ಅನುದಿನದ ಮನ್ನಾ
ಪರಿಣಾಮಕಾರಿಯಾಗಿ ಸತ್ಯವೇದವನ್ನು ಓದುವುದು ಹೇಗೆ
Wednesday, 31st of January 2024
2
3
347
Categories :
ದೇವರವಾಕ್ಯ ( Word of God )
ಸತ್ಯವೇದ ( Bible)
" ನಾನು ಬರುವ ತನಕ ವೇದಪಾರಾಯಣವನ್ನೂ ಪ್ರಸಂಗವನ್ನೂ ಉಪದೇಶವನ್ನೂ ಮಾಡುವದರಲ್ಲಿ ಆಸಕ್ತನಾಗಿರು."(1ತಿಮೊಥೆಯನಿಗೆ 4:13).
ಅಪೋಸ್ತಲನಾದ ಪೌಲನು ತಿಮೊಥೆಗೆ ಕೊಟ್ಟ ಒಂದು ಸರಳವಾದ ಪರಿಣಾಮಕಾರಿಯಾದ ಸಲಹೆ ಏನಾಗಿತ್ತೆಂದರೆ "ಶಾಸ್ತ್ರವನ್ನು ನಿಯಮಿತವಾಗಿ ಓದು ಎಂಬುದೇ"
ಇಂದು ಸುಮ್ಮನೆ ತಮ್ಮ ಬಳಿ ಸತ್ಯವೇದದ ಪ್ರತಿಯೊಂದನ್ನು ಇಟ್ಟುಕೊಂಡು ಯಾವಾಗಲೋ ಒಂದು ಬಾರಿ ಮಾತ್ರ ಓದುವಂತ ಅನೇಕ ಜನರಿದ್ದಾರೆ. ಅವರು ಕಣ್ಣು ಮುಚ್ಚಿಕೊಂಡು ಸತ್ಯವೇದದ ಒಂದು ಭಾಗವನ್ನು ತೆಗೆದು ತಾವು ಬೆರಳಿಟ್ಟ ವಾಕ್ಯವನ್ನು ಮಾತ್ರ ಓದಿ ಇದೇ ದೇವರು ತಮಗಾಗಿ ಕೊಟ್ಟಿರುವ ಸಂದೇಶ ಎಂದು ಸ್ವೀಕರಿಸುವ ಜನರಾಗಿದ್ದಾರೆ. ಈ ರೀತಿ ಮಾಡುವುದು ತಪ್ಪೇನಲ್ಲ. ಆದರೆ ಈ ರೀತಿಯ ಅಭ್ಯಾಸದಿಂದ ನೀವು ದೇವರ ವಾಕ್ಯ ಜ್ಞಾನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ದಿನಗಳು ಕಳೆದಂತೆ ಮತ್ತದೇ ಅಧ್ಯಾಯದ ಮತ್ತದೇ ವಚನದಲ್ಲಿಯೇ ನಿಮ್ಮ ಸತ್ಯವೇದ ಅಧ್ಯಯನವೂ ಸಹ ಮುಗಿದು ಬಿಡಬೇಕಾಗಿ ಬರಬಹುದು.
ನೀವು ಈ ರೀತಿಯಲ್ಲಿ ಸತ್ಯವೇದವನ್ನು ಏಕೆ ಓದಬಾರದು ಎನ್ನಲು ಮತ್ತೊಂದು ಕಾರಣವಿದೆ.ನೀವು ಈ ರೀತಿ ಓದುವಾಗ
"ಯೂದನು ಹೋಗಿ ಉರುಲು ಹಾಕಿಕೊಂಡು ಸತ್ತನು" (ಮತ್ತಾಯ 27:5) ಎಂತಲೋ,
"ಬೇತಲಿಗೆ ಬಂದು ಪಾಪ ಮಾಡಿರಿ." (ಆಮೋಸ 4:4) ಎಂತಲೂ ನಿಮಗೆ ಸಂದೇಶ ಸಿಕ್ಕರೆ ನಿಮ್ಮ ಗತಿ ಏನು?
ಖಂಡಿತವಾಗಿಯೂ ನೀವು ಇಂತಹ ವಾಕ್ಯಗಳನ್ನು ನಿಮಗಾಗಿಯೋ ಅಥವಾ ಇತರರಿಗಾಗಿಯೋ ಸಿಕ್ಕಂತ ಭಕ್ತಿ ವೃದ್ಧಿ ಮಾಡುವ ಸಂದೇಶ ಎಂದು ಸ್ವೀಕರಿಸಲಾರಿರಿ. ಒಂದು ವೇಳೆ ನೀವು ಈ ರೀತಿ ಮಾಡುವಂತವರಾಗಿದ್ದರೆ ನೀವು ಕುಗ್ಗಿ ಹೋಗಬೇಡಿರಿ. ಅನೇಕ ಮಹಾನ್ ದೇವ ಸೇವಕ ಸೇವಕಿಯರು ತಮ್ಮ ಜೀವನದ ಒಂದು ಘಟ್ಟದಲ್ಲಿ ಈ ರೀತಿ ಮಾಡಿದ್ದುಂಟು. ಆದರೆ ಅವರು ಅಲ್ಲಿಂದ ಉನ್ನತ ಮಟ್ಟಕ್ಕೆ ಮುಂದುವರೆದರು.ಆದರಿಂದ ನೀವು ಸಹ ಅವರ ಹಾಗೆಯೇ ಮುಂದುವರಿಯಬಹುದು.
ನಾನು ಮತ್ತೊಂದು ವಿಚಾರವನ್ನೂ ಸಹ ಆಗ್ಗಾಗ್ಗೆ ನೋಡುತ್ತಲೇ ಇರುತ್ತೇನೆ. ಅದೇನಂದರೆ ಕೆಲವರು ಸತ್ಯವೇದ ಓದಲು ಆರಂಭಿಸುತ್ತಾರೆ, ಆದರೆ ಬಹಳ ಬೇಗ ಬಿಟ್ಟು ಬಿಡುತ್ತಾರೆ. ಸತ್ಯವೇದವನ್ನು ಓದುವ ಒಂದು ಯೋಜನೆಯನ್ನು ರೂಪಿಸಿಕೊಂಡರೆ ನೀವು ಇಂಥವುಗಳನ್ನೆಲ್ಲಾ ನಿಯಂತ್ರಿಸಬಹುದು
(ನೋಹ ಆಪ್ ನಲ್ಲಿ ದೊರಕುವ) 365 ದಿನಗಳಲ್ಲಿ ಸತ್ಯವೇದ ಓದಿ ಮುಗಿಸುವ ಶಿಷ್ಯತ್ವದ ಯೋಜನೆ ಅಂತಹ ಯೋಜನೆಗಳು ಒಂದು ವರ್ಷದಲ್ಲಿ ಸತ್ಯವೇದವನ್ನು ಪೂರ್ತಿಯಾಗಿ ಓದಿ ಮುಗಿಸಲು ನಿಮಗೆ ಸಹಾಯ ಮಾಡುತ್ತದೆ. ಈ ಯೋಜನೆಯು ಸತ್ಯವೇದದ ಎಲ್ಲಾ ಭಾಗಗಳನ್ನು ಸರಿಯಾಗಿ ಓದುವಂತೆ ನೀವು ಲಕ್ಷ್ಯವಿಡಲು ಸಹಕಾರಿಯಾಗಿದೆ. ಈ ಒಂದು ಸಂಗತಿಯೇ ನಾನು ದೇವರ ವಾಕ್ಯದಲ್ಲಿ ಬೆಳೆಯುವಂತೆ ನನ್ನನ್ನು ಮಾಡಿದ್ದು ಆದ್ದರಿಂದ ಈ ಒಂದು ಸರಳವಾದ ಆದರೆ ಪರಿಣಾಮಕಾರಿಯಾದ ಈ ರಹಸ್ಯವನ್ನು ನಿಮ್ಮೊಂದಿಗೆ ನಾನಿಂದು ಹಂಚಿಕೊಳ್ಳುತ್ತಿದ್ದೇನೆ.
"ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು ಎಂದು ಬರೆದದೆ.. "(ಮತ್ತಾಯ 4:4)
"ಎಲ್ಲಾ ತರದ ನಿಂದೆಯನ್ನೂ ವಿಸರ್ಜಿಸಿ ಹಸುಮಕ್ಕಳಂತೆ ಪಾರಮಾರ್ಥಿಕವಾದ ಶುದ್ಧ ಹಾಲನ್ನು ಬಯಸಿರಿ; ಅದರಿಂದ ಬೆಳೆಯುತ್ತಾ ರಕ್ಷಣೆಯನ್ನು ಹೊಂದುವಿರಿ;.."(1 ಪೇತ್ರನು 2:2)
ನಾವು ಭೌತಿಕವಾದ ಆಹಾರಗಳನ್ನು ಸೇವಿಸುವಾಗ ನಮ್ಮ ದೇಹವು ಆರೋಗ್ಯವಾಗಿರಲು ಬೇಕಾದ ಅಗತ್ಯ ಪೋಷಕಾಂಶಗಳು ದೊರಕುತ್ತವೆಯಷ್ಟೇ. ಹಾಗೆಯೇ ಪ್ರತಿದಿನ ಕ್ರಮಬದ್ಧವಾಗಿ ಸತ್ಯವೇದವನ್ನು ಓದುವಂಥದ್ದು ಸಹ ನಮ್ಮ ಆರೋಗ್ಯಕರವಾದ ಆತ್ಮಿಕ ಜೀವಿತವನ್ನು ಅಭಿವೃದ್ಧಿಪಡಿಸುತ್ತಾ ಹೋಗುತ್ತದೆ ಹಾಗೆಯೇ ಇದು ನೀವು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ಹಾಗೆಯೇ ನೀವು ಸತ್ಯವೇದವನ್ನು ಓದುವಾಗ ಮೌನವಾಗಿ ಈ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ
- ಈ ಒಂದು ಆಜ್ಞೆಯನ್ನು ನಾನು ನನ್ನ ಜೀವಿತದಲ್ಲಿ ಅಳವಡಿಸಿಕೊಳ್ಳಬೇಕೋ?
- ಈ ಒಂದು ವಾಗ್ದಾನವನ್ನು ನನಗಾಗಿ ನನ್ನ ಕುಟುಂಬಕ್ಕಾಗಿ ನಾನು ಸ್ವೀಕರಿಸಬೇಕೋ?
- ಈ ಒಂದು ಪ್ರಾರ್ಥನಾ ಅಂಶವನ್ನು ನನಗಾಗಿ ಅಥವಾ ಕುಟುಂಬಕ್ಕಾಗಿ ಅಥವಾ ಇತರ ಯಾರಿಗಾದರೂ ಬಳಸಬೇಕೋ? ಎಂದು
"ಸತ್ಯವೇದವು ನಮಗೆ ಕೇವಲ ಮಾಹಿತಿ ನೀಡಲು ಮಾತ್ರವಲ್ಲ, ನಮ್ಮನ್ನು ಮಾನಸಾಂತರ ಪಡಿಸಲಿಕ್ಕಾಗಿಯೇ ಇದೆ." ಎಂದು ಒಬ್ಬರು ಒಮ್ಮೆ ಸರಿಯಾಗಿ ಹೇಳಿದ್ದಾರೆ.
ಪ್ರಾರ್ಥನೆಗಳು
ತಂದೆಯೇ, ನಿನ್ನ ವಾಕ್ಯದಲ್ಲಿರುವ ಅದ್ಭುತವಾದ ವಿಚಾರಗಳನ್ನು ನಾನು ಕಾಣುವಂತೆ ಯೇಸು ನಾಮದಲ್ಲಿ ನನ್ನ ಆತ್ಮೀಯ ಕಣ್ಣುಗಳನ್ನು ತೆರೆ ಮಾಡು.
ತಂದೆಯೇ, ನಾನು ದಿನಾಲೂ ನಿನ್ನ ವಾಕ್ಯವನ್ನು ಧ್ಯಾನಿಸುವಾಗ ನಿನ್ನ ಸ್ವರವನ್ನು ಕೇಳುವಂತೆ ನನ್ನ ಕಿವಿಗಳನ್ನು ಯೇಸು ನಾಮದಲ್ಲಿ ತೆರೆಮಾಡು.
ತಂದೆಯೇ, ಸತ್ಯವೇದವನ್ನು ನಿಯಮಿತವಾಗಿ ಪ್ರತಿದಿನ ಓದುವಂತೆಯೂ ಒಂದು ವರ್ಷದಲ್ಲಿಯೇ ಅದನ್ನು ಓದು ಮುಗಿಸಲು ಯೇಸು ನಾಮದಲ್ಲಿ ನಿನ್ನ ಕೃಪೆಯನ್ನು ನನಗೆ ಅನುಗ್ರಹಿಸು. ಆಮೆನ್
ತಂದೆಯೇ, ನಾನು ದಿನಾಲೂ ನಿನ್ನ ವಾಕ್ಯವನ್ನು ಧ್ಯಾನಿಸುವಾಗ ನಿನ್ನ ಸ್ವರವನ್ನು ಕೇಳುವಂತೆ ನನ್ನ ಕಿವಿಗಳನ್ನು ಯೇಸು ನಾಮದಲ್ಲಿ ತೆರೆಮಾಡು.
ತಂದೆಯೇ, ಸತ್ಯವೇದವನ್ನು ನಿಯಮಿತವಾಗಿ ಪ್ರತಿದಿನ ಓದುವಂತೆಯೂ ಒಂದು ವರ್ಷದಲ್ಲಿಯೇ ಅದನ್ನು ಓದು ಮುಗಿಸಲು ಯೇಸು ನಾಮದಲ್ಲಿ ನಿನ್ನ ಕೃಪೆಯನ್ನು ನನಗೆ ಅನುಗ್ರಹಿಸು. ಆಮೆನ್
Join our WhatsApp Channel
Most Read
● ನಿಮ್ಮ ಗತಿಯನ್ನು ಬದಲಾಯಿಸಿ● ಆತ್ಮೀಕ ಚಾರಣ
● ನಿಮ್ಮ ಗುರಿಯನ್ನು ತಲುಪಲು ಬಲವನ್ನು ಹೊಂದಿಕೊಳ್ಳಿರಿ.
● ಚಿಕ್ಕ ಸಂಗತಿಗಳೂ ಸಹ ಮಹತ್ತರ ಉದ್ದೇಶಗಳನ್ನು ಪೂರೈಸಬಲ್ಲವು.
● ಅಪ್ಪನ ಮಗಳು - ಅಕ್ಷಾ
● ನೀವು ಯೇಸುವನ್ನು ಹೇಗೆ ದೃಷ್ಟಿಸುವಿರಿ?
● ಸರಿಪಡಿಸಿಕೊಳ್ಳಿರಿ
ಅನಿಸಿಕೆಗಳು