ಅನುದಿನದ ಮನ್ನಾ
ಕರ್ತನ ಸೇವೆ ಮಾಡುವುದು ಎಂದರೇನು-I
Tuesday, 19th of March 2024
2
2
326
Categories :
ಸೇವೆಮಾಡುವುದು(Serving)
"ಯಾವನಾದರೂ ನನ್ನ ಸೇವೆಯನ್ನು ಮಾಡುವವನಾದರೆ ನನ್ನ ಹಿಂದೆ ಬರಲಿ; ಮತ್ತು ಎಲ್ಲಿ ನಾನು ಇರುತ್ತೇನೋ ಅಲ್ಲಿ ನನ್ನ ಸೇವಕನು ಸಹ ಇರುವನು. ಯಾವನಾದರೂ ನನ್ನ ಸೇವೆಯನ್ನು ಮಾಡುವವನಾದರೆ ತಂದೆಯು ಅವನಿಗೆ ಬಹುಮಾನ ಮಾಡುವನು."(ಯೋಹಾನ 12:26)
#1. ಯಾರಾದರೂ ನನ್ನ(ಯೇಸುವಿನ) ಸೇವೆ ಮಾಡಬೇಕೆಂದು ಬಯಸಿದರೆ
ಯಾರು ಬೇಕಾದರೂ ಕರ್ತನ ಸೇವೆಯನ್ನು ಮಾಡಬಹುದು. ನೀವು ಬಡವರಾದರೂ,ಶ್ರೀಮಂತರಾದರೂ ವಿದ್ಯಾವಂತರಾದರೂ, ಅವಿದ್ಯಾವಂತರಾದರೂ ಪರವಾಗಿಲ್ಲ ಕರ್ತನ ಸೇವೆಯನ್ನು ಮಾಡಬಹುದು. "ಪಾಸ್ಟರ್ ನನಗೆ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ. ಆದ್ದರಿಂದ ನಾನು ಕರ್ತನ ಸೇವೆ ಮಾಡಲಾರೆ" ಎಂಬ ಪತ್ರಗಳು, ಇ ಮೇಲ್ ಗಳು ಯಾವಾಗಲೂ ನನಗೆ ಬರುತ್ತಲೇ ಇರುತ್ತವೆ. ಇವೆಲ್ಲಾ ಮುಖ್ಯ ವಿಷಯವಲ್ಲ.ನಿಮಗೆ ಇಂಗ್ಲಿಷ್ನಲ್ಲಿ ಮಾತನಾಡಲು ಬರದಿದ್ದರೂ ನೀವು ಕರ್ತನ ಸೇವೆಯನ್ನು ಮಾಡಬಹುದು.
ನಾನೆಲ್ಲಿಯೇ ಹೋದರೂ ನಾನು ಕಾಣುವ ಒಂದೇ ಒಂದು ದೊಡ್ಡ ಸಮಸ್ಯೆ ಅಂದರೆ, ಜನರು ಸೇವೆ ಹೊಂದುವುದಕ್ಕೆ ಇಷ್ಟಪಡುತ್ತಾರೆ ವಿನಃ ಸ್ವತಃ ತಾವೇ ಸೇವೆ ಮಾಡಲು ಬಯಸುವುದಿಲ್ಲ.
ಹೇಗೂ, ನಾವು ಯೇಸುವಿನ ಜೀವನವನ್ನು ನೋಡುವಾಗ ಆತನು ಸೇವಕನಾಗಿದ್ದನು ಎಂಬುದರಲ್ಲಿ ಸಂಶಯವೇ ಇಲ್ಲ ಆತನೇ ಸ್ವತಃ "ಹಾಗೆಯೇ ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು ಎಂದು ಹೇಳಿದನು."(ಮತ್ತಾಯ 20:28)
ಆತನನ್ನು ಹಿಡಿದು ಕೊಡಬೇಕಾದ ರಾತ್ರಿಯಲಿಯೂ ಸಹ ಕರ್ತನಾದ ಯೇಸುವು ತನ್ನ ಶಿಷ್ಯರ ಪಾದಗಳನ್ನು ತೊಳೆದು ಅವರಿಗೆ ನೀವು ಸಹ ಒಬ್ಬರಿಗೊಬ್ಬರು ಹೀಗೆಯೇ ಸೇವೆ ಮಾಡುವವರಾಗಿರಬೇಕು ಎಂದು ತನ್ನ ಅಂತಿಮ ಬೋಧನೆಯನ್ನು ಕೊಟ್ಟನು.(ಯೋಹಾನ 13:12-17 ವರೆಗೆ ಓದಿ ನೋಡಿರಿ). ಹಾಗಾಗಿ ಯೇಸುವೇ ಹೀಗೆ ಸೇವೆ ಮಾಡುವವರಾಗಿದ್ದರೆ ದೇವರು ಯೇಸುವಿನಂತೆ ನಾವು ಆಗಬೇಕು ಎಂದು ಇಚ್ಛಿಸಿದರೆ, ನಾವು ಸಹ ಆತನಂತೆಯೇ ಸೇವೆ ಮಾಡಬೇಕೆಂಬುದು ಎಷ್ಟೋ ಖಚಿತವಲ್ಲವೇ.
ಕೇವಲ ಕೆಲವೇ ಅಲ್ಪಸಂಖ್ಯೆಯ ಮಂದಿಯು ಕರ್ತನ ಹಾಗೂ ಆತನ ಜನರ ಸೇವೆ ಮಾಡಲು ಮುಂದೆ ಬರುತ್ತಾರೆ ಅಷ್ಟೇ. ಕರ್ತನಾದ ಯೇಸು ಹೇಳಿದ್ದೇನೆಂದರೆ "ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳಕೊಳ್ಳುವನು; ಆದರೆ ನನ್ನ ನಿವಿುತ್ತವಾಗಿಯೂ ಸುವಾರ್ತೆಯ ನಿವಿುತ್ತವಾಗಿಯೂ ತನ್ನ ಪ್ರಾಣವನ್ನು ಕಳಕೊಂಡವನು ಅದನ್ನು ಉಳಿಸಿಕೊಳ್ಳುವನು."ಎಂದು (ಮಾರ್ಕ 8:35).
#2. ನನ್ನ (ಯೇಸುವಿನ)ಸೇವೆ ಮಾಡಲು ಯಾರಾದರೂ ಬಯಸಿದರೆ ಅವರು ನನ್ನನ್ನು(ಯೇಸುವನ್ನು) ಹಿಂಬಾಲಿಸಬೇಕು.
ಯಾರಿಗೆ ಕರ್ತನ ಸೇವೆ ಮಾಡಲು ಮನಸ್ಸಿದೆಯೋ ಅವರು ಯೇಸುವಿನ ಅನುಯಾಯಿಗಳಾಗಬೇಕೆ ವಿನಹಃ ಅಭಿಮಾನಿಗಳಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅವರು ಯೇಸುವಿನ ಶಿಷ್ಯರಾಗಬೇಕು. ನಾನು ಕೆಲಸಕ್ಕೆ ಎಂದಿಗೂ ಜನರ ಹೊರತೋರಿಕೆಯ ಮೇಲೆ ಅವರ ವಿದ್ಯಾರ್ಹತೆ ಮೇಲೆ ಸೇವೆಗೆ ನೇಮಿಸಿಕೊಳ್ಳುವುದಿಲ್ಲ. (ಖಂಡಿತವಾಗಿಯೂ ಅದೇನೋ ಕೆಟ್ಟದ್ದಲ್ಲ). ಬದಲಾಗಿ ಆ ವ್ಯಕ್ತಿಯು ಯೇಸುವಿನ ಶಿಷ್ಯನಾಗಿದ್ದಾರೋ ಎಂಬುದನ್ನು ಗಮನಿಸಿ ನೇಮಿಸಿಕೊಳ್ಳುತ್ತೇನೆ.
ಹಾಗೆಯೇ, ನೀವು ನಿಜವಾಗಿಯೂ ಕರ್ತನ ಸೇವೆ ಮಾಡಲು ಬಯಸುವವರಾಗಿದ್ದರೆ ನೀವು ಸಹ ಪ್ರತಿದಿನ ತಪ್ಪದೆ ದೇವರ ವಾಕ್ಯವನ್ನು ಓದುವ ಅಧ್ಯಯನ ಮಾಡುವ ವ್ಯಕ್ತಿಗಳಾಗಿರುತ್ತೀರಿ.ಕೇವಲ ಇಂತಹ ವ್ಯಕ್ತಿಗಳು ಮಾತ್ರ ಕರ್ತನನ್ನು ಪರಿಣಾಮಕಾರಿಯಾಗಿ ಸೇವಿಸಬಹುದು.
"ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. [17] ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು."(2 ತಿಮೊಥೆಯನಿಗೆ 3:16-17)
ಮುಂದುವರೆಯಲಿದೆ....
ಪ್ರಾರ್ಥನೆಗಳು
ತಂದೆಯೇ, ನಾನು ನಿನ್ನ ಸೇವೆ ಮಾಡಬೇಕಾದ ರೀತಿಯಲ್ಲಿ ನಿನ್ನ ಸೇವೆ ಮಾಡಲು ನನ್ನಿಂದ ಆಗಿಲ್ಲ ಅದಕ್ಕಾಗಿ ನನ್ನನ್ನು ಕ್ಷಮಿಸು.
ನಿನ್ನ ಆತ್ಮನ ಮೂಲಕ ಸರಿಯಾದ ಸೇವೆಯ ನಡವಳಿಕೆಗಳನ್ನು ನನ್ನಲ್ಲಿ ಹುಟ್ಟಿಸು.
ತಂದೆಯೇ ನಿನ್ನ ವಾಕ್ಯದಿಂದ ನನ್ನನ್ನು ಸಿದ್ಧಪಡಿಸು ನಿನ್ನ ಮಾರ್ಗಗಳನ್ನು ನನಗೆ ಬೋಧಿಸು ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ, ಆಮೇನ್.
ನಿನ್ನ ಆತ್ಮನ ಮೂಲಕ ಸರಿಯಾದ ಸೇವೆಯ ನಡವಳಿಕೆಗಳನ್ನು ನನ್ನಲ್ಲಿ ಹುಟ್ಟಿಸು.
ತಂದೆಯೇ ನಿನ್ನ ವಾಕ್ಯದಿಂದ ನನ್ನನ್ನು ಸಿದ್ಧಪಡಿಸು ನಿನ್ನ ಮಾರ್ಗಗಳನ್ನು ನನಗೆ ಬೋಧಿಸು ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ, ಆಮೇನ್.
Join our WhatsApp Channel
Most Read
● ನಿರುತ್ಸಾಹ ಪಡಿಸುವ ಬಾಣಗಳನ್ನು ಜಯಿಸುವುದು-1● ಕರ್ತನು ಹೃದಯವನ್ನೇ ಶೋಧಿಸುವವನಾಗಿದ್ದಾನೆ.
● ಭಾವನಾತ್ಮಕ ರೋಲರ್ ಕೋಸ್ಟರ್ ಗೆ ಬಲಿಪಶು.
● ಅಗ್ನಿಯು ಸುರಿಯಲ್ಪಡಬೇಕು
● ದಿನ 08:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 15:40 ದಿನಗಳ ಉಪವಾಸ ಮತ್ತು ಪಾರ್ಥನೆ.
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿ - 1
ಅನಿಸಿಕೆಗಳು