ಅನುದಿನದ ಮನ್ನಾ
ದೇವರಿಗೇ ಪ್ರಥಮ ಸ್ಥಾನ ನೀಡುವುದು.#1
Saturday, 21st of September 2024
1
0
158
Categories :
ಭಾವನೆ (Emotion)
ಶಿಷ್ಯತ್ವ (Discipleship)
ನಾವು ಸಾಮಾನ್ಯವಾಗಿ " ನಮಗೆ ದೇವರೇ ಪ್ರಪ್ರಥಮ, ಕುಟುಂಬ ಎರಡನೆಯದು ಮತ್ತು ಕೆಲಸಕ್ಕೆ ಮೂರನೇ ಸ್ಥಾನ "ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ ದೇವರು ಮೊದಲು ಎನ್ನುವುದರ ಅರ್ಥವೇನು?
ಎಲ್ಲದಕ್ಕಿಂತ ಮೊದಲು ನಾವು ದೇವರಿಗೆ ಮೊದಲು ಸ್ಥಾನ ಕೊಡುವುದಕ್ಕಾಗಿಯಾಗಲೀ, ದೇವರನ್ನು ಮೊದಲು ಮಾಡುವುದಕ್ಕಾಗಲಿ ನಮ್ಮ ಕೈಯಲ್ಲಿ ಇಲ್ಲ ಎನ್ನುವುದನ್ನು ನಾವು ಅರ್ಥೈಸಿಕೊಳ್ಳಬೇಕು. ಏಕೆಂದರೆ ಆತನು ಅದ್ವಿತೀಯನೇ.
"ನಾನು ಆದಿಯೂ ಅಂತವೂ ವರ್ತಮಾನ ಭೂತ ಭವಿಷ್ಯತ್ಕಾಲಗಳಲ್ಲಿರುವವನೂ ಸರ್ವಶಕ್ತನೂ ಆಗಿದ್ದೇನೆ ಎಂದು ದೇವರಾದ ಕರ್ತನು ಹೇಳುತ್ತಾನೆ."(ಪ್ರಕಟನೆ 1:8)
ಹಾಗಾದರೆ ದೇವರಿಗೆ ಪ್ರಥಮ ಸ್ಥಾನ ಕೊಡುವುದರ ನಿಜವಾದ ಅರ್ಥವೇನು?
ಅದರ ಅರ್ಥ ಕ್ರೈಸ್ತರಾಗಿ ನಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ನಾವು ಆತನಿಗೆ ಪ್ರಥಮ ಸ್ಥಾನವನ್ನು ನೀಡಬೇಕಾಗಿದೆ. ನಾವು ದೇವರಿಗೆ ಮೊದಲ ಸ್ಥಾನ ನೀಡಬೇಕಾದ ಹಲವು ಕ್ಷೇತ್ರಗಳಿವೆ.
1) ನಿಮ್ಮ ಭಾವನೆಗಳ ವಿಚಾರದಲ್ಲಿ ದೇವರಿಗೆ ಮೊದಲ ಸ್ಥಾನ ನೀಡುವುದು.
ದಾವೀದನು ಯುದ್ಧದಲ್ಲಿ ದೊಡ್ಡ ವಿಜಯವನ್ನು ಸಾಧಿಸಿದನು.ಆದರೆ ವಿಪರ್ಯಾಸವೆಂದರೆ ಅವನ ಸಿಂಹಾಸನವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ ತನ್ನ ಸ್ವಂತ ಮಗನಾದ ಅಬ್ಕ್ಷಲೋಮನ ವಿರುದ್ಧ ಆ ಯುದ್ಧವನ್ನು ಗೆದ್ದಿದ್ದನು. ಆ ಯುದ್ಧದಲ್ಲಿ ಅಬ್ಕ್ಷಾಲೊಮನು ಕೊಲ್ಲಲ್ಪಟ್ಟನು.
ಒಬ್ಬ ತಂದೆಯಾಗಿ ದಾವೀದನು ಆ ಸಮಯದಲ್ಲಿ ಬಹಳವಾಗಿ ಭಾವನಾತ್ಮಕ ತೊಳಲಾಟವನ್ನು ಅನುಭವಿಸುತ್ತಾ ಅಬ್ಕ್ಷಲೋಮನನ್ನು ಕೊಲ್ಲುವ ಬದಲು ಅವನನ್ನು ಬಂಧಿಸಿ ತರಬಹುದಿತ್ತು ಎಂದನು. ಆದರೆ ಆ ಯುದ್ಧದಲ್ಲಿ ತಮ್ಮ ಪ್ರಾಣವನ್ನೇ ದಾವೀದನಿಗಾಗಿ, ಅವನ ಕುಟುಂಬಕ್ಕಾಗಿ ಪಣಕಿಟ್ಟು ಹೋರಾಡಿದ ತನ್ನ ಜನರ ವಿಜಯವನ್ನು ಅವನು ಪ್ರಶಂಶಿಸಲಿಲ್ಲ.
ದಾವಿದನ ಸೇನಾಪತಿಯಾದ ಯೋವಬನು ತಮ್ಮ ಜನರು ವೀರಾವೇಶದಿಂದ ಹೋರಾಡದಿದ್ದರೆ ಅವನ ಕುಟುಂಬದಲ್ಲಿ ಯಾರು ಸಹ ಜೀವಂತವಾಗಿರುತ್ತಿರಲಿಲ್ಲ ಎಂದು ಅವನಿಗೆ ನೆನಪಿಸಿದನು. ಯೋವಬನು ದಾವಿದನ ಬಳಿ ಬಂದು ಅವನ ತಪ್ಪಾದ ಭಾವನೆಗಳನ್ನು ಹೋಗಲಾಡಿಸಿ ಎದ್ದು ತನ್ನ ಜನರನ್ನು ಪ್ರಶಂಶಿಸು ಎಂದು ವಿವೇಕಯುತವಾಗಿ ಕೇಳಿಕೊಂಡನು. ಆಗ ದಾವಿದನು ತನ್ನ ಭಾವನೆಗಳಿಗಿಂತಲೂ ಯಾವುದು ಸರಿಯೋ ಅದೇ ದೊಡ್ಡದು ಎನ್ನುವುದಕ್ಕೆ ಅವಕಾಶ ಮಾಡಿಕೊಟ್ಟನು.
"ಈಗ ಎದ್ದು ಹೋಗಿ ನಿನ್ನ ಸೇವಕರನ್ನು ದಯಾಭಾವದಿಂದ ಮಾತಾಡಿಸು; ಯೆಹೋವನಾಣೆ, ನೀನು ಹೀಗೆ ಮಾಡದಿದ್ದರೆ ಸಾಯಂಕಾಲವಾಗುವಷ್ಟರಲ್ಲಿ ಎಲ್ಲರೂ ನಿನ್ನನ್ನು ಬಿಟ್ಟು ಹೋಗುವರು. ಯೌವನಕಾಲದಿಂದ ಈವರೆಗೆ ನಿನಗೆ ಬಂದ ಎಲ್ಲಾ ಕೇಡುಗಳಲ್ಲಿ ಇದೇ ಹೆಚ್ಚಿನದಾಗಿರುವದು ಎಂದು ಹೇಳಿದನು.ಆಗ ಅರಸನು ಎದ್ದು ಬಂದು ಊರುಬಾಗಲಲ್ಲಿ ಕೂತುಕೊಂಡನು. ಇಗೋ, ಅರಸನು ಬಂದು ಊರುಬಾಗಲಲ್ಲಿ ಕೂತುಕೊಂಡಿದ್ದಾನೆಂಬ ಸುದ್ದಿಯು ಪ್ರಜೆಗಳಿಗೆ ಮುಟ್ಟಿದಾಗ ಅವರೆಲ್ಲರೂ ಅವನ ಮುಂದೆ ಕೂಡಿಬಂದರು."(2 ಸಮುವೇಲನು 19:7-8 )
ನಾವು ವಿವೇಕಯುತ ಆಲೋಚನೆಗಳನ್ನು ಅನುಸರಿಸುವ ಮೂಲಕ ದೇವರಿಗೆ ಪ್ರಥಮ ಸ್ಥಾನ ನೀಡುವಾಗ ಇತರ ಎಲ್ಲಾ ವಿಷಯಗಳು ತಾವಾಗಿ ಸರಿಯಾದ ಸ್ಥಾನಕ್ಕೆ ಬಂದು ನಿಲ್ಲುತ್ತದೆ.
ನಮ್ಮಲ್ಲಿ ಅನೇಕರು ಅನುದಿನ ಕಠಿಣವಾದ ಸವಾಲುಗಳನ್ನು ಮತ್ತು ಕಠಿಣ ನಿರ್ಧಾರಗಳನ್ನು ಎದುರಿಸುತ್ತಿರುತ್ತಾರೆ. ನಾವು ದೇವರ ವಾಕ್ಯದ ಪ್ರಕಾರ ಅವರಿಗೆ ಪ್ರತಿಕ್ರಿಯೆ ನೀಡಬೇಕೋ ಅಥವಾ ಭಾವನಾತ್ಮಕವಾಗಿ ಪ್ರತಿಕ್ರಿಯ ನೀಡಬೇಕೊ? ಎಂಬುದೇ ನಿಜವಾದ ಸಮಸ್ಯೆ. ಭಾವನಾತ್ಮಕವಾಗಿ ಪ್ರತಿಕ್ರಿಯೆಸಿದರೆ ಅದು ನಮ್ಮ ಮೂಲಭೂತ ಮಾನವನ ಪ್ರಕ್ರಿಯೆ ಆಗಿರುತ್ತದೆ. ಮಾನವ ಭಾವನೆಗಳು ನಮ್ಮನ್ನು ರೋಲರ್ ಕೊಸ್ಟರ್ನಲ್ಲಿ ಮಾತ್ರ ಕರೆದೋಯುತ್ತವೆ.
ಆದಾಗಿಯೂ ಪರಿಸ್ಥಿತಿಗೆ ತಕ್ಕಂತೆ ದೇವರವಾಕ್ಯನುಸಾರ ಉತ್ತರ ನೀಡುವ ಮೂಲಕ ಈ ಭಾವನೆಗಳನ್ನು ಉತ್ತಮವಾಗಿ ನಿರ್ವಹಿಸಬಹುದು.
ಕೆಲವೊಂದು ಸಮಯದಲ್ಲಿ ಕೆಲವೊಂದು ಪರಿಸ್ಥಿತಿಗೆ ದೇವರ ವಾಕ್ಯ ಏನು ಹೇಳುತ್ತದೆ ಎಂದು ಹೇಳುವುದು ಸಾಧ್ಯವಿರದೆ ಹೋಗಬಹುದು. ಆಗ "ಆ ಸಮಯದಲ್ಲಿ ಯೇಸುಇದ್ದಿದ್ದರೆ ಏನು ಮಾಡುತ್ತಿದ್ದನು" ಎಂಬ ಪ್ರಶ್ನೆಯನ್ನು ನಿಮಗೆ ನೀವು ಕೇಳಿಕೊಳ್ಳಿ (WWJD) ಯಾವಾಗಲೂ ಉನ್ನತವಾದ ಮಾರ್ಗವನ್ನು ಆಯ್ಕೆಮಾಡಿಕೊಳ್ಳಿ. ಆ ಮಾರ್ಗದಿಂದ ನಿಮ್ಮ ಭಾವನೆಗಳನ್ನು ನಿರ್ವಹಿಸುವ ರೀತಿಯಲ್ಲಿ ದೇವರಿಗೆ ಮೊದಲ ಸ್ಥಾನವನ್ನು ನೀಡುತ್ತೀರಿ
ನನ್ನ ಕ್ರಿಸ್ತಿಯ ನಡೆಯಲಿ ಈ ಒಂದು ಕ್ಷೇತ್ರದಲ್ಲಿ ನಾನು ಸಂಪೂರ್ಣತೆಯನ್ನು ಸಾಧಿಸಿಲ್ಲ ಆದರೆ ನಾನು ಆ ಮಾರ್ಗದಲ್ಲಿ ಇರುತ್ತೇನೆ ಎಂಬುದನ್ನು ನೀವು ಅರಿತುಕೊಳ್ಳಬೇಕೆಂದು ನಾನು ನಿಮ್ಮಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ. ಆದ್ದರಿಂದ ದಯಮಾಡಿ ನಿಮ್ಮ ಪ್ರಾರ್ಥನೆಯಲ್ಲಿ ನನ್ನನ್ನು ನೆನಪಿಸಿಕೊಳ್ಳಿ. "ದೇವರಿಗೆ ಪ್ರಥಮ ಸ್ಥಾನ ನೀಡಿ. ಆಗ ನೀವು ಎಂದಿಗೂ ಕಡೆಯವರಾಗುವುದಿಲ್ಲ" ಎಂದು ಒಬ್ಬರು ಬುದ್ದಿವಂತಿಕೆಯಿಂದ ಹೇಳಿದ್ದಾರೆ.
ಪ್ರಾರ್ಥನೆಗಳು
ತಂದೆಯೇ, ನಾನು ಎಂದಿಗೂ ಭಾವನಾತ್ಮಕವಾಗಿ ಪ್ರತಿಕ್ರಿಯಿಸದೆ ನಿಮ್ಮ ವಾಕ್ಯ ಅನುಸಾರವಾಗಿಯೇ ಪ್ರವರ್ತಿಸುವಂತೆ ನನ್ನನ್ನು ಬಲಪಡಿಸಿರಿ. ನನ್ನ ಭಾವನೆಗಳನ್ನು ಮೀರಿ ನಾನು ಜೀವಿಸುವಂತೆ ಯೇಸು ನಾಮದಲ್ಲಿ ನನಗೆ ಸಹಾಯ ಮಾಡಿ.ಆಮೆನ್.
Join our WhatsApp Channel
Most Read
● ದಿನ 14:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - II
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
● ಸಫಲತೆ ಎಂದರೇನು?
● ಕೊರತೆಯಿಲ್ಲ
● ಪರಿಸ್ಥಿತಿಯ ದಯೆಯಲ್ಲಿ ಇರಬೇಡಿರಿ
● ಮಾತನಾಡುವ ವಾಕ್ಯದ ಶಕ್ತಿ
ಅನಿಸಿಕೆಗಳು