english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಕುಟುಂಬಕ್ಕಾಗಿ ಇರುವ ಗುಣಮಟ್ಟದ ಸಮಯ
ಅನುದಿನದ ಮನ್ನಾ

ಕುಟುಂಬಕ್ಕಾಗಿ ಇರುವ ಗುಣಮಟ್ಟದ ಸಮಯ

Sunday, 13th of October 2024
1 0 293
Categories : Relationships
"ಪಸ್ಕಹಬ್ಬದ ಮುಂದೆ ಯೇಸು ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗಬೇಕಾದ ಕಾಲ ಬಂತೆಂದು ತಿಳುಕೊಂಡು ಲೋಕದಲ್ಲಿರುವ ತನ್ನವರನ್ನು ಪ್ರೀತಿಸಿ ಪರಿಪೂರ್ಣವಾಗಿ ಅವರನ್ನು ಪ್ರೀತಿಸುತ್ತಾ ಬಂದನು."(ಯೋಹಾನ 13:1)

ನಮ್ಮ ಕುಟುಂಬ ಸದಸ್ಯರೊಂದಿಗೆ ನಾವು ಪಡೆಯುವ ಪ್ರತಿ ಕ್ಷಣವನ್ನು ಆನಂದಿಸೋಣ. ನಾಳೆಯ ದಿನಗಳಲ್ಲಿ ನಮಗೆ ಅಂತಹ ಕ್ಷಣಗಳ ಸೌಭಾಗ್ಯ ಸಿಗಬಹುದು ಇಲ್ಲವೇ ಸಿಗದೇ ಹೋಗಬಹುದು.

 ಒಂದು ದಿನ ಒಬ್ಬ ಪ್ರಸಿದ್ಧ ಪಾಸ್ಟರ್ ಒಬ್ಬರು ತಮ್ಮ ಭಾನುವಾರದ ಪ್ರಸಂಗವನ್ನು ಸಿದ್ಧಪಡಿಸುವುದರಲ್ಲಿ ನಿರತರಾಗಿದ್ದರು. ಅವರ ಪುಟ್ಟ ಮಗಳು ಸದ್ದಿಲ್ಲದೆ ಹಿಂದಿನಿಂದ ಬಂದು ಅವರನ್ನು ಗಟ್ಟಿಯಾಗಿ "ಡಾಡ" ಎಂದು ಅಪ್ಪಿ ಕೊಂಡಳು.. ಆ ಪಾಸ್ಟರ್ ಅವರು ಮೆರುದನಿಯಲ್ಲಿ ಆ ಮಗುವನ್ನು ಗದರಿಸಿ, ಈಗ ಅವಳೊಂದಿಗೆ ಸಮಯ ಕಳೆಯಲು ಬಿಡುವಿಲ್ಲ ಎಂದು ಹೇಳಿದರು.

 ಆ ಸಮಯದಲ್ಲಿಯೇ ಅಲ್ಲಿದ್ದ ಆ ಪಾಸ್ಟರ್ರವರ ಹೆಂಡತಿಯು ಚಿಕ್ಕ ಮಗುವಾಗಿ ಆಕೆ ತೋರುತ್ತಿರುವ ಪ್ರೀತಿ ಮತ್ತು ವಾತ್ಸಲ್ಯ ಸ್ವಲ್ಪ ವರ್ಷಗಳು ಹೋದ ಮೇಲೆ ಮತ್ತೆ ಸಿಗುವುದಿಲ್ಲ ಎಂದು  ಮೃದುವಾಗಿ ನೆನಪಿಸಿ ಸಿಕ್ಕಿರುವ ಈ ಸಮಯದಲ್ಲಿ ಅದನ್ನು ಆನಂದಿಸಿರಿ ಎಂದು ಸಲಹೆ ಇತ್ತಳು. ಆಗ ಆ ಪಾಸ್ಟರ್ ಅವರು ಆ ಮಾತಿನಲ್ಲಿರುವ ಸತ್ಯತೆ ಮತ್ತು ತೀವ್ರತೆಯನ್ನು ಅರಿತುಕೊಂಡು ತಕ್ಷಣವೇ ತಮ್ಮ ಕೆಲಸವನ್ನು ಬದುಗಿಟ್ಟು ಆ ಪುಟ್ಟ ಮಗಳೊಂದಿಗೆ ಸಮಯ ಕಳೆದರು.

 ಅನೇಕ ಬಾರಿ "ಬಿಡುವಿಲ್ಲ" ಎನ್ನುವಂತದ್ದು "ಪ್ರಯೋಜನ"ಎನ್ನುವುದಕ್ಕೆ ಸಮಾನವಾಗಿರುವುದಿಲ್ಲ ಎಂಬುದನ್ನು ನಾನು ಯಾವಾಗಲೂ ಜ್ಞಾಪಿಸಿಕೊಳ್ಳುತ್ತಲೇ ಇರುತ್ತೇನೆ. ಕೇವಲ ಅವಿರತವಾದ ಚಟುವಟಿಕೆಯೇ ಸಾಧನೆಯನ್ನು ತಂದುಕೊಡುವುದಿಲ್ಲ ಮತ್ತು ಫಲ ಭರಿತವನ್ನಾಗಿಯೂ ಮಾಡುವುದಿಲ್ಲ.

ನಿಮ್ಮ ಕುಟುಂಬದ ಸದಸ್ಯರೊಂದಿಗೆ ನೀವು ಕಳೆಯುವ ಕ್ಷಣಗಳು ಅಮೂಲ್ಯವಾದ ಕ್ಷಣಗಳಾಗಿವೆ. ಅವುಗಳನ್ನು ವ್ಯರ್ಥಗೊಳಿಸಿಕೊಳ್ಳಬೇಡಿರಿ. ಯಾರಿಗೆ ಗೊತ್ತು ನಾಳೆಯ ದಿನಗಳಲ್ಲಿ ನಾವು ಅವುಗಳನ್ನು ಪಡೆಯದೆ ಹೋಗಬಹುದೇನೋ? ನೀವು ನಿಮ್ಮ ಕುಟುಂಬದೊಂದಿಗೆ ( ಅಂದರೆ ನಿಮ್ಮ ಹೆಂಡತಿ ಮಕ್ಕಳು ನಿಮ್ಮ ಪೋಷಕರ ಜೊತೆಗೆ) ಇರುವಾಗ ಸಾಮಾಜಿಕ ಜಾಲತಾಣ ವೀಕ್ಷಿಸುವುದರಲ್ಲಿ ನಿರತರಾಗಬೇಡಿರಿ. ಅದನ್ನು ಬೇರೆ ಸಮಯದಲ್ಲಿ ಮಾಡಿರಿ. ಶಕ್ತಿಯುತವಾಗಿರುವ ಕುಟುಂಬದ ಲಕ್ಷಣವೆಂದರೆ ಅದು ಅವರು ಕುಟುಂಬವಾಗಿ ಕಳೆಯುವ ಗುಣಮಟ್ಟದ ಸಮಯದ ಮೇಲೆ ನಿರ್ಧರಿತವಾಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.

ಶಿಲುಬೆಗೆ ಹೋಗುವ ಮೊದಲು ತನ್ನ ಅಪೋಸ್ತಲರೊಂದಿಗೆ ಸಮಯ ಕಳೆಯುವುದು ಎಷ್ಟು ಮುಖ್ಯ ಎಂದು ಕರ್ತನಾದ ಯೇಸು ಕೂಡ ತಿಳಿದಿದ್ದನು. ಹಾಗಾಗಿ ನಾವು ಸಹ ನಮ್ಮ ಕುಟುಂಬದ ಸದಸ್ಯರಿಗೆ ಗುಣಮಟ್ಟದ ಸಮಯವನ್ನು ನೀಡೋಣ ಮತ್ತು ಅಂತಹ ಕ್ಷಣಗಳನ್ನು ಒಟ್ಟಾಗಿ ಆನಂದಿಸೋಣ.
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನೀನು ಅನುಗ್ರಹಿಸಿದ ನನ್ನ ಕುಟುಂಬದ ಸದಸ್ಯರಿಗಾಗಿ ನಿನಗೆ ಸ್ತೋತ್ರ. ಅವರುಗಳನ್ನು ನಿನ್ನ ಕಣ್ಣಿನ ಗುಡ್ಡೆಯಂತೆ ಕಾಪಾಡು. ನನ್ನ ಕುಟುಂಬದವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ನನಗೆ ಯೇಸು ನಾಮದಲ್ಲಿ ಕೃಪೆ ನೀಡಿರಿ, ಆಮೆನ್.

Join our WhatsApp Channel


Most Read
● ಪ್ರಬುದ್ಧತೆಯು ಜವಾಬ್ದಾರಿಯಿಂದ ಆರಂಭವಾಗುತ್ತದೆ.
● ವಾಗ್ದತ್ತ ದೇಶವನ್ನು ಸುತ್ತುವರೆದಿರುವ ಕೋಟೆಗಳೊಂದಿಗೆ ವ್ಯವಹರಿಸುವುದು.
● ದೇವರು ಹೇಗೆ ಒದಗಿಸುತ್ತಾನೆ #4
● ಶಾಪಗ್ರಸ್ತ ವಸ್ತುವನ್ನು ತೆಗೆದುಹಾಕಿ .
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - III
● ದೇವರಿಗಾಗಿ ಮತ್ತು ದೇವರೊಂದಿಗೆ.
● ದೈವಿಕ ಅನುಕ್ರಮ - 1
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್