ್ರಯಿಸಿಕೊಳ್ಳುವುದು.
Thursday, 25th of January 2024
2
1
308
Categories :
ಆತ್ಮೀಕ ಶಕ್ತಿ ( Spiritual Strength)
ಪ್ರಾರ್ಥನೆ (prayer)
ರಾಜ್ ಮತ್ತು ಪ್ರಿಯ ದಂಪತಿಗಳು ಒಂದು ದೊಡ್ಡ ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದರು. ಒಂದು ರಾತ್ರಿಯಲ್ಲಿ ಅವರು ತಮ್ಮ ಮಕ್ಕಳು ಮಲಗಿದ್ದಾಗ ಹಾಗೆ ಸೋಫಾ ಮೇಲೆ ಕುಳಿತು ದೇವರ ಸಹಾಯಕ್ಕಾಗಿ ಪ್ರಾಥಿಸಲಾರಂಭಿಸಿದರು. ಆಗ ಇದ್ದಕ್ಕಿದ್ದ ಹಾಗೆ "ನಿಮಗೆ ಸಹಾಯ ಬೇಕಿದ್ದಲ್ಲಿ 9-1-1ಕ್ಕೆ ಕರೆ ಮಾಡಿ" ಎಂಬ ಒಂದು ಧ್ವನಿಯು ಬಹಳ ಸಾರಿ ಕೇಳಿಸಿತು. ಅವರಿಬ್ಬರೂ ಆಶ್ಚರ್ಯಪಟ್ಟರು. ಒಬ್ಬರ ಮುಖ ಒಬ್ಬರು ನೋಡಿಕೊಳ್ಳಲು ಆರಂಭಿಸಿದರು.
ಆ ಧ್ವನಿಯು ಅವರ ಮಗನ ಆಟಿಕೆಗಳನ್ನು ಇಡುವ ಮೂಲೆಯಿಂದ ಬರುವಂತೆ ಕಾಣುತ್ತಿತ್ತು. ಅವರು ಎದ್ದು ಅಲ್ಲಿಗೆ ಹೋಗಿ ಲೈಟನ್ನು ಹೊತ್ತಿಸಿ ನೋಡಿದಾಗ ಅವರ ಮಗನ ಆಟಿಕೆಗಳಲ್ಲಿ ಒಂದಾದ ಆಂಬುಲೆನ್ಸ್ ಆಟಿಕೆ ಒಂದನ್ನು ಬಿಟ್ಟು ಉಳಿದ ಆಟಿಕೆಗಳೆಲ್ಲವೂ ಸಹಜವಾಗಿಯೇ ಇತ್ತು. ಆಮೇಲೆ ರಾಜ್ ಅವರು ಆಂಬುಲೆನ್ಸ್ ಆಟಿಕೆಯನ್ನು ತೆಗೆದುಕೊಂಡು ಅದರ ಗುಂಡಿಯನ್ನು ಒತ್ತಿದರು. ಆಗ ಅದು "ನಿಮಗೆ ಸಹಾಯ ಬೇಕಿದ್ದಲ್ಲಿ 9-1-1ಕ್ಕೆ ಕರೆ ಮಾಡಿರಿ" ಎಂದು ಹೇಳಲಾರಂಬಿಸಿತು. ಆದರೆ ಯಾರೂ ಆ ಗುಂಡಿಯನ್ನು ಒತ್ತದೇ ಅದೇ ಚಾಲನೆ ಹೊಂದಿ ಹೇಗೆ ಹೇಳಲಾರಂಬಿಸಿತು ಎಂಬುದೇ ಅವರಿಗೆ ಒಂದು ಒಗಟಾಗಿ ಪರಿಣಮಿಸಿತು!
ಆಮೇಲೆ ರಾಜ್ ರವರಿಗೆ ಇದು ಪರಿಶುದ್ಧಾತ್ಮ ದೇವರು "ನಿಮಗೆ ಸಹಾಯ ಬೇಕಿದ್ದಲ್ಲಿ 9-1-1ಕ್ಕೆ ಕರೆ ಮಾಡಿ ಅಂದರೆ ಕೀರ್ತನೆ 91:1 ಓದಿರಿ ಎಂದು ಹೇಳುತ್ತಿದ್ದಾರೆ ಎಂದೆನಿಸಿತು
ಆಗ ಅವರಿಬ್ಬರೂ ಕೀರ್ತನೆಗಳ ಪುಸ್ತಕ 91:1ರಲ್ಲಿರುವ "ಪರಾತ್ಪರನನ್ನು ಮರೆಹೊಕ್ಕಿರುವವರು ಸರ್ವ ಶಕ್ತನ ಆಶ್ರಯದಲ್ಲಿ ಸುರಕ್ಷಿತರಾಗಿರುವರು" ಎಂಬ ವಾಕ್ಯವನ್ನು ಓದಿದರು.
ರಾಜ್ ಮತ್ತು ಪ್ರಿಯ ಇಬ್ಬರೂ ತಾವು ದೇವರ ಸಾನಿಧ್ಯದಲ್ಲಿ ಹೆಚ್ಚಾಗಿ ಸಮಯ ಕಳೆಯಬೇಕೆಂದು ದೇವರು ತೋರಿಸಿ ಕೊಡುತ್ತಿದ್ದಾರೆ, ಸರ್ವಶಕ್ತನ ಆಶ್ರಯವೇ ಮರೆಯಾದ ಸ್ಥಳವಾಗಿದೆ ಎಂಬುದನ್ನು ಅರಿತುಕೊಂಡರು. ಅವರಿಬ್ಬರೂ ದೇವರೊಂದಿಗೆ ಅನ್ಯೋನ್ಯತೆಯಲ್ಲಿ ನಡೆಯುವಾಗ ದೇವರಿಂದ ತಮಗೆ ಈ ಹಣಕಾಸಿನ ಸಮಸ್ಯೆಯನ್ನು ಬಗೆಹರಿಸಲು ಮಾರ್ಗದರ್ಶನ ಸಿಗುತ್ತದೆ ಎಂದು ಬಲವಾಗಿ ನಂಬಿದರು.
ಪರಲೋಕವು ಭೂಮಿಯಲ್ಲಿ ಬಲವಾಗಿ ಕಾರ್ಯ ಮಾಡಲು ನಾವು ಸಹ ಪರಾತ್ಪರನ ಮರೆಯಾದ ಸ್ಥಳವನ್ನು ದೃಷ್ಟಿಸಬೇಕು ಎಂಬುದನ್ನು ನಾನು ನಂಬುತ್ತೇನೆ
ಪಾತಾಳವು ಅದಕ್ಕೆ ಸಂಬಂಧಿಸಿದ ದುರಾತ್ಮಗಳು ನಾವು ದೇವರ ಸಾನಿಧ್ಯದಲ್ಲಿರುವ ಸಂತೋಷವನ್ನು ಹೊಂದಕೂಡದಂತೆಯೂ, ದೇವರ ಸಮ್ಮುಖದಿಂದ ನಮ್ಮನ್ನು ದೂರ ಮಾಡಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತವೆ. ಇಂದಿನ ಲೋಕವೂ ನಮ್ಮೆಲ್ಲಾ ಸಮಯವನ್ನು ನಮ್ಮೆಲ್ಲ ಶಕ್ತಿಯನ್ನು ನಾವು ಕಳೆದುಕೊಂಡು ಪರಾತ್ಪರನ ಆಶ್ರಯದಲ್ಲಿ ನಾವು ಸೇರದಂತೆ ನಮ್ಮನ್ನು ಸೆಳೆದುಕೊಂಡು ಹೋಗುವಂತದ್ದಾಗಿದೆ. ಆದರೂ ಸಭೆಗಳು ತನ್ನಲ್ಲಿರುವ ವಿಶ್ವಾಸಿಗಳು ದೇವರ ಸಾನಿಧ್ಯದಲ್ಲಿ ಇರುವಂತೆ ಮಾಡಲು ಅನೇಕ ಚಟುವಟಿಕೆಗಳನ್ನು ಅಳವಡಿಸಿ ವಿಶ್ವಾಸಿಗಳು ಅದರಲ್ಲಿ ನಿರತರಾಗಿರುವಂತೆ ಮಾಡಲು ಬಹಳ ಪ್ರಯಾಸ ಪಡುತ್ತದೆ. ಆದರೆ ದೇವರ ಸಾನಿಧ್ಯದಲ್ಲಿ ತಾವೂ ಕಾಲ ಕಳೆಯುವ ಮತ್ತು ಇತರ ವಿಶ್ವಾಸಿಗಳನ್ನೂ ಸಹ ದೇವರ ಸಾನಿಧ್ಯದಲ್ಲಿ ಕೂರುವಂತೆ ಪ್ರೇರೇಪಿಸುವ ವಿಶ್ವಾಸಿಗಳನ್ನು ಇಂದಿನ ದಿನಮಾನಗಳಲ್ಲಿ ಕಾಣುವುದೇ ಅಪರೂಪವಾಗಿದೆ
ಅನೇಕ ಮಂದಿ ವಿಶ್ವಾಸಿಗಳಿಗೆ ದೇವರ ಮರೆಯಾದ ಸ್ಥಳದಲ್ಲಿ ಕಾಲ ಕಳೆಯುವುದೇ ಜಯಪ್ರದ ಕ್ರೈಸ್ತರಾಗಿ ಬಾಳುವುದಕ್ಕೆ ಇರುವಂತಹ ಕೀಲಿ ಕೈ ಎಂಬುದು ತಿಳಿದಿದೆ. ಆದರೂ ಸಹ ಪ್ರತಿದಿನ ಆ ಸ್ಥಳವನ್ನು ಪ್ರವೇಶಿಸುವುದು ಅವರಿಗೆ ಕಷ್ಟಕರವಾಗಿದೆ. ಅವರಿಗೆ ಅದು ಸಾರವಿರುವ ಕ್ರಿಸ್ತೀಯ ಜೀವಿತವನ್ನು ತಾವು ಜೀವಿಸುತ್ತಿಲ್ಲ ಮತ್ತು ತಾವು ಒಂದೇ ಕಡೆ ಸ್ತಬ್ಧರಾಗಿ ನಿಂತುಬಿಟ್ಟಿದ್ದೇವೆ ಎಂದೆಲ್ಲಾ ಎನಿಸುತ್ತಿರುತ್ತದೆ ಎಂದು ನಾನು ಅರ್ಥಮಾಡಿ ಕೊಳ್ಳಬಲ್ಲೆನು. ಕೆಲವೊಮ್ಮೆ ನಮಗೆ ವಿರಾಮ ಬೇಕೆನಿಸಿದಾಗ ನಾವು ಟಿವಿಯನ್ನು ನೋಡುತ್ತೇವೆ. ರಾತ್ರಿ ಹೊತ್ತು ಪಬ್ ಗಳಿಗೆ ಹೋಗುತ್ತೇವೆ. ಅಥವಾ ರಾಕ್ ಸಂಗೀತದ ಕಾರ್ಯಕ್ರಮಗಳಿಗೆ ಹೋಗುವಂಥದ್ದು ಸ್ವಲ್ಪ ಒಳ್ಳೆಯದೇನೋ ಎಂದು ಎನಿಸುತ್ತದೆ. ಆದರೆ ಸ್ವಲ್ಪ ಸಮಯದ ನಂತರ ಮತ್ತೆ ಅದು ಹೃದಯದಲ್ಲಿ ನಿರ್ವಾತವನ್ನು ಸೃಷ್ಟಿಸಿ ಬಿಡುತ್ತದೆ. ಆಳವಾಗಿ ಯೋಚಿಸಿ ನೋಡಿದರೆ ದೇವರ ಸಾನಿಧ್ಯದಲ್ಲಿ ಮೌನವಾಗಿ ಕುಳಿತುಕೊಂಡಾಗ ಸಿಗುವ ಬಲವನ್ನು ನಾವು ಈ ರೀತಿಯ ಚಿತ್ತವಿಕ್ಷೇಪಗಳಿಂದ ಪಡೆಯಲು ಸಾಧ್ಯವಿಲ್ಲ.ಇಲ್ಲಿಯೇ ನಿಜವಾದ ಶಕ್ತಿಯನ್ನು- ಸಂತೃಪ್ತಿಯನ್ನು ನಾವು ಕಂಡುಕೊಳ್ಳಲು ಸಾಧ್ಯವಿರುವಂಥದ್ದು
"3 ಮಧ್ಯಾಹ್ನದ ಮೇಲೆ ಸುಮಾರು ಮೂರು ಗಂಟೆಗೆ ಅವನಿಗೆ ಒಂದು ದರ್ಶನ ಉಂಟಾಗಿ ಒಬ್ಬ ದೇವದೂತನು ತನ್ನ ಬಳಿಗೆ ಬಂದು - ಕೊರ್ನೇಲ್ಯನೇ ಎಂದು ಕರೆಯುವದನ್ನು ಅವನು ಪ್ರತ್ಯಕ್ಷವಾಗಿ ಕಂಡನು. 4ಅವನು ಆ ದೂತನನ್ನು ದೃಷ್ಟಿಸಿನೋಡಿ ಭಯಹಿಡಿದವನಾಗಿ - ಏನು ಸ್ವಾಮೀ ಎಂದು ಕೇಳಲು ದೂತನು ಅವನಿಗೆ - ನಿನ್ನ ಪ್ರಾರ್ಥನೆಗಳೂ ನಿನ್ನ ದಾನಧರ್ಮಗಳೂ ದೇವರ ಮುಂದೆ ಜ್ಞಾಪಕಾರ್ಥವಾಗಿ ಏರಿ ಬಂದವು."(ಅಪೊಸ್ತಲರ ಕೃತ್ಯಗಳು 10:3-4)
ಕೊರ್ನೆಲ್ಯನ ಜೀವಿತದಲ್ಲಾದ ಈ ಒಂದು ದೈವಿಕ ಸಾಕ್ಷಾತ್ಕಾರವು ಅವನ ಜೀವಿತದ ಫಲದಾಯಕತೆಯನ್ನು ಆಶ್ಚರ್ಯ ಚಕಿತವಾಗುವಷ್ಟು ಬದಲಾಯಿಸಿ ಬಿಟ್ಟಿತು. ಮತ್ತು ಆ ಸಾಕ್ಷಾತ್ಕಾರವು ಕೇವಲ ಕೊರ್ನೆಲ್ಯನೊಬ್ಬನ ವೈಯಕ್ತಿಕ ಆಶೀರ್ವಾದ ಮಾತ್ರವಾಗಿ ಬಿಡದೇ, ಇಡೀ ಅವನ ಕುಟುಂಬವನ್ನೂ ಮತ್ತು ಇಡೀ ಜಗತ್ತಿಗೆ ಆಶೀರ್ವಾದವು ಹರಿದು ಬರುವಂತಹ ಒಂದು ದೈವಿಕ ತಂತ್ರಗಾರಿಕೆಯಾಗಿತ್ತು. ಈ ಅನುಭವವೇ ನಿಮಗೂ ಆಗಬಹುದು. ಪರಾತ್ಪರನ ಮರೆಯಾದ ಸ್ಥಳದಲ್ಲಿ ಕಾಲವನ್ನು ಕಳೆಯುವಂತದ್ದು ನಿಜಕ್ಕೂ ಒಂದು ರಹಸ್ಯವೇ!.
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನನ್ನನ್ನು ನಿನ್ನ ಹೃದಯದ ಸಮೀಪಕ್ಕೆ ಬರಮಾಡು. ನಿನ್ನ ಪರಿಶುದ್ಧವಾದ ಮರೆಯಾದ ಸ್ಥಳದಲ್ಲಿ ನಾನು ವಾಸಿಸುವಂತೆ ಆಗಲಿ ಮತ್ತು ಯೇಸು ನಾಮದಲ್ಲಿ ನಾನು ನಿನ್ನ ಆಶ್ರಯದ ನೆರಳಿನಲ್ಲಿ ಸುರಕ್ಷಿತವಾಗಿರುವಂತೆಯೂ ಸಮಾಧಾನವನ್ನು ಹೊಂದುವಂತೆಯೂ ಅನುಗ್ರಹಿಸು. (ಕೀರ್ತನೆ 91:1)
ಕರ್ತನೇ, ನನ್ನ ಜೀವಿತದ ಎಲ್ಲಾ ಆಯಾಮದಲ್ಲೂ ನೀನೇ ನನ್ನ ಬಲವಾದ ಬಂಡೆಯೂ, ಭದ್ರವಾದ ಕೋಟೆಯೂ ಆಗಿದ್ದೀಯಾ ಎಂದು ಯೇಸು ನಾಮದಲ್ಲಿ ನಾನು ಘೋಷಿಸುವೆನು. (ಕೀರ್ತನೆ 91:2)
Join our WhatsApp Channel
Most Read
● ದಿನ 02:40 ದಿನಗಳ ಉಪವಾಸ ಪ್ರಾರ್ಥನೆ ದಿನಗಳು● ದೇವರಿಂದ ಒದಗಿದ ಕನಸು
● ದೇವರವಾಕ್ಯವನ್ನು ನಿಮ್ಮ ಹೃದಯದಾಳದಲ್ಲಿ ಬಿತ್ತಿರಿ.
● ದೇವರು ಹೇಗೆ ಒದಗಿಸುತ್ತಾನೆ #2
● ಸರಿಪಡಿಸಿಕೊಳ್ಳಿರಿ
● ಜನರು ನೆಪಗಳನ್ನು ಹೇಳಲು ಇರುವ ಕಾರಣಗಳು - ಭಾಗ 1
● ಆತ್ಮಕ್ಕೆ ದೇವರ ಔಷಧಿ
ಅನಿಸಿಕೆಗಳು