ಅನುದಿನದ ಮನ್ನಾ
ಕರ್ತನ ಆಲೋಚನೆಯನ್ನು ಕೇಳಬೇಕಾದ ಅಗತ್ಯತೆ
Sunday, 10th of November 2024
2
1
115
Categories :
Counsel of the Lord
"ಆದರೆ ಗಿಬ್ಯೋನಿನ ನಿವಾಸಿಗಳು ಯೆಹೋಶುವನು ಯೆರಿಕೋವಿಗೂ ಆಯಿಗೂ ಮಾಡಿದ್ದನ್ನು ಕೇಳಿದಾಗ, ಒಂದು ಉಪಾಯವನ್ನು ಮಾಡಿದರು. ಅದೇನೆಂದರೆ, ಅವರು ರಾಯಭಾರಿಗಳ ಹಾಗೆ ತೋರಿಸುವಂತೆ ಹಳೆಯ ಗೋಣಿ ಚೀಲಗಳನ್ನೂ ತೇಪೆ ಹಾಕಿದ ಹಳೆಯದಾದ ದ್ರಾಕ್ಷಾರಸದ ಬುದ್ದಲಿಗಳನ್ನೂ ಕಟ್ಟಿಕೊಂಡು, ತಮ್ಮ ಕತ್ತೆಗಳ ಮೇಲೆ ಹಾಕಿಕೊಂಡು ಹೋದರು. ತೇಪೆ ಹಾಕಿದ ಹಳೆಯದಾದ ಕೆರಗಳನ್ನು ತಮ್ಮ ಕಾಲುಗಳಲ್ಲಿ ಮೆಟ್ಟಿಕೊಂಡು ಹಳೆಯ ಬಟ್ಟೆಗಳನ್ನು ತೊಟ್ಟುಕೊಂಡು, ಒಣಗಿ ಬೂಷ್ಟು ಹಿಡಿದ ರೊಟ್ಟಿಯನ್ನೂ ತೆಗೆದುಕೊಂಡರು. ಅನಂತರ ಅವರು ಗಿಲ್ಗಾಲಿನಲ್ಲಿ ಇರುವ ಪಾಳೆಯಕ್ಕೆ ಸೇರಿ ಯೆಹೋಶುವನ ಬಳಿಗೆ ಬಂದರು. ಅವರು ಅವನಿಗೂ ಇಸ್ರಾಯೇಲರಿಗೂ, “ನಾವು ದೂರದೇಶದಿಂದ ಬಂದೆವು. ಈಗ ನಮ್ಮ ಸಂಗಡ ಒಡಂಬಡಿಕೆ ಮಾಡಿಕೊಳ್ಳಿರಿ,” ಎಂದರು.(ಯೆಹೋಶುವ 9:3-6)
"ಆಗ ಇಸ್ರಾಯೇಲರು ಅವರ ಆಹಾರದಲ್ಲಿ ಸ್ವಲ್ಪ ತೆಗೆದುಕೊಂಡರು. ಆದರೆ ಅವರು ಯೆಹೋವ ದೇವರಿಂದ ಆಲೋಚನೆಯನ್ನು ಕೇಳಲಿಲ್ಲ. ಯೆಹೋಶುವನು ಅವರ ಸಂಗಡ ಸಮಾಧಾನದ ಒಡಂಬಡಿಕೆ ಮಾಡಿಕೊಂಡನು. ಅವರನ್ನು ಜೀವದಿಂದ ಉಳಿಸುವುದಕ್ಕೆ ಅವರ ಸಂಗಡ ಒಡಂಬಡಿಕೆ ಮಾಡಿದನು. ಇದಲ್ಲದೆ ಸಭೆಯ ಪ್ರಧಾನರು ಅವರಿಗೆ ಪ್ರಮಾಣ ಮಾಡಿದರು."(ಯೆಹೋಶುವ 9:14-15)
ನಿಮ್ಮ ಜೀವಿತದಲ್ಲಿ ಎಲ್ಲವೂ ಉತ್ತಮವಾಗಿ ನಡೆಯುತ್ತಿರುವಾಗ, ಅಂದರೆ ನೀವು ಬಹುಕಾಲದಿಂದ ಅಪೇಕ್ಷಿಸುತ್ತಿದ್ದ ಪ್ರಗತಿಯನ್ನು ನೀವು ಹೊಂದಿ ಕೊಂಡಾಗಲೇ ಅಂತಹ ಸಮಯದಲ್ಲಿಯೇ ಬಹಳ ಜಾಗರೂಕರಾಗಿರಬೇಕು ಏಕೆಂದರೆ ಒಬ್ಬ ವ್ಯಕ್ತಿಯು ತನ್ನ ಕಾವಲುಗಾರನನ್ನು ಕೆಳಗಿಳಿಸಿದಾಗ - ವೈಭವದಲ್ಲಿ ಮುಳುಗುತ್ತಾನೆ. ಆಗಲೇ ಶತ್ರುಗಳು ವಂಚನೆಯೊಂದಿಗೆ ಬರಲು ಪ್ರಯತ್ನಿಸುವಂತದ್ದು .
ಯೆರಿಕೊ ಮತ್ತು ಆಯಿ ಮೇಲೆ ಜಯಗಳಿಸಿದ ನಂತರ (ಯೆಹೋಶುವ 9:3) ಗಿಬಿಯೋನಿಗಳೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳುವ ಮೊದಲು ಯೆಹೋಶುವನು , ಕರ್ತನನ್ನು ಸಂಧಿಸಲಿಲ್ಲ (ಯೆಹೋಶುವ 9:14)ಇದರಿಂದ ಅವನು ವಂಚಿಸಲ್ಪಟ್ಟನು.
ಹೀಗೆ ಅವನು ವಂಚಿತನಾದದಕ್ಕೆ ಇರುವ ಮುಖ್ಯ ಕಾರಣಗಳನ್ನು ಗಮನಿಸಿ:
ಏಕೆಂದರೆ ಅವನು ಕರ್ತನ ಸಲಹೆಯನ್ನು ಕೇಳಲಿಲ್ಲ. ಅವನು ತನ್ನ ಬೌದ್ಧಿಕ ಮತ್ತು ತಾರ್ಕಿಕತೆಯ ಆಧಾರದ ಮೇಲೆ ನಿರ್ಧಾರವನ್ನು ತೆಗೆದುಕೊಂಡನು. ಅವನಿಗೆ ಅದು ಒಳ್ಳೆಯ ಯೋಚನೆಯೇ ಎಂದು ಅನಿಸಿತು, ಆದರೆ ಇದು ದೇವರ ಯೋಜನೆಯಾಗಿರಲಿಲ್ಲ.
ನಾವು ಕರ್ತನಿಂದ ಆಲೋಚನೆ ಕೇಳಲು ವಿಫಲವಾದ ಕಾರಣದಿಂದಲೇ ಅನೇಕ ಬಾರಿ ನಾವು ಗಿಬಿಯೋನ್ಯರೊಂದಿಗೆ ಸಿಕ್ಕಿಹಾಕಿಕೊಳ್ಳುತ್ತೇವೆ. ನಾವು ಮುಂದಾಗಿ ಹೋಗಿ, ನಮಗೆ ಸರಿ ಎಂದು ಭಾವಿಸಿದ್ದನ್ನು ಮಾಡಿದ್ದೇವೆ ನಂತರ ಎಲ್ಲವೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಇಂದು ನೀವು ಎದುರಿಸುತ್ತಿರುವ ಅನೇಕ ಹತಾಶೆಗಳು ಮತ್ತು ಹೃದಯ ಗಾಯಗಳಿಗೆ ಇದುವೇ ಮೂಲ ಕಾರಣವಾಗಿರುತ್ತದೆ.ಯಾಕೆಂದರೆ "ನೀವು ಕರ್ತನಿಂದ ಆಲೋಚನೆ ಕೇಳಲಿಲ್ಲ." ಆ ಮನೆಯನ್ನು, ಆ ಆಸ್ತಿಯನ್ನು ಖರೀದಿಸುವ ಮೊದಲು, ಪ್ರಾರ್ಥನೆಯಲ್ಲಿ ಕರ್ತನಿಗಾಗಿ ಕಾದುಕೊಂಡಿರಿ . ಅದರ ಕುರಿತು ಆತನ ಚಿತ್ತವೇನೆಂಬುದನ್ನು ತಿಳಿಯಿರಿ. ಆ ಪಾಲುದಾರಿಕೆ ಒಪ್ಪಂದಕ್ಕೋ, ಆ ವ್ಯಾಪಾರ ಒಪ್ಪಂದಕ್ಕೋ ಬರುವ ಮೊದಲು, ನಿಮ್ಮನ್ನು ನೀವು ಪ್ರಾರ್ಥನೆಯಲ್ಲಿ ತೊಡಗಿಸಿಕೊಳ್ಳಿ ಮತ್ತು ಆತನ ಆಲೋಚನೆಯನ್ನು ಪಡೆದು ಕೊಳ್ಳಿರಿ. ಆ ಮುದ್ದಾದ ವ್ಯಕ್ತಿಗೆ ಅಥವಾ ಆ ಸ್ವೀಟ್ ಪೈಗೆ "ಹೌದು" ಎಂದು ಹೇಳುವ ಮೊದಲು, ಕರ್ತನ ಸಲಹೆಯನ್ನು ಕೇಳಿರಿ . ಪ್ರಾರ್ಥನೆಯಲ್ಲಿ ಅದನ್ನು ಕರ್ತನ ಮುಂದಿಟ್ಟು ಆತನ ಸಲಹೆಯನ್ನು ಕೇಳಿ. ನಿಮ್ಮ ಚರ್ಚ್‌ನಲ್ಲಿ ಬೋಧಿಸಲು ಕೆಲವು ಸ್ಪೀಕರ್‌ಗಳನ್ನು ನೀವು ಆಹ್ವಾನಿಸುವ ಮೊದಲು, ನಿಮ್ಮ ಸೇವೆಯಲ್ಲಿ ಕರ್ತನ ಆಲೋಚನೆಯನ್ನು ಕೇಳಿ. ಇದು ನಿಮಗೆ ಒದಗುವ ಬಹಳಷ್ಟು ತೊಂದರೆಯಿಂದಲೂ ಮತ್ತು ನೋವಿನ್ನಿಂದಲೂ ನಿಮ್ಮನ್ನು ತಪ್ಪಿಸುತ್ತದೆ.
"ನೀವು ಕಾರ್ಯಗತಗೊಳ್ಳುವ ಮೊದಲು ಕೇಳಿಸಿಕೊಳ್ಳಲು ಕಲಿಯಿರಿ." ಎಂದು ಯಾರೋ ಒಬ್ಬರು ಹೇಳಿದ್ದಾರೆ. ನೀವು ಕೇಳುವಾಗ, ದೇವರು ನಿಮಗಾಗಿ ಕಾರ್ಯನಿರ್ವಹಿಸುತ್ತಾನೆ ಎಂದು ನೀವು ಭಾವಿಸಬಹುದು ಮತ್ತು ನಿರೀಕ್ಷಿಸಬಹುದು.
"ದ್ರೋಹಿಗಳಾದ ಮಕ್ಕಳಿಗೆ ಕಷ್ಟ!” ಎಂದು ಯೆಹೋವ ದೇವರು ಹೇಳುತ್ತಾರೆ. ಅವರು ಆಲೋಚನೆಯನ್ನು ಮಾಡುತ್ತಾರೆ ಆದರೆ ನನ್ನಿಂದಲ್ಲ. ನನ್ನ ಆತ್ಮ ಪ್ರೇರಿತರಾಗದೆ ಉಪಾಯಗಳನ್ನು ಮಾಡುತ್ತಾರೆ, ಪಾಪದ ಮೇಲೆ ಪಾಪವನ್ನು ಸೇರಿಸಿಕೊಂಡಿದ್ದಾರೆ. ಫರೋಹನಲ್ಲಿ ತಾವು ಬಲಗೊಳ್ಳುವ ಆಶ್ರಯವನ್ನು ಈಜಿಪ್ಟಿನ ನೆರಳಿನಲ್ಲಿ ಭರವಸವಿಡಬೇಕೆಂದು ನನ್ನ ಮಾತನ್ನು ಕೇಳದೆ, ಈಜಿಪ್ಟಿಗೆ ಪ್ರಯಾಣವಾಗಿ ಹೊರಟಿದ್ದಾರೆ."(ಯೆಶಾಯ 30:1-2)
ನಾವು ಕರ್ತನ ಸಲಹೆಯನ್ನು ಕೇಳಲು ವಿಫಲವಾದಾಗ, ನಾವು ಕರ್ತನ ವಿರುದ್ಧ ತಿರುಗಿ ಬೀಳುವವರಾಗುತ್ತೇವೆ ಎಂದು ಸತ್ಯವೇದ ಹೇಳುತ್ತದೆ. ನಾವು ಆತನ ಆತ್ಮದಿಂದ ನಡೆಸಲ್ಪಡದಂತಹ ಯೋಜನೆಗಳನ್ನು ಮಾಡಿದಾಗ, ನಾವು ಆತನ ಆತ್ಮನನ್ನು ದುಃಖಪಡಿಸುವವರಾಗುತ್ತೇವೆ.
ನಾವು ಮಾಡುವ ದೊಡ್ಡ ತಪ್ಪು ಎಂದರೆ ನಮಗೆ ಈ ಲೋಕದಲ್ಲಿ ಬದುಕಲು ನಮಗಿರುವ ಪಂಚೇಂದ್ರಿಯಗಳೇ ನಮಗೆ ಸಾಕು ಎಂದು ಭಾವಿಸುವಂತದ್ದು. ನಾವು ಕರ್ತನ ಸನ್ನಿಧಿಯಲ್ಲಿ ಕಾಯುವ ಮೂಲಕ ಆತನ ಸಲಹೆಯನ್ನು ಕೇಳುವುದನ್ನು ಕಲಿತರೆ ನಾವು ಎಷ್ಟು ಆಶೀರ್ವಾದಗಳನ್ನು ಹೊಂದಿಕೊಳ್ಳಬಹುದು ಎಂಬುದರ ಕುರಿತು ಸ್ವಲ್ಪಯೋಚಿಸಿ.
ನಾವು ಕರ್ತನ ಸಲಹೆಯನ್ನು ಕೇಳದ ಕಾರಣ ನಾವು ಎಷ್ಟು ಆಶೀರ್ವಾದಗಳನ್ನು ಕಳೆದುಕೊಂಡಿದ್ದೇವೆ ಎಂಬುದನ್ನೂ ಮತ್ತೊಮ್ಮೆ ಯೋಚಿಸಿ.
ಪ್ರಾರ್ಥನೆಗಳು
ಓ ಕರ್ತನೇ, ಯೇಸುಕ್ರಿಸ್ತನ ಹೆಸರಿನಲ್ಲಿ ಕೋಪ, ಕಹಿತನ ಮತ್ತು ಕ್ಷಮೆಯಿಲ್ಲದ ನನ್ನ ಹೃದಯವನ್ನು ಶುದ್ಧೀಕರಿಸು. ಪವಿತ್ರಾತ್ಮನೇ, ಯೇಸುವಿನ ಹೆಸರಿನಲ್ಲಿ ಪ್ರತಿದಿನ ಕ್ರಿಸ್ತನ ಆಲೋಚನೆಗಳನ್ನು ಕೇಳಿ ಅದರಂತೆ ನಡೆಯಲು ನನಗೆ ಸಹಾಯ ಮಾಡಿ.
Join our WhatsApp Channel
Most Read
● ದಿನ 25:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ● ಭಕ್ತಿವೃದ್ಧಿಮಾಡುವ ಅಭ್ಯಾಸಗಳು.
● ದೇವದೂತರ ಸಹಾಯವನ್ನು ಸಕ್ರಿಯಗೊಳಿಸುವುದು ಹೇಗೆ
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 33:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಕರ್ತನೇ ನನ್ನ ದೀಪವನ್ನು ಬೆಳಗಿಸು.
● ದೇವರ ಪರಿಪೂರ್ಣ ಚಿತ್ತಕ್ಕಾಗಿ ಪ್ರಾರ್ಥಿಸಿರಿ
ಅನಿಸಿಕೆಗಳು