ಅನುದಿನದ ಮನ್ನಾ
ಪ್ರಾರ್ಥನಾ ಜೀವಿತ ಜೀವಿಸಲು ಕೆಲವು ಪ್ರಾಯೋಗಿಕ ಸಲಹೆಗಳು.
Thursday, 14th of March 2024
2
2
441
Categories :
ಪ್ರಾರ್ಥನೆ (prayer)
ಪ್ರಾರ್ಥನೆಯಲ್ಲಿ ಸಮಯ ಕಳೆಯುವಂತದ್ದು ಎಂದಿಗೂ ಸಮಯ ವ್ಯರ್ಥವಲ್ಲ ಬದಲಾಗಿ ಅದು ಸಮಯ ಸದ್ವಿನಿಯೋಗವಾಗಿದೆ. ಪ್ರಾರ್ಥನೆ ಎಂಬುದು ನಾವು ಪ್ರತಿದಿನ ಹೇಗೆ ತಿನ್ನುತ್ತೇವೋ? ಹೇಗೆ ಕುಡಿಯುತ್ತೇವೋ ಅಷ್ಟೇ ನಿಯಮಿತವಾಗಿ ಮಾಡಬೇಕಾದ ಕಾರ್ಯವಾಗಿದೆ. ಅದು ನಿಮ್ಮ ದೈನಂದಿನ ಜೀವಿತದಲ್ಲಿ ಕಂಡುಕೊಳ್ಳಬಹುದಾದ ಕಡೆಯ ಆಯ್ಕೆಯಾಗಿರಬಾರದು. ದೇವರ ರಾಜ್ಯದಲ್ಲಿ ಆತ್ಮಿಕವಾಗಿ ಬೆಳೆಯಲು ಪ್ರಾರ್ಥನೆ ಎಂಬುದೇ ಪ್ರಮುಖ ಕೀಲಿಕೈಯಾಗಿದೆ.
ಆದರೂ ಅನೇಕರು ತಮ್ಮ ಅವಿಶ್ರಾಂತ ದುಡಿಮೆಯಿಂದ ಕುಟುಂಬದ ಜವಾಬ್ದಾರಿಗಳಿಂದ ಮತ್ತು ಇತರೆ ಕಾರಣಗಳಿಂದಾಗಿ ಪ್ರಾರ್ಥನೆಗೆ ಸಮಯವನ್ನು ಮಾಡಿಕೊಳ್ಳಲು ಬಹಳ ಕಷ್ಟ ಪಡುತ್ತಾರೆ. ಇದು ನಿಜಕ್ಕೂ ಹತಾಶೆ ಮೂಡಿಸುವ ವಿಷಯವೆಂಬುದನ್ನು ನಾನು ತಿಳಿದಿದ್ದೇನೆ. ಮತ್ತೂ ಕೆಲವರಿಗೆ ಬಹಳಷ್ಟು ಸಮಯವಿರುತ್ತದೆ ಆದರೂ ಅವರಿಗೆ ಪ್ರಾರ್ಥನೆಗೆ ಮಾತ್ರಸಮಯ ಮೀಸಲಿಡಲು ಸಾಧ್ಯವಾಗುವುದಿಲ್ಲ. ಇನ್ನೂ ಕೆಲವರಿಗೆ ಪ್ರಾರ್ಥನೆ ಮಾಡಬೇಕು ಎಂದೇ ಎನಿಸುವುದಿಲ್ಲ.
ನಿಮ್ಮ ವೈಯಕ್ತಿಕ ಪ್ರಾರ್ಥನಾ ಜೀವಿತವನ್ನು ಉಜ್ಜೀವಿಸಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ.
#1.ಮಲಗಲು ಮತ್ತು ಏಳಲು ದಿನದಲಿ ನಿರ್ದಿಷ್ಟ ಸಮಯವನ್ನು ಗೊತ್ತು ಮಾಡಿಟ್ಟುಕೊಳ್ಳಿ.
ಪ್ರತಿದಿನವೂ ನಿರ್ದಿಷ್ಟ ಸಮಯಕ್ಕೆ ಮಲಗುವಂತದು ತುಂಬಾ ಒಳ್ಳೆಯದು. ನೀವು ನಿರ್ದಿಷ್ಟ ಸಮಯದಲ್ಲಿ ರಾತ್ರಿ ಮಲಗಿದರೆ ನೀವು ಮುಂಜಾನೆಯಲ್ಲಿ ನಿರ್ದಿಷ್ಟ ಸಮಯಕ್ಕೆ ಸ್ವಾಭಾವಿಕವಾಗಿ ಏಳುತ್ತೀರಿ.ಇವೆಲ್ಲವೂ ಸ್ಥಿರತೆಯನ್ನು ಕಾಯ್ದುಕೊಳ್ಳುವ ವಿಚಾರಗಳಾಗಿವೆ.
"ನಾನು ನಿರ್ಭಯವಾಗಿರುವದರಿಂದ ಮಲಗಿಕೊಂಡು ಕೂಡಲೆ ನಿದ್ದೆ ಮಾಡುವೆನು;"(ಕೀರ್ತನೆಗಳು 4:8)
ಅದಲ್ಲದೆ ನೀವು ಪ್ರತಿದಿನ ರಾತ್ರಿ ನಿರ್ದಿಷ್ಟ ಸಮಯಕ್ಕೆ ಮಲಗಿ ನಿದ್ರಿಸಿ ನಿರ್ದಿಷ್ಟ ಸಮಯದಲ್ಲಿ ಮುಂಜಾನೆ ಏಳುವಂತಾದರೆ ನಿಮ್ಮ ದೇಹವು ಆ ಗಡಿಯಾರಕ್ಕೆ ಹೊಂದಿಕೊಳ್ಳುತ್ತದೆ. ಆಗ ನಿಮಗೆ ದಿನದಲ್ಲಿ ಆಯಾಸ ಸುಸ್ತು, ನಿದ್ರೆಯ ಮಂಪರು ಕಂಡುಬರುವುದಿಲ್ಲ ಮತ್ತು ಬಹುಮುಖ್ಯವಾಗಿ ನೀವು ನಿಮ್ಮ ಪ್ರಾರ್ಥನಾ ಸಮಯದಲ್ಲಿ ಎಚ್ಚರವಾಗಿರುತ್ತೀರಿ.
ಹಾಗಾಗಿ ಚೆನ್ನಾಗಿ ನಿದ್ರಿಸಿ ಆಗ ನೀವು ಕನಿಷ್ಠ ಒತ್ತಡವನ್ನು ಗರಿಷ್ಠ ಬಲವನ್ನು ಹೊಂದಿದವರಾಗುತ್ತೀರಿ ಹಾಗೂ ಉತ್ಸಾಹಪೂರ್ಣರಾಗಿ ಮುನ್ನುಗುತ್ತೀರಿ.ಇಂದಿನ ದಿನಮಾನಗಳಲ್ಲಿ ಅನೇಕರ ಜೀವಿತದಲ್ಲಿ ಕಾಣಸಿಗದ ಕ್ರಮಬದ್ಧತೆಯನ್ನು ಇದು ನಿಮ್ಮ ಜೀವಿತದಲ್ಲಿ ತರುತ್ತದೆ.
#2. ನಿಮ್ಮ ಮೊಬೈಲ್ ಫೋನನ್ನು ನಿಮ್ಮ ಹಾಸಿಗೆ ಬಳಿಗೆ ಕೊಂಡೊಯ್ಯಬೇಡಿರಿ.
ಒಂದು ಸಂಶೋಧನೆಯ ಪ್ರಕಾರ ನಮ್ಮ ಮೊಬೈಲ್ ಫೋನ್ ಗಳಿಂದ ಹೊರಸೂಸುವಂತಹ ನೀಲಿಯ ಬೆಳಕು ನಮ್ಮ ನಿದ್ರೆಯ ಮಾದರಿಯನ್ನು ಕೆಡಿಸುತ್ತದೆ. ಹಾಗೆಯೇ ಕೆಲವರಿಗೆ ರಾತ್ರಿಯಲ್ಲಿ ಮಲಗುವಾಗಲೂ ತಮ್ಮ ಫೋನ್ ಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸುತ್ತಾ ಇರುವ ದುರಭ್ಯಾಸವಿರುತ್ತದೆ. ಇದು ನೀವು ಸರಿಯಾದ ಸಮಯಕ್ಕೆ ನಿದ್ರಿಸುವುದನ್ನು ತಡೆಮಾಡುತ್ತದೆ
#3. ನಿಮ್ಮ ದಿನವನ್ನು ಪ್ರಾರ್ಥನೆಯೊಂದಿಗೆ ಆರಂಭಿಸಿ ಹಾಗೂ ಪ್ರಾರ್ಥನೆಯೊಂದಿಗೆ ನಿಮ್ಮ ದಿನವನ್ನು ಮುಗಿಸಿ.
"ಪ್ರಾರ್ಥನೆಯು ನಿಮ್ಮ ದಿನದ ಬಾಗಿಲನ್ನು ತೆರೆಯುವ ಮತ್ತು ನಿಮ್ಮ ದಿನದ ಬಾಗಿಲನ್ನು ಮುಚ್ಚುವ ಕೀಲಿಕೈ ಆಗಿದೆ" ಎಂದು ಒಬ್ಬರು ಹೇಳಿದ್ದಾರೆ. ನೀವು ದಿನವನ್ನು ಆರಂಭಿಸುವಾಗ ಪ್ರಾರ್ಥನೆಯೊಂದಿಗೆ ಆರಂಭಿಸುವುದಾದರೆ ಖಂಡಿತವಾಗಿಯೂ ಆ ದಿನವೆಲ್ಲಾ ನಿಮಗೆ ಬೇಕಾದ ಮಾರ್ಗದರ್ಶನವನ್ನು ಕರ್ತನಿಂದ ಹೊಂದಿಕೊಳ್ಳುವಿರಿ.
"[ಯೆಹೋವನು] - ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆ ಹೇಳುವೆನು [ಅನ್ನುತ್ತಾನಲ್ಲಾ]."(ಕೀರ್ತನೆಗಳು 32:8)
ನೀವು ಮುಂಜಾನೆ ಎದ್ದು ಪ್ರಾರ್ಥಿಸುವುದಾದರೆ ಈ ವಾಕ್ಯವನ್ನು ಖಂಡಿತವಾಗಿಯೂ ನೀವು ವಾಸ್ತವವಾಗಿ ಸವಿದು ನೋಡುವಿರಿ.
ನೀವು ನಿಮ್ಮ ದಿನವನ್ನು ಮುಗಿಸುವಾಗ ಪ್ರಾರ್ಥನೆಯೊಂದಿಗೆ ಮುಗಿಸಿ.ಆಗ ಕರ್ತನು ಖಂಡಿತವಾಗಿಯೂ ನಿಮ್ಮ ಸ್ವಪ್ನಗಳಲ್ಲಿ ದರ್ಶನಗಳಲ್ಲಿ ಮಾತನಾಡುವನು ಎಂದು ನೀವು ಭರವಸೆ ಇಡಬಹುದು
"ದೇವರು ಮಾತಾಡುವ ರೀತಿ ಒಂದುಂಟು ಹೌದು, ಎರಡೂ ಉಂಟು, ಮನುಷ್ಯನಾದರೋ ಲಕ್ಷಿಸುವದಿಲ್ಲ.15ಮನುಷ್ಯರಿಗೆ ಗಾಢನಿದ್ರೆಯುಂಟಾದಾಗಲೂ ಹಾಸಿಗೆಯ ಮೇಲೆ ಜಂಪುಹತ್ತಿದಾಗಲೂ ಆತನು ಸ್ವಪ್ನದಲ್ಲಿ ರಾತ್ರಿಯ ಕನಸಿನಲ್ಲಿ 16ಅವರ ಕಿವಿಗಳನ್ನು ತೆರೆದು ಅವರಿಗೆ ಶಿಕ್ಷಾವಚನವನ್ನು ಉಪದೇಶಿಸಿ ಅದಕ್ಕೆ ಮುದ್ರೆಹಾಕುವನು."(ಯೋಬನು 33:14-16)
#4. ಪ್ರಾರ್ಥಿಸುವ ಸಮಯದಲ್ಲಿ ದಯಮಾಡಿ ನಿಮ್ಮ ಮೊಬೈಲ್ ಫೋನ್ ಗಳನ್ನು ಸ್ವಿಚ್ ಆಫ್ ಮಾಡಿರಿ.
"ಮುಂಜಾನೆ ಇನ್ನೂ ಮೊಬ್ಬಿರುವಾಗ ಆತನು ಎದ್ದು ಹೊರಟು ಅಡವಿಯ ಸ್ಥಳಕ್ಕೆ ಹೋಗಿ ದೇವರನ್ನು ಪ್ರಾರ್ಥಿಸುತ್ತಿದ್ದನು. [36] ಸೀಮೋನನೂ ಅವನ ಸಂಗಡ ಇದ್ದವರೂ ಆತನನ್ನು ಹಿಂದಟ್ಟಿ ಕಂಡು -37 ಎಲ್ಲರು ನಿನ್ನನ್ನು ಹುಡುಕುತ್ತಾರೆ... "(ಮಾರ್ಕ 1:35-37)
ಎಲ್ಲರೂ ಯೇಸುವನ್ನು ಹುಡುಕಿಕೊಂಡು ಬಂದರು, ಆದರೆ ಅವರಿಗೆ ಯೇಸು ಸಿಗಲಿಲ್ಲ. ಈ ಸಂಗತಿ ಏನಾದರೂ ನಮ್ಮ ಕಾಲಘಟ್ಟದಲ್ಲಿ ಜರುಗಿದ್ದರೆ, ಸೀಮೋನ್ ಪೇತ್ರನು ಯೇಸುವನ್ನು ಕುರಿತು "ಕರ್ತನಾದ ಯೇಸುವೇ ನಾನು ಅನೇಕ ಬಾರಿ ನಿನಗೆ ಕರೆ ಮಾಡಿದೆ ಆದರೆ ನಿನ್ನ ಮೊಬೈಲ್ ಸ್ವಿಚ್ ಆಫ್ ಆಗಿತ್ತು" ಎಂದು ಕೇಳುತ್ತಿದ್ದ ಎಂದು ನಾನು ನಂಬುತ್ತೇನೆ. ನಾನು ಏನನ್ನು ಹೇಳಬೇಕು ಎಂದು ಪ್ರಯತ್ನಿಸುತ್ತಿದ್ದೇನೆ ಅದನ್ನು ನೀವು ಅರಿತುಕೊಂಡಿರಿ ಎಂದು ನಾನು ಭಾವಿಸುತ್ತೇನೆ
ಈ ಎಲ್ಲಾ ಸಲಹೆಗಳನ್ನು ನೀವು ಅಳವಡಿಸಿಕೊಳ್ಳಿರಿ. ಆಗ ನಿಜವಾಗಿಯೂ ಗುರುತಿಸಬಹುದಾದ ವ್ಯತ್ಯಾಸವನ್ನು ನಿಮ್ಮ ಆತ್ಮಿಕ ಬೆಳವಣಿಗೆಯಲ್ಲಿ ನೀವು ಕಾಣುತ್ತೀರಿ. ಈ ಸಂದೇಶವನ್ನು ಮತ್ತೊಬ್ಬರಿಗೆ ಶೇರ್ ಗುಂಡಿಯನ್ನು ಒತ್ತುವ ಮೂಲಕ ದಯವಿಟ್ಟು ಹಂಚಿರಿ.
ಪ್ರಾರ್ಥನೆಗಳು
ತಂದೆಯೇ, ಯೇಸುವಿನ ನಾಮದಲ್ಲಿ ನಿನ್ನ ಮಾರ್ಗವನ್ನು ನನಗೆ ಬೋಧಿಸು ನಿನ್ನ ಸತ್ಯತೆಯಲ್ಲಿ ಯೇಸು ನಾಮದಲ್ಲಿ ನನ್ನನ್ನು ಅನುದಿನವೂ ನಡೆಸು
ವರಪ್ರಧನಾದ ಪವಿತ್ರಾತ್ಮ ದೇವರೇ ಯೇಸು ಸ್ವಾಮಿಯು ಪ್ರಾರ್ಥನೆ ಮಾಡುತ್ತಿದ್ದ ಹಾಗೆಯೇ ನಮಗೂ ಪ್ರಾರ್ಥನೆ ಮಾಡುವುದನ್ನು ಯೇಸು ನಾಮದಲ್ಲಿ ಕಲಿಸು. ಆಮೆನ್
ವರಪ್ರಧನಾದ ಪವಿತ್ರಾತ್ಮ ದೇವರೇ ಯೇಸು ಸ್ವಾಮಿಯು ಪ್ರಾರ್ಥನೆ ಮಾಡುತ್ತಿದ್ದ ಹಾಗೆಯೇ ನಮಗೂ ಪ್ರಾರ್ಥನೆ ಮಾಡುವುದನ್ನು ಯೇಸು ನಾಮದಲ್ಲಿ ಕಲಿಸು. ಆಮೆನ್
Join our WhatsApp Channel
Most Read
● ದೇವರಿಂದ ಒದಗಿದ ಕನಸು● ದಿನ 38:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನೀವು ಪ್ರಾರ್ಥಿಸುವಿರಿ ಆತನು ನಿಮಗೆ ಕಿವಿಗೊಡುವನು
● ಆತನ ಬೆಳಕಿನಲ್ಲಿ ಸಂಬಂಧಗಳ ಪೋಷಣೆ
● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಈ ಹೊಸ ವರ್ಷದ ಪ್ರತಿ ದಿನದಲ್ಲೂ ಸಂತೋಷವನ್ನು ಅನುಭವಿಸುವುದು ಹೇಗೆ?
● ಪ್ರಾರ್ಥನಾ ಹೀನತೆ ಎಂಬ ಪಾಪ
ಅನಿಸಿಕೆಗಳು