ಅನುದಿನದ ಮನ್ನಾ
ಓಟವನ್ನು ಗೆಲ್ಲಲು ಇರುವ ದೀರ್ಘ ತಾಳ್ಮೆ ಮತ್ತು ದೀರ್ಘ ಪ್ರಯತ್ನ ಎಂಬ ಎರಡು ಪದಗಳು.
Thursday, 8th of February 2024
3
2
365
Categories :
ಆಧ್ಯಾತ್ಮಿಕ ಓಟ (Spiritual Race)
"ಆದಕಾರಣ ಇಷ್ಟುಮಂದಿ ಸಾಕ್ಷಿಯವರು ಮೇಘದೋಪಾದಿಯಲ್ಲಿ ನಮ್ಮ ಸುತ್ತಲು ಇರುವದರಿಂದ ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪವನ್ನೂ ನಾವು ಸಹ ತೆಗೆದಿಟ್ಟು ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ."(ಇಬ್ರಿಯರಿಗೆ 12:1-2)
ನಮ್ಮ ಜೀವನದ ಓಟವು 100 ಮೀಟರ್ ಓಟಕ್ಕೆ ಮಾತ್ರ ಸೀಮಿತವಾದಂತ ಓಟವಲ್ಲ. ಇದು ಮ್ಯಾರಥಾನ್ ಹಾಗೆ ಮ್ಯಾರಥಾನ್ ಓಟವನ್ನು ಓಡಲು ನಿಮಗೆ ಸುದೀರ್ಘ ಪ್ರಯತ್ನ ಬೇಕು. ಸುದೀರ್ಘ ಪ್ರಯತ್ನ ಎಂಬುದು ತಾಳ್ಮೆ ಮತ್ತು ಅವಿರತ ಪ್ರಯತ್ನದ ಸಮಿಶ್ರಣವಾಗಿದೆ.
ನಮ್ಮ ಜೀವನದಲ್ಲಿ ಕೆಲವೊಮ್ಮೆ ಯಾವ ಪರಿಸ್ಥಿತಿಯು ನಮ್ಮ ಪರವಾಗಿ ಕೆಲಸ ಮಾಡುತ್ತಿಲ್ಲ ಎಂಬ ಸಮಯ ಬರುತ್ತದೆ. ಆಗ ನಾವು ತಾಳ್ಮೆಯಿಂದ ದೇವರ ವಾಗ್ದಾನಗಳ ಮೇಲೆ ಭರವಸೆ ಇಟ್ಟು ಸಹಿಸಿಕೊಂಡು ದೇವರು ನಮ್ಮನ್ನು ಕರೆದ ಕರೆಯನ್ನು ಬಿಟ್ಟುಬಿಡದೆ ನಮ್ಮ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಬೇಕು.
ಆದುದರಿಂದಲೇ, ಆತ್ಮಹತ್ಯೆ ಎಂಬ ಆಯ್ಕೆ ದೇವರ ಮಗುವಿಗೆ ಇರುವುದಿಲ್ಲ. ಖಿನ್ನತೆ ಎಂಬ ಆಯ್ಕೆ ದೇವರ ಮಗುವಿಗೆ ಇರುವುದಿಲ್ಲ. ನಿಮಗೆ ಕಷ್ಟಗಳುಂಟು ಸವಾಲುಗಳುಂಟು, ನಿರಾಶೆಗಳುಂಟು, ನಂಬಿಕೆ ದ್ರೋಹಗಳಾಗುವುದುಂಟು ಆದರೆ ನಿಮಗಾಗಿ ಒಂದು ಓಟವು ನೇಮಿಸಿ ಬಿಟ್ಟಾಗಿದೆ ನೀವು ಆ ಓಟವನ್ನು ದೀರ್ಘ ತಾಳ್ಮೆಯಿಂದಲೂ ದೀರ್ಘ ಛಲದಿಂದಲೂ ಸ್ಥಿರಚಿತ್ತದಿಂದಲೂ ಓಡಲೇಬೇಕು.
ಅರಸನಾದ ಹಿಜ್ಕಿಯನು ನೀತಿವಂತನಾದ ಅರಸನಾಗಿದ್ದು ಹೃದಯಪೂರ್ವಕವಾಗಿ ಕರ್ತನಿಗೆ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದನು. ಅವನು ಇಸ್ರಾಯೇಲ್, ಯಹೂದ, ಎಪ್ರಾಯಿಮ್ ಮತ್ತು ಮನಸ್ಸೆಯ ಎಲ್ಲಾ ಕುಲದ ಜನರಿಗೆ ಪತ್ರ ಬರೆದು ಪಸ್ಕ ಹಬ್ಬವನ್ನು ಆಚರಿಸಲು ಕೂಡಿ ಬರಬೇಕೆಂದು ಪ್ರಕಟಿಸಿದನು.
ಆ ಪತ್ರದ ಒಕ್ಕಣೆಯ ಸಂದೇಶ ಹೀಗಿತ್ತು..
"...ಇಸ್ರಾಯೇಲ್ಯರೇ, ಅಬ್ರಹಾಮ್ ಇಸಾಕ್ ಇಸ್ರಾಯೇಲರ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಿರಿ. ಆಗ ಆತನೂ ನಿಮ್ಮಲ್ಲಿ ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸಿಕೊಂಡು ಉಳಿದವರ ಕಡೆಗೆ ತಿರುಗಿಕೊಳ್ಳುವನು."(2 ಪೂರ್ವಕಾಲವೃತ್ತಾಂತ 30:6) ಎಂಬುದೇ.
ಆದರೆ.
"ದೂತರು ಎಫ್ರಾಯೀಮ್ ಮನಸ್ಸೆ ಜೆಬುಲೂನ್ ಪ್ರಾಂತಗಳಲ್ಲಿ ಪಟ್ಟಣದಿಂದ ಪಟ್ಟಣಕ್ಕೆ ಹೋಗುತ್ತಿರಲು ಜನರು ಅವರನ್ನು ಕಂಡು ನಕ್ಕು ಗೇಲಿಮಾಡಿದರು."(2 ಪೂರ್ವಕಾಲವೃತ್ತಾಂತ 30:10)
ನಕ್ಕು ಗೇಲಿ ಮಾಡುವ ಜನರು ಆಗಲೂ ಇದ್ದರು. ಈಗಲೂ ಇದ್ದಾರೆ, ಎಲ್ಲಾ ಯುಗದಲ್ಲೂ ಇದ್ದೇ ಇರುತ್ತಾರೆ. ನೋಹನು ನಾವೇ ಕಟ್ಟುತ್ತಿದ್ದಾಗ ಜನರು ಅವನನ್ನು ಗೇಲಿ ಮಾಡಿದರು. ಕರ್ತನಾದ ಯೇಸು ಕ್ರಿಸ್ತನು ಸಹ ಗೇಲಿಗೆ ಗುರಿಯಾದನು. ಓಟದಲ್ಲಿರುವವರೆಲ್ಲರೂ ಅಪಹಾಸ್ಯಕ್ಕೂ ಗೇಲಿಗೂ ಗುರಿಯಾಗುವರು. ಆದರೆ ಒಳ್ಳೆಯ ವಿಚಾರವೇನೆಂದರೆ ಅವರೆಲ್ಲರೂ ಅಪಹಾಸ್ಯ ಮಾಡುವವರನ್ನು ಬದಿಗೊತ್ತಿ ತಮ್ಮ ಓಟವನ್ನು ಓಡುತ್ತಲೇ ಇರುತ್ತಾರೆ. ಗೇಲಿ ಮಾಡುವವರು ಗೇಲಿ ಮಾಡಿಕೊಂಡು ಕುಳಿತಲ್ಲೇ ಕುಳಿತಿರುತ್ತಾರೆ. ಓಡುವವರು ತಮ್ಮ ಓಟವನ್ನು ಓಡುತ್ತಲೇ ಇರುತ್ತಾರೆ.
ಆದುದರಿಂದ ದೇವರು ನಿಮ್ಮನ್ನು ಯಾವುದಕ್ಕಾಗಿ ಕರೆದಿದ್ದಾನೋ ಅದನ್ನು ಮಾಡುವುದನ್ನು ಬಿಟ್ಟುಬಿಡಬೇಡಿರಿ. ನೀವು ದೇವರು ಯಾವುದಕ್ಕಾಗಿ ನಿಮ್ಮನ್ನು ಕರೆದಿದ್ದಾನೋ ಅದೇ ನೀವಾಗಿರ್ರಿ.
ಸತ್ಯವೇದವು ಗಲಾತ್ಯ 6:7ರಲ್ಲಿ ಹೀಗೆ ಹೇಳುತ್ತದೆ.. "ಮೋಸಹೋಗಬೇಡಿರಿ; ದೇವರು ಅಪಹಾಸ್ಯ ಸಹಿಸುವವನಲ್ಲ...."
ನಮ್ಮನ್ನು ಕರೆದ ಕಾರ್ಯವನ್ನು ನಾವು ಮಾಡುತ್ತಲೇ ಇದ್ದರೆ ಕರ್ತನು ಯಾರನ್ನೆಲ್ಲಾ ಆರಿಸಿಕೊಂಡಿದ್ದಾನೋ ಅವರೆಲ್ಲರೂ ಖಂಡಿತವಾಗಿಯೂ ಕರ್ತನ ಕಡೆಗೆ ತಿರುಗಿಕೊಳ್ಳುತ್ತಾರೆ. ನೀವಂತೂ ದೇವರು ನಿಮಗಾಗಿ ನೇಮಿಸಿರುವ ನಿಲ್ದಾಣವನ್ನು ತಲುಪೇ ತಲುಪುತ್ತೀರಿ.
"ಕೆಲವು ಮಂದಿ ಆಶೇರ್ಯರೂ ಮನಸ್ಸೆಯವರೂ ಜೆಬುಲೂನ್ಯರೂ ಮಾತ್ರ ತಮ್ಮನ್ನು ತಗ್ಗಿಸಿಕೊಂಡು ಯೆರೂಸಲೇವಿುಗೆ ಬಂದರು. 12ಯೆಹೂದ್ಯರಾದರೋ ದೇವರ ಕೃಪಾಹಸ್ತ ಪ್ರೇರಣೆಯಿಂದ ಏಕಮನಸ್ಸುಳ್ಳವರಾಗಿ ಯೆಹೋವನ ಧರ್ಮಶಾಸ್ತ್ರನುಸಾರ ಅರಸನಿಂದಲೂ ಪ್ರಭುಗಳಿಂದಲೂ ಹೊರಟ ಆಜ್ಞೆಯನ್ನು ಕೈಕೊಂಡರು."(2 ಪೂರ್ವಕಾಲವೃತ್ತಾಂತ 30:11-12 )
ನಿಮ್ಮ ಕುಟುಂಬದ ಎಲ್ಲಾ ಸದಸ್ಯರು ರಕ್ಷಣೆಯನ್ನು ಹೊಂದೇ ಹೊಂದುತ್ತೀರಿ ಎಂದು ನಾನು ಯೇಸು ನಾಮದಲ್ಲಿ ಅಜ್ಞಾಪಿಸಿ ಘೋಷಿಸುತ್ತೇನೆ. ನೀವು ಸಮಾಧಾನದಲ್ಲಿ ನಿವಾಸಿಸುವಿರಿ ಆದ್ದರಿಂದ ಧೈರ್ಯಗೆಡಬೇಡಿರಿ, ನಿಮ್ಮ ಪ್ರಯತ್ನವನ್ನು ಬಿಟ್ಟುಬಿಡಬೇಡಿರಿ.ನಿಮಗಾಗಿ ನೇಮಿಸಲ್ಪಟ್ಟ ಓಟವನ್ನು ಓಡುವುದನ್ನು ನಿಲ್ಲಿಸಬೇಡಿರಿ.
ಪ್ರಾರ್ಥನೆಗಳು
1. ತಂದೆಯೇ, ಯೇಸು ನಾಮದಲ್ಲಿ ನಾನು ಬಿದ್ದು ಹೋಗುವುದಿಲ್ಲ, ಬೇಸರಗೊಳ್ಳುವುದಿಲ್ಲ, ಹಿಂಜಾರಿ ಹೋಗುವುದಿಲ್ಲ.
2. ತಂದೆಯೇ, ನನ್ನ ಮಾರ್ಗದಲ್ಲಿರುವ ಎಲ್ಲಾ ಸವಾಲುಗಳನ್ನು ಎಲ್ಲಾ ಅಭ್ಯಂತರಗಳು ಯೇಸು ನಾಮದಲ್ಲಿ ನನ್ನ ವಿಜಯದ -ನನ್ನ ಅದ್ಭುತವಾದ ಬಿಡುಗಡೆಯ ಮೆಟ್ಟಿಲುಗಳಾಗಿ ಮಾರ್ಪಡಲಿ.
3. ನಾನು ಸಾಯುವುದಿಲ್ಲ,ನನ್ನ ಆಯುಷ್ಕಾಲದ ಪೂರ್ಣ ಭಾಗವನ್ನು ಈ ಭೂಮಿಯ ಮೇಲೆ ಜೀವಿಸಿ ಜೀವಿತರ ದೇಶದಲ್ಲಿ ಕ್ರಿಸ್ತನಿಗಾಗಿ ಯೇಸು ನಾಮದಲ್ಲಿ ಸಾಕ್ಷಿಯಾಗಿದ್ದು ನನಗೆ ನೇಮಕವಾದ ಕರೆಯನ್ನು ನಾನು ಪೂರೈಸುತ್ತೇನೆ. ಆಮೆನ್.
Join our WhatsApp Channel
Most Read
● ಪ್ರವಾದನಾ ಪೂರಕ ಮಧ್ಯಸ್ಥಿಕೆ ಪ್ರಾರ್ಥನೆ ಎಂದರೇನು?● ಐಕ್ಯತೆ ಮತ್ತು ವಿಧೇಯತೆಯ ಒಂದು ದರ್ಶನ
● ನೀವು ಎಷ್ಟು ಜೋರಾಗಿ ಮಾತಾಡ ಬಲ್ಲಿರಿ?
● ಇನ್ನೂ ಯಾವುದಕ್ಕಾಗಿ ಕಾಯುತ್ತಿದ್ದೀರಿ?
● ರಹಸ್ಯವಾದ ಆತ್ಮೀಕ ದ್ವಾರಗಳು
● ದಿನ 36:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನಮ್ಮ ಆಯ್ಕೆಯ ಪರಿಣಾಮಗಳು
ಅನಿಸಿಕೆಗಳು