"ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ; ಯಾಕಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವಿರುವದಿಲ್ಲ; ಇರುವ ಅಧಿಕಾರಿಗಳು ದೇವರಿಂದ ನೇವಿುಸಲ್ಪಟ್ಟವರು."(ರೋಮಾಪುರದವರಿಗೆ 13:1)
ಇಂದು ಬಹುತೇಕ ಕ್ರೈಸ್ತರಲ್ಲಿ ಇರುವ ಒಂದು ಸಮಸ್ಯೆ ಏನೆಂದರೆ ಅವರು ಸಭೆಗೆ ಹಾಜರಾಗುತ್ತಾರೆ, ಸಭೆಯಲ್ಲಿ ಸ್ವಯಂಸೇವಕರಾಗಿ ಕಾರ್ಯ ಮಾಡುತ್ತಾರೆ, ಆರಾಧನೆಯ ಗುಂಪಿನಲ್ಲಿ ಕೂಡಿ ಹಾಡುತ್ತಾರೆ. ಇದೆಲ್ಲ ಒಳ್ಳೆಯದೇ! ಆದರೆ ದುಃಖದ ವಿಚಾರವೇನೆಂದರೆ ಮುಖ್ಯವಾಗಿ ಕರ್ತನಾದ ಯೇಸು ಕ್ರಿಸ್ತನೊಂದಿಗೆ ಅವರಿಗೆ ಇರಬೇಕಾದ ವೈಯಕ್ತಿಕವಾದ ಬಾಂದವ್ಯವೇ ಇರುವುದಿಲ್ಲ. ಇದರಿಂದಲೇ ಸೈತಾನನ್ನು ಅವರನ್ನು ನೋಡಿ ನಗುತ್ತಾನೆ. ಆದ್ದರಿಂದಲೇ ಸೈತಾನನ ಮೇಲೆಯೂ ಅವನ ಕ್ರಿಯೆಗಳ ಮೇಲೆಯೂ ಅವರಿಗೆ ಯಾವುದೇ ರೀತಿ ಅಧಿಕಾರವಿರುವುದಿಲ್ಲ.
ಇಂದು ಸಭೆಗೆ ಬರುವ ಬಹುತೇಕ ಸದಸ್ಯರುಗಳಿಗೆ ಪಾಸ್ಟರ್ ಮತ್ತು ಪ್ರವಾದಿಗಳು ಬೇಕು ಮತ್ತು ಆ ದೇವಸೇವಕರು ಅವರ ಮೇಲೆ ಕೈಯಿಟ್ಟು ಪ್ರವಾದಿಸಬೇಕು. ಮತ್ತೆ ಇದೂ ಸಹ ಒಳ್ಳೆಯದೇ!. ಆದರೆ ಅವರುಗಳು ತಾವಾಗಿಯೇ ಎಂದಿಗೂ ವೈಯಕ್ತಿಕವಾದ ಪ್ರಾರ್ಥನೆಯನ್ನಾಗಲಿ ವಾಕ್ಯ ಧ್ಯಾನವನ್ನಾಗಲೀ ಮಾಡಲಾರರು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅವರು ತಮ್ಮ ಕರ್ತನೊಂದಿಗೆ ಒಂದು ವೈಯಕ್ತಿಕ ಬಾಂಧವ್ಯವನ್ನು ಮೂಡಿಸಿಕೊಳ್ಳಲು ಪ್ರಾರ್ಥನೆಯಲ್ಲಿಯೂ ವಾಕ್ಯದಲ್ಲಿಯೂ ಹಾಗೂ ಆರಾಧನೆಯಲ್ಲಿಯೂ ಸಮಯ ಕಳೆಯಲು ಸಿದ್ಧವಿರಲಾರರು.
ದೈವಿಕ ಬಾಂಧವ್ಯವನ್ನು ಬೆಳೆಸಿಕೊಂಡರೇನೇ ಆತ್ಮಿಕ ಆಯಾಮದಲ್ಲಿ ಅಧಿಕಾರ ದೊರಕುವಂಥದ್ದು. ದುರಾತ್ಮಗಳಿಗೆ ಈ ನಿಯಮ ಹಾಗೂ ಒಡಂಬಡಿಕೆಯ ಕುರಿತು ಜ್ಞಾನವಿದೆ. ಆತ್ಮಿಕ ಆಯಾಮದಲ್ಲಿ ಯಾವುದೂ ಸಹ ಮರೆಯಾಗಿರಲಾರದು. ಆದ್ದರಿಂದಲೇ ದುರಾತ್ಮ ಶಕ್ತಿಗಳು ಸುಲಭವಾಗಿ ಕಪಟಿಗಳನ್ನು ಎತ್ತಿ ತೋರಿಸುತ್ತದೆ.
ಆದಿಸಭೆಯಲ್ಲಿಯೂ ಇದು ನಡೆದಿತ್ತು. ಕ್ರೈಸ್ತ ಶಿಷ್ಯರು ಯೇಸು ನಾಮದಲ್ಲಿ ದುರಾತ್ಮಗಳನ್ನು ಬಿಡಿಸುವಂತದ್ದು ಆಗ ಬಲೂ ಜನಪ್ರಿಯವಾಗಿತ್ತು. ಆಗ ಕೆಲವು ಅವಿಶ್ವಾಸಿಗಳು ಸಹ ಯೇಸು ನಾಮದಲ್ಲಿ ದೆವ್ವಗಳನ್ನು ಗದರಿಸಿದಾಗ ಬಿಟ್ಟು ಓಡಿ ಹೋಗುತ್ತಿದ್ದವು. ಹಾಗಾಗಿ ಯೇಸು ನಾಮವನ್ನು ಹೇಳುವುದೇ ದೆವ್ವಗಳನ್ನು ಬಿಡಿಸಲಿರುವ ಸೂತ್ರ ಎಂದು ಅವರು ಅಂದುಕೊಂಡಿದ್ದರು. ಆದರೆ ಮುಂದೇನಾಯಿತು ನೋಡಿರಿ :
"ಮಹಾಯಜಕ ಸ್ಕೇವನೆಂಬ ಒಬ್ಬ ಯೆಹೂದ್ಯನ ಏಳು ಮಂದಿ ಮಕ್ಕಳು ಹಾಗೆ ಮಾಡುತ್ತಿದ್ದರು. ಆದರೆ ದೆವ್ವವು ಅವರಲ್ಲಿ ಇಬ್ಬರಿಗೆ - ಯೇಸುವಿನ ಗುರುತು ನನಗುಂಟು, ಪೌಲನನ್ನೂ ಬಲ್ಲೆನು, ನೀವಾದರೆ ಯಾರು? ಎಂದು ಹೇಳಿತು; ಮತ್ತು ದೆವ್ವಹಿಡಿದಿದ್ದ ಆ ಮನುಷ್ಯನು ಅವರ ಮೇಲೆ ಹಾರಿ ಬಿದ್ದು ಅವರಿಬ್ಬರನ್ನೂ ಸೋಲಿಸಿ ಬಲಾತ್ಕರಿಸಿದ್ದರಿಂದ ಅವರು ಬೆತ್ತಲೆಯಾಗಿಯೂ ಗಾಯವುಳ್ಳವರಾಗಿಯೂ ಆ ಮನೆಯೊಳಗಿಂದ ಓಡಿಹೋದರು. ಈ ಸಂಗತಿಯು ಎಫೆಸದಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರಿಗೂ ಗ್ರೀಕರಿಗೂ ತಿಳಿದುಬಂದಾಗ ಅವರೆಲ್ಲರಿಗೆ ಭಯಹಿಡಿಯಿತು."(ಅಪೊಸ್ತಲರ ಕೃತ್ಯಗಳು 19:14-17)
ದೆವ್ವಗಳನ್ನು ಬಿಡಿಸುವಂತಹವರು ಕರ್ತನಾದ ಯೇಸುಕ್ರಿಸ್ತನೊಂದಿಗೆ ಬಾಂಧವ್ಯವನ್ನು ಹೊಂದಿದ್ದಾರೋ ಇಲ್ಲವೋ ಎಂಬುದು ದುರಾತ್ಮಗಳಿಗೂ ಸಹ ಗೊತ್ತಾಗುತ್ತದೆ. ಆದ್ದರಿಂದಲೇ ಈ ಜನರು ನಿಜವಾದ ಅಧಿಕಾರ ಹೊಂದಿಲ್ಲ ಎಂಬುದನ್ನು ಅವುಗಳು ನೋಡಿದ್ದವು.
ಇದರ ಮುಖ್ಯ ಅಂಶ ಏನೆಂದರೆ: ಆತ್ಮಿಕ ಆಯಾಮದಲ್ಲಿ ಕಾರ್ಯ ಮಾಡಲು, ಅದ್ಭುತಗಳಲ್ಲಿ ಕಾರ್ಯ ಮಾಡಲು ನೀವು ಮತ್ತು ನಾನು ಕರ್ತನಾದ ಯೇಸುಕ್ರಿಸ್ತನೊಂದಿಗೆ ವೈಯಕ್ತಿಕವಾದ ಬಾಂಧವ್ಯ ಬೆಳೆಸಿಕೊಂಡಿರುವುದರಿಂದ ದೊರಕುವ ಆತ್ಮಿಕ ಅಧಿಕಾರವನ್ನು ಹೊಂದಿಕೊಂಡಿರಬೇಕು. ಇಲ್ಲವಾದರೆ, ನಮ್ಮನ್ನು ಹಿಂಜಾರಿಸುವುದು ಅಥವಾ ಅವಮಾನಿಸುವುದೊಂದನ್ನು ಬಿಟ್ಟು ನಮಗೆ ವಿಧೇಯರಾಗಬೇಕೆಂಬ ಯಾವುದೇ ಹಂಗು ಆತ್ಮಿಕ ಲೋಕಕ್ಕಿಲ್ಲ.
ಪ್ರಾರ್ಥನೆಗಳು
ತಂದೆಯಾದ ದೇವರೇ, ನಾನು ಪ್ರತಿದಿನವೂ ನಿನ್ನ ನಂಬಿಕೆಯಲ್ಲಿ ಬೆಳೆಯಬೇಕು ಹಾಗೂ ನಿನ್ನ ಪಿಸು ಮಾತನ್ನೂ ಸಹ ಕೇಳಿಸಿಕೊಳ್ಳುವಂತಹ ಆಳವಾದ ಅರ್ಥಗರ್ಭಿತವಾದ ಬಾಂಧವ್ಯವನ್ನು ನಿನ್ನೊಂದಿಗೆ ಬೆಳೆಸಿಕೊಳ್ಳಬೇಕು. ಈ ಕೃಪೆಯನ್ನು ಯೇಸು ನಾಮದಲ್ಲಿ ನನಗೆ ದಯಪಾಲಿಸು. ಆಮೆನ್.
Join our WhatsApp Channel
Most Read
● ದೇವರ ಎಚ್ಚರಿಕೆಗಳನ್ನು ಕಡೆಗಣಿಸಬೇಡಿರಿ● ದಿನ 33:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 40:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂಥದ್ದು ಆಂತರಿಕ ಸ್ವಸ್ಥತೆಯನ್ನು ತರುತ್ತದೆ.
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
● ಆತನ ಬೆಳಕಿನಲ್ಲಿ ಸಂಬಂಧಗಳ ಪೋಷಣೆ
● ಯಜಮಾನನ ಬಯಕೆ
ಅನಿಸಿಕೆಗಳು