ಅನುದಿನದ ಮನ್ನಾ
ಇತರರೊಂದಿಗೆ ಸಮಾಧಾನದಿಂದ ಜೀವಿಸಿರಿ
Monday, 22nd of July 2024
1
2
283
Categories :
ಸಮಾಧಾನ(Peace)
"ನೀವು ಎಂದಾದರೂ ಈ ಲೋಕವು ಒಂದು ಜಾಗತಿಕ ಗ್ರಾಮ" ಎನ್ನುವ ಮಾತನ್ನು ಕೇಳಿದ್ದೀರಾ? ಇಷ್ಟು ವಿಸ್ತಾರವಾಗಿ ಇಷ್ಟು ಜನಸಂದಣಿಯಿಂದ ತುಂಬಿರುವ ಲೋಕವನ್ನು ಹೇಗೆ ತಾನೇ ಒಂದು ಗ್ರಾಮಕ್ಕೆ ಹೋಲಿಸಬಹುದು? ಒಂದು ಗ್ರಾಮವೆಂದರೆ ಅಲ್ಲಿ ವಾಸಿಸುವ ಪ್ರತಿಯೊಬ್ಬರ ವಿಚಾರಗಳು ಆ ಗ್ರಾಮದಲ್ಲಿರುವ ಮತ್ತೊಬ್ಬರಿಗೆ ತಿಳಿದಿರುತ್ತದೆ. ಅಲ್ಲಿ ಯಾರೂ ಸಹ ಯಾರೊಬ್ಬರಿಂದಲೂ ಯಾವ ವಿಚಾರವನ್ನು ಮುಚ್ಚಿಡಲು ಸಾಧ್ಯವಿಲ್ಲ. ಈಗ ನನಗೆ ಈ ಲೋಕವು ಹೇಗೆ ಒಂದು ಗ್ರಾಮ ಎನ್ನುವ ವ್ಯಾಖ್ಯಾನ ಮುಂಚಿಗಿಂತಲೂ ಚೆನ್ನಾಗಿ ಮನವರಿಕೆಯಾಗುತ್ತಿದೆ.
ಯಾವೊಬ್ಬ ಮನುಷ್ಯನೂ ಸಹ ಒಂದು ದ್ವೀಪದಂತೆ ಬದುಕಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಇದರ ಸರಳವಾದ ಅರ್ಥವೇನೆಂದರೆ ಯಾವ ಒಬ್ಬ ಮನುಷ್ಯನೂ ತನ್ನ ಸುತ್ತ ಲಿರುವವವರ ಸಹಾಯವಿಲ್ಲದೆ ಅವರ ಪಾತ್ರವಿಲ್ಲದೆ ಒಬ್ಬಂಟಿಗರಾಗಿ ಇರಲು ಸಾಧ್ಯವಿಲ್ಲ. ಏಕೆಂದರೆ ಇದುವೇ ದೇವರು ಮನುಕುಲಕ್ಕಾಗಿ ಮಾಡಿರುವ ಜೀವಿತದ ಮಾದರಿಯಾಗಿದೆ. ದೇವರು ಎಂದಿಗೂ ನಮ್ಮನ್ನು ಒಬ್ಬಂಟಿಗರಾಗಿ ಇರಬೇಕೆಂದು ಸೃಷ್ಟಿಸಲಿಲ್ಲ. ಸತ್ಯವೇದವು ಆದಿಯಲ್ಲಿ ಹೇಳಿದ್ದೇನೆಂದರೆ ಆತನು "ಅವರನ್ನು ಗಂಡು ಹೆಣ್ಣಾಗಿ ಸೃಷ್ಟಿಸಿದನು " (ಆದಿ 5:2). ಗಂಡು-ಹೆಣ್ಣಾಗಿ ಎಂದು ಹೇಳಿದೆ ಗಂಡು ಅಥವಾ ಹೆಣ್ಣಾಗಿ ಎಂದು ಹೇಳಲಿಲ್ಲ. ನಾವೆಲ್ಲರೂ ಒಂದಾಗಿ ಸಮುದಾಯವಾಗಿ ಬದುಕಲು ಮನಸ್ಸು ಮಾಡಿದರೆ ಮಾತ್ರ ಪರಿಸರ ವ್ಯವಸ್ಥೆಯು ಸಮತೋಲನದಲ್ಲಿರುತ್ತದೆ ಎಂಬುದನ್ನು ಇದು ತೋರಿಸುತ್ತದೆ.
"ಇದೆಲ್ಲಾ ಸರಿಯೇ, ಆದರೆ ಇದು ನನಗೆ ಕೆಲಸಕ್ಕೆ ಬರುವುದಿಲ್ಲ. ಏಕೆಂದರೆ ನಾನು ಸಿಕ್ಕಾಪಟ್ಟೆ ನೋವನ್ನು ಅನುಭವಿಸಿದ್ದೇನೆ ಆದ್ದರಿಂದ ನಾನು ಒಂಟಿಯಾಗಿ ಇರುವುದೇ ಒಳ್ಳೆಯದು" ಎಂದು ನೀವು ನಿಮ್ಮ ಮನಸ್ಸಿನಲ್ಲಿ ಯೋಚಿಸುತ್ತಿರಬಹುದು. ಇನ್ನೂ ಕೆಲವರು "ಬೇರೆ ವ್ಯಕ್ತಿಗಳೊಂದಿಗೆ ಇರುವಂತದ್ದು ಖಂಡಿತಾ ಆಗದು. ಏಕೆಂದರೆ ನಾನು ಬೇಗನೆ ಸಿಟ್ಟುಗೊಳ್ಳುವ ವ್ಯಕ್ತಿ.ಇದರಿಂದ ಮನುಷ್ಯರೇ ನನ್ನಿಂದ ದೂರ ಓಡಿ ಹೋಗುತ್ತಾರೆ" ಎಂದು ಯೋಚಿಸುತ್ತಿರಬಹುದು. ಸರಿ ಅದಕ್ಕಾಗಿಯೇ ದೇವರು ಇಂದು ನಿಮ್ಮೊಡನೆ ಮಾತನಾಡುತ್ತಿದ್ದಾನೆ.
ಒಂದು ಸಾರಿ ನಾನು ಇಡೀ ದಿನ ಉಪವಾಸದಲ್ಲೂ ಪ್ರಾರ್ಥನೆಯಲ್ಲಿ ಇದ್ದು ಅಭಿಷೇಕದಲ್ಲಿ ಬೆಳೆಯಬೇಕೆಂದು ಯೋಚಿಸಿದೆ. ಹಾಗೆಯೇ ಇಡೀ ದಿನ ಕಾದಿದ್ದು ಕರ್ತನಿಂದ ಒಂದು ಮಾತೋ, ಒಂದು ದರ್ಶನವೊ ಏನಾದರೂ ಸಿಗಬಹುದೆಂದು ನಿರೀಕ್ಷಿಸುತ್ತಿದ್ದೆ. ಸಂಜೆಯ ಹೊತ್ತಿಗೆ ಕರ್ತನು ಕಟುವಾಗಿ ರೋಮ 12:18ರ ವಾಕ್ಯವನ್ನು ನನ್ನೊಳಗೆ ಆಡುವುದನ್ನು ನಾನು ಕೇಳಿದೆ "ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ". "ನಿಮ್ಮಿಂದಾಗುವ ಮಟ್ಟಿಗೆ ಎಲ್ಲರೊಂದಿಗೆ ಸ್ನೇಹ ಭಾವದಿಂದಿರಿ" ಎಂದು ರೋಮ 12:18 TPTವರ್ಷನ್ ಹೇಳುತ್ತದೆ. ಮತ್ತಾಯ 5:9ರಲ್ಲಿರುವ ಆತನ ಪ್ರಸಂಗವನ್ನು ನೆನಪಿಸಿಕೊಳ್ಳಿ. ಕರ್ತನಾದ ಯೇಸು ಹೇಳಿದ್ದೇನೆಂದರೆ "ಸಮಾಧಾನ ಪಡಿಸುವವರು ಧನ್ಯರು ಅವರು ದೇವರ ಮಕ್ಕಳೆನಿಸಿಕೊಳ್ಳುವರು" ಎಂದು
ಯಾವಾಗಲೂ ಸಮಾಧಾನವನ್ನು ಎದುರು ನೋಡುವುದೇ ನೀವು ದೇವರು ಮಗುವಾಗಿದ್ದೀರಿ ಎನ್ನುವ ನಿಮ್ಮ ಗುರುತನ್ನು ಸಾಬೀತುಪಡಿಸಿಕೊಳ್ಳಲಿರುವ ಒಂದು ಮಾರ್ಗವಾಗಿದೆ.
ಸಮಾಧಾನವನ್ನು ಎದುರು ನೋಡುವುದೆಂದರೆ ಎಲ್ಲರೂ ನಿಮ್ಮನ್ನು ಇಷ್ಟ ಪಡಲು ಆರಂಭಿಸುತ್ತಾರೆ ಮತ್ತು ಇದ್ದಕ್ಕಿದ್ದಂತೆ ಎಲ್ಲರೂ ಬಂದು ನಿಮ್ಮೊಡನೆ ಚೆನ್ನಾಗಿ ವರ್ತಿಸಲಾರಂಭಿಸುತ್ತಾರೆ ಎಂಬುದಲ್ಲ. ಅವರ ಕ್ರಿಯೆಗಳು ಪ್ರತಿಕ್ರಿಯೆಗಳು ಏನೇ ಆಗಿದ್ದರೂ ನೀವು ಸಮಾಧಾನದ ಪುರುಷ ಅಥವಾ ಸಮಾಧಾನದ ಸ್ತ್ರೀಯಾಗಿ ನಡೆದುಕೊಳ್ಳಬೇಕೆಂಬ ಆಯ್ಕೆ ಮಾಡಿಕೊಳ್ಳುವುದಾಗಿದೆ. ಅವರಲ್ಲಿರುವ ಒಪ್ಪು- ತಪ್ಪುಗಳನ್ನು ಕ್ಷಮಿಸಿ ಅವರ ಕೊರತೆಗಳನ್ನು ಸ್ವೀಕರಿಸಿಕೊಂಡು ಸಮಾಧಾನದಿಂದ ಇರುವುದಾಗಿದೆ.
ಮಾರ್ಕ 9:50 ರಲ್ಲಿ ಕರ್ತನಾದ ಯೇಸು ಮತ್ತೂ ಹೇಳಿದ್ದೇನೆಂದರೆ..."ಉಪ್ಪು ಒಳ್ಳೆಯ ಪದಾರ್ಥವೇ; ಉಪ್ಪು ಸಪ್ಪೆಯಾದರೆ ಅದನ್ನು ಇನ್ಯಾತರಿಂದ ರುಚಿಗೊಳಿಸುವಿರಿ? ನಿಮ್ಮೊಳಗೆ ಉಪ್ಪು ಇರಲಿ, ಒಬ್ಬರಿಗೊಬ್ಬರು ಸಮಾಧಾನದಿಂದಿರಿ." ನೀವು ಇದನ್ನು ಅರ್ಥ ಮಾಡಿಕೊಂಡಿರಾ?
ಉಪ್ಪು ಹೇಗೆ ಆಹಾರಕ್ಕೆ ಅಗತ್ಯವಾದ ವಸ್ತುವೋ, ಅದೇ ರೀತಿ ನೀವೂ ಸಹ ಮೌಲ್ಯವುಳ್ಳ ವ್ಯಕ್ತಿಗಳಾಗಿದ್ದೀರಿ. ಹಾಗಾಗಿ ನಿಮ್ಮ ಜೊತೆ ಕೆಲಸಗಾರರೊಂದಿಗೆ, ನಿಮ್ಮ ಸಭೆಯವರೊಂದಿಗೆ, ನಿಮ್ಮ ನೆರೆಹೊರೆಯವರೊಂದಿಗೆ ಕೈಲಾದಷ್ಟು ಸಮಾಧಾನಕರವಾಗಿ ಜೀವಿಸಲು ಪ್ರಯತ್ನಿಸಿ. ವಿಷಕಾರಕ ವ್ಯಕ್ತಿಗಳಾಗಿ ಇರಬೇಡಿರಿ ಏಕೆಂದರೆ ಅದು ದೇವರ ಮಗುವಾಗಿ ನಿಮ್ಮ ಸ್ಥಾನವನ್ನು ತೋರ್ಪಡಿಸುವುದಿಲ್ಲ.
ಅತ್ಯಂತ ಸಾಮಾನ್ಯವಾಗಿ ನಾವು ಯಾವಾಗಲೂ ನಮ್ಮ ಜೊತೆಯಲ್ಲಿರುವ ಜನರಿಗೆ ನಮ್ಮ ಮನಸ್ಸಿನಲ್ಲಿರುವ ಸಮಾಧನವನ್ನೇ ನೀಡಲು ಬಯಸುತ್ತೇವೆ. ಆದರೆ ಕೊನೆಗಾಗುವುದಾದರೂ ಏನು?"ಒಹ್ ಅವರು ನನ್ನನ್ನು ಕೈಲಾಗದವರು ಮುಟ್ಟಾಳರು ಎಂದು ತಿಳಿದುಕೊಂಡಿದ್ದಾರೆ" ಎಂದು ಅಂದುಕೊಳ್ಳಲು ಆರಂಭಿಸುವಿರಿ. ವಾಸ್ತವವಾಗಿ ನೀವದಲ್ಲ. ಯಾವಾಗಲೂ ನಿಮ್ಮ ಬಾಯಿಂದ ಇಂಪಾದ ಮಾತುಗಳೇ ಹೊರಡಲಿ. ಸಾಮಾಜಿಕ ಜಾಲತಾಣಗಳಲ್ಲಿ ಉತ್ತೇಜಿಸುವ ಆಶೀರ್ವಾದಕರವಾದ ಮಾತುಗಳನ್ನೇ ಪೋಸ್ಟ್ ಮಾಡಿರಿ ಅದನ್ನು ಬಿಟ್ಟು ಯಾರಿಗಾದರೂ ನಿಮ್ಮ ಭಾವನೆಗಳ ಸುಳಿವು ನೀಡಬೇಕೆಂದು ವ್ಯಂಗ್ಯವಾದ ಮಾತುಗಳನ್ನು ಪೋಸ್ಟ್ ಮಾಡಬೇಡಿರಿ.
ನೀವು ಸಮಾಧಾನಪಡಿಸುವ ವ್ಯಕ್ತಿಯಾಗಿ ಇರಬೇಕೆಂಬ ನಿರ್ಣಯವನ್ನು ನೀವು ಕೈಗೊಳ್ಳುವಾಗ ನೀವು ಜಾಗತಿಕ ಗ್ರಾಮ ಎಂದು ಹೇಳುವಂಥ ಲೋಕವನ್ನು ಸೃಷ್ಟಿಸುತ್ತೀರಿ. ನೀವು ಇತರರಿಗೆ ಕೊಡುವ ಸಮಾಧಾನವು ಅವರೂ ಸಹ ಮತ್ತೊಬ್ಬರಿಗೆ ಸಮಾಧಾನ ಕೊಡಬಲ್ಲಂತಹ ತರಂಗವನ್ನು ಉಂಟುಮಾಡುತ್ತದೆ. ಆಗ ಪ್ರತಿಯೊಬ್ಬರು ನಿಮ್ಮೊಡನೆ ಇರಲು ಬಯಸುತ್ತಾರೆ. ಏಕಾಏಕಿ ಇದು ಒಂದೇ ರಾತ್ರಿಯಲ್ಲಿ ಸಂಭವಿಸಿ ಬಿಡುವುದಿಲ್ಲ. ಆದರೆ ಅದಕ್ಕಾಗಿ ಸಮಯ ಕೊಡಿ ಖಚಿತವಾಗಿ ಕಾರ್ಯ ಮಾಡುತ್ತದೆ.
ಪ್ರಾರ್ಥನೆಗಳು
ತಂದೆಯೇ, ನಾನು ಸಮಾಧಾನ ಪಡಿಸುವ ವ್ಯಕ್ತಿ ಎಂದು ಯೇಸುನಾಮದಲ್ಲಿ ಅರಿಕೆ ಮಾಡುತ್ತೇನೆ. ನನ್ನ ಮೂಲಕ ಹೊರಡುವ ಸಮಾಧಾನದ ಸುವಾಸನೆಯು ಎಲ್ಲಾ ಪರಿಸ್ಥಿತಿಗಳಲ್ಲೂ ಎಲ್ಲಾ ಸ್ಥಳಗಳಲ್ಲೂ ಹರಡಲಿ. ಆಮೆನ್.
Join our WhatsApp Channel
Most Read
● ನೀವು ಯೇಸುವನ್ನು ಹೇಗೆ ದೃಷ್ಟಿಸುವಿರಿ?● ಉದ್ಯೋಗದ ಸ್ಥಳದಲ್ಲಿ ಮಿಂಚುವ ತಾರೆಯಾಗುವುದ -I
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಅಂತ್ಯಕಾಲದ ಸಮಯದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು: #2
● ಜನರು ನೆಪಗಳನ್ನು ಹೇಳಲು ಇರುವ ಕಾರಣಗಳು : ಭಾಗ 2
● ಎರಡು ಸಾರಿ ಸಾಯಬೇಡಿರಿ
● ಚಿಕ್ಕ ಸಂಗತಿಗಳೂ ಸಹ ಮಹತ್ತರ ಉದ್ದೇಶಗಳನ್ನು ಪೂರೈಸಬಲ್ಲವು.
ಅನಿಸಿಕೆಗಳು