ಅನುದಿನದ ಮನ್ನಾ
ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು-1
Friday, 26th of April 2024
2
1
170
Categories :
ವಾತಾವರಣ (Atmosphere)
ನೀವು ಕೆಲವರ ಮನೆಯ ಬಳಿ ಹೋದಾಗ ನಿಮಗೆ ಉಸಿರುಗಟ್ಟಿದಂತೆ ಆಗಬಹುದು.
ಅದು ಅಲ್ಲಿರುವ ಪೀಠೋಪಕರಣಗಳಿಂದಲೋ ಅಥವಾ ಸೌಲಭ್ಯಗಳ ಕುರಿತು ನಾನು ಹೇಳುತ್ತಿಲ್ಲ. ಆದರೆ ಅಲ್ಲಿ ಏನೋ ಸರಿ ಇಲ್ಲ ಎನಿಸುತ್ತಿರುತ್ತದೆ. ಅಲ್ಲಿನ ವಾತಾವರಣದಲ್ಲಿ ಏನೋ ಸರಿ ಇಲ್ಲ ಎನಿಸುತ್ತದೆ. ನೀವು ಮನೆಗೆ ಹೋದಾಗ ಆ ಮನೆಯಲ್ಲಿ ಗಂಡ- ಹೆಂಡತಿಯು ಅನೇಕ ದಿನಗಳಿಂದ ಸರಿಯಾಗಿ ಒಬ್ಬರಿಗೊಬ್ಬರು ಮಾತನಾಡಿಸುತ್ತಿಲ್ಲ ಎಂಬುದು ನಿಮಗೆ ತಿಳಿದು ಬರುತ್ತದೆ. ಅದುವೇ ಆ ಮನೆಯ ವಾತಾವರಣದಲ್ಲಿ ನಿಮಗೆ ಉಸಿರುಗಟ್ಟಿಸುತ್ತಿದ್ದದ್ದು.
ಇನ್ನೊಂದು ಸನ್ನಿವೇಶವನ್ನು ಹೇಳುತ್ತೇನೆ. ನೀವು ಬಂದು ಮನೆಯೊಳಕ್ಕೆ ಹೋದಾಗ ಅದು ಸಾಮಾನ್ಯವಾಗಿಯೇ ಕಾಣುತ್ತದೆ. ಆದರೂ ನಿಮಗೆ ಆ ಮನೆಯಲ್ಲಿ ಸಮಾಧಾನ- ಆನಂದ ಕಾಣಿಸುತ್ತದೆ. ಆ ವಾತಾವರಣದಲ್ಲಿರುವ ಏನೋ ಒಂದು ಎಲ್ಲವನ್ನು ವ್ಯತ್ಯಾಸವಾಗಿ ಮಾಡುತ್ತದೆ.
ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸರಿಯಾದ ವಾತಾವರಣ ಇರುವಂಥದ್ದು ಅಗತ್ಯವಾಗಿದೆ.
ಗಗನ ಯಾತ್ರಿಗಳಾಗಿ ವರ್ಷಾನುಗಟ್ಟಲೆ ತರಬೇತಿ ಹೊಂದಿದವರು ಅತ್ಯಂತ ಉನ್ನತ ಮಟ್ಟದ ಸಾಮರ್ಥ್ಯ ಹೊಂದಿದ ಜನರಾಗಿರುತ್ತಾರೆ. ಆದರೂ ಅವರು ಬಾಹ್ಯಾಕಾಶಕ್ಕೆ ತೆರಳಿದಾಗ ಭೂಮಿಯ ವಾತಾವರಣಕ್ಕೆ ಸಂಬಂಧಿಸಿದ ಸ್ಪೇಸ್ ಸೂಟ್ಗಳನ್ನು ಧರಿಸಿರುತ್ತಾರೆ.
ಮೀನು ಪರಿಣಾಮಕಾರಿಯಾಗಿ ತನ್ನ ಕಾರ್ಯ ನಿರ್ವಹಿಸಲು ಅದಕ್ಕೆ ನೀರಿರುವ ವಾತಾವರಣದ ಅಗತ್ಯವಿದೆ. ಅಂತೆಯೇ ಒಂದು ಮಗುವು ಚೆನ್ನಾಗಿ ಬೆಳೆಯಲು ಅದರ ತಾಯಿಯ ಗರ್ಭದಲ್ಲಿ ಇದ್ದಂತಹ ವಾತಾವರಣದ ಅಗತ್ಯವಿದೆ.
ಹಾಗೆಯೇ, ನೀವು ಮತ್ತು ನಾನೂ ಸಹ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು, ಪ್ರಭುದ್ದತೆಯಲ್ಲಿ ಬೆಳೆಯಲು, ಫಲಪ್ರದವಾಗಿ ಜೀವಿಸಲು ಸರಿಯಾದ ವಾತಾವರಣದ ಅಗತ್ಯವಿದೆ.
ಯೇಸು ಸ್ವಾಮಿ ಈ ವಾತಾವರಣದ ಕುರಿತು ಬೋಧಿಸಿದ್ದಾನೆ.
"ಆಗ ಆತನು ಅವರಿಗೆ ಸಾಮ್ಯರೂಪವಾಗಿ ಅನೇಕ ಸಂಗತಿಗಳನ್ನು ಹೇಳಿದನು. ಹೇಗಂದರೆ - 4ಕೇಳಿರಿ! ಬಿತ್ತುವವನು ಬಿತ್ತುವದಕ್ಕೆ ಹೊರಟನು. ಅವನು ಬಿತ್ತುವಾಗ ಕೆಲವು ಬೀಜ ದಾರಿಯ ಮಗ್ಗುಲಲ್ಲಿ ಬಿದ್ದವು; ಹಕ್ಕಿಗಳು ಬಂದು ಅವುಗಳನ್ನು ತಿಂದುಬಿಟ್ಟವು.5ಕೆಲವು ಬೀಜ ಬಹಳ ಮಣ್ಣಿಲ್ಲದ ಬಂಡೆಯ ನೆಲದಲ್ಲಿ ಬಿದ್ದವು; ಅಲ್ಲಿ ಮಣ್ಣು ತೆಳ್ಳಗಿದ್ದದರಿಂದ ಅವು ಬೇಗ ಮೊಳೆತವು; 6ಆದರೆ ಬಿಸಿಲೇರಿದಾಗ ಬಾಡಿ ಬೇರಿಲ್ಲದ ಕಾರಣ ಒಣಗಿಹೋದವು.7ಮತ್ತೆ ಕೆಲವು ಬೀಜ ಮುಳ್ಳುಗಿಡಗಳಲ್ಲಿ ಬಿದ್ದವು; ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು.8ಇನ್ನು ಕೆಲವು ಒಳ್ಳೆಯ ನೆಲದಲ್ಲಿ ಬಿದ್ದು ಒಂದು ನೂರರಷ್ಟು, ಒಂದು ಅರುವತ್ತರಷ್ಟು, ಒಂದು ಮೂವತ್ತರಷ್ಟು ಫಲವನ್ನು ಕೊಟ್ಟವು."(ಮತ್ತಾಯ 13:3-8)
ಕರ್ತನಾದ ಯೇಸುವು ನಾಲ್ಕು ರೀತಿಯ ವಾತಾವರಣದ ಕುರಿತು ಹೇಳಿದ್ದಾನೆ.
1) ದಾರಿ ಮಗ್ಗಲು
2) ಬಂಡೆಯ ಮೇಲೆ
3) ಮುಳ್ಳುಗಳ ಮಧ್ಯೆ
4) ಒಳ್ಳೆಯ ನೆಲ
ಇಲ್ಲಿ ಬಹು ಆಸಕ್ತಿಕರವಾದ ಭಾಗವೇನೆಂದರೆ ಬಿತ್ತುವವನು ಒಬ್ಬನೇ ಬಿತ್ತುವ ಬೀಜವು ಒಂದೇ ಆದರೂ ಅದು ಬಿತ್ತಿದ ವಾತಾವರಣದ ಕಾರಣದಿಂದ ಕೆಲವು ಬೀಜಗಳು ಫಲಪ್ರದವಾಗಲು ಸಾಧ್ಯವಾಗಲಿಲ್ಲ. ಕೇವಲ ಒಳ್ಳೆಯ ವಾತಾವರಣದಲ್ಲಿ ಬಿದ್ದ ಬೀಜಗಳು ಮಾತ್ರ ಅದ್ಭುತವಾದ ಇಳುವರಿಯನ್ನು ಕೊಟ್ಟವು.
ಅನೇಕರು ತಮ್ಮ ಜೀವಿತದಲ್ಲಿ ಫಲಪ್ರದತೆಯನ್ನೂ, ಪರಿಣಾಮಕಾರಿಯಾದ ಬೆಳವಣಿಗೆಯನ್ನು ಕಾಣಲು ಹೋರಾಡುತ್ತಿದ್ದಾರೆ. ಏಕೆಂದರೆ ಇವುಗಳಿಗಾಗಿ ವಾತಾವರಣವು ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಪ್ರಕಟಣೆ ಅವರಿಗಿಲ್ಲ.ನೀವು ಈ ಪ್ರಕಟಣೆಯನ್ನು ಹೊಂದುಕೊಳ್ಳುವ ಸಮಯ ಇದಾಗಿದೆ.
ಪ್ರಾರ್ಥನೆಗಳು
ತಂದೆಯೇ, ನನ್ನನ್ನು ನನ್ನ ಕುಟುಂಬದವರನ್ನು ಸರಿಯಾದ ವಾತಾವರಣದಲ್ಲಿ ನೆಲೆಗೊಳಿಸು ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ.ಆಮೆನ್.
Join our WhatsApp Channel
Most Read
● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-II● ಹಣಕಾಸಿನ ಅದ್ಭುತ ಬಿಡುಗಡೆ.
● ದಿನ 09:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಬೀಜದಲ್ಲಿರುವ ಶಕ್ತಿ-1
● ಕೃಪೆಯ ಮೇಲೆ ಕೃಪೆ
● ಉತ್ತಮ ಹಣ ನಿರ್ವಹಣೆ
● ಅಶ್ಲೀಲತೆಯಿಂದ ಬಿಡುಗಡೆ ಕಡೆಗಿನ ಪಯಣ
ಅನಿಸಿಕೆಗಳು