ಅನುದಿನದ ಮನ್ನಾ
ಕ್ಷಮಿಸಲು ಇರುವ ಪ್ರಾಯೋಗಿಕ ಹಂತಗಳು.
Friday, 2nd of February 2024
4
2
493
Categories :
ಕ್ಷಮೆ (Forgiveness)
ಒಬ್ಬರಿಂದ ನಾವಾಗಲೀ, ನಮ್ಮ ಪ್ರೀತಿ ಪಾತ್ರರಾಗಲೀ, ನೋವನ್ನು ಅನುಭವಿಸಿದರೆ ನಮ್ಮಲ್ಲಿರುವ ಸ್ವಭಾವದ ಪ್ರವೃತ್ತಿಯು ಸೇಡು ತೀರಿಸಿಕೊಳ್ಳುವದನ್ನೇ ಎದುರು ನೋಡುತ್ತದೆ. ನೋವನ್ನು ಅನುಭವಿಸುವಂತದ್ದು ಕೋಪಕ್ಕೆ ನಡೆಸುತ್ತದೆ. ನಮ್ಮಲ್ಲಿರುವ ಅಹಂಕಾರವು ನಮಗೆ ಹೇಗೆ ಅದಕ್ಕೆ ಪ್ರತಿಕಾರ ತೀರಿಸಿಕೊಳ್ಳಬೇಕು ಎಂಬ ಸೂಚನೆಗಳನ್ನು ಕೊಡಲಾರಂಬಿಸುತ್ತದೆ. ಇಂತಹ ಒಂದು ಕರಾಳ ಸನ್ನಿವೇಶದಲ್ಲಿ ಹೇಗೆ ತಾನೇ ಒಬ್ಬ ಮನುಷ್ಯನು ಕ್ಷಮಿಸಲು ಸಾಧ್ಯ?
ಕ್ಷಮಾಪಣೆಯ ಅಸ್ಥಿವಾರ.
"ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷವಿುಸುವವರಾಗಿಯೂ ಇರ್ರಿ."(ಎಫೆಸದವರಿಗೆ 4:32)
ಕ್ಷಮಿಸುವ ಪ್ರಕ್ರಿಯೆ ಎಂಬುದು ಕ್ರಿಸ್ತನು ಶಿಲುಬೆಯ ಮೇಲೆ ಇತರರನ್ನು ಕ್ಷಮಿಸಿರುವ ಅತಿಶಯವಾದ ಉದಾಹರಣೆಯಿಂದಾದ ಕ್ರೈಸ್ತ ನಂಬಿಕೆಯಲ್ಲಿ ನೆಲೆಗೊಂಡಿದೆ. ಕ್ರಿಸ್ತನು ನಾವು ಎಂದೆಂದಿಗೂ ತೀರಿಸಲಾಗದ ಋಣವನ್ನು ಶಿಲುಬೆಯ ಮರಣದ ಮುಖಾಂತರ ತೀರಿಸಿ ನಮಗಾಗಿ ಕ್ಷಮೆಯನ್ನು ಉಚಿತವಾಗಿ ಅನುಗ್ರಹಿಸಿದ್ದಾನೆ. ಈ ಒಂದು ಮೂಲಭೂತವಾದ ಸತ್ಯವು ನಾವು ಕ್ಷಮಿಸುವಾಗಲೆಲ್ಲಾ ದೇವರು ನಮಗೆ ತೋರಿಸಿದ ಕೃಪೆಯನ್ನು ಪ್ರತಿಬಿಂಬಿಸುತ್ತಿರುತ್ತದೆ ಎಂಬುದನ್ನು ನೆನಪಿಗೆ ತರುತ್ತದೆ. (ಎಫಸ್ಸೆ 4:32)
1. ಪವಿತ್ರಾತ್ಮನು ಅನುಗ್ರಹಿಸುವ ಬಲದ ಮೂಲಕ ಕ್ಷಮಿಸುವುದು.
ನಿಜವಾದ ಕ್ಷಮಾಪಣೆಯು ಮಾನವ ಸಾಮರ್ಥ್ಯಕ್ಕೆ ಮೀರಿದ ದೈವಿಕ ಆಸರೆಯಿಂದ ದೊರಕುವಂತದ್ದಾಗಿದೆ. ಪವಿತ್ರಾತ್ಮ ದೇವರೇ ಅಸಾಧ್ಯ ಎನಿಸುವ ಪರಿಸ್ಥಿತಿಯಲ್ಲೂ ನಮ್ಮನ್ನು ಕ್ಷಮಿಸುವಂತೆ ಬಲ ಕೊಟ್ಟು ಮಾರ್ಗದರ್ಶಿಸುವವನಾಗಿದ್ದಾನೆ. ಆತನ ಅಲೌಕಿಕವಾದ ಸಾಮರ್ಥ್ಯದ ಮೇಲೆ ಆಧಾರಗೊಂಡರೆ ಮಾತ್ರ ನಾವು ಈ ಎಲ್ಲಾ ಕಹಿಭಾವ ಅಸಮಾಧಾನಗಳನ್ನು ಗೆಲ್ಲಲು ಸಾಧ್ಯ (ಗಲಾತ್ಯ 5:22-23)
2.ಪ್ರಾರ್ಥನೆಯ ಮೂಲಕ ಕ್ಷಮಿಸುವುದು.
43ನಿನ್ನ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ಹಗೆಮಾಡಬೇಕೆಂದು ಹೇಳಿಯದೆ ಎಂಬದಾಗಿ ಕೇಳಿದ್ದೀರಷ್ಟೆ. 44ಆದರೆ ನಾನು ನಿಮಗೆ ಹೇಳುವದೇನಂದರೆ - ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆ ಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ. 45ಹೀಗೆ ಮಾಡಿದರೆ, ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾಗುವಿರಿ. ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ; ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.(ಮತ್ತಾಯ 5:43-45)
ಕ್ಷಮಿಸುವ ಪ್ರಕ್ರಿಯೆಯಲ್ಲಿ ಪ್ರಾರ್ಥನೆಯು ಒಂದು ಬಲವಾದ ಸಾಧನವಾಗಿದೆ. ಯೇಸುಕ್ರಿಸ್ತನು ನಮ್ಮ ವೈರಿಗಳನ್ನು ನಾವು ಪ್ರೀತಿಸಬೇಕು ನಮ್ಮನ್ನು ಹಿಂಸೆ ಪಡಿಸುವವರಿಗೋಸ್ಕರ ಪ್ರಾರ್ಥಿಸಬೇಕು ಎಂದು ಆಜ್ಞಾಪಿಸಿದ್ದಾನೆ. ಇದು ಕೇವಲ ಆದರ್ಶ ಮಾತುಗಳಾಗಿರದೆ ಹಗೆತನದ ಎಲ್ಲಾ ಗೋಡೆಗಳನ್ನು ಕೆಡವಲು ಇರುವ ಪ್ರಾಯೋಗಿಕ ಹೆಜ್ಜೆಗಳಾಗಿವೆ. ಪ್ರಾರ್ಥನೆಯ ಮೂಲಕ ನಾವು ನಮ್ಮ ಹೃದಯವನ್ನು ದೇವರ ಹೃದಯದೊಂದಿಗೆ ಒಡಂಬಡಿಸಿ ಆತನ ಕೃಪೆಯ ಮಸೂರದ ಮೂಲಕ ನಾವು ಇತರರನ್ನು ನೋಡಲಾರಾಂಭಿಸುತ್ತೇವೆ.
3.ನಂಬಿಕೆಯ ಮೂಲಕ ಕ್ಷಮಿಸುವುದು.
"ನಾವು ನೋಡುವವರಾಗಿ ನಡೆಯದೆ ನಂಬುವವರಾಗಿಯೇ ನಡೆಯುತ್ತೇವೆ.."(2 ಕೊರಿಂಥದವರಿಗೆ 5:7)
ನಂಬಿಕೆಯಲ್ಲಿ ನಡೆಯುವುದೆಂದರೆ ಪರಿಸ್ಥಿತಿಯು ನಮ್ಮ ಬುದ್ಧಿಗೆ ಮೀರಿದ್ದಾಗಿದ್ದರೂ ನಮ್ಮ ಭಾವನಾತ್ಮಕ ಸ್ಥಿತಿಗೆ ತದ್ವಿರುದ್ಧವಾಗಿದ್ದರೂ ದೇವರ ಉನ್ನತವಾದ ಯೋಜನೆಯ ಮೇಲೆ ಭರವಸೆಯಿಂದ ಇರುವಂತದ್ದಾಗಿದೆ. ನಂಬಿಕೆಯ ಮೂಲಕ ಕ್ಷಮಿಸುವಂತ್ತದ್ದು ನಮಗಾಗಿರುವ ನೋವಿಗೆ ಮೀರಿ ಸಂಬಂಧಗಳನ್ನು ನಿಭಾಯಿಸಿಕೊಂಡು ಹೋಗುವಂಥದ್ದನ್ನು, ನಮ್ಮ ಸೇಡು ತೀರಿಸಿಕೊಳ್ಳುವ ಬಯಕೆಯನ್ನು ಹತೋಟಿಯಲ್ಲಿಡುವುದನ್ನು ಮತ್ತು ನ್ಯಾಯ ವಿಚಾರದಲ್ಲಿ ನಮ್ಮ ಮಾರ್ಗಗಳಿಗಿಂತ ದೇವರ ಮಾರ್ಗಗಳು ಎಷ್ಟೋ ಉನ್ನತವಾಗಿದೆ ಎಂದು ಭರವಸೆ ಇಡುವಂಥದ್ದನ್ನು ಒಳಗೊಂಡಿದೆ.
4.ದೀನತ್ವದಿಂದ ಕ್ಷಮಿಸುವುದು.
"ಹೀಗಿರಲಾಗಿ ನೀವು ದೇವರಿಂದ ಆರಿಸಿಕೊಂಡವರೂ ಪ್ರತಿಷ್ಠಿತರೂ ಪ್ರಿಯರೂ ಆಗಿರುವದರಿಂದ ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. 13ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷವಿುಸಿರಿ. ಕರ್ತನು ನಿಮ್ಮನ್ನು ಕ್ಷವಿುಸಿದಂತೆಯೇ ನೀವೂ ಕ್ಷವಿುಸಿರಿ."
(ಕೊಲೊಸ್ಸೆಯವರಿಗೆ 3:12-13)
ಕ್ಷಮಾ ಗುಣವು ಹಸನಾಗಿ ಬೆಳೆಯಲು ದೀನತ್ವವೆಂಬ ಮಣ್ಣಿರಬೇಕು. ನಮ್ಮ ಸ್ವಹಿತವನ್ನು ಮಾತ್ರ ಚಿಂತಿಸದೆ ಇತರರನ್ನು ಕ್ಷಮಿಸಲು ವಿಸ್ತರಿಸುವ ಕೈಗಳು ನಮಗೆ ದೇವರ ಸಹಾಯದಿಂದ ದೊರೆಯುತ್ತದೆ. ಅಪೋಸ್ತಲನಾದ ಫೌಲನು ಪ್ರೀತಿಯಿಂದ ನಮ್ಮನ್ನು ಎಚ್ಚರಿಸುವುದೇನೆಂದರೆ ನಾವು ದೀನತ್ವ ಸಾಧುಗುಣ ಮತ್ತು ತಾಳ್ಮೆ ಎಂಬ ವಸ್ತ್ರವನ್ನು ಧರಿಸಿಕೊಂಡವರಾಗಿರಬೇಕು. ಆಗ ನಾವು ಇತರರನ್ನು ಕ್ಷಮಿಸಿದಾಗ ದೇವರ ಮುಂದೆ ನಮ್ಮ ಸ್ಥಾನವೇನಾಗಿರುತ್ತದೆ ಎಂಬುದನ್ನು ನಮಗೆ ನೆನಪು ಕೊಡುತ್ತದೆ.
ಕ್ಷಮಿಸಿ ಬಿಡುವುದು ಒಂದು ಸಲ ಮಾತ್ರ ಮಾಡಿ ಮುಗಿಸುವ ಕ್ರಿಯೆಯಲ್ಲ ಅದು ನಿರಂತರವಾದ ಪ್ರಕ್ರಿಯೆಯಾಗಿದೆ. ಒಬ್ಬ ವ್ಯಕ್ತಿಯು ನಿಜವಾಗಿ ಸಂಬಂಧಗಳನ್ನು ಸಂಧಾನ ಮಾಡಿಕೊಳ್ಳಲು ಬಯಸಿ ಕ್ಷಮಿಸಬೇಕೆಂದು ಮುಂದೆ ಸಾಗುವಾಗ ಈ ಹಂತಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ. ಆದರೆ ನಾವಿಲ್ಲಿ ಒಂದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅವಶ್ಯಕ. ಕ್ಷಮೆಯು, ಆಗಿರುವ ತಪ್ಪನ್ನು ಸಮ್ಮತಿಸುವುದಿಲ್ಲ ಅಥವಾ ಮಾಡಿರುವ ನೋವನ್ನು ಅಳಿಸಿ ಬಿಡುವುದಿಲ್ಲ ಆದರೆ ಅದು ಕಹಿ ಭಾವ ಮತ್ತು ದ್ವೇಷ ಎಂಬ ವಿಷ ಚಕ್ರದಿಂದ ನಮ್ಮನ್ನು ಮುಕ್ತಗೊಳಿಸುತ್ತದೆ. ನಾವು ಹೇಗೆ ಉಚಿತವಾಗಿ ಕ್ಷಮೆಯನ್ನು ಹೊಂದಿಕೊಂಡೆವೋ ಹಾಗೆಯೇ ಇತರರನ್ನು ಸಹ ಉಚಿತವಾಗಿ ಕ್ಷಮಿಸುವ ಮೂಲಕ ಕ್ರಿಸ್ತನ ಪ್ರೀತಿಯನ್ನು ಪ್ರತಿಬಿಂಬಿಸಲು ಶ್ರಮಿಸೋಣ.
ನಾವು ಈ ಪ್ರಾಯೋಗಿಕ ಹೆಜ್ಜೆಗಳನ್ನು ಅಳವಡಿಸಿಕೊಳ್ಳುವ ಮುಖಾಂತರ ಮತ್ತು ನಾವು ಓದಿದ ಈ ವಾಕ್ಯ ಭಾಗಗಳನ್ನು ನಮ್ಮ ಜೀವಿತದಲ್ಲಿ ಪ್ರತಿಬಿಂಬಿಸುವ ಮೂಲಕ ನಾವು ಸ್ವಸ್ಥತೆ ಮತ್ತು ಸಮಾಧಾನದ ಮಾರ್ಗವನ್ನು ಕೆತ್ತಲಾರಂಭಿಸಿದ್ದೇವೆ ಎಂದು ನಾನು ನಂಬುತ್ತೇನೆ. ನಾವು ಯಾವಾಗಲೂ ಕ್ರಿಸ್ತನಿಂದ ಹೊಂದಿದ ಕ್ಷಮಾಪಣೆಯ ಆಳವನ್ನು ನೆನಪಿಸಿಕೊಂಡು ಇತರರನ್ನು ಅದೇ ಪ್ರಮಾಣದಲ್ಲಿ ಕ್ಷಮಿಸುತ್ತಾ ನಮ್ಮ ಸಂಬಂಧಗಳನ್ನು ಮಾರ್ಪಡಿಸಿಕೊಂಡು ದೇವರ ಅಪರಿಮಿತವಾದ ಪ್ರೀತಿಯನ್ನು ನಮ್ಮ ಸುತ್ತಲಿನ ಜಗತ್ತಿಗೆ ಪ್ರಕಟಿಸುವಂತಾಗಲಿ.
ಪ್ರಾರ್ಥನೆಗಳು
ತಂದೆಯೇ, ನೀನು ನಮ್ಮನ್ನು ಕ್ಷಮಿಸಿದ ಪ್ರಕಾರವೇ ನಾವು ಇತರರನ್ನು ಕ್ಷಮಿಸುವಂತೆ ನಿನ್ನ ಕೃಪೆಯನ್ನು ನಮಗೆ ಅನುಗ್ರಹಿಸು. ಎಲ್ಲಾ ನೋವುಗಳಿಂದ ಮುಕ್ತರಾಗಿ ಸ್ವಸ್ತತೆಯನ್ನು ಅಪ್ಪಿಕೊಳ್ಳುವಂತೆ ನಿನ್ನ ಆತ್ಮನಿಂದ ನಮ್ಮನ್ನು ಬಲಗೊಳಿಸು. ನಿನ್ನ ಪ್ರೀತಿಯನ್ನು -ಕ್ಷಮೆಯನ್ನು ಪ್ರಕಟಿಸುವಂತಹ ಜೀವಿತವು ಯೇಸು ನಾಮದಲ್ಲಿ ನಮ್ಮದಾಗಲಿ. ಆಮೆನ್
Join our WhatsApp Channel
Most Read
● ಆರಾಧನೆಗೆ ಬೇಕಾದ ಇಂಧನ● ಎಲ್ಲಾಮನುಷ್ಯರಿಗಾಗಿ ಇರುವ ಕೃಪೆ
● ಆಳವಾದ ನೀರಿನೊಳಗೆ
● ನೀವು ದೇವರನ್ನು ಎದುರಿಸುತ್ತಿದ್ದೀರಾ?
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು-1
● ದಿನ 25:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ವಿವೇಚನೆ v/s ತೀರ್ಪು
ಅನಿಸಿಕೆಗಳು