ಅನುದಿನದ ಮನ್ನಾ
ಚಿಕ್ಕ ಸಂಗತಿಗಳೂ ಸಹ ಮಹತ್ತರ ಉದ್ದೇಶಗಳನ್ನು ಪೂರೈಸಬಲ್ಲವು.
Saturday, 3rd of February 2024
3
2
376
Categories :
ಉದ್ದೇಶಗಳು (purpose)
" (ಪ್ರವಾದಿ) ಎಲೀಷನು ಆಕೆಗೆ ನಾನು ನಿನಗೇನು ಮಾಡಬೇಕೆನ್ನುತ್ತಿ?, ನಿನ್ನ ಮನೆಯಲ್ಲಿ ಏನು ಇರುತ್ತದೆ? ಹೇಳು ಎಂದನು. ಅದಕ್ಕೆ ಆಕೆಯು ನಿನ್ನದಾಸಿಯಾದ ಮನೆಯಲ್ಲಿ ಒಂದು ಮೊಗೆ ಎಣ್ಣೆ ಹೊರತಾಗಿ ಏನೂ ಇಲ್ಲ ಎಂದು ಉತ್ತರ ಕೊಟ್ಟಳು". 'ನನ್ನ ಬಳಿ ಏನೂ ಇಲ್ಲ ಆದರೂ ನನ್ನ ಬಳಿ ಏನೋ ಇದೆ' ಎನ್ನುವ ಈ ಮಾತು ನಮ್ಮ ಕಿವಿಗಳಲ್ಲಿ ರಿಂಗಣಿಸುತ್ತದೆ. ನೀವು ನಾನು ಏನು ಹೇಳಬೇಕೆಂದುಕೊಂಡಿದ್ದೆನೋ ಅದನ್ನು ಗ್ರಹಿಸಿಕೊಂಡಿದ್ದೀರಿ ಎಂದು ನಿರೀಕ್ಷಿಸಿದ್ದೇನೆ.ಆ ವಿಧವೆಯ ಮರುತ್ತರವು ನನಗೆ ಇಲ್ಲಿಯವರೆಗೂ ಒಂದು ಒಗಟಾಗಿಯೇ ಇತ್ತು. ಆ ಮಾತಿನ ಹಿಂದಿರುವ ಮಹತ್ವವನ್ನು ಗ್ರಹಿಸಿಕೊಳ್ಳಲು ನಾನು ಈಗ ಆರಂಭಿಸಿದೆ.
ಇಲ್ಲಿ ನೋಡಿ, ಯಾವಾಗ ನಿಮ್ಮ ಕೊರತೆಯು ನಿಮ್ಮಲ್ಲಿರುವ ಪೂರೈಕೆ ಗಿಂತ ಹೆಚ್ಚಾಗಿರುತ್ತದೆಯೋ ಆಗ ನಿಮ್ಮ ಬಳಿ ಇರುವಂತದ್ದು ಏನೂ ಅಲ್ಲ ಎಂದೇ ಹೇಳುತ್ತೀರಿ. ನಿಮ್ಮ ಅಗತ್ಯಗಳು ನಿಮ್ಮ ಕೈಲಿರುವ ಹಣಕ್ಕಿಂತಲೂ, ಸಂಪನ್ಮೂಲಗಳಿಗಿಂತಲೂ ದೊಡ್ಡದಾಗಿದ್ದರೆ, ನೀವು ಯಾವಾಗಲೂ ನನ್ನ ಬಳಿ ಏನೂ ಇಲ್ಲ ಎಂತಲೇ ಹೇಳುತ್ತೀರಿ. ಆದರೆ ಸತ್ಯ ಏನೆಂದರೆ ನಿಮ್ಮ ಬಳಿ ಯಾವಾಗಲೂ ಏನಾದರೂ ಇದ್ದೇ ಇರುತ್ತದೆ.
ಅನೇಕ ಜನರು ನನಗೆ ಪತ್ರ ಬರೆಯುತ್ತಾ ಹೀಗೆ ಹೇಳುತ್ತಾರೆ, "ಪಾಸ್ಟರ್ ಮೈಕಲ್ ರವರೆ ನನಗೆ ನಂಬಿಕೆಯೇ ಇಲ್ಲ" ಎಂದು. ಆದರೆ ಸತ್ಯವೇನೆಂದರೆ ಭೂಮಿಯ ಮೇಲಿರುವ ಪ್ರತಿಯೊಬ್ಬ ಮನುಷ್ಯನಿಗೂ ದೇವರು ಒಂದು ನಿಗದಿತ ಅಳತೆಯ ನಂಬಿಕೆಯನ್ನು ಕೊಟ್ಟೆ ಕೊಟ್ಟಿರುತ್ತಾನೆ. ಅದು ಸಣ್ಣ ಪ್ರಮಾಣದ ಆಗಿರಬಹುದು ಇಲ್ಲವೇ ದೊಡ್ಡ ಅಳತೆಯೆಲ್ಲಾಗಿರಬಹುದು ಹಾಗಾಗಿ ನಿಮ್ಮ ಬಳಿ ಏನಾದರೂ ಇದ್ದೇ ಇರುತ್ತದೆ.(ರೋಮ 12:3 ನೋಡಿ)
ನೀವು ನಿಮ್ಮ ಬಳಿಯಲ್ಲಿರುವ ಯಾವುದನ್ನು ಅದೇನೂ ಅಲ್ಲ ಎಂದುಕೊಂಡಿರುವುದನ್ನೇ ಬಳಸಿಯೇ ದೇವರು ಅದ್ಭುತ ಮಾಡುವವನಾಗಿದ್ದಾನೆ. ಅದು ನೀವು ಸಭಾ ಸೇವೆಯಲ್ಲಿ ಅರ್ಪಿಸುವ ಸಣ್ಣ ಕಾಣಿಕೆ ಆಗಿರಬಹುದು, ಕರುಣಾ ಸದನ್ ಸಭೆಯೊಂದಿಗೆ ಇರುವ ನಿಮ್ಮ ಪಾಲುಗಾರಿಕೆಯಾಗಿರಬಹುದು, ನಿಮ್ಮ ತಲಾಂತಗಳು ಇರಬಹುದು, ನಿಮ್ಮ ಪ್ರಾರ್ಥನಾ ಸಮಯವಿರಬಹುದು ಇಲ್ಲವೇ ನಿಮ್ಮ ಉಪವಾಸಗಳಾಗಿರಬಹುದು ಇತ್ಯಾದಿ.
ಜನರು ಯಾವುದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲವೋ ಅದನ್ನೇ ಕರ್ತನು ಗಣನೆಯುಳ್ಳದೆಂದು ಪರಿಗಣಿಸಿ ಗಣನೆಗೆ ಬರುವಂತಹ ಕಾರ್ಯಗಳನ್ನು ಮಾಡಿ ಮುಗಿಸುತ್ತಾನೆ. ಈ ಒಂದು ನಿಯಮವನ್ನೇ ಸತ್ಯವೇದದ ಉದ್ದಗಲಕ್ಕೂ ಸಾಕ್ಷಿಯಾಗಿರುವುದನ್ನು ನಾವು ಕಾಣಬಹುದು.
"ಆಗ ಆತನ ಶಿಷ್ಯರಲ್ಲಿ ಒಬ್ಬನಾಗಿರುವ ಸೀಮೋನ್‍ಪೇತ್ರನ ತಮ್ಮನಾದ ಅಂದ್ರೆಯನು ಆತನಿಗೆ - 9ಇಲ್ಲಿರುವ ಒಬ್ಬ ಹುಡುಗನ ಬಳಿಯಲ್ಲಿ ಐದು ಜವೆಗೋದಿಯ ರೊಟ್ಟಿಗಳೂ ಎರಡು ಮೀನುಗಳೂ ಅವೆ; ಆದರೆ ಇಷ್ಟು ಜನರಿಗೆ ಅವು ಯಾತಕ್ಕಾದಾವು?" ಎಂದನು. (ಯೋಹಾನ 6:8-9).ಆದರೆ ಕರ್ತನಾದ ಯೇಸುವು ಆ ಐದು ರೊಟ್ಟಿ ಎರಡು ಮೀನುಗಳನ್ನು ಉಪಯೋಗಿಸಿ ಕೊಂಡೇ ಐದು ಸಾವಿರಕ್ಕೂ ಹೆಚ್ಚಿನ ಜನಕ್ಕೆ ಹೊಟ್ಟೆ ತುಂಬಾ ಉಣ ಬಡಿಸಿದನು.
ಯೆಹೋವನು ಜೆಕರ್ಯನಿಗೆ " ಈ ಅಲ್ಪಕಾರ್ಯಗಳ ದಿನವನ್ನು ಯಾರು ತಿರಸ್ಕರಿಸಾರು? " ಎಂದು ಕೇಳುತ್ತಾನೆ.. (ಜೆಕರ್ಯ 4:10) ದೇವಾಲಯ ಕಟ್ಟೋಣವನ್ನು ಪೂರೈಸಲು ಅವರ ಬಳಿ ಇದ್ದ ನಿಧಿಯು ತುಂಬಾ ಕಡಿಮೆ ಮೊತ್ತದ್ದಾಗಿತ್ತು. ಅವರ ಆತ್ಮಸ್ಥೈರ್ಯವೂ ಅದಕ್ಕಿಂತ ಕಡಿಮೆಯಾಗಿಬಿಟ್ಟಿತ್ತು. ಮತ್ತದು ಅವರಿಗೆ ಈ ಕೆಲಸವನ್ನು ಪೂರೈಸಲು ಸಾಧ್ಯವೇ ಇಲ್ಲ ಎಂದೆನಿಸಿಬಿಡಿಸಿತ್ತು. ಆದರೆ "ದೇವರಿಗೆ ಯಾವುದೂ ಅಲ್ಪವಲ್ಲ" ಎಂಬ ಪ್ರವಾದನೆಯ ಮಾತು ಒದಗಿ ಬಂದು ಅವರು ಉತ್ತೇಜಿಸಲ್ಪಟ್ಟರು.
ನಿಮ್ಮ ಕಣ್ಣುಗಳಲ್ಲಿ ನೀವು ನಿಮಗೆ ಏನೂ ಅಲ್ಲದವರಂತೆ ಕಾಣಿಸುತ್ತಿರಬಹುದು. ಇದು ಒಳ್ಳೆಯದೇ, ಏಕೆಂದರೆ ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ ದೀನರಿಗಾದರೋ ಕೃಪೆ ತೋರಿಸುತ್ತಾನೆ. ಹಾಗಿದ್ದರೂ ನಿಮ್ಮ ಈ ದೀನತ್ವವು ದೇವರಿಗಾಗಿ ನನ್ನ ಕೈಲಿ ಏನು ಮಾಡುವುದಕ್ಕಾಗುವುದಿಲ್ಲ ಎಂದು ಹೇಳಿಕೊಳ್ಳುತ್ತಾ ದೇವರಿಗಾಗಿ ನೀವು ಏನೂ ಮಾಡದಂತ ಪಾಪಕ್ಕೆ ನಿಮ್ಮನ್ನು ತಳ್ಳಬಾರದಷ್ಟೇ. ನೀವು ಎಷ್ಟೇ ಬಡವರಾಗಿದ್ದರೂ ಮನಮುರಿದವರಾಗಿದ್ದರೂ ಸರಿಯೇ,ನೀವೇ ನಿಮ್ಮನ್ನು ದೇವರಿಗೆ ಸಮರ್ಪಸಿಕೊಂಡರೆ ದೇವರು ನಿಮ್ಮನ್ನು ಉಪಯೋಗಿಸುವನು.
ಪ್ರಾರ್ಥನೆಗಳು
1.ನಾನು ಕರ್ತನನ್ನು ಎದುರು ನೋಡುತ್ತಿರುವುದರಿಂದ ಯಾವ ಮೇಲಿಗೂ ನನಗೆ ಕಡಿಮೆ ಇರುವುದಿಲ್ಲ. (ಕೀರ್ತನೆ 34:10)
2.ನಾನು ಕರ್ತನಿಗೆ ಭಯ ಭಕ್ತಿಯಿಂದ ನಡೆಯುವೆನ್ನಾದರಿಂದ, ನನಗೆ ಯಾವ ಕೊರತೆಯೂ ಇರುವುದಿಲ್ಲ ನನ್ನ ಅಗತ್ಯಗಳೆಲ್ಲವೂ ನೀಗಿಸಲ್ಪಟ್ಟು ಹೊರ ಚೆಲ್ಲುವಷ್ಟು ಸಮೃದ್ಧಿ ಕರವಾಗುತ್ತದೆ. (ಕೀರ್ತನೆ 34:9)
3.ಕರ್ತನು ನನ್ನನ್ನು ಆತನ ನೀತಿ ಮಾರ್ಗಗಳಲ್ಲಿ ನಡೆಸುತ್ತಾನೆ.ನನ್ನ ಪ್ರತಿಯೊಂದು ನಿರ್ಧಾರಗಳಿಗೂ ಆತನಿಂದಲೇ ವಿವೇಕವನ್ನು ಮಾರ್ಗದರ್ಶನವನ್ನು ಕಂಡುಕೊಳ್ಳುತ್ತೇನೆ. ನನ್ನ ಗತಿಸ್ಥಾಪನೆಯು ಯೆಹೋವನಿಂದಲೇ ಆಗಿದೆ. ಆತನು ನನ್ನ ಪ್ರವರ್ತನೆಗಳನ್ನು ಮೆಚ್ಚುತ್ತಾನೆ. (ಕೀರ್ತನೆ 23:3,37:23)ಆಮೆನ್.
Join our WhatsApp Channel
Most Read
● ದಿನ 05:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ● ಯೇಸುವನ್ನು ನೋಡುವ ಬಯಕೆ
● ದಿನ 06:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಕಳೆದು ಹೋದ ರಹಸ್ಯ
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿ - 1
● ದೈವೀಕ ಶಿಸ್ತಿನ ಸ್ವರೂಪ-1
● ಕ್ರಿಸ್ತನ ಮೂಲಕ ಜಯಶಾಲಿಗಳು
ಅನಿಸಿಕೆಗಳು