ಅನುದಿನದ ಮನ್ನಾ
ದೂರದಿಂದ ಹಿಂಬಾಲಿಸುವುದು
Wednesday, 6th of November 2024
2
1
140
Categories :
ಶಿಷ್ಯತ್ವ (Discipleship)
ಆದರೆ ಪೇತ್ರನು ದೂರದಿಂದ ಅವರನ್ನು ಹಿಂಬಾಲಿಸುತ್ತಿದ್ದನು. (ಲೂಕ 22:54)
ಯೇಸುವಿನ ಜೊತೆಗೆ ಇದ್ದು ಆತನೊಂದಿಗೆ ನಿಕಟವಾಗಿ ನಡೆದ ಕೆಲವರು ಇದ್ದಾರೆ ಮತ್ತು ಹಾಗೆಯೇ ಯೇಸುವನ್ನು ದೂರದಿಂದ ಹಿಂಬಾಲಿಸಿದವರೂ ಇದ್ದಾರೆ. ನಾನು ಭೌತಿಕ ನಿಕಟತೆ ಕುರಿತು ಇಲ್ಲಿ ಮಾತನಾಡುತ್ತಿಲ್ಲ. ಕೆಲವರು ಭೌತಿಕವಾಗಿ ಯೇಸುವಿಗೆ ಬಹಳ ಹತ್ತಿರವಾಗಿದ್ದರು. ಆದರೆ ಅವರ ಹೃದಯಗಳು ಆತನಿಂದ ದೂರವಿದ್ದವು. (ಮತ್ತಾಯ 15:8)
"ಇಷ್ಟು ಹತ್ತಿರ ಮತ್ತು ಇಷ್ಟು ದೂರ" ಎಂಬ ಮಾತನ್ನು ನೀವು ಕೇಳಿದ್ದೀರಾ? ನೀವು ಸಭೆಯಲ್ಲಿಯೇ ಕುಳಿತಿರಬಹುದು ಆದರೆ ಆ ಸಭೆಯ ಒಡೆಯನಿಂದ ನೀವು ದೂರವಾಗಿರಬಹುದು.
ಪೇತ್ರನಂತೆ, ಇಂದು ಅನೇಕ ಕ್ರೈಸ್ತರು ಯೇಸುವನ್ನು ಹಿಂಬಾಲಿಸುತ್ತಿರುತ್ತಾರೆ ಆದರೆ ದೂರದಿಂದ ಹಿಂಬಾಲಿಸುವವರಾಗಿದ್ದಾರೆ. ಅವರು ಯೇಸುವನ್ನು ತ್ಯಜಿಸಿಲ್ಲ. ಆದರೆ ಅದೇ ಸಮಯದಲ್ಲಿ ಆತನನ್ನು ಹಿಂಬಾಲಿಸಲು ಬೇಕಾದ ಉತ್ಸಾಹವಾಗಲೀ ಮತ್ತು ಉತ್ಸುಕತೆಯೂ ಅವರಿಗಿಲ್ಲ.
ಪೇತ್ರನು ಯೇಸುವನ್ನು ದೂರದಿಂದ ಹಿಂಬಾಲಿಸಲು ಕಾರಣವೇನು? ತನ್ನ ಪ್ರೀತಿಯ ನಾಯಕನಿಗೆ ಏನಾಗುತ್ತಿದೆ ಎಂದು ಪೇತ್ರನು ನಿಜವಾಗಿಯೂ ಅರ್ಥಮಾಡಿಕೊಂಡಿರಲಿಲ್ಲ ಎಂದು ತೀರ್ಮಾನಿಸುವುದೇ ಹೆಚ್ಚು ಸುರಕ್ಷಿತವಾದ ವಾದವೆಂದು ಎಂದು ನಾನು ಭಾವಿಸುತ್ತೇನೆ. ಕರ್ತನು ಒಬ್ಬ ನಾಯಕನು ಎನ್ನುವುದಕ್ಕಿಂತ ಹೆಚ್ಚಾಗಿ - ಆತನು ರಕ್ಷಕನಾಗಿದ್ದನು.
ದೇವರು ಏನು ಮಾಡುತ್ತಿದ್ದಾನೆಂದು ಅರ್ಥಮಾಡಿಕೊಳ್ಳಲು ಕಷ್ಟವಾಗುವಾಗ, ಯೇಸುವಿನಿಂದ ದೂರದಲ್ಲಿ ಉಳಿದುಬಿಡುವುದು ಒಳ್ಳೆಯದು ಎನ್ನುವ ಪ್ರಲೋಭನೆಗಳು ಉಂಟಾಗುತ್ತದೆ. ಯೇಸು ಯಾರಾಗಿದ್ದಾನೆ ಎಂದು ಅರ್ಥವಾಗದಿದ್ದರೂ ಆತನೊಂದಿಗೆ ನಿಕಟವಾಗಿ ನಡೆಯುವುದೋ ಅಥವಾ ದೂರದಿಂದ ಆತನನ್ನು ಹಿಂಬಾಲಿಸುವುದೋ ಎಂಬುದು ನಮಗೇ ಬಿಟ್ಟದ್ದು. ಆದಾಗ್ಯೂ, ದೇವರವಾಕ್ಯವು ನಿರಂತರವಾಗಿ ದೇವರ ಸಾಮಿಪ್ಯದಲ್ಲಿರಬೇಕೆಂದು ಮತ್ತು ಆತನಿಂದ ಎಂದಿಗೂ ದೂರವಿರಬಾರದು ಎಂದು ಹೇಳುತ್ತದೆ . (ಯಾಕೋಬ 4:8)
ನೀವು ದೂರದಿಂದ ಯೇಸುವನ್ನು ಹಿಂಬಾಲಿಸುತ್ತಿದ್ದೀರಾ? ನೀವು ಆತನನ್ನು ನಂಬದಂತೆ ಈ ಅಂತರವನ್ನು ಅನುಮತಿಸಿದ್ದೀರಾ? ಈ ನಿಮ್ಮ ಅಂತರವು ಯೇಸುವಿಗಾಗಿ ಸಂಪೂರ್ಣವಾಗಿ ನೀವು ಜೀವಿಸಲಾಗದಂತೆ ಆತನನ್ನು ತ್ಯಜಿಸುವಂತೆ ಮಾಡಿಬಿಟ್ಟಿದೆಯಾ ? ಒಂದು ಶುಭ ಸುದ್ದಿ ಏನೆಂದರೆ, ಏನೇ ಆದರೂ ಯೇಸು ನಿಮ್ಮನ್ನು ಪ್ರೀತಿಸುವುದನ್ನು ಮಾತ್ರ ನಿಲ್ಲಿಸಿಲ್ಲ ಮತ್ತು ಆತನೊಂದಿಗೆ ನೀವು ಮತ್ತೆ ಅನ್ಯೋನ್ಯತೆಯನ್ನು ಪುನಃಸ್ಥಾಪಿಸಿ ಕೊಳ್ಳಬೇಕೆಂದು ಆತನು ಬಯಸುತ್ತಾನೆ. ಯೇಸು ಪೇತ್ರನನ್ನು ಪುನಃಸ್ಥಾಪಿಸಿದನು, ಮತ್ತು ಅದರ ನಂತರ, ಪೇತ್ರನು ಮತ್ತೆ ಎಂದಿಗೂ ಹಿಂತಿರುಗಿ ನೋಡಲಿಲ್ಲ. (ಯೋಹನ 21:15-19). ಯೇಸು ಪೇತ್ರನನ್ನು ಪುನಃಸ್ಥಾಪಿಸಿದಾಗ, "ನನ್ನನ್ನು ಹಿಂಬಾಲಿಸು" (ಯೋಹಾನ 21:19) ಎಂದು ಹೇಳಿದನು.
ಪ್ರಾರ್ಥನೆಗಳು
ಕರ್ತನಾದ ಯೇಸುವೇ, ನಾನು ಪ್ರತಿನಿತ್ಯವೂ ನಿನ್ನನ್ನು ನಿಕಟವಾಗಿ ಹಿಂಬಾಲಿಸುವಂತೆಯೂ, ಎಲ್ಲಾ ಸಂದರ್ಭಗಳಲ್ಲಿಯೂ ನಿನ್ನ ವಾಕ್ಯವನ್ನು ಕೈಗೊಳ್ಳುವಂತೆಯೂ ನಿನ್ನ ಪರಿಶುದ್ಧ ನಾಮದಲ್ಲಿ ನನಗೆ ಕೃಪೆಯನ್ನು ಅನುಗ್ರಹಿಸು. ಆಮೆನ್
Join our WhatsApp Channel
Most Read
● ದರ್ಶನ ಹಾಗೂ ಸಾಕಾರದ ನಡುವೆ...● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-1
● ಇಸ್ಕಾರಿಯೋತ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು- 3
● ದಿನ 29:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಪುರುಷರು ಏಕೆ ಪತನಗೊಳ್ಳುವರು -3
● ದಿನ 39 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಒಂದು ಗಂಟೆ ಹಾಗೂ ಒಂದು ದಾಳಿಂಬ ಹಣ್ಣು
ಅನಿಸಿಕೆಗಳು