ಅನುದಿನದ ಮನ್ನಾ
ಹೆಚ್ಚು ಹೆಚ್ಚಾಗಿ ಬೆಳೆಯುವ ನಂಬಿಕೆ
Friday, 31st of May 2024
3
1
205
Categories :
ನಂಬಿಕೆ (Faith)
"ನಾವು ನಂಬಿಕೆಯ ಫಲವಾದ ನಿಮ್ಮ ಕೆಲಸವನ್ನೂ ಪ್ರೀತಿಪೂರ್ವಕವಾದ ನಿಮ್ಮ ಪ್ರಯಾಸವನ್ನೂ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೇಲಣ ನಿರೀಕ್ಷೆಯಿಂದುಂಟಾದ ನಿಮ್ಮ ಸೈರಣೆಯನ್ನೂ ನಮ್ಮ ತಂದೆಯಾದ ದೇವರ ಮುಂದೆ ಎಡೆಬಿಡದೆ ಜ್ಞಾಪಕಮಾಡಿಕೊಂಡು ನಮ್ಮ ಪ್ರಾರ್ಥನೆಗಳಲ್ಲಿ ನಿಮಗೋಸ್ಕರ ವಿಜ್ಞಾಪನೆಮಾಡುವಾಗ ನಿಮ್ಮೆಲ್ಲರ ವಿಷಯದಲ್ಲಿ ದೇವರಿಗೆ ಯಾವಾಗಲೂ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ."(1 ಥೆಸಲೋನಿಕದವರಿಗೆ 1:2-3)
ನಿಮ್ಮ ನಂಬಿಕೆಯು ಬೆಳೆಯಬಲ್ಲದು ಎಂದು ನಿಮಗೆ ತಿಳಿದಿದೆಯೇ? ನೀವು ನಿಮ್ಮ ಜೀವಿತದಲ್ಲಿ ಉಕ್ಕಿ ಬರುತ್ತಿರುವ ಎಲ್ಲಾ ಉಪದ್ರವಗಳನ್ನು ಕಡೆಗಣಿಸಿ, ದೇವರ ಮೇಲೆಯೇ ಲಕ್ಷವಿಟ್ಟು ನಂಬಿಕೆಯಿಂದ ನಂಬಿಕೆಗೆ ಇನ್ನೂ ಹೆಚ್ಚಾಗಿ ಬೆಳೆಯುವ ಜೀವಿತವನ್ನು ಜೀವಿಸಬಹುದೆಂಬುದು ನಿಮಗೆ ತಿಳಿದಿದೆಯೇ?ಆ ಹಂತದಲ್ಲಿ ನಿಮಗೆ ಆನಂದವು ಲೌಕಿಕ ವಸ್ತುಗಳಿಂದ ದೊರಕದೆ ಪವಿತ್ರಾತ್ಮನಿಂದ ದೊರಕುತ್ತಿರುತ್ತದೆ.
ಎಂದಿಗೂ ಆಶಾಭಂಗ ಪಡದಂತ ಬಲವನ್ನು,ಮಿತಿಯಿಲ್ಲದ ಸಾಧ್ಯತೆಗಳನ್ನು ಅನುಭವಿಸಿದ ಕೆಲವು ರೀತಿಯ ಜನರ ಕುರಿತು ಸತ್ಯವೇದ ನಮಗೆ ಯೇಶಾಯ 40:31 ರಲ್ಲಿ ಹೇಳುತ್ತದೆ."ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು [ಏರುವರು]; ಓಡಿ ದಣಿಯರು, ನಡೆದು ಬಳಲರು."(ಯೆಶಾಯ 40:31)ಈ ಒಂದು ವಾಕ್ಯವು ಎಂದಿಗೂ ಬಳಲಿಹೋಗದಂತ, ಆಶಾಭಂಗಪಡದಂತಹ ದಣಿಯದಂತಹ ಕ್ರಿಸ್ತೀಯ ಜೀವಿತವನ್ನು ನೀವು ಜೀವಿಸಬಹುದಾದ ಸಾಧ್ಯತೆಯನ್ನು ಪ್ರಕಟಿಸುತ್ತದೆ. ಇದು ನಿಜಕ್ಕೂ ಎಷ್ಟು ಮನೋಹರವಾದದ್ದು ಅಲ್ಲವೇ?
ಯಾವುದೇ ರೀತಿಯ ಬೆಳವಣಿಗೆಯು ಅದರಲ್ಲಿನ ಜೀವಂತಿಕೆಯನ್ನು ಸೂಚಿಸುತ್ತದೆ. ಅದರಂತೆಯೇ ದೇವರ ದೇವರ ಮೇಲಿರುವ ವಿಶ್ವಾಸ- ನಂಬಿಕೆಯಲ್ಲಿ ಬೆಳೆಯುತ್ತಾ ಹೋಗುವಂತದ್ದು ನಿಮಗೆ ದೇವರ ಮೇಲಿರುವ ಜೀವವುಳ್ಳ ನಿರೀಕ್ಷೆಯ ಗುರುತಾಗಿದೆ. ನೀವು ನಂಬಿಕೆಯಲ್ಲಿ ಎತ್ತರಕ್ಕೆ ಬೆಳೆಯಲು ಎಂದಿಗೂ ಆಶಾಭಂಗಪಡಿಸದ ದೇವರಲ್ಲಿ ಆಳವಾಗಿ ಬೇರೂರಬೇಕು. ನೋಡಿರಿ, ದೇವರ ವಾಕ್ಯಕ್ಕೆ ವಿಧೇಯವಾಗುವಂತದ್ದು ನಂಬಿಕೆಗೆ ಮಹತ್ತರವಾದ ಬಲ ಕೊಡುತ್ತದೆ. ದೇವರ ವಾಕ್ಯವಿಲ್ಲದೆ ಬದುಕುವಂಥದ್ದು ನಿಮ್ಮ ನಂಬಿಕೆಯ ಜೀವಿತದಲ್ಲಿ ಮರಣವನ್ನಾವರಿಸುವಂತೆ ಮಾಡುತ್ತದೆ. ಇಲ್ಲಿರುವ ಮತ್ತೊಂದು ಸಂಗತಿ ಎಂದರೆ ಪ್ರಾರ್ಥನೆಯು ನಿಮ್ಮ ದೈನಂದಿನ ಜೀವನ ಶೈಲಿ ಆಗಿರಬೇಕು. ನಿಮ್ಮ ನಂಬಿಕೆಯನ್ನು ಕಟ್ಟಿಕೊಳ್ಳುತ್ತಾ ಹೋಗಲು ಪ್ರಾರ್ಥನೆಎಂಬುದು ದೇವರ ಸಾಮರ್ಥ್ಯ ಕಾರ್ಯಗತ ಮಾಡಲು ವಂತಿಗೆಯಾಗಿದೆ. (ಯೂದ 20).
ನಂಬಿಕೆಯ ಮನುಷ್ಯನ ಬದುಕುಳಿಯುವಿಕೆಯು ದೇವರ ಮೇಲೆ ಆಧಾರಗೊಂಡಿರುತ್ತದೆ.ಈ ಒಂದು ಗುಣವನ್ನು ನಮ್ಮ ಪಿತೃಗಳಾದ ಅಬ್ರಹಾಮ, ಇಸಾಕ, ಯಾಕೋಬ, ಎಲೀಯ, ದಾವೀದ, ಕರ್ತನಾದ ಯೇಸು ಮತ್ತು ಇನ್ನೂ ಅನೇಕ ಸತ್ಯವೇದದಲ್ಲಿರುವ ಪಾತ್ರದಾರಿಗಳಲ್ಲಿ ಕಾಣುತ್ತೇವೆ. ರಕ್ಷಣೆಯಿಂದಾಗಿ ಪಡೆದ ನಂಬಿಕೆ ಬೀಜವು ದೇವರ ವಾಕ್ಯ ಮತ್ತು ಪ್ರಾರ್ಥನೆ ಎಂಬ ನೀರನ್ನು ಹಾಯಿಸುವ ಮೂಲಕ ಬೆಳೆಯನ್ನು ಬೆಳೆಸುತ್ತದೆ.
ನಂಬಿಕೆಯನ್ನು ಅಳೆಯುವ ಒಂದು ಮಾರ್ಗವೆಂದರೆ ಅದು ಪ್ರೀತಿ. "ನಿಮ್ಮೊಳಗೆ ಒಬ್ಬರಿಗೊಬ್ಬರ ಮೇಲೆ ಇರುವ ಪ್ರೀತಿಯಿಂದಲೇ...... ". ನಿಮ್ಮ ಪ್ರೀತಿಯ ಜೀವಿತ ಹೇಗಿದೆ? ನೀವು ದೇವರನ್ನು ಎಷ್ಟು ಪ್ರೀತಿಸುತ್ತೀರಿ? ನೀವು ನಿಮ್ಮ ನೆರೆಹೊರೆಯವರನ್ನು ಎಷ್ಟು ಪ್ರೀತಿಸುತ್ತಿದ್ದೀರಿ? ನೀವು ನಂಬಿಕೆಯಲ್ಲಿ ಬೆಳೆಯಬೇಕೆಂದರೆ ಪ್ರೀತಿಯಲ್ಲಿಯೂ ಬೆಳೆಯಬೇಕು. ನೀವು ನಂಬಿಕೆಯನ್ನು ಹೊಂದಿಕೊಳ್ಳಲು ನೀವು ಮೊದಲು ಪ್ರೀತಿಯನ್ನು ಹೊಂದಿಕೊಳ್ಳಬೇಕು. ಇದನ್ನೇ ಗಲಾತ್ಯ 5:22ರಲ್ಲಿ ಹೇಳಿರುವಂಥದ್ದು.
ನೀವು ನಂಬಿಕೆಯಲ್ಲಿ ಬೆಳೆಯಲು ನೀವು ಆತ್ಮಿಕ ಜ್ಞಾನದಲ್ಲಿಯೂ, ಸತ್ಯದಲ್ಲಿಯೂ ಬೆಳೆಯಬೇಕು. ದೇವರ ವಾಕ್ಯಗಳು ನಿಮಗೆಷ್ಟು ಗೊತ್ತು? ಅದರಲ್ಲಿ ಎಷ್ಟು ವಾಕ್ಯಗಳು ನಿಮ್ಮ ಜೀವಿತವನ್ನು ಮಾರ್ಪಡಿಸಿವೆ? ದೇವರ ವಾಕ್ಯಗಳು ನಿಮ್ಮಲ್ಲಿ ಕಾರ್ಯ ಮಾಡಲು ನೀವು ಅನುಮತಿಸಿದ್ದೀರಾ? ಸತ್ಯವೇದದಲ್ಲಿರುವ ನಂಬಿಕೆಯ ವೀರರಾದ ಸ್ತ್ರೀ- ಪುರುಷರು ಮಾರ್ಪಡಿವಿಕೆಯ ಈ ಪ್ರಕ್ರಿಯೆಯನ್ನು ಹಾದು ಹೋದರು. ಅವರೆಲ್ಲಾ ಬೆಂಕಿಯ ಕುಲಮೆಯಲ್ಲಿ ಪುಟಕ್ಕೆ ಹಾಕಲ್ಪಟ್ಟ ಚಿನ್ನದೋಪಾದಿಯಲ್ಲಿದ್ದರು.
ನಂಬಿಕೆಯಲ್ಲಿ ಹೆಚ್ಚು ಹೆಚ್ಚಾಗಿ ಬೆಳೆಯುವಂಥ ಜೀವಿತವು ಶರಣಾಗತಿಯ ಮತ್ತು ತ್ಯಾಗ ಪೂರ್ವಕವಾದ ಜೀವಿತವಾಗಿದೆ.ದೇವರಿಗೆ ಕೊಡಲಾಗದಂತ ದೊಡ್ಡ ವಸ್ತು ಒಂದೂ ಇಲ್ಲ. ಹಾಗೆಯೇ ದೇವರಿಂದ ಕಾರ್ಯ ಮಾಡಲಾರದ ಹಾಗೆ ಯಾವುದೇ ವಾಕ್ಯವು ಚಿಕ್ಕದಲ್ಲ. ಕ್ರೈಸ್ತರಾಗಿ ನಾವು ನಂಬಿಕೆಯಲ್ಲಿ ಥೆಸಲೋನಿಕದವರ ಹಾಗೆ ಹೆಚ್ಚು ಹೆಚ್ಚಾಗಿ ಬೆಳೆಯುತ್ತಾ ಹೋಗಬೇಕು. ನಮ್ಮ ನಂಬಿಕೆಯು ಜನರು ದೇವರನ್ನು ಸ್ತುತಿಸಲು ಕಾರಣವಾಗುವ- ಪ್ರೇರೇಪಣೆಯ ಮೂಲವಾಗಬೇಕು. ಇಂದಿನಿಂದ ಉದ್ದೇಶಪೂರ್ವಕವಾಗಿ ನಂಬಿಕೆಯಲ್ಲಿ ಬೆಳೆಯುತ್ತಾ ಹೋಗುವುದನ್ನು ಆಯ್ಕೆ ಮಾಡಿಕೊಳ್ಳಿ.
ಪ್ರಾರ್ಥನೆಗಳು
ತಂದೆಯೇ, ನಾನು ನಂಬಿಕೆಯಲ್ಲಿ ಇನ್ನೂ ಹೆಚ್ಚು ಹೆಚ್ಚಾಗಿ ಬೆಳೆಯುಲೂ ನಿನ್ನ ಆನಂದಕ್ಕೆ ಕಾರಣವಾಗಲೂ ಬಯಸುತ್ತೇನೆ. ಆದ್ದರಿಂದ ಯೇಸು ನಾಮದಲ್ಲಿ ನನಗೆ ಸಹಾಯ ಮಾಡು ಕರ್ತನೇ,ಆಮೇನ್.
Join our WhatsApp Channel
Most Read
● ನಂಬಿಕೆಯಲ್ಲಿ ದೃಢವಾಗಿ ನಿಲ್ಲುವುದು● ಯಾಬೇಚನ ಪ್ರಾರ್ಥನೆ
● ಕೊಡುವ ಕೃಪೆ -3
● ದೇವರ ವಾಕ್ಯದಲ್ಲಿರುವ ನಂಬಿಗಸ್ಥಿಕೆ
● ಮರೆಯಾದ ಸ್ಥಳವನ್ನು ಆಶ್ರಯಿಸಿಕೊಳ್ಳುವುದು.
● ನಿಮ್ಮ ಕೆಲಸದ ಕುರಿತ ಒಂದು ರಹಸ್ಯ
● ಕ್ರಿಸ್ತನ ರಾಯಭಾರಿಗಳು
ಅನಿಸಿಕೆಗಳು