ಅನುದಿನದ ಮನ್ನಾ
ದೇವರ ಪ್ರೀತಿಯನ್ನು ಅನುಭವಿಸುವುದು
Saturday, 6th of July 2024
2
1
286
Categories :
ಪ್ರೀತಿ (Love)
"ದೇವರ ಪ್ರೀತಿಯಲ್ಲಿಯೂ ಕ್ರಿಸ್ತನ ತಾಳ್ಮೆಯಲ್ಲಿಯೂ ಸೇರುವಂತೆ ಕರ್ತನೇ ನಿಮ್ಮನ್ನು ನಡಿಸಲಿ."(2 ಥೆಸಲೋನಿಕದವರಿಗೆ 3:5)
ದೇವರು ನಮ್ಮನ್ನು ಬಹಳವಾಗಿ ಪ್ರೀತಿಸುತ್ತಾನಾದರೂ ಆ ಪ್ರೀತಿಯಲ್ಲಿ, ನಾವು ನೆಲೆಗೊಳ್ಳಬೇಕಾಗಿದೆ. ಇದು ಸ್ವಯಂ ಚಾಲಿತವಾಗಿ ಬರುವುದಲ್ಲ. ನಮ್ಮ ಕರ್ತನಾದ ಯೇಸುಕ್ರಿಸ್ತನು ಈ ಭೂಮಿಯ ಮೇಲೆ ಇರುವಾಗ ಆತನು ಕೆಲವರನ್ನು ಪ್ರೀತಿಸಬೇಕೆಂದೂ, ಆಶೀರ್ವದಿಸಬೇಕೆಂದೂ ಅಂದುಕೊಂಡರು. ಆದರೂ ಅವರು ಆತನ ಪ್ರೀತಿಯನ್ನು ಕಂಡುಕೊಳ್ಳಲಾಗದಂತಹ ಉದಾಹರಣೆಗಳೂ ಇವೆ. (ಮಾರ್ಕ್ 6:1-6, ಮತ್ತಾಯ 13:54-58 ನೋಡಿರಿ ). ಇಲ್ಲಿ ಸಮಸ್ಯೆ ಇದ್ದದ್ದು ಹೊಂದಿಕೊಳ್ಳಬೇಕಾದದ್ದವರಲ್ಲಿಯೇ ಹೊರತು ಆತನಲ್ಲಲ್ಲ.
ಹಾಗೆಯೇ ದೇವರು ತನ್ನ ಅಪಾರವಾದ ಪ್ರೀತಿಯನ್ನು ಲೋಕಕ್ಕೆ ತೋರಿಸಿದ್ದಾನೆ. ಹೇಗೆಂದರೆ ಆತನ ಪ್ರಿಯನಾದ ಒಬ್ಬನೇ ಮಗನನ್ನು ನಮ್ಮ ಪಾಪಗಳಿಗಾಗಿ ಮರಣ ಹೊಂದಲು ಕಳುಹಿಸಿಕೊಡುವ ಮುಖಾಂತರ ತನ್ನಲ್ಲಿರುವ ಅತ್ಯುತ್ತಮವಾದದನ್ನೇ ನಮಗೆ ಕೊಟ್ಟಿದ್ದಾನೆ. ಇನ್ನು ಅನೇಕ ಜನರು ಈ ಪ್ರೀತಿಯನ್ನು ಸ್ವೀಕರಿಸಿಕೊಳ್ಳಬೇಕಾಗಿದೆ ಅಥವಾ ಅನುಭವಿಸಬೇಕಾಗಿದೆ. ಆದಾಗಿಯೂ ಈ ಪ್ರೀತಿಯನ್ನು ಸ್ವೀಕರಿಸಿಕೊಳ್ಳಲು ಇಡಬೇಕಾದ ಮೊದಲ ಹೆಜ್ಜೆ ಯಾವುದೆಂದರೆ ಕ್ರಿಸ್ತನು ಶಿಲುಬೆಯ ಮೇಲೆ ಮಾಡಿದ ಕಾರ್ಯವನ್ನು ಒಪ್ಪಿಕೊಂಡು ಆತನೇ ಕರ್ತನೆಂದು ಅಂಗೀಕರಿಸುವ ಮೂಲಕ ರಕ್ಷಣೆ ಹೊಂದುವುದಾಗಿದೆ. (ರೋಮ 10:9)
ಆದರೂ ದೇವರ ಪ್ರೀತಿಯನ್ನು ಅನುಭವಿಸುವಂಥದ್ದು ಕೇವಲ ರಕ್ಷಣೆ ಹೊಂದಿಕೊಳ್ಳುವುದರಲ್ಲಿಯೇ ಎಂದಿಗೂ ನಿಂತು ಹೋಗುವುದಿಲ್ಲ. ಇನ್ನು ವಿಭಿನ್ನ ಕೋನದ ದೇವರ ಪ್ರೀತಿಯು ನಮಗಾಗಿ ದೊರಕುವಂತದ್ದಾಗಿದೆ. ಸತ್ಯವೇದವು ರೋಮ 8:32 ರಲ್ಲಿ ಒಂದು ಪ್ರಧಾನವಾದ ವಿಷಯವನ್ನು ನಮಗೆ ಪ್ರಕಟಿಸುತ್ತದೆ. ಅದೇನೆಂದರೆ, "ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನಲ್ಲಾ; ಮಗನನ್ನು ಕೊಟ್ಟ ಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದೆ ಇರುವನೇ? " ಎಂಬುದೇ (ರೋಮಾಪುರದವರಿಗೆ 8:32). ಅದು ನಿಜಕ್ಕೂ ಎಷ್ಟು ಸುಂದರವಾದ ವಿಷಯವಲ್ಲವೇ!
ದೇವರು ನಾವು ಪಾಪಿಗಳಾಗಿದ್ದಾಗಲೂ ತನಗಿದ್ದ ಒಬ್ಬನೇ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಡುವ ಮೂಲಕ ತನ್ನ ಪ್ರೀತಿಯನ್ನು ನಮಗೆ ತೋರಿಸಿದ್ದಾನೆ. ಹಾಗಾಗಿ ನಾವು ಆತನ ಮಕ್ಕಳಾಗಿರುವುದರಿಂದ ನಾವು ಯಾವುದನ್ನೂ ಕಡಿಮೆಯಾಗಿ ಕೇಳಿಕೊಳ್ಳಬಾರದು. ಸತ್ಯವೇದದ ಮತ್ತೊಂದು ವರ್ಷನ್ ಈ ರೀತಿ ಹೇಳುತ್ತದೆ " ದೇವರು ನಮಗಾಗಿ ಎಲ್ಲವನ್ನು ಕೊಡಲು ಸಾಲಾಗಿ ಇಡುವುದಕ್ಕೆ ಹಿಂಜರಿಯದೆ ಇದ್ದ ಮೇಲೆಯೂ ಆತನು ನಮ್ಮ ಪರಿಸ್ಥಿತಿಯನ್ನು ಒಪ್ಪಿಕೊಂಡು ತನ ಸ್ವಂತ ಮಗನನ್ನೇ ನಮಗಾಗಿ ಕಳುಹಿಸಿಕೊಡುವಷ್ಟು ಕೆಟ್ಟವನಾದ ಮೇಲೆ ನಮಗಾಗಿ ಆನಂದವಾಗಿಯೂ ಉಚಿತವಾಗಿಯೂ ಅನುಗ್ರಹಿಸದೆ ಇರುವಂತದ್ದು ಯಾವುದಾದರೂ ಉಂಟೇ? (ರೋಮ 8:32 MSB). ನೀವು ಇದರ ಕುರಿತು ನಿಜಕ್ಕೂ ಯೋಚಿಸಿ ನೋಡುವುದಾದರೆ ದೇವರ ಪ್ರೀತಿಯು ನಿಮಗಾಗಿ ಮಾಡಲಾಗದಂತದ್ದು ಒಂದು ಇಲ್ಲ ಎಂದು ಅರಿತುಕೊಳ್ಳುವಿರಿ!
ನಾವಿಲ್ಲಿ ಪರಿಗಣಿಸಬೇಕಾದದ್ದು ಏನೆಂದರೆ ಆತನ ಈ ಪ್ರೀತಿಯನ್ನು ಹೇಗೆ ಸ್ವೀಕರಿಸಿಕೊಳ್ಳಬೇಕು ಎಂಬುದೇ. ಆತನು ನಮಗಾಗಿ ಎಷ್ಟು ದೂರಕ್ಕೆ ಬೇಕಾದರೂ ಹೋಗಬಲ್ಲನು, ಆದರೆ ನಾವು ಅನುಮತಿಸಬೇಕಷ್ಟೇ. ಯೋಹಾನ 1: 12 ಸ್ಪಷ್ಟವಾಗಿ ನಮಗೆ ಪ್ರಕಟಿಸುವುದೇನೆಂದರೆ ಎಷ್ಟೇ ಜನರು ಆತನನ್ನು ಅಂಗೀಕರಿಸಿಕೊಂಡರೂ ಆತನ ಹೆಸರಿನ ಮೇಲೆ ನಂಬಿಕೆ ಇಟ್ಟರೂ ಅವರೆಲ್ಲರೂ ದೇವರ ಕುಮಾರ ಕುಮಾರ್ತೆಯರಾಗುವರು ಎಂಬುದೇ.
ಹಾಗಾದರೆ ಇನ್ನೇನು, ನಿಮ್ಮ ಹೃದಯವನ್ನು ತೆರೆದಿಟ್ಟು ದೇವರ ಬೆಚ್ಚನೆ ಪ್ರೀತಿಯಲ್ಲಿ ಮುಂದುವರೆಯಿರಿ. ನೀವು ಹೀಗೆ ಮಾಡುವಾಗ ನೀವು ಆತನ ಅದ್ಭುತವಾದ ಪ್ರೀತಿಯಲ್ಲಿರುವ ವಾಸ್ತವತೆಯನ್ನು ಅನುಭವಿಸುವವರಾಗುತ್ತೀರಿ. ನೀವು ಆತನ ವಾಕ್ಯಗಳನ್ನು ಧ್ಯಾನಿಸುವ ಮುಖಾಂತರ, ಪ್ರಾರ್ಥನೆ ಹಾಗೂ ಆರಾಧನೆಯಲ್ಲಿ ನಿರತರಾಗಿ ಆತನೊಂದಿಗೆ ಅನ್ಯೋನ್ಯತೆಯಲ್ಲಿರುವ ಮೂಲಕ ನೀವು ಆತನ ಬೆಚ್ಚನೆಯ ಪ್ರೀತಿಯ ಅನುಭವದಲ್ಲಿರಬಹುದು. ಇಂದಿನಿಂದ ಪ್ರತಿಯೊಂದು ಕ್ಷಣದಲ್ಲೂ ಆತನ ಪ್ರೀತಿಯನ್ನು ಅನುಭವಿಸಬೇಕೆಂದು ನಿಮ್ಮಲ್ಲಿ ನೀವೇ ನಿರ್ಧರಿಸಿಕೊಳ್ಳಿರಿ.
ಪ್ರಾರ್ಥನೆಗಳು
ಪ್ರೀತಿಯುಳ್ಳ ಪರಲೋಕದ ತಂದೆಯೇ, ನೀನು ನನ್ನನ್ನು ಎಷ್ಟೋ ಹೆಚ್ಚಾಗಿ ಪ್ರೀತಿಸುವುದಕ್ಕಾಗಿ ಸ್ತೋತ್ರ. ಎಲ್ಲಾ ಪರಿಸ್ಥಿತಿಯಲ್ಲೂ ಯಾವಾಗಲೂ ನಿನ್ನ ಪ್ರೀತಿಯನ್ನು ಹೊಂದಿಕೊಳ್ಳುವಂತೆಯೂ ಅನುಭವಿಸುವಂತೆಯೂ ಯೇಸು ನಾಮದಲ್ಲಿ ನನಗೆ ಸಹಾಯ ಮಾಡು. ಆಮೇನ್.
Join our WhatsApp Channel
Most Read
● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ಆ ಸುಳ್ಳುಗಳನ್ನು ಬಯಲಿಗೆಳೆಯಿರಿ.
● ದಿನ 25:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಪ್ರಾರ್ಥನಾ ಹೀನತೆ ಎಂಬ ಪಾಪ
● ದೇವರು ನನಗಿಂದು ಒದಗಿಸುತ್ತಾನೋ?
● ಅಪರಾಧಗಳಿಗಿರುವ ಪರಿಪೂರ್ಣ ಪರಿಹಾರ.
● ದೈವಿಕ ಶಾಂತಿಯನ್ನು ಪ್ರವೇಶಿಸುವುದು ಹೇಗೆ
ಅನಿಸಿಕೆಗಳು