ಅನುದಿನದ ಮನ್ನಾ
ದೇವರ ವಾಕ್ಯದಲ್ಲಿರುವ ನಂಬಿಗಸ್ಥಿಕೆ
Wednesday, 10th of July 2024
2
1
217
Categories :
ದೇವರವಾಕ್ಯ ( Word of God )
ನನ್ನ ಮಗನಾದ ಆರೋನನು ಚಿಕ್ಕ ಹುಡುಗನಾಗಿದ್ದ ( ಸುಮಾರು ಐದು ವರ್ಷದವನಾಗಿದ್ದ) ಸಮಯಕ್ಕೆ ಇಂದು ನನ್ನ ಆಲೋಚನೆಗಳು ಇಂದು ಹರಿದು ಹೋಗುತ್ತಿವೆ. ನಾನು ಪ್ರತಿ ಸಾರಿ ಸುವಾರ್ತೆಗಾಗಿ ಬೇರೆ ಬೇರೆ ಪ್ರದೇಶಗಳಿಗೆ ಹೋಗುವಾಗಲೆಲ್ಲಾ ಅವನು ತನಗಾಗಿ ಆಟಿಕೆಯನ್ನು ತರಲು ನನಗೆ ಹೇಳುತ್ತಿದ್ದ. ನಾನು ಹೊರಗಡೆ ಹೋಗಬೇಕೆಂದರೆ ಅವನಿಡುತ್ತಿದ್ದ ಷರತ್ತು ಅದಾಗಿತ್ತು. ನಾನು ಮನೆಗೆ ಹಿಂತಿರುಗಿ ಬಂದಾಗ ನಾನು ತಪ್ಪದೇ ಅದನ್ನು ಅವನಿಗಾಗಿ ತರುತ್ತಿದ್ದೆ. ಅದು ಅಷ್ಟು ದುಬಾರಿಯಾಗಿರಬೇಕು ಎಂದೇನಿಲ್ಲ ಆದರೆ ಅದು ಒಂದು ಆಟಿಕೆಯಾಗಿರಬೇಕಿತ್ತು ಅಷ್ಟೇ.
ನಾನೀಗ ಬೇರೆ ಸಮಯದಲ್ಲೂ ಅವನಿಗೆ ಆಟಿಕೆ ತರುವೆನು ಎಂದು ಹೇಳಿದರೆ ನಾನದನ್ನು ತಂದೇ ತರುತ್ತೇನೆ ಎಂದು ಅವನು ನಂಬುತ್ತಾನೆ. ಪ್ರತಿಸಾರಿಯೂ ನಾನು ಬಿಡದೆ ನನ್ನ ಮಾತನ್ನು ಉಳಿಸಿಕೊಂಡಿದ್ದೇ ಅವನ ಈ ಭರವಸೆಗೆ ಕಾರಣವಾಗಿದೆ. ಸಾಮಾನ್ಯವಾಗಿ ನಮ್ಮ ಜೀವನಗಳಲ್ಲೂ ಒಬ್ಬ ವ್ಯಕ್ತಿಯ ನಂಬಿಗಸ್ತಿಕೆಯಿಂದ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಹಾಗೆ ಆ ವ್ಯಕ್ತಿಯ ವ್ಯಕ್ತಿತ್ವದಿಂದ ಅವನಲ್ಲಿನ ನಂಬಿಗಸ್ತಿಕೆಯನ್ನು ಅಳೆಯಲಾಗುತ್ತದೆ.
ಮನುಷ್ಯರ ಉದ್ದೇಶಗಳು ಎಷ್ಟೇ ಉತ್ತಮವಾಗಿ ಕಂಡರೂ ಅದು ಪರಿಪೂರ್ಣವಾಗಿರುವುದಿಲ್ಲ ಮತ್ತು ಅದು ವೈಫಲ್ಯತೆಗೆ ತುತ್ತಾಗುವಂತದ್ದೇ ಆಗಿರುತ್ತದೆ. ಕೆಲವರು ಬಹಳ ನಂಬಿಗಸ್ತರು ಭರವಸೆಗೆ ಯೋಗ್ಯರು ಎಂದು ಹೆಸರುಗೊಂಡಿದ್ದರೂ ಪ್ರತಿಸಾರಿಯು ಅವರ ಮಾತನ್ನು ಅವರು ನಡೆಸಿಕೊಡಲು ಆಗುವುದಿಲ್ಲ. ಆ ವ್ಯಕ್ತಿಯು ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂದಿದ್ದರೂ ಪರಿಸ್ಥಿತಿಗಳು ಅವನ ನಿಯಂತ್ರಣಕ್ಕೆ ಮೀರಿದ್ದರಿಂದ ಅದು ಆಗದೆ ಹೋಗಬಹುದು. ಇದು ಕಾಯಿಲೆಯ ಕಾರಣದಿಂದಲೋ ಅವರಿಗೆ ಇರುವ ಸಂಪನ್ಮೂಲಗಳ ಕೊರತೆಯಿಂದಲೋ ಅಥವಾ ತಡವಾಗುವುದರಿಂದಲೋ ಇತ್ಯಾದಿಯಿಂದ ಆಗಬಹುದು. ಆದ್ದರಿಂದಲೇ ನಮಗೆಲ್ಲರಿಗೂ ನಾವು ಕೊಟ್ಟ ಪ್ರತೀ ಮಾತನ್ನು ಕೊಟ್ಟ ಸಮಯಕ್ಕೆ ನಡೆಸಿಕೊಡುವುದಕ್ಕೆ ಆಗದೇ ಹೋಗಬಹುದು.
ಆದ್ದರಿಂದಲೇ ಸತ್ಯವೇದವು "ಮನುಷ್ಯರಲ್ಲಿ ಭರವಸೆ ಇಡುವುದಕ್ಕಿಂತ ಕರ್ತನಲ್ಲಿ ಭರವಸೆ ಇಡುವುದು ಒಳ್ಳೆಯದು" ಎಂದು ನಮ್ಮನ್ನು ಉರಿದುಂಬಿಸುತ್ತದೆ (ಕೀರ್ತನೆ 118:8). ಒಬ್ಬ ಮಹಾನ್ ದೇವಸೇವಕೀಯಾದವರು ಹೀಗೆ ಹೇಳಿದ್ದಾರೆ "ದೇವರ ಮೇಲೆ ನೀವು ಸಂಪೂರ್ಣವಾಗಿ ಅವಲಂಬಿಸಿಕೊಳ್ಳುವಂತೆ ಕಲಿಸುವಂತದ್ದೇ ದೇವರ ಮುಖ್ಯ ಗುರಿಯಾಗಿದೆ "ಎಂದು
ಅದೇ ನಿಜಕ್ಕೂ ಅತ್ಯುತ್ತಮವಾದುದ್ದು.
ಅರಣ್ಯ ಕಾಂಡ 23:19 ರಲ್ಲಿ ಒಂದು ಆಸಕ್ತಿಕರವಾದಂತಹ ವಾಕ್ಯವನ್ನು ನಾವು ಕಾಣಬಹುದು. ಅದೇನೆಂದರೆ "ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ; ಮಾನವನಂತೆ ಮನಸ್ಸನ್ನು ಬೇರೆ ಮಾಡಿಕೊಳ್ಳುವವನಲ್ಲ. ತಾನು ಹೇಳಿದ ಮೇರೆಗೆ ನಡೆಯುವದಿಲ್ಲವೋ; ಮಾತು ಕೊಟ್ಟನಂತರ ನೆರವೇರಿಸುವದಿಲ್ಲವೋ?" ಎಂಬುದೇ "
ದೇವರು ತಾನಾಡಿದ ಪ್ರತಿಯೊಂದು ಮಾತನ್ನೂ ಕಾರ್ಯರೂಪಕ್ಕೆ ತರಲು ಶಕ್ತನಾಗಿದ್ದಾನೆ. ದೇವರು ಹೇಳಿದಂತ ಯಾವ ಮಾತಿನಲ್ಲಾದರೂ ನಾವು ಸಂಪೂರ್ಣವಾಗಿ ಭರವಸೆ ಇಡಬಹುದು. ನಿಜ ಹೇಳಬೇಕೆಂದರೆ ಇಬ್ರಿಯ 6:18 ಧೈರ್ಯವಾಗಿ ಪ್ರತಿಪಾದಿಸುವುದೇನೆಂದರೆ "ದೇವರು ಸುಳ್ಳಾಡಲಾರನು" ಹೀಗಿರುವುದರಿಂದಲೇ ನಾವು ಯಾವುದೇ ಸಂದೇಹವಿಲ್ಲದೆ ದೇವರ ಮಾತುಗಳನ್ನು ನಂಬಬಹುದು!
ದೇವರ ವಾಕ್ಯದ ನಂಬಿಗಸ್ತಿಕೆಯು ಅದನ್ನು ರಚಿಸಿದವನ ನಂಬಿಗಸ್ತಿಕೆಯ ಆಧಾರದಲ್ಲಿ ಕಾರ್ಯ ಮಾಡುತ್ತಾದರಿಂದ ಆತನ ಮೇಲೆ ಸಂಪೂರ್ಣವಾಗಿ ಅವಲಂಬನೆ ಆಗಬಹುದಾಗಿದೆ. ನಾವು ನಮ್ಮೆಲ್ಲ ದೋಷಗಳ ನಿಮಿತ್ತವಾಗಿ ಆಗಾಗ್ಗೆ ಆಶಾಭಂಗಕ್ಕೊಳಗಾಗುವಾಗಲೂ ಆತನು ಮಾತ್ರ ನಮ್ಮನ್ನು ಎಂದಿಗೂ ಆಶಾ ಭಂಗಪಡಿಸುವುದೇ ಇಲ್ಲ ಎಂದು ನಾವು ಭರವಸೆ ಇಡಬಹುದು. ಆತನು ಹೇಳಿದ ಮಾತುಗಳನ್ನು ಆತನು ಯಾವಾಗಲೂ ನೆರವೇರಿಸುವವನಾಗಿದ್ದಾನೆ. ದೇವರ ಮಾತಿನಲ್ಲಿರುವ ಆತನ ನಂಬಿಗಸ್ತಿಕೆಯನ್ನು ಕುರಿತು ನಮಗೆ ಸಂಪೂರ್ಣವಾಗಿ ಮನವರಿಕೆ ಆದಾಗ ಮಾತ್ರ ಅದರಿಂದಾಗುವ ಗರಿಷ್ಠ ಲಾಭವನ್ನು ನಾವು ಪಡೆದುಕೊಳ್ಳಬಹುದು.
ಆದಾಗಿಯೂ ನಮ್ಮ ಜೀವಿತದ ಕೆಲವೊಂದು ಸಮಯದಲ್ಲಿ ಸವಾಲುಗಳು ಪಟ್ಟು ಬಿಡದೆ ನಿಂತರೂ, ಆತನು ನಮ್ಮನ್ನು ಎಂದಿಗೂ ಆಶಾ ಭಂಗ ಪಡಿಸುವುದಿಲ್ಲ ಎಂದು ಭರವಸೆ ಇಡುವವರಾಗಿ ಆತನ ವಾಕ್ಯದಲ್ಲಿ ನೆಲೆ ನಿಲ್ಲಬಹುದು. ನೀವು ನಿಮ್ಮ ಜೀವಿತವನ್ನು ಜೀವಿಸುವಾಗ ದೇವರ ವಾಕ್ಯದಲ್ಲಿನ ನಂಬಿಗಸ್ತಿಕೆಯ ಮೇಲೆ ಲಕ್ಷ್ಯವಿಡಿರಿ . ನಿಮ್ಮ ಪರಿಸ್ಥಿತಿ ಏನೇ ಆಗಿರಲಿ ನಿಮ್ಮ ಜೀವನಕ್ಕಾಗಿ ಆತನಲ್ಲಿರುವ ತನ್ನ ವಾಗ್ದಾನಗಳನ್ನು ಖಂಡಿತವಾಗಿಯೂ ಆತನು ಪೂರೈಸುತ್ತಾನೆ ಎಂದು ಎದುರು ನೋಡುವ ಧೈರ್ಯವನ್ನು ಆ ವಾಕ್ಯಗಳು ನಿಮಗೆ ಪೂರೈಸಲಿ. ಆ ಸಮಸ್ಯೆಗಳ ಸಮಯದಲ್ಲಿ ಕೈ ಚೆಲ್ಲಬೇಡಿರಿ. ಅವುಗಳ ಕುರಿತು ವಿಜ್ಞಾಪಿಸುತ್ತಾ ದೇವರು ತನ್ನ ಮಾತುಗಳನ್ನು ಕಾರ್ಯರೂಪಕ್ಕೆ ತರುವುದನ್ನು ನೋಡಿರಿ.
ಪ್ರಾರ್ಥನೆಗಳು
ತಂದೆಯೇ, ನೀನು ಆಡಿದ ಪ್ರತಿಯೊಂದು ಮಾತನ್ನು ನೀನು ನೆರವೇರಿಸುವನಾಗಿದ್ದೀಯ ಅದಕ್ಕಾಗಿ ನಿನಗೆ ಸ್ತೋತ್ರ. ನನ್ನ ಪರಿಸ್ಥಿತಿಗಳು ಏನೇ ಆಗಿದ್ದರೂ ನಿನ್ನ ವಾಕ್ಯದಲ್ಲಿರುವ ನಂಬಿಗಸ್ತಿಕೆಯ ಮೇಲೆ ನಿರಂತರವಾಗಿ ನಾನು ಆಧಾರವಾಗುವಂತೆ ಯೇಸುನಾಮದಲ್ಲಿ ನನಗೆ ಸಹಾಯ ಮಾಡು. ಆಮೇನ್.
Join our WhatsApp Channel
Most Read
● ನಿರುತ್ಸಾಹದ ಬಾಣಗಳನ್ನು ಗೆಲ್ಲುವುದು -II● ನಡೆಯುವುದನ್ನು ಕಲಿಯುವುದು
● ಹೊಗಳಿಕೆವಂಚಿತ ನಾಯಕರು
● ಆತನ ನೀತಿಯ ವಸ್ತ್ರದಿಂದ ಭೂಷಿತರಾಗುವುದು
● ನಿಮ್ಮನ್ನು ಅಡ್ಡಿಪಡಿಸುವ ನಂಬಿಕೆಗಳನ್ನು ಸೀಮಿತಗೊಳಿಸುವುದು
● ಸಾಧನೆಯ ಪರೀಕ್ಷೆ.
● ಆತ್ಮನಿಂದ ನಡೆಸಲ್ಪಡುವುದು ಎಂಬುದರ ಅರ್ಥವೇನು?
ಅನಿಸಿಕೆಗಳು