ಅನುದಿನದ ಮನ್ನಾ
ಧನ್ಯನಾದ ಮನುಷ್ಯ
Monday, 5th of August 2024
3
2
239
Categories :
ದೇವರವಾಕ್ಯ ( Word of God )
ವಿಧೇಯತೆ (Obedience)
"ಈ ಪ್ರವಾದನವಾಕ್ಯಗಳನ್ನು ಓದುವಂಥವನೂ ಕೇಳುವಂಥವರೂ ಈ ಪ್ರವಾದನೆಯಲ್ಲಿ ಬರೆದಿರುವ ಮಾತುಗಳನ್ನು ಕೈಕೊಂಡು ನಡೆಯುವಂಥವರೂ ಧನ್ಯರು. ಅವು ನೆರವೇರುವ ಸಮಯವು ಸಮೀಪವಾಗಿದೆ."(ಪ್ರಕಟನೆ 1:3)
ಸತ್ಯವೇದದಲ್ಲಿನ ಪ್ರಕಟಣೆ ಪುಸ್ತಕವು ಸತ್ಯವೇದದಲ್ಲಿನ ಇತರ ಎಲ್ಲಾ ಪುಸ್ತಕಗಳಿಗಿಂತ ವಿಭಿನ್ನವಾದ ಪುಸ್ತಕವಾಗಿದ್ದು ವಿಶೇಷ ಆಶೀರ್ವಾದಗಳಾದ ಈ ಕೆಳಕಂಡ ವಾಗ್ದಾನಗಳನ್ನು ಒಳಗೊಂಡಿದೆ.
1). ಓದುವಂತವನೂ.
ಹಿಂದಿನ ಕಾಲದಲ್ಲಿ ಜನರಿಗೆ ಈಗ ನಮಗಿರುವ ಹಾಗೆ ಪ್ರತಿಯೊಬ್ಬರಿಗೂ ವೈಯಕ್ತಿಕವಾದ ಪ್ರಕಟನೆ ಪುಸ್ತಕದ ಪ್ರತಿಯು ಇರಲಿಲ್ಲ. ಈ ಪುಸ್ತಕದಲ್ಲಿನ ವಾಕ್ಯಗಳನ್ನು ಕೇಳಲು ಅವರಿಗೆ ಏಕೈಕ ಮಾರ್ಗವೆಂದರೆ ಸಭೆಯಾಗಿ ಎಲ್ಲರೂ ಕೂಡಿ ಬಂದಾಗ ಸಭಾನಾಯಕನು ಓದುವಾಗ ಅವರು ಕೇಳಬೇಕಿತ್ತು ಅಷ್ಟೇ.
2) ಕೇಳುವಂಥವನೂ
ನೀವು ಏನನ್ನು ಕೇಳಿಸಿಕೊಳ್ಳುತ್ತೀರಿ ಮತ್ತು ಹೇಗೆ ಕೇಳಿಸಿಕೊಳ್ಳುತ್ತೀರಿ ಎಂಬುದೇ ಮುಖ್ಯವಾದದ್ದು.
a) ಮಾರ್ಕ್ 4:24 ರಲ್ಲಿ ಕರ್ತನಾದ ಯೇಸು ಘೋಷಿಸಿದ್ದೇನೆಂದರೆ,
"ಆತನು ಅವರಿಗೆ - ನೀವು ಕಿವಿಗೊಡುವ ವಿಷಯದಲ್ಲಿ ಎಚ್ಚರಿಕೆ. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು; ಇನ್ನೂ ಕೂಡಿಸಿ ಕೊಡುವರು." ಎಂಬುದೇ.
ಇನ್ನು ಹೆಚ್ಚಾಗಿ ಹೊಂದಿಕೊಳ್ಳುವುದರಲ್ಲಿರುವ ಒಂದು ರಹಸ್ಯವೆಂದರೆ ನಾವು ಹೇಗೆ ವಿಚಾರಗಳಿಗೆ ಕಿವಿ ಕೊಡುತ್ತೇವೆ ಎಂಬುದೇ ಆಗಿರುತ್ತದೆ. ಹೆಚ್ಚು ಹೆಚ್ಚು ಹೊಂದಿಕೊಳ್ಳಲು ಸತ್ಯವೇದ ಆಧಾರಿತವಾದ ಮಾರ್ಗವು ಇದಾಗಿದೆ
b)ನೀವು ಏನನ್ನು ಕೇಳಿಸಿಕೊಳ್ಳುತ್ತೀರೋ ಅದೇ ಮುಖ್ಯವಾಗಿದೆ. ಏಕೆಂದರೆ ಅದು ನಿಮ್ಮಲ್ಲಿ ನಂಬಿಕೆಯನ್ನು ಹುಟ್ಟಿಸಬಹುದು, ಇಲ್ಲವೇ ಭಯವನ್ನು ಹುಟ್ಟಿಸಬಹುದು. ಹೇಗೆ ನಂಬಿಕೆಯು ದೇವರ ವಾಕ್ಯವನ್ನು ಕೇಳಿಸಿಕೊಳ್ಳುವುದರಿಂದ ಉಂಟಾಗುತ್ತದೆಯೋ (ರೋಮಾ 10:17) ಹಾಗೆಯೇ ಸೈತಾನನ ಮಾತುಗಳನ್ನು ಕೇಳಿಸಿಕೊಳ್ಳುವುದರಿಂದ ಭಯವು ಹುಟ್ಟುತ್ತದೆ. ಭವಿಷ್ಯದ ಬಗ್ಗೆ ಸೈತಾನನು ಹುಟ್ಟಿಸುವ ಆತಂಕ ಹಾಗೂ ಭೂತಕಾಲದ ವಿಚಾರಗಳಿಂದ ಅವನು ತನ್ನನ್ನು ಹೆಚ್ಚಿಸಿಕೊಳ್ಳುವ ವಿಚಾರಗಳಿಗೆ ನಾವು ಮಣೆ ಹಾಕಿದಾಗ ಆ ಭಯವು ನಮ್ಮಲ್ಲಿ ಇನ್ನೂ ಬೆಳೆಯುತ್ತಾ ಹೋಗುತ್ತದೆ.
3) ಬರೆದಿಟ್ಟ ವಾಕ್ಯಗಳನ್ನು ಕೈಕೊಂಡು ನಡೆಯುವವನೂ.
ಇಂದಿನ ಕಾಲಮಾನದಲ್ಲಿ ಅನೇಕ ಕ್ರೈಸ್ತರಿಗೆ ಸತ್ಯವೇದದ ಕುರಿತಾದ ಭೌತಿಕ ಜ್ಞಾನವಿದೆ. ಆದರೆ ಕೆಲವೇ ಮಂದಿ ಮಾತ್ರ ತಾವು ತಿಳಿದುಕೊಂಡ ವಾಕ್ಯಗಳನ್ನು ಕೈಕೊಂಡು ನಡೆಯುವವರಾಗಿದ್ದಾರೆ. ಅನೇಕರು ರೋಮಾಂಚನಕಾರಿ ಎನಿಸುವಾಗ ಆಳವಾದ ಬೋಧನೆಗಳನ್ನು ಹುಡುಕುವವರಾಗಿದ್ದಾರೆ.
ನಾನೆಲ್ಲಿಗೇ ಹೋದರೂ ಜನರು " ಪಾಸ್ಟರ್ ರವರೆ ನಮಗೆ ಆಳವಾದ ಬೋಧನೆಗಳು ಬೇಕು" ಎನ್ನುತ್ತಾರೆ. ಕೆಲವೊಮ್ಮೆ ನಾನು ಅಂಥವರಿಗೆ "ತುಂಬಾ ಆಳಕ್ಕೆ ಹೋಗಬೇಡಿರಿ.. ನೀವು ಬಹಳ ಕಷ್ಟವನ್ನು ಅನುಭವಿಸಬೇಕಾಗುತ್ತದೆ." ಎಂದು ಹೇಳಬೇಕೆನಿಸುತ್ತದೆ. ನನ್ನನ್ನು ತಪ್ಪು ತಿಳಿಯಬೇಡಿರಿ, ನಾನೂ ಸಹ ದೇವರ ವಾಕ್ಯದ ಆಳವಾದ ಅಧ್ಯಯನವನ್ನು ಮಾಡಲು ಇಚ್ಚಿಸುತ್ತೇನೆ. ಆದರೆ ಕೆಲವರು ತಾವು ತಿಳಿದುಕೊಂಡಿರುವ ಕೆಲವು ಮೂಲಭೂತ ವಾಕ್ಯಗಳನ್ನೇ ಇನ್ನೂ ಸರಿಯಾಗಿ ತಮ್ಮ ಜೀವಿತದಲ್ಲಿ ಅಳವಡಿಸಿಕೊಂಡಿರುವುದಿಲ್ಲ ಆದರೂ ಇನ್ನೂ ಆಳವಾದ ಬೋಧನೆ ಬೇಕು ಎನ್ನುತ್ತಾರೆ.
ಈ ಒಂದು ಪ್ರಕ್ರಿಯೆಯಲ್ಲಿ ಬಹುತೇಕರು ಮೋಸ ಹೋಗುತ್ತಾರೆ. ಅವರೆಲ್ಲರೂ ಅಪೋಸ್ತಲನಾದ ಪೌಲನ ಕಾಲದಲ್ಲಿದ್ದ ಅಥೇನೆ ಪಟ್ಟಣದ ಜನರ ಹಾಗೆ ಇರುತ್ತಾರೆ. "ಅಥೇನೆಯರೂ ಅಲ್ಲಿ ವಾಸವಾಗಿದ್ದ ಪರಸ್ಥಳದವರೂ ಹೊಸ ಹೊಸ ಸಂಗತಿಗಳನ್ನು ಹೇಳುವದಕ್ಕೂ ಕೇಳುವದಕ್ಕೂ ಹೊರತು ಬೇರೆ ಯಾವದಕ್ಕೂ ಸಮಯ ಕೊಡುತ್ತಿರಲಿಲ್ಲ."(ಅಪೊಸ್ತಲರ ಕೃತ್ಯಗಳು 17:2)
ಕರ್ತನಾದ ಯೇಸು, ಬಿತ್ತುವನ ಸಾಮ್ಯವನ್ನು ಹೇಳುತ್ತಾ ಕೆಲವು ಮೂವತ್ತರಷ್ಟು ಕೆಲವು ಅರವತ್ತರಷ್ಟು ಕೆಲವು ನೂರರಷ್ಟು ಫಲ ಕೊಡುವ ವಿಚಾರ ಹೇಳುತ್ತಾನೆ. ನೀವು ಕೇವಲ ವಾಕ್ಯವನ್ನು ಕೇಳುವವರು ಮಾತ್ರ ಆಗಿದ್ದರೆ ಅದು ನಿಮ್ಮಲ್ಲಿ ಮೂವತ್ತರಷ್ಟು ಫಲ ಕೊಡುತ್ತದೆ. ನೀವು ವಾಕ್ಯವನ್ನು ಕೇಳುವವರೂ ಓದುವವರೂ ಆದಾಗ ಅದು ನಿಮ್ಮಲ್ಲಿ ಅರವತ್ತರಷ್ಟು ಫಲ ತರುತ್ತದೆ. ಆದಾಗಿಯೂ ನೀವು ವಾಕ್ಯವನ್ನು ಕೇಳಿ ಓದಿ ಅದರಂತೆ ನಡೆಯುವವರಾದರೆ ಅದು ನಿಮ್ಮಲ್ಲಿ ನೂರರಷ್ಟು ಫಲವನ್ನು ತರುವಂತದ್ದಾಗಿರುತ್ತದೆ ಎಂದು ನಾನು ನಂಬುತ್ತೇನೆ.
ವಿಧೇಯತೆ ಎಂಬುದು ದೇವರ ವಾಕ್ಯದ ಬೌದ್ಧಿಕ ಜ್ಞಾನ ತುಂಬಿಕೊಳ್ಳುವುದಕ್ಕಿಂತಲೂ ಹೆಚ್ಚಿನದಾಗಿದೆ.
"ಯೆಹೋವನು ವಿಧೇಯತ್ವಕ್ಕೆ ಮೆಚ್ಚುವಷ್ಟು ಯಜ್ಞಹೋಮಗಳಿಗೆ ಮೆಚ್ಚುತ್ತಾನೋ? ಯಜ್ಞವನ್ನರ್ಪಿಸುವದಕ್ಕಿಂತ ಮಾತು ಕೇಳುವದು ಉತ್ತಮವಾಗಿದೆ; ಟಗರುಗಳ ಕೊಬ್ಬಿಗಿಂತ ವಿಧೇಯತ್ವವು ವಿಶೇಷವಾಗಿದೆ."(1 ಸಮುವೇಲನು 15:22)
ಅರ್ಧ ಜಿಮ್ನಲ್ಲಿ ಇರುವಷ್ಟು ಸಾಧನಗಳನ್ನು ತನ್ನ ಮನೆಯಲ್ಲಿಯೇ ತುಂಬಿಕೊಂಡಿದ್ದಂತಹ ಸ್ನೇಹಿತನೊಬ್ಬ ನನಗೆ ಗೊತ್ತು. ನಾನವನನ್ನು ಕುತೂಹಲದಿಂದ "ನೀನು ಅಭ್ಯಾಸ ಮಾಡುವುದಿಲ್ಲವೇ?"ಎಂದು ಕೇಳಿದೆ. ಅದಕ್ಕೆ ಅವನು "ಹೌದು. ಪ್ರತಿದಿನ ಮುಂಜಾನೆ ನಾಲ್ಕು ಗಂಟೆಗೆ ನಾನು ಅಭ್ಯಾಸ ಮಾಡುತ್ತಿರುವ ಹಾಗೆ ಕನಸನ್ನು ಕಾಣುತ್ತೇನೆ" ಎಂದು ಚಟಾಕಿ ಹಾರಿಸಿದನು. ಇಂದು ಅನೇಕ ಕ್ರೈಸ್ತರು ಹೀಗೆಯೆ ಇದ್ದಾರೆ. ಅವರಿಗೆ ತುಂಬಾ ವಾಕ್ಯಗಳು ಗೊತ್ತು. ಆದರೆ ಅದರಲ್ಲಿ ಒಂದನ್ನು ಅವರು ಕಾರ್ಯರೂಪಕ್ಕೆ ತರಲಾರರು. ನಿಮ್ಮ ಆತ್ಮಿಕ ಸ್ನಾಯುಗಳನ್ನು ಸದೃಢಪಡಿಸಿಕೊಳ್ಳಲು ಇದುವೇ ಸಕಾಲವಾಗಿದೆ.
ಪ್ರಾರ್ಥನೆಗಳು
1. ತಂದೆಯೇ, ನಾನು ಪ್ರತಿನಿತ್ಯವೂ ನಿನ್ನ ವಾಕ್ಯವನ್ನು ಓದಿ ಧ್ಯಾನಿಸುವಂತೆ ಸಹಾಯ ಮಾಡು. ಶ್ರದ್ಧೆಯಿಂದ ನಿನ್ನ ವಾಕ್ಯವನ್ನು ಓದುವಂತ ಕೃಪೆಯನ್ನು ಯೇಸು ನಾಮದಲ್ಲಿ ಅನುಗ್ರಹಿಸು.
2. ತಂದೆಯೇ ನಿನ್ನ ವಾಕ್ಯವನ್ನು ದಿನ ನಿತ್ಯದ ಜೀವಿತದಲ್ಲಿ ಅಳವಡಿಸಿಕೊಂಡು ನಡೆಯುವಂತ ಕೃಪೆಯನ್ನು- ಜ್ಞಾನವನ್ನು ನನಗೆ ಅನುಗ್ರಹಿಸು.ಆಮೆನ್.
2. ತಂದೆಯೇ ನಿನ್ನ ವಾಕ್ಯವನ್ನು ದಿನ ನಿತ್ಯದ ಜೀವಿತದಲ್ಲಿ ಅಳವಡಿಸಿಕೊಂಡು ನಡೆಯುವಂತ ಕೃಪೆಯನ್ನು- ಜ್ಞಾನವನ್ನು ನನಗೆ ಅನುಗ್ರಹಿಸು.ಆಮೆನ್.
Join our WhatsApp Channel
Most Read
● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ಸ್ವಸ್ಥ ಚಿತ್ತತೆ ಎಂಬುದು ಒಂದು ವರ
● ಹಣವು ಚಾರಿತ್ರ್ಯವನ್ನು ವಿವರಿಸುತ್ತದೆ
● ಸರಿಯಾದ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಹೇಗೆ
● ಅಪರಾಧಗಳಿಗಿರುವ ಪರಿಪೂರ್ಣ ಪರಿಹಾರ.
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - III
● ಪುರುಷರು ಯಾಕೆ ಪತನಗೊಳ್ಳುವರು -2
ಅನಿಸಿಕೆಗಳು