ಅನುದಿನದ ಮನ್ನಾ
ಯೇಸುವಿನ ಕರ್ತತ್ವವನ್ನು ಅರಿಕೆ ಮಾಡುವುದು
Thursday, 21st of March 2024
4
2
349
Categories :
ಭಯ (Fear)
"ಹಾಗಾದರೆ ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನೆಂದು ಒಪ್ಪಿಕೊಳ್ಳುವನೋ, ನಾನು ಸಹ ಅವನನ್ನು ನನ್ನವನೆಂದು ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ಒಪ್ಪಿಕೊಳ್ಳುವೆನು.33ಆದರೆ ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನಲ್ಲವೆಂದು ಹೇಳುವನೋ ಅವನನ್ನು ನಾನು ಸಹ ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ನನ್ನವನಲ್ಲವೆಂದು ಹೇಳುವೆನು."(ಮತ್ತಾಯ 10:32-33).
ಯೇಸುವೇ, ಕರ್ತನೆಂದು ಮನುಷ್ಯರ ಮುಂದೆ ಅರಿಕೆ ಮಾಡುವಂತದ್ದು ಭಯದ -ನಾಚಿಕೆಯ ಸಂಗತಿಯಂತೂ ಅಲ್ಲ. ಆದರೂ ಬಹುತೇಕ ಕ್ರೈಸ್ತರು ಮನುಷ್ಯರಿಗೆ ಹೆದರಿ ಸಾರ್ವಜನಿಕವಾಗಿ ಯೇಸುವೇ ಕರ್ತನು- ತಮ್ಮ ಒಡೆಯನು- ರಕ್ಷಕನು ಎಂದು ಒಪ್ಪಿಕೊಳ್ಳಲು ಭಯಪಡುತ್ತಾರೆ.
ಯೇಸುವಿನ ಭೂಯಾತ್ರೆಯ ಕಾಲಘಟ್ಟದಲ್ಲೂ ಸಹ ಅನೇಕರು ಆತನನ್ನು ಮೆಸ್ಸಿಯನೆಂದು ನಂಬಿದ್ದರು.ಆದರೆ ಬಹಿರಂಗವಾಗಿ ಅದನ್ನು ಅರಿಕೆ ಮಾಡಲು ಹೆದರಿದರು. ಅವರು ಅದಕ್ಕಾಗಿ ಎಲ್ಲಿ ತಮ್ಮ ಸ್ಥಾನಮಾನಗಳನ್ನು ಕಳೆದುಕೊಳ್ಳಬೇಕೋ,ಎಲ್ಲಿ ಯಹೂದ್ಯರ ಸಮುದಾಯದಿಂದ ಬಹಿಷ್ಕರಿಸಲ್ಪಡುತ್ತೇವೋ ಎಂದು ಹೆದರಿ ಅರಿಕೆ ಮಾಡಲು ಭಯ ಪಟ್ಟರು.
ಪ್ರಕರಣ ಒಂದು: ಒಬ್ಬ ಹುಟ್ಟು ಕುರುಡನಾಗಿದ್ದ ಮನುಷ್ಯನು ಯೇಸುವಿನ ಕರಗಳ ಸ್ಪರ್ಶದಿಂದ ದೃಷ್ಟಿ ಹೊಂದಿದನು. ಸಭಾಮಂದಿರದವರು ಅವರ ತಂದೆ ತಾಯಿಗಳನ್ನು ಕರೆಸಿ ಅವನು ಇವರ ಮಗನೋ ಎಂದು ಕೇಳಿದಾಗ "ಅವನ ತಂದೆತಾಯಿಗಳು - ಇವನು ನಮ್ಮ ಮಗನೆಂದೂ ಕುರುಡನಾಗಿ ಹುಟ್ಟಿದನೆಂದೂ ಬಲ್ಲೆವು; [21] ಈಗ ಹೇಗೆ ಕಣ್ಣು ಬಂದವೋ ಅರಿಯೆವು; ಕಣ್ಣು ಕೊಟ್ಟವನು ಯಾರೋ ಅರಿಯೆವು; ಇವನನ್ನೇ ಕೇಳಿರಿ; ಪ್ರಾಯದವನಾಗಿದ್ದಾನಲ್ಲಾ; ಇವನೇ ತನ್ನ ವಿಷಯವಾಗಿ ಹೇಳುವನು ಎಂದು ಉತ್ತರಕೊಟ್ಟರು."(ಯೋಹಾನ 9:20-21).
ಯೇಸುವೇ ತಮ್ಮ ಮಗನನ್ನು ಸ್ವಸ್ಥಪಡಿಸಿದನು ಎಂಬುದು ಅವರಿಗೆ ಗೊತ್ತಿತ್ತು ಆದರೂ ಅವನ ತಂದೆ ತಾಯಿಗಳು ಯಹೂದ್ಯ ನಾಯಕರಿಗೆ ಹೆದರಿ ಈ ರೀತಿ ಉತ್ತರ ಕೊಟ್ಟರು. ಏಕೆಂದರೆ ಯಾರಾದರೂ ಯೇಸುವನ್ನು ಮೆಸ್ಸಿಯನ್ನು ಎಂದು ಪ್ರಚುರ ಪಡಿಸಿದರೆ ಸಭಾಮಂದಿರದಿಂದ ಅವರನ್ನು ಬಹಿಷ್ಕರಿಸಲಾಗುತ್ತಿತ್ತು.
"ಅವನ ತಂದೆತಾಯಿಗಳು ಯೆಹೂದ್ಯರಿಗೆ ಅಂಜಿದ ಕಾರಣ ಈ ಪ್ರಕಾರ ಹೇಳಿದರು. ಯಾಕಂದರೆ - ಯಾರಾದರೂ ಯೇಸುವನ್ನು ಕ್ರಿಸ್ತನೆಂದು ಒಪ್ಪಿಕೊಂಡು ಹೇಳಿದರೆ ಅಂಥವನಿಗೆ ಬಹಿಷ್ಕಾರಹಾಕಬೇಕೆಂದು ಯೆಹೂದ್ಯರು ಅದಕ್ಕೆ ಮುಂಚೆ ಗೊತ್ತುಮಾಡಿಕೊಂಡಿದ್ದರು.23ಇವನು ಪ್ರಾಯದವನು, ಇವನನ್ನೇ ಕೇಳಿರಿ ಎಂದು ಅವನ ತಂದೆತಾಯಿಗಳು ಹೇಳಿದ್ದಕ್ಕೆ ಇದೇ ಕಾರಣ."(ಯೋಹಾನ 9:22-23 )
"ಆದರೂ ಹಿರೀಸಭೆಯವರಲ್ಲಿಯೂ ಅನೇಕರು ಆತನನ್ನು ನಂಬಿದರು. ಆದರೆ ತಮಗೆ ಸಭೆಯಿಂದ ಬಹಿಷ್ಕಾರವಾದೀತೆಂದು ಫರಿಸಾಯರಿಗೆ ಅಂಜಿಕೊಂಡು ಅದನ್ನು ಜನರ ಮುಂದೆ ಹೇಳಲಿಲ್ಲ."ಎಂದು ಸತ್ಯವೇದವು ಇನ್ನೂ ಮುಂದುವರೆದು ಹೇಳುತ್ತದೆ (ಯೋಹಾನ 12:42 )
ಜನರು ಯೇಸುವೇ ಕರ್ತನು- ರಕ್ಷಕನು ಎಂದು ಸಾರ್ವಜನಿಕವಾಗಿ ಅರಿಕೆ ಮಾಡಲು ಏಕೆ ಹೆದರುತ್ತಾರೆ?
"ಯಾಕಂದರೆ ದೇವರಿಂದ ಬರುವ ಮಾನಕ್ಕಿಂತ ಮನುಷ್ಯರಿಂದ ಬರುವ ಮಾನವೇ ಅವರಿಗೆ ಇಷ್ಟವಾಗಿತ್ತು." ಎಂದು ಸತ್ಯವೇದ ಹೇಳುತ್ತದೆ (ಯೋಹಾನ 12:43)
ಅನೇಕ ಬಾರಿ ಜನರು ಯೇಸುವನ್ನೇ ತಮ್ಮ ಕರ್ತನು ರಕ್ಷಕನು ಎಂದು ಹೇಳಲಾಗದಿರುವುದಕ್ಕೆ ಕಾರಣ ಅವರು ದೇವರಿಂದ ಬರುವ ಮರ್ಯಾದೆಗಿಂತ ಮನುಷ್ಯರಿಂದ ಬರುವ ಮರ್ಯಾದೆಯನ್ನೇ ಎದುರು ನೋಡುವ ಅವರ ಮನಸ್ಥಿತಿಯಾಗಿದೆ.
ಹಾಗಾದರೆ ಈ ಜನರು ಮನುಷ್ಯರಿಂದ ಬರುವ ಮರ್ಯಾದೆಗೆ ಯಾಕಿಷ್ಟು ಅಂಜುತ್ತಾರೆ?
ಸತ್ಯವೇದವು ಇದನ್ನು "ಮನುಷ್ಯರ ಭಯ" ಎಂದು ವ್ಯಾಖ್ಯಾನಿಸುತ್ತದೆ. ನಾವು ಕಾರ್ಯಗಳನ್ನು ಕೈಗೆತ್ತಿಕೊಳ್ಳುವಾಗ ಈ ಭಯವು ನಮ್ಮನ್ನು ಸ್ತಬ್ದಗೊಳಿಸುತ್ತದೆ. ನಾವು ಮಾತಾಡಬೇಕು ಎನಿಸಿದರೂ ನಮ್ಮ ಸ್ವರವನ್ನು ಆ ಭಯವು ತಡೆಹಿಡಿಯುತ್ತದೆ.
"ಮನುಷ್ಯನ ಭಯ ಉರುಲು; ಯೆಹೋವನ ಭರವಸ ಉದ್ಧಾರ."(ಜ್ಞಾನೋಕ್ತಿಗಳು 29:25)
'ಉರುಲು' ಎಂಬುದಕ್ಕೆ ಇರುವ ಇಬ್ರಿಯ ಪದದ ಮೂಲ ಅರ್ಥ ಪ್ರಾಣಿ ಪಕ್ಷಿಗಳನ್ನು ಬೇಟೆಯಾಡಲು ಬೇಟೆಗಾರನು ಬಳಸುವ ಬಲೆಯಾಗಿದೆ.ಈ ಬಲೆಯು ಬಹಳ ಅಪಾಯಕಾರಿಯಾಗಿದ್ದು ಇದರಲ್ಲಿ ಸಿಕ್ಕಿ ಬಿದ್ದರೆ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುವವರಾಗುತ್ತೇವೆ.
ಒಂದು ಶುಭ ಸಂದೇಶವೇನೆಂದರೆ ನಮ್ಮನ್ನು ಮನುಷ್ಯರ ಭಯದಿಂದ ಬಿಡಿಸಿ ನಾವು ಸುರಕ್ಷಿತವಾದ- ಸಂರಕ್ಷಣೆಯ ಜೀವಿತವನ್ನು ಸ್ವತಂತ್ರವಾಗಿ ಜೀವಿಸುವಂತೆ ಮಾಡಲು ದೇವರು ಶಕ್ತನಾಗಿದ್ದಾನೆ. ಆತನು ತನ್ನ ಮಗನಾದ ಕರ್ತನಾದ ಯೇಸು ಕ್ರಿಸ್ತನ ಪರಿಪೂರ್ಣವಾದ ಯಜ್ಞದ ಮೂಲಕ ಇದನ್ನು ನಮಗೆ ಅನುಗ್ರಹಿಸಿದ್ದಾನೆ
#1. ನೀವು ನಿಮ್ಮ ಜೀವನದಲ್ಲಿ ಯಾವಾಗಲಾದರೂ ಮನುಷ್ಯರಿಗೆ ಹೆದರುತ್ತಿದ್ದೀರಿ ಎಂದು ಗುರುತಿಸಿಕೊಂಡರೆ ಇದು ದೇವರಿಗೆ ವಿರೋಧವಾಗಿ ನಾನು ಮಾಡುತ್ತಿರುವ ಪಾಪ ಎಂದು ಅರಿತುಕೊಂಡು ತಕ್ಷಣವೇ ಪಶ್ಚಾತಾಪ ಪಡಿರಿ
#2."- ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ. "(ಅಪೊಸ್ತಲರ ಕೃತ್ಯಗಳು 5:29)
ವಿದೇಯತೆ ಎಂದರೆ ಅದು ಧೈರ್ಯವಾಗಿ ಮುನ್ನುಗ್ಗಬೇಕು ಎಂಬ ಕರೆಗೆ ತೋರುವ ವಿಧೇಯತೆಯಾಗಿದೆ. ಧೈರ್ಯ ಎಂದರೆ ನಮಗೆ ಭಯದ ಭಾವನೆಯೇ ಇಲ್ಲ ಎನ್ನುವುದಲ್ಲ. ಆದರೆ ಅದರಿಂದ ಏನೇ ಬಂದರೂ ಅನುಭವಿಸಲು ನಾನು ಸಿದ್ದ ಎನ್ನುವ ದೃಢಸಂಕಲ್ಪವಾಗಿದೆ.
#3.ಎಲ್ಲಾ ಸ್ಥಳಗಳನ್ನು ಎಲ್ಲಾ ಸಮಯದಲ್ಲೂ ಯೇಸುವನ್ನೇ ಕರ್ತನೆಂದು ಭಯಪಡದೆ ಧೈರ್ಯವಾಗಿ ಪ್ರಚಾರ ಪಡಿಸುವ ಕೃಪೆಯನ್ನು ಬಲವನ್ನು ಅನುಗ್ರಹಿಸಬೇಕೆಂದು ದೇವರಲ್ಲಿ ಬೇಡಿಕೊಳ್ಳಿರಿ
ಅರಿಕೆಗಳು
ನಾನು ಮನುಷ್ಯರಿಗೆ ಭಯಪಡದೇ, ದೇವರಿಗೇ ಭಯಪಟ್ಟು ಜೀವಿಸುವೆನು. ಕರ್ತನಾದ ಯೇಸುಕ್ರಿಸ್ತನು ನನಗಾಗಿ ಸತ್ತನು, ಹೂಣಲ್ಪಟ್ಟನು ಮತ್ತು ಜೀವಂತವಾಗಿ ಎಬ್ಬಿಸಲ್ಪಟ್ಟನು. ಆತನು ನಮಗೆ ಜಯವನ್ನು ಅನುಗ್ರಹಿಸಿದ್ದಾನೆ. ಆದ್ದರಿಂದ ಎಲ್ಲಾ ಕಾಲದಲ್ಲೂ ಎಲ್ಲಾ ಸ್ಥಳದಲ್ಲೂ ಆತನ ನಾಮವನ್ನೇ ಘನಪಡಿಸುವೆನು. ಆಮೆನ್.
Join our WhatsApp Channel
Most Read
● ಕರ್ತನಾದ ಯೇಸುಕ್ರಿಸ್ತನನ್ನು ಅನುಕರಣೆ ಮಾಡುವುದು ಹೇಗೆ● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-II
● ಮತ್ತೊಬ್ಬರ ಪಾತ್ರೆಯನ್ನು ತುಂಬಿಸುವುದನ್ನು ಬಿಟ್ಟು ಬಿಡಬೇಡಿರಿ.
● ಸ್ವಸ್ಥ ಬೋಧನೆಯ ಪ್ರಾಮುಖ್ಯತೆ
● ಆತ್ಮಕ್ಕೆ ದೇವರ ಔಷಧಿ
● ಸರ್ವಬೀಗದ ಕೈ
● ಹನ್ನಾಳ ಜೀವಿತದಿಂದ ಕಲಿಯಬೇಕಾದ ಪಾಠ
ಅನಿಸಿಕೆಗಳು