ಅನುದಿನದ ಮನ್ನಾ
ಸಭೆಯಲ್ಲಿ ಐಕ್ಯತೆಯನ್ನು ಕಾಪಾಡಿಕೊಳ್ಳುವುದು
Saturday, 20th of April 2024
2
1
220
Categories :
ಪಾಪ (sin)
ಸಂಬಂಧಗಳು (Relationships)
ಸತ್ಯವೇದವು ಸಭೆಯಲ್ಲಿನ ಐಕ್ಯತೆಗೆ ಮಹತ್ತರವಾದ ಪ್ರಾಶಾಸ್ತ್ಯವನ್ನು ಕೊಟ್ಟಿದೆ.ಎಫಸ್ಸೆ 4:3 ರಲ್ಲಿ ಅಪೋಸ್ತಲನಾದ ಪೌಲನು "ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವದಕ್ಕೆ ಆಸಕ್ತರಾಗಿರಿ." ಎಂದು ಕ್ರೈಸ್ತರನ್ನು ಹುರಿದುಂಬಿಸುತ್ತಾನೆ. ಈ ಒಂದು ಐಕ್ಯತೆಗೆ ಇರುವ ಒಂದು ದೊಡ್ಡ ಬೆದರಿಕೆ ಎಂದರೆ 'ಚಾಡಿ ಮಾತು ಎಂಬ ಪಾಪ'.
ಸಭೆಯಲ್ಲಿರುವ ಸದಸ್ಯರು ದುರುದ್ದೇಶದಿಂದ ಚಾಡಿ ಮಾತು ಮತ್ತು ಸುಳ್ಳು ಸುದ್ದಿಗಳನ್ನು ಹರಡುವುದರಲ್ಲಿ ತೊಡಗಿದಾಗ ಅದು ಸಂಬಂಧಗಳಲ್ಲಿ ವಿಷ ಬೀಜವನ್ನು ಬಿತ್ತುತ್ತದೆ ಮತ್ತು ಕ್ರಿಸ್ತನ ದೇಹವನ್ನು ವಿಭಜಿಸುತ್ತದೆ. ಕ್ರೈಸ್ತರದ ನಾವು ಈ ವಿನಾಶಕಾರಿಯದ ಪಾಪದ ವಿಚಾರದಲ್ಲಿ ಬಹು ಎಚ್ಚರದಿಂದ ಇರಬೇಕು.
ಚಾಡಿ ಮಾತಿನಲ್ಲಿರುವ ವಿನಾಶಕತೆ
ಚಾಡಿ ಮಾತು ಅಥವಾ ಸುಳ್ಳು ಸುದ್ದಿ ಎಂಬುದು ಒಬ್ಬ ವ್ಯಕ್ತಿಯ ಗೌರವವನ್ನು ಹಾಳು ಮಾಡುವಂತೆ ಹೇಳುವ ಸುಳ್ಳು ಆರೋಪಗಳಾಗಿರುತ್ತದೆ. ಜ್ಞಾನೋಕ್ತಿ 10:18 ಹೇಳುವಂತೆ "ಹೊಟ್ಟೆಯಲ್ಲಿ ಹಗೆಯನ್ನಿಟ್ಟುಕೊಂಡವನು ಸುಳ್ಳುಗಾರ; ಚಾಡಿಗಾರನು ಜ್ಞಾನಹೀನ." ಈ ಚಾಡಿ ಮಾತು ಕಹಿಯಾದ ಹೊಟ್ಟೆ ಕಿಚ್ಚಿನ ಹೃದಯದಿಂದ ಹುಟ್ಟಿ ದೊಡ್ಡ ಅನಾಹುತವನ್ನು ಮಾಡುತ್ತದೆ.
ಯಾಕೋಬ 3:5-6ರಲ್ಲಿ ನಾಲಿಗೆಯನ್ನು ಒಂದು ಸಣ್ಣ ಕೆಚ್ಚಿಗೆ ಹೋಲಿಸಲಾಗಿದೆ. "ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ. 6ಎಷ್ಟು ಕೊಂಚ ಕಿಚ್ಚು ಎಷ್ಟು ದೊಡ್ಡ ಕಾಡನ್ನು ಉರಿಸುತ್ತದೆ ನೋಡಿರಿ. ನಾಲಿಗೆಯೂ ಕಿಚ್ಚೇ. ನಾಲಿಗೆಯು ಅಧರ್ಮಲೋಕರೂಪವಾಗಿ ನಮ್ಮ ಅಂಗಗಳ ನಡುವೆ ಇಟ್ಟದೆ. ಅದು ದೇಹವನ್ನೆಲ್ಲಾ ಕೆಡಿಸುತ್ತದೆ. ತಾನೇ ನರಕದಿಂದ ಬೆಂಕಿಹತ್ತಿಸಿಕೊಳ್ಳುತ್ತಾ ಪ್ರಪಂಚವೆಂಬ ಚಕ್ರಕ್ಕೆ ಬೆಂಕಿಹಚ್ಚುತ್ತದೆ."ಚಾಡಿ ಮಾತು ಸ್ನೇಹಿತರನ್ನು, ಕುಟುಂಬಗಳನ್ನು ಮತ್ತು ಸಭೆಯನ್ನು ಅಗಲಿಸುತ್ತದೆ.
ನಾವೀಗ ತಾವು ಮುಂದೆ ಬರಲು ಇನ್ನೊಬ್ಬರನ್ನು ತುಳಿಯುವಂತ ನಿರ್ದಯವಾದ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಆದರೆ ನಾವಾದರೋ ಉನ್ನತ ಜೀವಿತವನ್ನು ಜೀವಿಸಲು ಪ್ರೀತಿಯಿಂದ ಒಬ್ಬರನ್ನು ಒಬ್ಬರು ಕಟ್ಟಲು ಸಭೆಯಾಗಿ ಕರೆಯಲ್ಪಟ್ಟಿದ್ದೇವೆ (1ಥೆಸೆಲೋನಿಕ 5:11).ನಾವು ಇಂತಹ ಚಾಡಿಕೋರರ ಮಾತುಗಳಿಗೆ ಕಿವಿ ಕೊಡುವಾಗ ಅಥವಾ ಅಂತವರೊಡನೆ ಪಾಲುಗಾರರಾದಾಗ ಕದ್ದುಕೊಳ್ಳುವ ಕೊಲ್ಲುವ ನಾಶ ಮಾಡುವ ಕುತಂತ್ರವನ್ನು ಇಟ್ಟುಕೊಂಡು ಬರುವ ಸೈತಾನನ ಜೊತೆಗೆ ಪಾಲುಗಾರರಾಗುತ್ತೇವೆ. (ಯೋಹಾನ 10:10). ಚಾಡಿ ಮಾತುಗಳು ನಮ್ಮಲ್ಲಿ ಪ್ರೀತಿ ಆನಂದ ಮತ್ತು ಸಮಾಧಾನದ ಫಲವನ್ನು ಫಲಿಸುವಂತಹ ಪವಿತ್ರಾತ್ಮನನ್ನು ನಂದಿಸುತ್ತದೆ. (ಎಫಸ್ಸೆ 4:30-31).
ದೇವರ ನೀತಿವಂತಿಕೆಯ ನ್ಯಾಯ ತೀರ್ಪು
ಆತ್ಮಿಕ ನಾಯಕರ ವಿರುದ್ಧ ಚಾಡಿ ಮಾತು ಹೇಳಿದಾಗ ತಕ್ಷಣವೇ ದೇವರ ನ್ಯಾಯ ತೀರ್ಪು ಉಂಟಾದದನ್ನು ಸತ್ಯವೇದವು ದಾಖಲಿಸಿದೆ.ಅರಣ್ಯ ಕಾಂಡ 12ರಲ್ಲಿ ಮಿರ್ಯಾಮಳು ಮತ್ತು ಆರೋನರು ಮೋಶೆಯನ್ನು ಟೀಕಿಸಿದಾಗ ಯಹೋವನು ಮಿರ್ಯಮಳನ್ನು ಕುಷ್ಟರೋಗದಿಂದ ಬಡಿದನು. ಅರಣ್ಯ ಕಾಂಡ 16ರಲ್ಲಿ ಕೋರಹನು ಮೋಶೆಗೆ ವಿರುದ್ಧವಾಗಿ ತಿರುಗಿ ಬಿದ್ದಾಗ ಭೂಮಿಯು ಬಾಯಿ ತೆರೆದು ಕೋರಹನನ್ನು ಅವನ ಹಿಂಬಾಲಕರನ್ನು ನುಂಗುವಂತೆ ಮಾಡಿದನು.
ಕರ್ತನಾದ ಯೇಸು ಸ್ವಾಮಿಯು ನಾವು ಸುಮ್ಮಸುಮ್ಮನೆ ಮಾತನಾಡುವ ಪ್ರತಿಯೊಂದು ಮಾತಿಗೂ ನ್ಯಾಯ ತೀರ್ಪಿನ ದಿನದಲ್ಲಿ ಲೆಕ್ಕ ಕೊಡಬೇಕೆಂದು ಎಚ್ಚರಿಸಿದ್ದಾನೆ (ಮತ್ತಾಯ 12:36- 37). ಯಾರೆಲ್ಲಾ ಇನ್ನೊಬ್ಬರ ಚಾರಿತ್ರವನ್ನು ತಮ್ಮ ಮಾತುಗಳಿಂದ ಹಾಳು ಮಾಡುತ್ತಿದ್ದಾರೋ ಅವರು ಅದಕ್ಕಾಗಿ ಪಶ್ಚಾತಾಪ ಪಡದ ಹೊರತು ದೇವರ ನ್ಯಾಯ ತೀರ್ಪಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕೀರ್ತನೆ 101:5 ಹೇಳುತ್ತದೆ."ಗುಪ್ತದಲ್ಲಿ ನೆರೆಯವನ ಮೇಲೆ ಚಾಡಿಹೇಳುವವನನ್ನು ಸಂಹರಿಸುವೆನು.." ಎಂದು
ನಮ್ಮ ಹೃದಯ ಮತ್ತು ಮಾತುಗಳ ಕುರಿತು ಜಾಗರೂಕತೆಯಿಂದ ಇರುವುದು
ಚಾಡಿ ಮಾತು ಎನ್ನುವಂತದು ಹೃದಯದಿಂದಲೇ ಹುಟ್ಟುವುದರಿಂದ ಮೊದಲಾಗಿ ನಾವು ಹೃದಯದ ಬಗ್ಗೆ ಜಾಗರೂಕತೆ ವಹಿಸಬೇಕು. ಜ್ಞಾನೋಕ್ತಿ 4:23 ಸೂಚಿಸುವುದೇನೆಂದರೆ"ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು."ಎಂದು
ಆದುದರಿಂದ "ಎಲ್ಲಾ ದ್ವೇಷ ಕೋಪ ಕ್ರೋಧ ಕಲಹ ದೂಷಣೆ ಇವುಗಳನ್ನೂ ಸಕಲವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ."(ಎಫೆಸದವರಿಗೆ 4:31)
"ಹೀಗಿರಲಾಗಿ ನೀವು ದೇವರಿಂದ ಆರಿಸಿಕೊಂಡವರೂ ಪ್ರತಿಷ್ಠಿತರೂ ಪ್ರಿಯರೂ ಆಗಿರುವದರಿಂದ ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ."(ಕೊಲೊಸ್ಸೆಯವರಿಗೆ 3:12 )
ಜ್ಞಾನೋಕ್ತಿ 21:23 ಹೇಳುತ್ತದೆ"ತನ್ನ ಬಾಯನ್ನೂ ನಾಲಿಗೆಯನ್ನೂ ಕಾಯುವವನು ತೊಂದರೆಗಳಿಂದ ರಕ್ಷಿಸಿಕೊಳ್ಳುವನು." ಎಂದು. ನಾವು ಇನ್ನೊಬ್ಬರ ಬಗ್ಗೆ ಮಾತನಾಡುವ ಶೋಧನೆಗೆ ಬೀಳುವ ಮೊದಲು "ಇದು ನಿಜವೇ?", "ಇದು ನನಗೆ ಅವಶ್ಯವ?" "ಇದರಿಂದ ಪ್ರಯೋಜನವೇನು?" ಎಂಬ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳಬೇಕು ಬಹುತೇಕ ಸಮಯದಲ್ಲಿ ನಾವು ಸುಮ್ಮನಿದ್ದು ಬಿಡುವಂಥದ್ದು ಅತ್ಯುತ್ತಮವಾದದ್ದು.
ನಾವು ಏನನ್ನಾದರೂ ಮಾತನಾಡಿದರೆ ಒಬ್ಬರನ್ನೊಬ್ಬರು ಕಟ್ಟುವಂತೆ ಇರಬೇಕೇ ವಿನಃ ಅವರನ್ನು ಕೆಡವಿ ತುಳಿಯುವಂತೆ ಇರಬಾರದು. ಎಫಸ್ಸೆ 4: 29 ಹೇಳುತ್ತದೆ.. "ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ." ಎಂದು.
ಯಾರಾದರೂ ಈ ರೀತಿ ಚಾಡಿ ಮಾತು ಹೇಳುವುದರಲ್ಲೂ ಸುಳ್ಳು ಸುದ್ದಿಯನ್ನು ಹಬ್ಬಿಸುವುದರಲ್ಲೂ ತೊಡಗಿದ್ದರೆ ನಾವು ಅವರನ್ನು ಸಮಾಧಾನದಿಂದ ತಿದ್ದಬೇಕು (ಗಲಾತ್ಯ 6:1)
"ಬಡಗಣಗಾಳಿ ಮಳೆ ಬರಮಾಡುವದು; ಚಾಡಿಯ ನಾಲಿಗೆ ಕೋಪದ ಮುಖ ಮಾಡುವದು. " ಎಂದು ಜ್ಞಾನೋಕ್ತಿಗಳು 25:23 ಹೇಳುತ್ತದೆ. ಬಿರುನುಡಿಯು ಕೋಪವನ್ನು ಎಬ್ಬಿಸುತ್ತದೆ. ಮೃದುವಾದ ಪ್ರತ್ಯುತ್ತರವು ಕೋಪವನ್ನು ಆರಿಸುತ್ತದೆ. ಎಂದು ಹೇಳುವ ಹಾಗೆ ಸಮಾಧಾನಕರವಾದ ಬುದ್ಧಿ ಮಾತುಗಳಿಂದ ಈ ಸುಳ್ಳು ಸುದ್ದಿಯ ಸಂಚಾರವನ್ನು ನಿಲ್ಲಿಸಬಹುದು.
ಪ್ರಾರ್ಥನೆಗಳು
ಪರಲೋಕದ ತಂದೆಯೇ,ನಮ್ಮ ನಾಲಿಗೆಯನ್ನು ಚಾಡಿ ಮಾತೆಂಬ ವಿಷಚಕ್ರದಿಂದ ಬಿಡಿಸು. ನಿಮ್ಮ ಪ್ರೀತಿ ಮತ್ತು ಜ್ಞಾನದಿಂದ ನಮ್ಮ ಹೃದಯಗಳನ್ನು ತುಂಬಿಸು. ನಾವು ಸಮಾಧಾನಪಡಿಸುವ- ಜನರನ್ನು ಒಗ್ಗೂಡಿಸುವ ಮಾತುಗಳನ್ನು ಆಡುವಂತೆಯೂ ಇದರಿಂದ ನಾವು ನಿಮ್ಮ ಸಭೆಯನ್ನು ನಿಮ್ಮ ನಾಮದ ಮಹಿಮೆಗಾಗಿ ಶಾಂತಿಯಿಂದಲೂ ಪ್ರೀತಿಯಿಂದಲೂ ನಿರ್ಮಿಸುವಂತೆಯೂ ಯೇಸು ನಾಮದಲ್ಲಿ ನಮಗೆ ಸಹಾಯ ಮಾಡು ಆಮೆನ್
Join our WhatsApp Channel
Most Read
● ನಂಬಿಕೆಯಲ್ಲಿಯೋ ಅಥವಾ ಭಯದಲ್ಲಿಯೋ● ಕರ್ತನಾದ ಯೇಸುವಿನ ಮುಖಾಂತರ ಕೃಪೆ
● ಅತ್ಯುನ್ನತವಾದ ರಹಸ್ಯ
● ದೇವರಿಗಾಗಿ ಮತ್ತು ದೇವರೊಂದಿಗೆ.
● ನಿಮ್ಮ ದೌರ್ಬಲ್ಯಗಳನ್ನು ದೇವರಿಗೆ ಒಪ್ಪಿಸಿ
● ಕಳೆದು ಹೋದ ರಹಸ್ಯ
● ದಿನ 23:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು