ಅನುದಿನದ ಮನ್ನಾ
ಅಂತ್ಯಕಾಲದ ಸಮಯದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು: #2
Monday, 28th of October 2024
2
1
114
Categories :
ಅಂತಿಮ ಸಮಯ (End Time)
ಪ್ರವಾದನ ವಾಕ್ಯ (Prophetic word)
"ಇದಲ್ಲದೆ ಯುದ್ಧಗಳಾಗುವುದನ್ನೂ ಯುದ್ಧಗಳಾಗುವ ಸೂಚನೆಯ ಸುದ್ದಿಗಳನ್ನೂ ನೀವು ಕೇಳಬಹುದು. ಕಳವಳಪಡದಂತೆ ನೋಡಿಕೊಳ್ಳಿರಿ; ಏಕೆಂದರೆ ಹೀಗಾಗುವುದು ಅಗತ್ಯ. ಆದರೂ ಇದು ಇನ್ನೂ ಅಂತ್ಯಕಾಲವಲ್ಲ. ಹೀಗಿರಲಾಗಿ ಜನರಿಗೆ ವಿರುದ್ಧವಾಗಿ ಜನರು, ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು; ಮತ್ತು ಅಲ್ಲಲ್ಲಿ ಬರಗಳು ಬರುವವು, ಅಲ್ಲಲ್ಲಿ ಭೂಕಂಪಗಳು ಆಗುವವು"(ಮತ್ತಾ 24:6-7)
ನಾವೀಗ ಅಂತ್ಯ ಕಾಲ ಸಮಯದ ಪ್ರವಾದನಾ ಸೂಚನೆಗಳು' ಎಂಬ ಸರಣಿಯನ್ನು ಮುಂದುವರಿಸುತ್ತಿದ್ದೇವೆ. ಮುಂದೆ ಯೇಸು ಹೇಳಿದ ಇನ್ನೊಂದು ಸೂಚನೆಯೆಂದರೆ 'ಯುದ್ಧಗಳು ಮತ್ತು ಯುದ್ಧಗಳಾಗುವವು ಎಂಬ ವದಂತಿಗಳು' ಎಂಬುದಾಗಿದೆ.
ಇತ್ತೀಚಿನ ಸಂಶೋಧನಾ ವರದಿಯ ಪ್ರಕಾರ ಇಂದು ಪ್ರಪಂಚದ ಎಲ್ಲಾ ಸಂಶೋಧನಾ ವಿಜ್ಞಾನಿಗಳಲ್ಲಿ ಐವತ್ತು ಪ್ರತಿಶತದಷ್ಟು ಜನರು ಕೆಲವು ರೀತಿಯ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಂಶೋಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ ಈ ಕಡೆಯ ಕಾಲದಲ್ಲಿ ಕೆಲವು ಅತ್ಯಂತ ದುರಂತದ ಯುದ್ಧಗಳು ನಡೆಯುತ್ತವೆ ಮತ್ತದು ನಾವು ಇಲ್ಲಿಯವರೆಗೆ ಅನುಭವಿಸಿದ ಯಾವ ಯುದ್ಧಗಳನ್ನಾದರೂ ಮರೆಸಿ ಬಿಡುತ್ತದೆ. ಆದಾಗ್ಯೂ, ಕರ್ತನಾದ ಯೇಸು ತನ್ನ ಶಿಷ್ಯರಿಗೆ ಅವರು ಈ ವಿಷಯಗಳಿಂದ ಯಾವುದೇ ರೀತಿ ಕಳವಳಗೊಳ್ಳಬಾರದೆಂದು ಆ ವಿಚಾರಗಳನ್ನು ಸ್ಪಷ್ಟವಾಗಿ ಹೇಳಿದನು.
ಈ ಸೂಚನೆಗಳ ಉದ್ದೇಶವೇನು? ನಾವು ಮೋಡಗಳನ್ನು ನೋಡುವಾಗ, ಮಳೆಯು ಶೀಘ್ರದಲ್ಲೇ ಬರಬಹುದು ಎಂದು ಅಂದುಕೊಳ್ಳುತ್ತೇವೆ ಹಾಗೆಯೇ ಈ ಸೂಚನೆಗಳು ಘಟಿಸುವಾಗ ಕರ್ತನ ಬರೋಣವೂ ಅತೀ ಶೀಘ್ರದಲ್ಲಿ ನಡೆಯಲಿದೆ ಎಂಬುದನ್ನು ಅವು ಸೂಚಿಸುತ್ತವೆ.
ಈ ಸೂಚನೆಗಳು ಅತಿಯಾಗಿ ಘಟಿಸುತ್ತಿರುವಾಗ ಕ್ರಿಸ್ತನು ಇಂದೇ ಹಿಂತಿರುಗುತ್ತಾನೆ ಎಂಬುದು ಅದರ ಅರ್ಥವಲ್ಲ ಎಂಬುದನ್ನು ನೀವು ಈಗ ದಯವಿಟ್ಟು ಅರ್ಥಮಾಡಿಕೊಳ್ಳಬೇಕು. ಆದರೆ ನಾವು ಹೆಚ್ಚು ಹೆಚ್ಚಾಗಿ ಸೂಚನೆಗಳನ್ನು ನೋಡುವಾಗ ಆತನ ಬರೋಣವು ಅತ್ಯಂತ ಹತ್ತಿರದಲ್ಲಿರುವ ಸಂಭವನೀಯತೆ ಅಷ್ಟು ಹೆಚ್ಚಾಗಿದೆ ಎಂದರ್ಥಮಾಡಿಕೊಳ್ಳಬೇಕು. "ಸಮಾಧಾನ" ಎಂಬುದು ಮನುಷ್ಯನಿಗೆ ದೇವರಿಂದ ಸಿಕ್ಕ ವರವಾಗಿದೆ . ಈ ಸಮಾಧಾನ ವನ್ನು (ಮನುಷ್ಯನಿಗೆ ದೇವರ ವರ ) ಹೊಂದಿಕೊಂಡ ಮೇಲೆ ಮನುಷ್ಯರು ಯುದ್ಧ ಮತ್ತು ವಿನಾಶದಕಡೆಗೆ ಓಡುತ್ತಾರೆ. ಮನುಷ್ಯ- ಮನುಷ್ಯರ ಮತ್ತು ರಾಷ್ಟ್ರ -ರಾಷ್ಟ್ರಗಳ ನಡುವಿನ ಶಾಂತಿಯು ದೇವರ ಕೊಡುಗೆಯಾಗಿದೆಯೇ ಹೊರತು ಇದು ಮನುಷ್ಯರು ತಾವಾಗಿ ಉಂಟು ಮಾಡಿಕೊಳ್ಳಬಹುದಾದ ಸಂಬಂಧಗಳ ಸ್ವಾಭಾವಿಕ ಸ್ಥಿತಿಯಲ್ಲ. ನಮ್ಮ ರಾಷ್ಟ್ರದಲ್ಲಿ ಮತ್ತು ಪ್ರಪಂಚದಲ್ಲಿನ ಇತರ ರಾಷ್ಟ್ರಗಳಲ್ಲಿ ಶಾಂತಿಯು ಉಂಟಾಗಬೇಕೆಂದು ದೇವರಲ್ಲಿ ಪ್ರಾರ್ಥಿಸುವುದನ್ನು ನಾವು ಅಭ್ಯಾಸ ಮಾಡಿಕೊಳ್ಳಬೇಕು.
ಇತ್ತೀಚೆಗೆ ಒಬ್ಬರು "ಪಾಸ್ಟರ್, ಈ ರೀತಿ "ಯುದ್ಧವು "ನಡೆಯಬೇಕಾದರೆ," ನಾವು ಶಾಂತಿಗಾಗಿ ಹೇಗೆ ಪ್ರಾರ್ಥಿಸಬಹುದು?ನಾವು ದೇವರ ಚಿತ್ತಕ್ಕೆ ವಿರುದ್ಧವಾಗಿ ಹೋಗುತ್ತಿಲ್ಲವೇ?"ನನಗೆ ಬರೆದಿದ್ದರು.
ಮೊದಲನೆಯದಾಗಿ, ದೇವರ ಚಿತ್ತವು, ಪಾಪಿಗಳಾದ ಮನುಷ್ಯರು ಭೂಮಿಯ ಮೇಲೆ ಮಾಡುವ ಸಮಾಧಾನದ ರೀತಿಯಲ್ಲಿ ಇರದೇ ಆತನ ಪವಿತ್ರ ದೇವದೂತರುಗಳ ಮೂಲಕ ಪರಲೋಕದಲ್ಲಿ ನೆರವೇರಿಸಲ್ಪಡುವಂತೆ ಭೂಮಿಯ ಮೇಲೆಯೂ ನೆರವೇರುವಂತೆ ಪ್ರಾರ್ಥಿಸಲು ಕರ್ತನು ನಮಗೆ ಕಲಿಸಿದನು. (ಮತ್ತಾಯ 6:10).
ಅಪೋಸ್ತಲನಾದ ಪೌಲನು ಸಹ ಈ ಲೋಕದಲ್ಲಿರುವ ದೇಶ ದೇಶಗಳ ಮಧ್ಯೆ ಸಮಾಧಾನ ಉಂಟಾಗಬೇಕೆಂದು ಪ್ರಾರ್ಥಿಸಬೇಕೆಂಬುದನ್ನು ಕಲಿಸಿಕೊಟ್ಟನು"
ಎಲ್ಲಾದಕ್ಕಿಂತ ಮೊದಲು ಎಲ್ಲಾ ಜನರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ, ಪ್ರಾರ್ಥನೆಗಳನ್ನೂ, ಮನವಿಗಳನ್ನೂ, ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಮಗೆ ಸುಖಸಮಾಧಾನಗಳು ಉಂಟಾಗಿ ನಾವು ಪೂರ್ಣಭಕ್ತಿಯಿಂದಲೂ, ಗೌರವದಿಂದಲೂ ಜೀವಿಸುವಂತೆ, ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು.ಹಾಗೆ ಮಾಡುವುದು ನಮ್ಮ ರಕ್ಷಕನಾದ ದೇವರ ಸನ್ನಿಧಿಯಲ್ಲಿ ಒಳ್ಳೆಯದು, ಮೆಚ್ಚಿಕೆಯಾಗಿಯೂ ಇದೆ. ಎಲ್ಲಾ ಜನರೂ ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬುದೇ ಆತನ ಚಿತ್ತವಾಗಿದೆ."(1 ತಿಮೊ 2:1-4)
ಜನಾಂಗಗಳ ನಡುವಿನ ಶಾಂತಿಗೂ ಮತ್ತು ಸುವಾರ್ತೆಸೇವೆಗೂ ನಡುವೆ ಇರುವ ಬಲವಾದ ಸಂಪರ್ಕವನ್ನು ಇಲ್ಲಿ ಗಮನಿಸಿ.
ಕೊನೆಯದಾಗಿ, ಕರ್ತನಾದ ಯೇಸು ಸ್ವತಃ ಹೇಳಿದ್ದೇನೆಂದರೆ "ಸಮಾಧಾನ ಪಡಿಸುವವರು ಧನ್ಯರು ಅವರು ದೇವರ ಮಕ್ಕಳು ಎಂದು ಕರೆಯಲ್ಪಡುತ್ತಾರೆ" ಎಂದು(ಮತ್ತಾಯ 5:9)
ಹಾಗಾದರೆ ಈಗ ನಾವು ನಮ್ಮ ಸುತ್ತಲೂ ನಡೆಯುತ್ತಿರುವ ಎಲ್ಲ ಸಂಗತಿಗಳ ನಡುವೆ ಶಾಂತಿ ನೆಲೆಸುವಂತೆ ನಾವು ಪ್ರಾರ್ಥಿಸೋಣ.
ಪ್ರಾರ್ಥನೆಗಳು
1. ತಂದೆಯೇ, ನೀನು ಎಲ್ಲಾ ಜನಾಂಗಗಳಿಗೂ ದೇವರಾಗಿದೀಯ. ಎಲ್ಲಾ ವಿಷಯಗಳು ನಿನಗೆ ಸಾಧ್ಯ ಕರ್ತನೇ. ನಮ್ಮ ರಾಷ್ಟ್ರ ಮತ್ತು ಅದರ ಗಡಿಗಳಲ್ಲಿ ಶಾಂತಿಯನ್ನು ಏರ್ಪಡಿಸಬೇಕೆಂದು ನಾವು ನಿನ್ನನ್ನು ಬೇಡಿಕೊಳ್ಳುತ್ತೇವೆ.
2. ತಂದೆಯೇ, ನಾನು ನನ್ನನ್ನೂ ಮತ್ತು ನನ್ನ ಕುಟುಂಬ ಸದಸ್ಯರನ್ನು ನಿನಗೆ ಸಮರ್ಪಿಸುತ್ತಾ ನಾನು ಜೀವಿಸುವ ಈ ಭೂಮಿಯಲ್ಲಿ ಕರ್ತನ ಒಳ್ಳೆಯತನವನ್ನು ನೋಡುತ್ತೇನೇ ಎಂದು ಅರಿಕೆ ಮಾಡುತ್ತೇನೆ.
3. ಓ ಕರ್ತನೇ, ಪ್ರಪಂಚದ ರಾಷ್ಟ್ರಗಳಲ್ಲಿ ಶಾಂತಿ ನೆಲೆಸಲಿ. ನಿಮ್ಮ ಶಾಂತಿಯನ್ನು ಯೇಸುನಾಮದಲ್ಲಿ ಪ್ರಕಟಣೆ ಪಡಿಸು. ಆಮೆನ್.
2. ತಂದೆಯೇ, ನಾನು ನನ್ನನ್ನೂ ಮತ್ತು ನನ್ನ ಕುಟುಂಬ ಸದಸ್ಯರನ್ನು ನಿನಗೆ ಸಮರ್ಪಿಸುತ್ತಾ ನಾನು ಜೀವಿಸುವ ಈ ಭೂಮಿಯಲ್ಲಿ ಕರ್ತನ ಒಳ್ಳೆಯತನವನ್ನು ನೋಡುತ್ತೇನೇ ಎಂದು ಅರಿಕೆ ಮಾಡುತ್ತೇನೆ.
3. ಓ ಕರ್ತನೇ, ಪ್ರಪಂಚದ ರಾಷ್ಟ್ರಗಳಲ್ಲಿ ಶಾಂತಿ ನೆಲೆಸಲಿ. ನಿಮ್ಮ ಶಾಂತಿಯನ್ನು ಯೇಸುನಾಮದಲ್ಲಿ ಪ್ರಕಟಣೆ ಪಡಿಸು. ಆಮೆನ್.
Join our WhatsApp Channel
Most Read
● ದೇವರ ಎಚ್ಚರಿಕೆಗಳನ್ನು ಕಡೆಗಣಿಸಬೇಡಿರಿ● ಯುದ್ಧಕ್ಕಾಗಿ ತರಬೇತಿ.
● ಕಾಮದ ದುರಿಚ್ಛೆಗಳಿಂದ ಹೊರಬರುವುದು
● ಜೀವಿಸುವವರಿಗಾಗಿ ಸತ್ತವನ ಪ್ರಾರ್ಥನೆ
● ಎದುರಾಗುವ ವಿರೋಧಗಳನ್ನು ನಂಬಿಕೆಯಿಂದ ಎದುರಿಸುವುದು.
● ಯಜಮಾನನ ಬಯಕೆ
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
ಅನಿಸಿಕೆಗಳು