ಅನುದಿನದ ಮನ್ನಾ
2
1
97
ಆತನ ಪರಿಪೂರ್ಣ ಪ್ರೀತಿಯಲ್ಲಿರುವ ಬಿಡುಗಡೆಯನ್ನು ಕಂಡುಕೊಳ್ಳುವುದು
Wednesday, 23rd of April 2025
Categories :
ರೂಪಾಂತರ(transformation)
ಬಿಕ್ಕಟ್ಟು ಅಥವಾ ಕಠಿಣ ಪರಿಸ್ಥಿತಿಯ ಸಂದರ್ಭದಲ್ಲಿ ನೀವು ಎಂದಾದರೂ ಭಯದಿಂದ ನಿಶ್ಕ್ರಿಯೆಗೊಂಡಿದ್ದೀರಾ ? ಎಲ್ಲಾ ಮನುಷ್ಯರಿಗೂ ಇದೊಂದು ಸಾಮಾನ್ಯ ಅನುಭವವೇ, ಆದರೆ ಒಳ್ಳೆಯ ಸುದ್ದಿ ಎಂದರೆ ನಾವು ಭಯದಲ್ಲಿಯೇ ಸಿಲುಕಿಕೊಂಡಿರಬೇಕಾದ ಅವಶ್ಯಕತೆಯಿಲ್ಲ. ಭಯವನ್ನು ಜಯಿಸುವ ಕೀಲಿಕೈ ಎಂದರೆ ಅದು ಪರಿಪೂರ್ಣ ಪ್ರೀತಿ.
ಅಪೊಸ್ತಲ ಯೋಹಾನನು "ಪ್ರೀತಿಯು ಇರುವಲ್ಲಿ ಹೆದರಿಕೆಯಿಲ್ಲ. ಹೆದರಿಕೆಯು ಯಾತನೆಯನ್ನು ಹೊಂದುತ್ತಾ ಇರುವದು; ಪೂರ್ಣಪ್ರೀತಿಯು ಹೆದರಿಕೆಯನ್ನು ಹೊರಡಿಸಿಬಿಡುತ್ತದೆ. ಹೆದರುವವನು ಪ್ರೀತಿಯಲ್ಲಿ ಸಿದ್ಧಿಗೆ ಬಂದವನಲ್ಲ " (1 ಯೋಹಾನ 4:18) ಎಂದು ನಮಗೆ ನೆನಪಿಸುತ್ತಾನೆ. ಭಯ ಮತ್ತು ಪ್ರೀತಿ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂಬ ಪ್ರಬಲ ಎಚ್ಚರಿಕೆ ಗಂಟೆ ಇದಾಗಿದೆ. ನಾವು ಪ್ರೀತಿಯಲ್ಲಿ ಬೇರೂರಿದಾಗ, ಭಯವು ಓಡಿಹೋಗಬೇಕು.
ಪರಿಪೂರ್ಣ ಪ್ರೀತಿ ಎಂದರೇನು ಎಂದು ನೀವು ಕೇಳಬಹುದು? ಪ್ರೀತಿಯ ಗ್ರೀಕ್ ಪದದ ಪ್ರಕಾರ, ಅಗಾಪೆ, ಪರಿಪೂರ್ಣ ಪ್ರೀತಿ ಸಂಪೂರ್ಣ ಪ್ರೀತಿ. ನಾವು ನಮ್ಮ ಪರಲೋಕದ ತಂದೆಯೊಂದಿಗೆ ಒಡಂಬಡಿಕೆಯ ಸಂಬಂಧದಲ್ಲಿದ್ದೇವೆ ಮತ್ತು ನಾವು ಆತನ ಪ್ರೀತಿಯ ಪುತ್ರರು ಮತ್ತು ಪುತ್ರಿಯರು ಎಂದು ಅರ್ಥಮಾಡಿಕೊಳ್ಳುವ ರೀತಿಯ ಪ್ರೀತಿ ಇದು. ನಾವು ಇದನ್ನು ನಿಜವಾಗಿಯೂ ಅರ್ಥಮಾಡಿಕೊಂಡಾಗ, ದೇವರು ನಮ್ಮನ್ನು ಕಾಳಜಿ ವಹಿಸಿ ನಾವು ಯಾವುದನ್ನು ಎದುರಿಸುವಾಗಲೀ ಆತನು ಯಾವಾಗಲೂ ನಮ್ಮೊಂದಿಗಿರುತ್ತಾನೆ ಎಂದು ನಾವು ನಂಬಬಹುದು.
ಇಕ್ಕಟ್ಟಿನ ಸಮಯದಲ್ಲಿ, ದೇವರು ನಮ್ಮ ಮೇಲಿಟ್ಟಿರುವ ಪ್ರೀತಿ ಮತ್ತು ಕಾಳಜಿಯನ್ನು ಪ್ರಶ್ನಿಸುವಂತ ಬಲೆಗೆ ಬೀಳುವುದು ಸಹಜ . ಆತನು ನಮ್ಮನ್ನು ಕೈಬಿಟ್ಟಿದ್ದಾನೆ ಎಂದು ನಮಗೆ ಅನಿಸಬಹುದು. ಆದರೆ ಈ ರೀತಿಯ ಆಲೋಚನೆಗಳಿದ್ದರೆ ನಾವು ಆತನ ಪರಿಪೂರ್ಣ ಪ್ರೀತಿಯಲ್ಲಿ ಬೇರೂರಿಲ್ಲ ಎಂದರ್ಥ. ನನ್ನ ಜೀವನದಲ್ಲಿ ಏಕೆ ಹೀಗೆ ನಡೆಯುತ್ತಿದೆ ಎಂಬುದಂತೂ ನನಗೆ ತಿಳಿದಿಲ್ಲ, ಆದರೆ ದೇವರನ್ನು ಇದು ಆಶ್ಚರ್ಯಪಡಿಸಲಾರದು ಎಂಬುದು ನನಗೆ ತಿಳಿದಿದೆ. ಆತನು ನನ್ನೊಂದಿಗಿದ್ದಾನೆ ಮತ್ತು ಆತನು ನನ್ನನ್ನು ಎಂದಿಗೂ ಕೈಬಿಡುವುದಿಲ್ಲ" ಎಂದು ನಾವು ಹೇಳುವಾಗ, ನಾವು ನಮ್ಮ ತಂದೆಯ ಮೇಲಿನ ಪರಿಪೂರ್ಣ ಪ್ರೀತಿ ಮತ್ತು ನಂಬಿಕೆಯ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂಬುದಾಗಿರುತ್ತದೆ.
"ಇದಲ್ಲದೆ ನೀವು ಉಡುಪಿನ ವಿಷಯದಲ್ಲಿ ಚಿಂತೆಮಾಡುವದೇಕೆ? ಅಡವಿಯ ಹೂವುಗಳು ಬೆಳೆಯುವ ರೀತಿಯನ್ನು ಯೋಚಿಸಿ ತಿಳಿಯಿರಿ; ಅವು ದುಡಿಯುವದಿಲ್ಲ, ನೂಲುವದಿಲ್ಲ; ಆದಾಗ್ಯೂ ಈ ಹೂವುಗಳಲ್ಲಿ ಒಂದಕ್ಕಿರುವಷ್ಟು ಅಲಂಕಾರವು ಅರಸನಾದ ಸೊಲೊಮೋನನಿಗೆ ಸಹ ಅವನು ತನ್ನ ಸಕಲ ವೈಭವದಿಂದಿರುವಾಗಲೂ ಇರಲಿಲ್ಲವೆಂದು ನಿಮಗೆ ಹೇಳುತ್ತೇನೆ. ಎಲೈ ಅಲ್ಪವಿಶ್ವಾಸಿಗಳೇ, ಈ ಹೊತ್ತು ಇದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸುವನಲ್ಲವೇ. (ಮತ್ತಾಯ 6:28-30)
ಒಂದು ಚಿಕ್ಕ ಗುಬ್ಬಚ್ಚಿಯಿಂದ ಹಿಡಿದು ಹೊಲದ ಬದಿಯಲ್ಲಿ ಬೆಳೆಯುವ ಹೂವುಗಳವರೆಗೆ ತನ್ನ ಎಲ್ಲಾ ಸೃಷ್ಟಿಯನ್ನು ದೇವರು ಕಾಳಜಿವಹಿಸುವವನಾಗಿದ್ದಾನೆ ಎಂದು ಸತ್ಯವೇದ ನಮಗೆ ನೆನಪಿಸುತ್ತದೆ. ಮತ್ತು ಆತನುಇವುಗಳ ವಿಚಾರದಲ್ಲೇ ಅಷ್ಟು ಕಾಳಜಿ ವಹಿಸಿದರೆ, ಆತನ ಪ್ರೀತಿಯ ಮಕ್ಕಳಾದ ನಮಗಾಗಿ ಆತನು ಇನ್ನೆಷ್ಟರ ಮಟ್ಟಿಗೆ ಕಾಳಜಿ ವಹಿಸುತ್ತಾನೆ ಅಲ್ಲವೇ? ನಾವು ದೇವರ ಪ್ರೀತಿಯಲ್ಲಿ ನಂಬಿಕೆಇಟ್ಟು ಆತನು ನಮ್ಮ ಕುರಿತು ಕಾಳಜಿವಹಿಸುತ್ತಾನೆ ಎಂಬುದನ್ನು ಅರಿತುಕೊಂಡಾಗ, ಯಾವುದೇ ಬಿರುಗಾಳಿಯ ಮಧ್ಯದಲ್ಲಿಯೂ ನಾವು ಸಮಾಧಾನವನ್ನು ಹೊಂದಬಹುದು.
ದೇವರು ನಮಗೆ ನಾವು ಆತನ ಪರಿಪೂರ್ಣ ಪ್ರೀತಿಯನ್ನು ಅನುಭವಿಸಬಹುದಾದ ಆಶೀರ್ವಾದದ ಜೊತೆಗೆ, ನಮಗೆ ರೂಪಾಂತರಗೊಂಡ ನೂತನ ಮನಸ್ಸನ್ನು ಸಹ ವಾಗ್ದಾನ ಮಾಡಿದ್ದಾನೆ. ದೇವರ ಪ್ರೀತಿಗೆ ನಮ್ಮನ್ನು ಆಂತರ್ಯದಿಂದ ಪರಿವರ್ತಿಸಲೆಂದು ನಾವು ಅನುಮತಿಸುವಾಗ, ನಾವು ನವೀಕರಿಸಲ್ಪಟ್ಟ ಮತ್ತು ಶಿಸ್ತಿನ ಮನಸ್ಸನ್ನು ಹೊಂದಿಕೊಳ್ಳಬಹುದು. ಇದರರ್ಥ ನಾವು ನಮ್ಮ ಆಲೋಚನೆಗಳನ್ನು ಕಾಪಾಡಿಕೊಂಡು ಭಯ ಮತ್ತು ನಕಾರಾತ್ಮಕತೆಗಿಂತ ಸತ್ಯದ ಮೇಲೆನಮ್ಮ ದೃಷ್ಟಿಯನ್ನು ಕೇಂದ್ರೀಕರಿಸುವ ಆಯ್ಕೆಯನ್ನು ಮಾಡಿಕೊಳ್ಳಬಹುದು.
ಪರಿಪೂರ್ಣ ಪ್ರೀತಿಯು ಭಯವನ್ನು ಜಯಿಸಲು ಬೇಕಾದ ಪ್ರಮುಖ ಸಂಗತಿಯಾಗಿದೆ . ನಾವು ದೇವರ ಮೇಲಿನ ಪ್ರೀತಿಯನ್ನು ಅರ್ಥಮಾಡಿಕೊಂಡಾಗ ಮತ್ತು ಅದನ್ನು ನಂಬಿದಾಗ, ಯಾವುದೇ ಬಿರುಗಾಳಿಯ ನಡುವೆಯೂ ನಾವು ಸಮಾಧಾನವನ್ನು ಅನುಭವಿಸಬಹುದು. ಆದ್ದರಿಂದ ನಮ್ಮ ಹೃದಯ ಮತ್ತು ಮನಸ್ಸಿನಲ್ಲಿ ದೇವರ ಪರಿಪೂರ್ಣ ಪ್ರೀತಿಯನ್ನು ಬೆಳೆಸಿಕೊಳ್ಳಲು ನಾವು ಶ್ರಮಿಸೋಣ ಮತ್ತು ದೇವರು ನಮ್ಮನ್ನು ಆತ್ಮವಿಶ್ವಾಸ, ಧೈರ್ಯಶಾಲಿ ಮತ್ತು ನಿಷ್ಠಾವಂತ ಜನರನ್ನಾಗಿ ನಮ್ಮನ್ನು ಪರಿವರ್ತಿಸಲಿ.
Bible Reading: 1 Kings 3-4
ಪ್ರಾರ್ಥನೆಗಳು
ಪ್ರೀತಿಯ ತಂದೆಯೇ, ಭಯವನ್ನು ನನ್ನಿಂದ ಓಡಿಸಿಬಿಡುವ ನಿನ್ನ ಪರಿಪೂರ್ಣ ಪ್ರೀತಿಗಾಗಿ ಸ್ತೋತ್ರ . ಪ್ರಾರ್ಥನೆ, ಆರಾಧನೆ ಮತ್ತು ನಿನ್ನ ವಾಕ್ಯದ ಧ್ಯಾನದ ಮೂಲಕ ನನ್ನ ಹೃದಯ ಮತ್ತು ಮನಸ್ಸಿನಲ್ಲಿ ಈ ನಿನ್ನ ಪ್ರೀತಿಯನ್ನು ಬೆಳೆಸಿಕೊಳ್ಳಲು ಯೇಸುನಾಮದಲ್ಲಿ ನನಗೆ ಸಹಾಯ ಮಾಡು. ನಾನು ನಿನ್ನ ಪ್ರೀತಿಯ ಮಗುವಾಗಿದ್ದು ಪ್ರತಿಯೊಂದು ಸಂದರ್ಭದಲ್ಲೂ ನೀನು ನನ್ನೊಂದಿಗಿದ್ದೀಯ ಎಂದು ನಾನು ಯಾವಾಗಲೂ ಜ್ಞಾಪಿಸಿಕೊಂಡು ಇರುವಂತೆ ಯೇಸುನಾಮದಲ್ಲಿ ಸಹಾಯ ಮಾಡು ಆಮೆನ್.
Join our WhatsApp Channel

Most Read
● ಪುರುಷರು ಏಕೆ ಪತನಗೊಳ್ಳುವರು -6● ದರ್ಶನ ಹಾಗೂ ಸಾಕಾರದ ನಡುವೆ...
● ದುಷ್ಟ ಮಾದರಿಗಳಿಂದ ಹೊರಬರುವುದು.
● ಕರ್ತನ ಸೇವೆ ಮಾಡುವುದು ಎಂದರೇನು-I
● ನಿತ್ಯತ್ವದ ಮನಃಸ್ಥಿತಿಯಲ್ಲಿ ಬದುಕುವುದು.
● ದೇವರ ಪರಿಪೂರ್ಣ ಚಿತ್ತಕ್ಕಾಗಿ ಪ್ರಾರ್ಥಿಸಿರಿ
● ನಿಮ್ಮ ಆತ್ಮಗಳ ಪುನಃಸ್ಥಾಪನೆ
ಅನಿಸಿಕೆಗಳು