ಅನುದಿನದ ಮನ್ನಾ
ದೇವರು ನಿಮ್ಮನ್ನು ಉಪಯೋಗಿಸಲು ಬಯಸುತ್ತಾನೆ.
Sunday, 3rd of March 2024
0
0
302
Categories :
ಭಾವನೆ (Emotion)
" ನಾನು ನಿನಗೆ ಆಜ್ಞಾಪಿಸಿದ್ದೇನಲ್ಲಾ; ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ ಎಂದು ಹೇಳಿದನು."(ಯೆಹೋಶುವ 1:9)
ನಾವು ದೇವರನ್ನು ವಿಶ್ವಾಸಿಸಿ ನಡೆಯಬೇಕೆಂಬುದು ಕೇವಲ ಒಂದು ಆಶಯವಲ್ಲ. ದೇವರನ್ನು ವಿಶ್ವಾಸಿಸುವುದು ಎಂದರೆ ಆತನು ನಮ್ಮ ಮೂಲಕ ತನ್ನ ಕಾರ್ಯ ಸಾಧಿಸುವ ಸಾಮರ್ಥ್ಯ ಉಳ್ಳವನು ಎಂಬುದನ್ನು ನಾವು ಪ್ರಾಯೋಗಿಕವಾಗಿ ನಂಬಬೇಕಾದಂತದ್ದಾಗಿದೆ.ಅದಕ್ಕಾಗಿ ದೇವರು ತನ್ನ ಆತ್ಮನ ಮೂಲಕ ನಮ್ಮನ್ನು ಬಲಪಡಿಸುವವನಾಗಿದ್ದಾನೆ. ಆತನು ತನ್ನ ವಾಕ್ಯಗಳಿಂದ ನಮ್ಮನ್ನು ಸಜ್ಜುಗೊಳಿಸುವವನಾಗಿದ್ದಾನೆ. ಆತನು ಅದಕ್ಕಾಗಿ ಈ ದಿನವನ್ನು ನಮಗೆ ಕೊಟ್ಟಿದ್ದಾನೆ. ಆತನು ನಮಗಾಗಿ ತೆರೆದಿಟ್ಟಿರುವಂತಹ ಬಾಗಿಲುಗಳನ್ನು ನಾವು ಯೋಚಿಸಲು ಸಹ ಸಾಧ್ಯವಿಲ್ಲ. ಇದೆಲ್ಲವನ್ನು ಯಾವುದೇ ಉದ್ದೇಶವಿಲ್ಲದೆ ನಮಗೆ ಆತನು ಸುಮ್ಮನೆ ಕೊಟ್ಟಿದ್ದಾನೆ ಎಂದು ಭಾವಿಸುವಿರಾ? ಸ್ವಲ್ಪ ಯೋಚಿಸಿ ನೋಡಿರಿ.
ದೇವರು ನಿಮ್ಮನ್ನು ಆತನ ಮಹಿಮೆಗಾಗಿ ಬಳಸಿಕೊಳ್ಳದೆ ಹೋಗಿದ್ದರೆ, ಆತನು ಈ ಮಾರ್ಗಗಳನ್ನೆಲ್ಲಾ ಯಾತಕ್ಕಾಗಿ ನಿಮಗೆ ಮಾಡಬೇಕಿತ್ತು? ಅಲ್ಲವೇ?
"ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಶಕ್ತಿಯ ಪ್ರಕಾರ ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದ ದೇವರ... "(ಎಫೆಸದವರಿಗೆ 3:20).
ನಮಗೆ ಆಗಾಗ ನಾವು ನಮ್ಮ ಸುತ್ತಲಿರುವ ಎಲ್ಲಾ ಜನರಿಗಿಂತ ಮನಮುರಿದವರೇನೋ? ಕೈ ಬಿಡಲ್ಪಟ್ಟವರೇನೋ? ಎಂದು ಅನಿಸುತ್ತಿರುತ್ತದೆ. ನಮಗಿಂತಲೂ ಇತರರು ಆ ಕೆಲಸಕ್ಕೆ ಹೆಚ್ಚು ಯೋಗ್ಯರೇನೋ ಎಂದೆಲ್ಲ ಅನ್ನಿಸುತ್ತದೆ. ಈ ಆಲೋಚನೆಗಳು ನಮ್ಮನ್ನು ಮತ್ತೆ ಕಪ್ಪೆಚಿಪ್ಪಿನಲ್ಲಿ ಬಚ್ಚಿಟ್ಟುಕೊಳ್ಳುವಂತೆ ಮಾಡುತ್ತದೆ. ಆದರೂ ನೀವು ನಿಜವಾಗಿ ದೇವರ ವಾಕ್ಯವನ್ನು ಗಮನವಿಟ್ಟು ನೋಡಿದರೆ ದೇವರು ಯಾವಾಗಲೂ ಮನಮುರಿದವರನ್ನೇ ಯೋಗ್ಯತೆ ಇಲ್ಲದವರನ್ನೇ ತನ್ನ ಕಾರ್ಯಗಳಿಗಾಗಿ ಉಪಯೋಗಿಸುವುದನ್ನು ಕಾಣುವಿರಿ. ದೇವರು ಎಂದಿಗೂ ನೀವು ನಿಮ್ಮ ಜೀವಿತದಲ್ಲಿ ಪರಿಪೂರ್ಣರಾಗಲಿ ಆಮೇಲೆ ಉಪಯೋಗಿಸೋಣ ಎಂದು ಕಾಯುವವನಲ್ಲ! ಆತನು ನಿಮ್ಮನ್ನು ಈಗಲೇ ಇಲ್ಲಿಯೇ ಉಪಯೋಗಿಸಲು ಬಯಸುತ್ತಾನೆ.
ಆತನು ನಮ್ಮೆಲ್ಲರೊಳಗೂ ಆತನ ವರಗಳು ಮತ್ತು ತಲಾಂತುಗಳನ್ನು ಹುದುಗಿಸಿಟ್ಟಿದ್ದಾನೆ ಮತ್ತು ನಂಬಿಕೆಯಿಂದ ನಾವು ಹೆಜ್ಜೆ ಇಟ್ಟು ಸಿಗುವಂತ ಎಲ್ಲಾ ಅವಕಾಶಗಳಲ್ಲೂ ಅದನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳುವ ಮಾರ್ಗವನ್ನು ಸಹ ನಮಗೆ ಅನುಗ್ರಹಿಸಿದ್ದಾನೆ.
"ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು."(ಜ್ಞಾನೋಕ್ತಿಗಳು 3:5-6)
ನಿಮ್ಮ ಬಳಿ ಎಷ್ಟೆಲ್ಲಾ ವರಗಳು ತಲಾಂತಗಳು ಇವೆ ಎಂಬುದು ಇಲ್ಲಿ ಮುಖ್ಯ ವಿಷಯವಲ್ಲ ಆದರೆ ನಿಮಗೆ ಕೊಟ್ಟಿರುವಂತಹದರಲ್ಲಿ ನೀವು ಎಷ್ಟು ಬಳಸಿಕೊಂಡಿದ್ದೀರಿ ಎಂಬುದೇ ಇಲ್ಲಿ ಮುಖ್ಯ ವಿಷಯವಾಗಿದೆ. ನೀವು ದೇವರು ನಿಮಗೆ ಈಗಾಗಲೇ ಕೊಟ್ಟಿರುವ ವರಗಳನ್ನು- ತಲಾಂತುಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡಿದ್ದೀರಾ?
ಪ್ರಾರ್ಥನೆಗಳು
ಕರ್ತನೇ, ನನ್ನನ್ನೇ ನಾನು ನಿನಗೆ ಸಮರ್ಪಿಸಿಕೊಳ್ಳುತ್ತೇನೆ. ಕರ್ತನೇ, ನನ್ನ ಕೈಗಳನ್ನು ಸ್ವೀಕರಿಸು. ನನ್ನ ಕಾಲುಗಳನ್ನು ಸ್ವೀಕರಿಸು. ನನ್ನ ಹೃದಯವನ್ನು ಮುಟ್ಟು ಸ್ವಾಮಿ. ನನ್ನ ಮೂಲಕ ಮಾತಾಡು ನಿನ್ನ ಮಹಿಮೆಗಾಗಿ ಯೇಸು ನಾಮದಲ್ಲಿ ನನ್ನನ್ನು ಉಪಯೋಗಿಸು ಆಮೆನ್
Join our WhatsApp Channel
Most Read
● ಎರಡು ಸಾರಿ ಸಾಯಬೇಡಿರಿ● ಸಿಟ್ಟಿನ ಬಲೆಯಿಂದ ದೂರ ಉಳಿಯುವುದು
● ಚಿಕ್ಕ ಸಂಗತಿಗಳೂ ಸಹ ಮಹತ್ತರ ಉದ್ದೇಶಗಳನ್ನು ಪೂರೈಸಬಲ್ಲವು.
● ಪರಲೋಕದ ವಾಗ್ದಾನ
● ದಿನ 03:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ತುರ್ತು ಪ್ರಾರ್ಥನೆ.
● ದಿನ 15:40 ದಿನಗಳ ಉಪವಾಸ ಮತ್ತು ಪಾರ್ಥನೆ
ಅನಿಸಿಕೆಗಳು