ಅನುದಿನದ ಮನ್ನಾ
ಮತ್ತೊಬ್ಬರ ಪಾತ್ರೆಯನ್ನು ತುಂಬಿಸುವುದನ್ನು ಬಿಟ್ಟು ಬಿಡಬೇಡಿರಿ.
Sunday, 4th of February 2024
2
1
425
Categories :
ಪ್ರಬುದ್ಧತೆ (Maturity)
ಬದಲಾವಣೆ (Change)
"ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು."(ಗಲಾತ್ಯದವರಿಗೆ 6:9)
ಇತರರಿಗೆ ಸಹಾಯ ಮಾಡಲು ಹೋಗಿ ಕರಾಳವಾದ ಅನುಭವವನ್ನು ಅನುಭವಿಸಿರುವ ಅನೇಕ ಜನರನ್ನು ನಾನು ನೋಡಿದ್ದೇನೆ. ತಮ್ಮ ಸಣ್ಣ ಮಕ್ಕಳೊಂದಿಗೆ ಹೋಗಿ ಅವರಿಗೆ ಸಹಾಯ ಮಾಡಿ ಅವರಿಗಾಗಿ ಅಡುಗೆ ಮಾಡಿ ಕೊಟ್ಟು ಅವರಿಗಾಗಿ ಪ್ರಾರ್ಥಿಸಿ, ಅವರಿಗಾಗಿ ಕೆಲಸ ಕೊಡಿಸುವಲ್ಲಿ ಬಹಳಷ್ಟು ಶ್ರಮ ಪಟ್ಟಿರುತ್ತಾರೆ. ಆದರೆ ಯಾರು ಉಪಕಾರ ಹೊಂದಿಕೊಂಡರೋ ಅವರೇ ಇವರಿಗೆ ಕ್ರಮೇಣ ತಿರುಗಿ ಬಿದ್ದಿರುತ್ತಾರೆ.
ನಿಸ್ಸಂಶಯವಾಗಿ, ಈ ಸಂಗತಿಯು ತುಂಬಾ ನೋವು ತರುವಂತದ್ದಾಗಿದೆ ಮತ್ತು ಕಹಿ ಭಾವವನ್ನು ಮೂಡಿಸಿ ಮತ್ಯಾರಿಗೂ ಸಹಾಯ ಮಾಡಲೇಬಾರದು ಎಂದು ನೆನಸಿ ಕೆಲವರಂತೂ ಪ್ರಮಾಣವೇ ಮಾಡಿ ಬಿಟ್ಟಿರುತ್ತಾರೆ. ಆದರೆ ಇದು ಲೋಕ ರೂಢಿಯಾಗಿ ಜಾಣತನದ ಮಾರ್ಗವೇ ಆದರೆ ಕ್ರಿಸ್ತನ ಮಾರ್ಗವಾಗಿರುವುದಿಲ್ಲ. ಇದನ್ನೇ ನಮ್ಮ ಶತ್ರುವಾದ ಸೈತಾನನು ನಿಶ್ಚಿತವಾಗಿ ನಮ್ಮಿಂದ ಎದುರು ನೋಡುವುದು.
"ನೀವಾದರೋ ನಿಮ್ಮ ವೈರಿಗಳನ್ನು ಪ್ರೀತಿಸಿ ಅವರಿಗೆ ಉಪಕಾರಮಾಡಿರಿ. ಧೈರ್ಯವನ್ನು ಬಿಡದೆ ಸಾಲಕೊಡಿರಿ; ಹೀಗೆ ಮಾಡಿದರೆ, ನಿಮಗೆ ಬಹಳ ಫಲ ಸಿಕ್ಕುವದು, ಮತ್ತು ನೀವು ಪರಾತ್ಪರನ ಮಕ್ಕಳಾಗುವಿರಿ. ಆತನಂತೂ ಉಪಕಾರ ನೆನಸದವರಿಗೂ ಕೆಟ್ಟವರಿಗೂ ಉಪಕಾರಿಯಾಗಿದ್ದಾನೆ."(ಲೂಕ 6:35)
ನಮ್ಮಲ್ಲಿ ಬಹಳಷ್ಟು ಜನರು ಇಂದು ನಾವು ಅವರಿಗೆ ಸಹಾಯ ಮಾಡಿದರೆ ಮುಂದೆ ಅವರಿಂದ ನಮಗೇನಾದರೂ ಪ್ರತಿಫಲ ಸಿಗಬಹುದು ಎಂದು ನಿರೀಕ್ಷಿಸಿಕೊಂಡೇ ಸಹಾಯ ಮಾಡುತ್ತಾರೆ. ಒಂದು ವೇಳೆ ಅವರು ನಿರೀಕ್ಷಿಸಿದಂತೆ ಅವರು ಹೊಂದದೆ ಹೋದರೆ,ಅವರು ತಮ್ಮನ್ನು ದುರುಪಯೋಗಪಡಿಸಿಕೊಂಡರು ಎಂದೇ ಭಾವಿಸುತ್ತಾರೆ. ಸತ್ಯವೇದವು ನಮಗೆ ನಾವು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಇತರಿಗೆ ಸಹಾಯ ಮಾಡಬೇಕು ಎಂದು ಹೇಳುತ್ತದೆ ಇನ್ನು ಹೆಚ್ಚಾಗಿ ಅದು ನಾವು ಯಾರಿಗೆ ಸಹಾಯ ಮಾಡಿದರೂ ಅದು ವ್ಯರ್ಥವಾಗಿ ಹೋಗುವುದಿಲ್ಲ ಅದಕ್ಕೆ ಖಂಡಿತವಾಗಿಯೂ ಕರ್ತನಿಂದ ಪ್ರತಿಫಲ ಸಿಕ್ಕೇ ಸಿಗುತ್ತದೆ ಮತ್ತು ನಾವು ಪರಾತ್ಪರನ ಮಗನು-ಮಗಳು ಎಂದು ಕರೆಯಲ್ಪಡುವವರಾಗುತ್ತೇವೆ ಎಂದು ಹೇಳುತ್ತದೆ.
ಸತ್ಯವೇದವು "..... ಒಬ್ಬನು ಸಭೆಯ ಸೇವೆ ಮಾಡುವವನಾದರೆ ದೇವರಿಂದ ಶಕ್ತಿಯನ್ನು ಹೊಂದಿದವನಾಗಿ ಮಾಡಲಿ..."ಎಂದು ಹೇಳುತ್ತದೆ.(1 ಪೇತ್ರನು 4:11.
ಹಾಗಾಗಿ ಮತ್ತೊಬ್ಬರ ಪಾತ್ರೆಯನ್ನು ತುಂಬಿಸುವುದನ್ನು ಬಿಟ್ಟುಬಿಡಬೇಡಿರಿ ನೀವು ಹೀಗೆ ಮಾಡುವಾಗ ಕರ್ತನು ನಿಮಗೆ ಸಾಮರ್ಥ್ಯವನ್ನು, ಬಲವನ್ನು ಪೂರೈಸಿ ನಿಮ್ಮನ್ನು ಹೆಚ್ಚಿಸಿ ನಿಮ್ಮ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿ ನಿಮ್ಮ ಸುತ್ತಲಿನ ಸಾವಿರಾರು ಜನಕ್ಕೆ ನೀವು ಆಶೀರ್ವಾದ ಕರವಾಗಿರುವಂತೆ ಮಾಡುತ್ತಾನೆ. ಇದೇ ಆತ್ಮಿಕ ಅಭಿವೃದ್ಧಿಯ ರಹಸ್ಯವಾಗಿದೆ.
ಇಬ್ರಿಯ 6:10ರ ವಾಕ್ಯವು ಹೀಗೆ ಹೇಳುತ್ತದೆ. "ನೀವು ದೇವಜನರಿಗೆ ಉಪಚಾರ ಮಾಡಿದಿರಿ, ಇನ್ನೂ ಮಾಡುತ್ತಾ ಇದ್ದೀರಿ. ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ." ಎಂದು.
ಅತ್ಯಾಸಕ್ತರಾಗಿರ್ರಿ, ನೀವು ಪ್ರೀತಿಯಿಂದ ಮಾಡಿದ ಕಾರ್ಯಗಳಿಗೂ,ತೋರಿಸಿದ ಕರುಣೆಗೂ ಕರ್ತನೇ ನಿಮಗೆ ಪ್ರತಿಫಲವನ್ನು ಅನುಗ್ರಹಿಸುವವನಾಗಿದ್ದಾನೆ ಎಂದು ತಿಳಿದವರಾಗಿರ್ರಿ.
ಪಾತ್ರೆಗಳೆಲ್ಲಾ ತುಂಬಿದ ಮೇಲೆ ಆ ವಿಧವೆಯು ತನ್ನ ಮಗನಿಗೆ ಮತ್ತೊಂದು ಪಾತ್ರೆಯನ್ನು ತೆಗೆದುಕೊಂಡು ಬಾ ಎನ್ನಲು ಆ ಮಗನು ಪಾತ್ರೆಗಳು ತೀರಿದವೆಂದು ಉತ್ತರ ಕೊಟ್ಟನು. ಕೂಡಲೇ ಎಣ್ಣೆ ಉಕ್ಕುವುದು ನಿಂತು ಹೋಯಿತು.(2 ಅರಸು 4:6)
ಆ ವಿಧವೆಯು ಪಾತ್ರೆ ತುಂಬಿಸುವುದನ್ನು ನಿಲ್ಲಿಸಿದ ಮೇಲೆಯೇ ಎಣ್ಣೆ ಉಕ್ಕುವುದು ನಿಂತು ಹೋಗಿತ್ತು. ನಾನು ನಿಮಗೆ ಒಂದು ಪ್ರವಾದನೆಯನ್ನು ಹೇಳಲು ಇಚ್ಚಿಸುತ್ತೇನೆ....
ಬೇರೆಯವರು ನಿಮ್ಮನ್ನು ಪ್ರಶಂಸೆಸದಿದ್ದರೂ, ನೀವು ಹೇಳುವುದನ್ನು ಗೌರವಿಸದಿದ್ದರೂ ಪಾತ್ರೆ ತುಂಬಿಸುತ್ತಲೇ ಇರಿ
ಅವರು ನಿಮ್ಮನ್ನು ತಿರಸ್ಕರಿಸಿದರೂ, ನೋಯಿಸಿದರೂ ನಿಮ್ಮನ್ನು ಅರ್ಥಮಾಡಿಕೊಳ್ಳದಿದ್ದರೂ ಪಾತ್ರೆ ತುಂಬಿಸುತ್ತಲೇ ಇರಿ.
- ಸೇವೆ ಮಾಡುವುದನ್ನು ನಿಲ್ಲಿಸಬೇಡಿರಿ.
- ಕೊಡುವುದನ್ನು ನಿಲ್ಲಿಸಬೇಡಿರಿ.
- ಸಭೆಗೆ ಹೋಗುವುದನ್ನು ನಿಲ್ಲಿಸಬೇಡಿರಿ.
- ಕ್ಷಮಿಸುವುದನ್ನು, ಕಾಳಜಿ ವಹಿಸುವುದನ್ನು ನಿಲ್ಲಿಸಬೇಡಿರಿ.
ತುಂಬಿಸುತ್ತಲೇ ಇರಿ.ಆಗ ಎಣ್ಣೆ ಉಕ್ಕುತ್ತಲೇ ಇರುತ್ತದೆ.
ಪ್ರಾರ್ಥನೆಗಳು
ತಂದೆಯೇ, ನನ್ನ ಸುತ್ತಲಿನ ಜನರಿಗೆ ನಾನು ಆಶೀರ್ವಾದ ಕರವಾಗಿಯೇ ಇರುವಂತೆ ನಿಮ್ಮ ಕೃಪೆಯನ್ನು ನನಗೆ ಅನುಗ್ರಹಿಸಿ. ನೀನು ನೀತಿವಂತನು ನಂಬಿಗಸ್ತನು ಆಗಿದ್ದೀಯಾ. ನಿನ್ನ ಕಣ್ಣಿಗೆ ಯಾವುದೂ ಕೂಡ ಮರೆಯಾಗಿಲ್ಲ. ನನ್ನನ್ನು ಇನ್ನೂ ಹೆಚ್ಚು ಹೆಚ್ಚಾಗಿ ಅನುಗ್ರಹಿಸು ಆಗ ನಾನು ಹೆಚ್ಚು ಹೆಚ್ಚಾಗಿ ಕಾರ್ಯಮಾಡಲು ಸಾಧ್ಯವಾಗುತ್ತದೆ. ಎಲ್ಲಾ ಮಹಿಮೆಗಳು ಯೇಸು ನಾಮದಲ್ಲಿ ನಿನಗೊಬ್ಬನಿಗೇ ಸಲ್ಲಲಿ. ಆಮೆನ್.
Join our WhatsApp Channel
Most Read
● ದಿನ 01:40 ದಿನಗಳ ಉಪವಾಸ ಹಾಗೂ ಪ್ರಾರ್ಥನೆ● ನಂಬಿಕೆಯ ಮೂಲಕ ಕೃಪೆಯನ್ನು ಪಡೆದುಕೊಳ್ಳುವುದು
● ದಿನ 34:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 04:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಮನುಷ್ಯರಿಂದ ಬರುವ ಹೊಗಳಿಕೆಗಿಂತಲೂ ದೇವರು ಕೊಡುವ ಪ್ರತಿಫಲವನ್ನು ಎದುರು ನೋಡುವುದು.
● ದೇವರ ವಾಕ್ಯವನ್ನು ಹೊಂದಿಕೊಳ್ಳಿರಿ.
● ಪ್ರವಾದನಾ ಪೂರಕ ಮಧ್ಯಸ್ಥಿಕೆ ಪ್ರಾರ್ಥನೆ ಎಂದರೇನು?
ಅನಿಸಿಕೆಗಳು