ಅನುದಿನದ ಮನ್ನಾ
ಬಲವಾದ ಮೂರುಹುರಿಯ ಹಗ್ಗ
Thursday, 21st of November 2024
5
2
133
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
"...ಆದರೆ ಮೂರು ಹುರಿಯ ಹಗ್ಗವು ಬೇಗನೆ ಕಿತ್ತು ಹೋಗುವುದಿಲ್ಲ." (ಪ್ರಸಂಗಿ 4:12). ಈ ವಾಕ್ಯವನ್ನು ಸಾಮಾನ್ಯವಾಗಿ ವಿವಾಹ ಸಮಾರಂಭಗಳಲ್ಲಿ ಉಲ್ಲೇಖಿಸಲಾಗುತ್ತದೆ, ಇದು ವಧು, ವರ ಮತ್ತು ದೇವರ ನಡುವಿನ ಐಕ್ಯತೆಯ ಶಕ್ತಿಯನ್ನು ಸಂಕೇತಿಸುತ್ತದೆ. ಆದಾಗ್ಯೂ, ಮೂರು ಹುರಿಯ ಹಗ್ಗದ ಮಹತ್ವವು ವೈವಾಹಿಕ ಸಂಬಂಧಗಳನ್ನು ಮೀರಿದ ವಿವರಣೆಯನ್ನು ಹೊಂದಿದೆ.ಇದು ಇನ್ನೂ ಹೆಚ್ಚು ಆಳವಾದ ಅರ್ಥವನ್ನು ಹೊಂದಿದೆ. ಅದನ್ನು ಸತ್ಯವೇದದ್ಯಾಂತ ನಾವು ಕಂಡುಕೊಳ್ಳಬಹುದು.
ವಿಶ್ವಾಸಿಗಳ ಜೀವನದಲ್ಲಿ ಹೇಳುವುದಾದರೆ , 1 ಕೊರಿಂಥ 13:13 ರಲ್ಲಿ ವಿವರಿಸಿದಂತೆ ಮೂರು ಹುರಿಯ ಹಗ್ಗವು ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿಯ ಮೂಲಕ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತದೆ. ಈ ಸದ್ಗುಣಗಳು ಆತ್ಮಿಕ ಬೆಳವಣಿಗೆ ಮತ್ತು ಪುನಃಶ್ಚೇತನಶಕ್ತಿಗೆ ಅತ್ಯಗತ್ಯವಾಗಿದ್ದು ಅವು ಒಟ್ಟಾರೆಯಾಗಿ ದೇವರೊಂದಿಗೆ ಮತ್ತು ಇತರರೊಂದಿಗೆ ಕ್ರೈಸ್ತರು ಬೆಸೆದುಕೊಳ್ಳಬಹುದಾದ ಸಂಬಂಧದ ತಿರುಳನ್ನು ನಿರೂಪಿಸುತ್ತವೆ. ಈ ಮೂರು ಹುರಿಯ ಹಗ್ಗದ ಪ್ರತಿಯೊಂದು ಅಂಶವು ಪರಸ್ಪರ ಸಂಬಂಧ ಹೊಂದಿದ್ದು ಮತ್ತೊಂದರ ಮೇಲೆ ಅವಲಂಬಿತವಾಗಿದೆ, ಮತ್ತದು ಬಲವಾದಂತ ಮತ್ತು ಬಾಳಿಕೆ ಬರುವಂತ ಸಂಬಂಧವನ್ನು ಉಂಟು ಮಾಡುತ್ತದೆ.
ಒಬ್ಬ ವಿಶ್ವಾಸಿಯ ಆಚರಣೆಗಳು
ಮತ್ತಾಯ 6 ರಲ್ಲಿ, ಯೇಸು ತನ್ನ ಶಿಷ್ಯರುಗಳಿಗೆ ದೇವರ ಮಗುವಾಗಿ ಜೀವಿಸುವ ಅಗತ್ಯ ಅಂಶಗಳನ್ನು ಕಲಿಸುತ್ತಾನೆ. ಅವುಗಳಲ್ಲಿ ಕೊಡುವಿಕೆ, ಪ್ರಾರ್ಥನೆ ಮಾಡುವುದು ಮತ್ತು ಉಪವಾಸ ಮಾಡುವ ಮಹತ್ವವನ್ನು ಒತ್ತಿಹೇಳುತ್ತಾನೆ.
- ನೀವು ಕಾಣಿಕೆ ಕೊಡುವಾಗ .. (ಮತ್ತಾಯ 6:2)
- ನೀವು ಪ್ರಾರ್ಥಿಸುವಾಗ ... (ಮತ್ತಾಯ 6:5)
- ನೀವು ಉಪವಾಸ ಮಾಡುವಾಗ ... (ಮತ್ತಾಯ 6:16)
ಈ ವಾಕ್ಯಗಳು ‘ಮಾಡುವುದಾದರೆ ’ ಎಂದು ಹೇಳುವುದಿಲ್ಲ ಆದರೆ 'ಮಾಡುವಾಗ' ಎಂದು ಇಲ್ಲಿ ಹೇಳಿರುವುದನ್ನು ಗಮನಿಸಿ. ಕರ್ತನಾದ ಯೇಸು ಈ ಆಚರಣೆಗಳನ್ನು ಐಚ್ಛಿಕವಾಗಿ ಅಂದರೆ ನಿಮಗಿಷ್ಟವಿದ್ದರೆ ಮಾಡುವಂತದ್ದು ಎಂದು ಹೇಳದೇ ಇವು ವಿಶ್ವಾಸಿಗಳ ಜೀವನದ ಅವಿಭಾಜ್ಯ ಅಂಶಗಳಾಗಿವೆ ಎಂಬುದನ್ನು ಪ್ರಸ್ತುತಪಡಿಸುತ್ತಾನೆ. ಕ್ರೈಸ್ತರು ಶುದ್ಧ ಹೃದಯದಿಂದ ನೀಡಿದಾಗ, ಅವರು ದೇವರ ಪ್ರೀತಿ ಮತ್ತು ಔದಾರ್ಯವನ್ನು ಪ್ರತಿಬಿಂಬಿಸುತ್ತಾರೆ. "ದೇವರು ಮನುಕುಲವನ್ನು ಉಳಿಸಲು ತನಗಿದ್ದ ಏಕೈಕ ಪುತ್ರನನ್ನೇ ನೀಡಿದನು (ಯೋಹಾನ 3:16). ಕರ್ತನಾದ ಯೇಸು ನಮಗೆ ಪ್ರಾರ್ಥನೆಯನ್ನು ಇತರರನ್ನು ಮೆಚ್ಚಿಸಲೆಂದೋ ಅಥವಾ ಕೇವಲ ಹೇಳಿದ್ದನ್ನೇ ಉದ್ದುದ್ದವಾಗಿ ಹೇಳುವ ಮೂಲಕ ಪ್ರಾರ್ಥನೆ ಮಾಡದೆ ಪ್ರಾಮಾಣಿಕತೆಯಿಂದಲೂ ಮತ್ತು ನಮ್ರತೆಯಿಂದಲೂ ಪ್ರಾರ್ಥಿಸಬೇಕೆಂದು ಕಲಿಸಿಕೊಟ್ಟನು . ಪ್ರಾರ್ಥನೆಯ ಮೂಲಕ, ನಾವು ದೇವರೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಳ್ಳುತ್ತೇವೆ ಮತ್ತು ನಮ್ಮ ಎಲ್ಲಾ ಅಗತ್ಯಗಳಿಗಾಗಿ ಆತನನ್ನು ಅವಲಂಬಿಸುವುದನ್ನು ಕಲಿಯುತ್ತೇವೆ. ಉಪವಾಸವು ಲೌಕಿಕ ಗೊಂದಲಗಳಿಂದ ಮುಕ್ತಿ ಹೊಂದಿ,ಆತನ ಚಿತ್ತದ ಆಳವಾದ ತಿಳುವಳಿಕೆಯನ್ನು ಪಡೆದುಕೊಂಡು, ನಮ್ಮ ಆತ್ಮಿಕ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವಂತೆ ಸಹಾಯ ಮಾಡುತ್ತದೆ.
ಮೂರು ಹುರಿಯ ಹಗ್ಗದ ಸಾಮರ್ಥ್ಯ
ನಾವು ಕೊಡುವುದು, ಪ್ರಾರ್ಥಿಸುವುದು ಮತ್ತು ಉಪವಾಸ ಮಾಡುವುದು ಇವುಗಳನ್ನು ಒಟ್ಟಿಗೆ ಅಭ್ಯಾಸ ಮಾಡುವಾಗ ಅದು ನಮ್ಮಲ್ಲಿ ಪ್ರಬಲವಾದ ಮೂರು ಹುರಿಯ ಹಗ್ಗವನ್ನು ಉಂಟುಮಾಡುತ್ತದೆ. ಅದು ಕ್ರೈಸ್ತರ ನಂಬಿಕೆ ಮತ್ತು ದೇವರೊಂದಿಗಿನ ಸಂಬಂಧವನ್ನು ಬಲಪಡಿಸುತ್ತದೆ (ಪ್ರಸಂಗಿ 4:12). ಮಾರ್ಕ್ 4: 8, 20 ರಲ್ಲಿ, ಕರ್ತನಾದ ಯೇಸು ಮೂವತ್ತು ಪಟ್ಟು, ಅರವತ್ತು ಪಟ್ಟು ಮತ್ತು ನೂರರಷ್ಟು ಆದಾಯವನ್ನು ಕುರಿತು ಚರ್ಚಿಸುತ್ತಾನೆ. ನಂಬಿಕೆಯು ಪ್ರಾರ್ಥನೆ, ನೀಡುವಿಕೆ ಮತ್ತು ಉಪವಾಸದಲ್ಲಿ ತೊಡಗಿರುವಾಗ ಆತ್ಮಿಕ ಆಶೀರ್ವಾದಗಳ ಘಾತೀಯವಾಗಿ ಹೆಚ್ಚಳವಾಗುವುದನ್ನು ಅದು ವಿವರಿಸುತ್ತದೆ.
ನೂರು ಪಟ್ಟು ಹಿಂಪಡೆಯುವುದು
ಒಬ್ಬ ವಿಶ್ವಾಸಿಯು ಪ್ರಾರ್ಥನೆ ಮಾಡುವಾಗ , ಅವನು ತನ್ನ ಹೃದಯವನ್ನು ದೇವರ ಮಾರ್ಗದರ್ಶನ ಮತ್ತು ಆಶೀರ್ವಾದಗಳಿಗೆ ತೆರೆದುಕೊಳ್ಳುತ್ತಾನೆ ಮತ್ತು ಅವನು ಮೂವತ್ತು ಪಟ್ಟು ಆಶೀರ್ವಾದಗಳನ್ನು ಸಮರ್ಥವಾಗಿ ಹಿಂಪಡೆದುಕೊಳ್ಳುತ್ತಾನೆ ಎಂದು ನಾನು ನಂಬುತ್ತೇನೆ.
ಯಾವ ವಿಶ್ವಾಸಿಯು ಕೊಡುವುದರೊಂದಿಗೆ ತನ್ನ ಪ್ರಾರ್ಥನೆಯನ್ನು ಸಂಯೋಜಿಸುತ್ತಾನೋ ಅವನು ದೇವರ ನಿಬಂಧನೆಯಲ್ಲಿ ತನ್ನ ನಂಬಿಕೆಯನ್ನು ಪ್ರದರ್ಶಿಸುತ್ತಾನೆ ಮತ್ತು ಅವನು ಅರವತ್ತು ಪಟ್ಟು ಆಶೀರ್ವಾದವನ್ನು ಹಿಂಪಡೆದುಕೊಳ್ಳುತ್ತಾನೆ . ಆದಾಗ್ಯೂ, ಕ್ರೈಸ್ತನಾದವನು ಪ್ರಾರ್ಥನೆ ಮತ್ತು ದಾನದ ಜೊತೆಗೆ ಉಪವಾಸವನ್ನು ಸಂಯೋಜಿಸಿದಾಗ, ಅವನು ನೂರು ಪಟ್ಟು ಆಶೀರ್ವಾದದ ಹಿಂಪಡೆಯುವಿಕೆಯನ್ನು ಆಹ್ವಾನಿಸುವ ವಾತಾವರಣವನ್ನು ಸೃಷ್ಟಿಸುತ್ತಾನೆ ಮತ್ತು ಸರಿಸಾಟಿಯಿಲ್ಲದ ಆತ್ಮಿಕ ಸಮೃದ್ಧಿ ಮತ್ತು ಬೆಳವಣಿಗೆಯನ್ನು ಬಿಡುಗಡೆ ಮಾಡಿಕೊಳ್ಳುತ್ತಾನೆ. "100 ಪಟ್ಟು ಹಿಂಪಡೆಯುವಿಕೆಯನ್ನು ಹೊಂದಿಕೊಳ್ಳಲು ಸಿದ್ಧರಾಗಿರಿ" ಎಂದು ಆತ್ಮನು ಹೇಳುವುದನ್ನು ನಾನು ಈಗ ಕೇಳಿಸಿಕೊಳ್ಳುತ್ತಿದ್ದೇನೆ.
ಕೊರ್ನೆಲ್ಯನ ಚರಿತ್ರೆ
ಅ. ಕೃ 10: 30-31 ರಲ್ಲಿ ಕೊರ್ನೆಲಿಯನ ಕಥೆಯು ಪ್ರಾರ್ಥನೆ, ನೀಡುವಿಕೆ ಮತ್ತು ಉಪವಾಸ ಇವುಗಳನ್ನು ಏಕಕಾಲದಲ್ಲಿ ಅಭ್ಯಾಸ ಮಾಡುವಾಗ ಉಂಟಾಗುವ ಶಕ್ತಿಯನ್ನು ಉದಾಹರಿಸುತ್ತದೆ. ಒಬ್ಬ ಧರ್ಮನಿಷ್ಠ ವ್ಯಕ್ತಿಯಾಗಿ, ಕೊರ್ನೆಲಿಯನು ಉಪವಾಸ, ಪ್ರಾರ್ಥನೆ ಮತ್ತು ಅಗತ್ಯವಿರುವವರಿಗೆ ಉದಾರವಾಗಿ ಕೊಡುತ್ತಿದ್ದನು . ಈ ಆತ್ಮೀಕ ಶಿಸ್ತುಗಳಿಂದ ಕೂಡಿದ ಅವನ ಸಮರ್ಪಣೆಯು ದೇವರ ಗಮನವನ್ನು ಸೆಳೆಯಿತು. ಮತ್ತದು ದೇವದೂತರ ದರ್ಶನಕ್ಕೂ ಮತ್ತು ಅಪೋಸ್ತಲನಾದ ಪೇತ್ರನನ್ನು ಹುಡುಕಲು ಬೇಕಾದ ದೈವಿಕ ಸೂಚನೆಗಳಿಗೂ ಅವನನ್ನು ನಡೆಸಿತು.
ಕೊರ್ನೆಲ್ಯಾನ ನಿಷ್ಠೆಯ ಪರಿಣಾಮವಾಗಿ, ಪೇತ್ರನು ಕೊರ್ನೆಲ್ಯನ ಮನೆಗೆ ನಡೆಸಲ್ಪಟ್ಟು ಇಡೀ ಕೊರ್ನೆಲ್ಯನ ಕುಟುಂಬಕ್ಕೂ ಮತ್ತು ಅವನ ಬಂದು ಮಿತ್ರರಿಗೂ ಸುವಾರ್ತೆಯನ್ನು ಸಾರುವಂತಾಯಿತು. ಈ ಒಂದು ಸಂಧಿಸುವಿಕೆಯು ಕೊರ್ನೆಲ್ಯನ ಸಂಪೂರ್ಣ ಮನೆಯು ರಕ್ಷಣೆ ಮತ್ತು ದೀಕ್ಷಾಸ್ನಾನ ಹೊಂದುವುದಕ್ಕೂ ನಾಂದಿ ಹಾಡಿತು. ಇದು ಪ್ರಾರ್ಥನೆ, ನೀಡುವಿಕೆ ಮತ್ತು ಉಪವಾಸವನ್ನು ಅಳವಡಿಸಿಕೊಳ್ಳುವ ಜೀವನಶೈಲಿಯಿಂದ ಉಂಟಾಗುತ್ತದೆ ಮತ್ತು ನಂಬಲಾಗದ ಆಶೀರ್ವಾದಗಳು ಮತ್ತು ಆತ್ಮಿಕ ಮಹಿಮೆಯನ್ನು ಪ್ರಕಟಿಸುತ್ತದೆ. ದೇವರು ಪಕ್ಷಪಾತಿಯಲ್ಲ. ನೀವೂ ಈ ತತ್ವವನ್ನು ಅಳವಡಿಸಿಕೊಂಡರೆ, ನೀವು ಸಹ ಅದೇ ರೀತಿಯ ಅದ್ಭುತ ಫಲಿತಾಂಶಗಳನ್ನು ನೋಡುತ್ತೀರಿ.
ಪರಿಣಾಮಕಾರಿಯಾದ 40 ದಿನಗಳ ಉಪವಾಸ ಮತ್ತು ಪ್ರಾರ್ಥನೆಗೆ ಮಾರ್ಗಸೂಚಿಗಳು
ಉಪವಾಸದ ಕಾಲಾವಧಿ
ಪ್ರತಿದಿನ ಉಪವಾಸವು ಮಧ್ಯರಾತ್ರಿ.00.00 ಗಂಟೆಗೆ ಆರಂಭಿಸಿ 14.00 ಗಂಟೆಗೆ ಮುಗಿಯುತ್ತದೆ (ಮಧ್ಯಾಹ್ನ 2.00 ಗಂಟೆಗೆ)
ಆತ್ಮೀಕವಾಗಿ ಇನ್ನೂ ಮುಂದೆ ಹೋದವರು ಇನ್ನೂ ಹೆಚ್ಚು ಸಮಯ ಉಪವಾಸವಿರಲು ಸಾಧ್ಯವಿರುವವರು ಇನ್ನೂ ಒಂದು ಗಂಟೆಯ ಕಾಲ ಹೆಚ್ಚು ಉಪವಾಸವಿದ್ದು 15.00 ಗಂಟೆಗೆ ಮುಗಿಸಬಹುದು. (ಮಧ್ಯಾಹ್ನ 3.00 ಗಂಟೆಗೆ)
ಆಹಾರಕ್ರಮದ ನಿಬಂಧನೆಗಳು.
ಉಪವಾಸ ಕಾಲದಲ್ಲಿ(00.00-14.00ವರೆಗೂ) ನೀರನ್ನು ಹೊರತಾಗಿ ಕಾಫೀ, ಟೀ,ಹಾಲು ಮುಂತಾದ ಪಾನೀಯಗಳಿಂದ ದೂರವಿರಿ.ನಿರ್ಜಲೀಕರಣದಿಂದ ಮುಕ್ತವಾಗಿರಲು ಉಪವಾಸದ ಸಮಯದಲ್ಲಿ ಸಾಧ್ಯವಾದಷ್ಟು ನೀರನ್ನು ಯಥೇಚ್ಚವಾಗಿ ಕುಡಿಯಿರಿ.
ಉಪವಾಸ ನಂತರದ ಪೋಷಣೆ
ಉಪವಾಸದ ಅವಧಿ ಮುಗಿದ ನಂತರ (14.00 ಅಥವಾ 15.00 ಗಂಟೆಗಳಾದ ಮೇಲೆ) ನೀವು ನಿಮ್ಮ ಸಹಜ ಆಹಾರ ಪದ್ಧತಿಗೆ ತಿರುಗಬಹುದು.
ಆತ್ಮೀಕತೆ ಮೇಲೆ ಗಮನ ಕೇಂದ್ರೀಕರಿಸುವಿಕೆ.
ಈ ಉಪವಾಸದ ಸಂಪೂರ್ಣ ಪ್ರಯೋಜನ ಪಡೆಯಲು ಆದಷ್ಟು ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಾಡಿಸುವುದರಿಂದ ದೂರವಿರಲು ಪ್ರಯತ್ನಿಸಿರಿ. ಈ ಸಮಯವು ನೀವು ನಿಮ್ಮನ್ನು ಪರಿಶೋಧಿಸಿ ಕೊಳ್ಳಲು, ಪ್ರಾರ್ಥನೆಯಲ್ಲಿ ನಿರತರಾಗಲು ಅಥವಾ ಇನ್ನಾವುದೇ ರೀತಿಯಲ್ಲಿ ಆತ್ಮೀಕವಾದ ಅಭ್ಯಾಸಗಳನ್ನು ಮಾಡಲು ಉಪಯೋಗಿಸಿಕೊಳ್ಳಿ.
ಭೌತಿಕ ದೇಹವನ್ನು ಹೇಗೆ ಶಿಸ್ತಿನಿಂದ ಪೋಷಿಸುತ್ತೀರೋ ಹಾಗೆಯೇ ಉಪವಾಸವು ನಿಮ್ಮ ಆತ್ಮಿಕ ಪೋಷಣೆಯನ್ನು ಮಾಡುವಂತದ್ದಾಗಿದೆ ಎಂದು ನೆನಪಿಡಿ. ನಿಮ್ಮ ದೇಹದ ಕರೆಯನ್ನು ಕೇಳಿ ಅದಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುವುದು ಸಹ ಮುಖ್ಯವಾಗಿದೆ.
ಈ ಒಂದು 21 ದಿನದ ಪ್ರಾರ್ಥನಾ ಕಾರ್ಯಕ್ರಮದ ಸಮಯದಲ್ಲಿ ನಾವು ಪ್ರಾರ್ಥಿಸುತ್ತಿರುವುದು ಮನುಷ್ಯರನ್ನು ಗುರಿ ಮಾಡಿಕೊಂಡು ಅಲ್ಲ, ಆದರೆ ಬದಲಾಗಿ ಎಫೆಸ 6 :12ರಲ್ಲಿ ಹೇಳಿರುವಂತೆ
ಅದು ಆತ್ಮಿಕವಾದಂತಹ ಬಲಗಳ ಮೇಲೆ ಎಂಬುದನ್ನು ಚೆನ್ನಾಗಿ ಅರಿತುಕೊಳ್ಳಬೇಕು.
"ನಾವು ಹೋರಾಡುವದು ಮನುಷ್ಯ ಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ."
(ಎಫಸೆ 6:12)
ಪ್ರಾರ್ಥನೆ ಮಾಡಲು ಅತ್ಯಂತ ಪರಿಣಾಮಕಾರಿಯಾದ ಸಮಯ.
ಮತ್ತಾಯ 24:43 ರ ಬೋಧನಾ ಭಾಗದಲ್ಲಿ ಮುಖ್ಯವಾದ ಒಂದು ರೂಪಕ ಹೇಳಲ್ಪಟ್ಟಿದೆ.
"ಕಳ್ಳನು ಬರುವ ಜಾವ ಮನೆಯ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಾಹಾಕಗೊಡಿಸುತ್ತಿರಲಿಲ್ಲವೆಂದು ತಿಳುಕೊಳ್ಳಿರಿ." ಎಂದು
ಈ ಒಂದು ವಾಕ್ಯಭಾಗವು ಜಾಗರೂಕರಾಗಿದ್ದು ಸದಾ ಸಿದ್ದವಾಗಿರುವುದರ ಮಹತ್ವವನ್ನು ಎತ್ತಿ ತೋರಿಸುವ ಆತ್ಮೀಕ ಸಾದೃಶ್ಯವಾಗಿ ಕಾರ್ಯ ಮಾಡುತ್ತದೆ.
ಮಧ್ಯಾರಾತ್ರಿಯೇ ಏಕೆ?
ಹೇಗೆ ಕಳ್ಳನು ಯಾರಿಗೂ ಕಾಣಿಸದಂತೆ ಅನಿರೀಕ್ಷಿತವಾಗಿ ಮಧ್ಯಾರಾತ್ರಿಯಲ್ಲಿ ಬರುತ್ತಾನೋ ಹಾಗೆಯೇ ನಮ್ಮ ಮೇಲೆ ಎರಗುವ ಸವಾಲುಗಳು ಸಹ.(2ಪೇತ್ರ 3:10). ಈ ಸವಾಲುಗಳನ್ನು ಪ್ರತ್ರಿರೋಧಿಸಲು ಮಧ್ಯಾರಾತ್ರಿಯ ಸಮಯ ಆತ್ಮೀಕ ವಾಗಿ ಬಹಳ ಮಹತ್ವ ವುಳ್ಳದ್ದು.
00.00 ಯಿಂದ 01:30 ವರೆಗೂ ಪ್ರಾರ್ಥನೆಗೆ ಬಹಳ ಸೂಕ್ತವಾದ ವಾತಾವರಣವನ್ನು ಒದಗಿಸಿಕೊಡುತ್ತದೆ ಎಂದು ಪರಿಗಣಿಸಿಲಾಗಿದೆ. ಅದಲ್ಲದೆ ಈ ಸಮಯದಲ್ಲಿಯೇ ಅಂಧಕಾರದ ಶಕ್ತಿಗಳು ಬಹಳ ಚಟುವಟಿಕೆಯಿಂದ ಕೂಡಿದ್ದು ಆತ್ಮೀಕ ಮಧ್ಯಸ್ಥಿಕೆ ಪ್ರಾರ್ಥನೆಗೆ ಪ್ರಶಸ್ತವಾಗಿದೆ.
ಇದಕ್ಕೆ ತದ್ವಿರುದ್ಧವಾಗಿ ಬೆಳಗಿನ ಸಮಯವು ಆ ದಿನದ ದಿನಚರಿಗಾಗಿ ಮಾಡಿಕೊಳ್ಳಬೇಕಾದ ಸಿದ್ಧತೆಗಳು ಮತ್ತು ಪ್ರಾಪಂಚಿಕವಾದ ಗಡಿಬಿಡಿಗಳಲ್ಲಿ ತುಂಬಿಹೋಗಿದ್ದು, ಆತ್ಮೀಕವಾಗಿ ಆಳವಾದ ಸಂಪರ್ಕ ಸಾಧಿಸದಂತೆ ನಮ್ಮ ಆಲೋಚನೆಗಳ ಮೇಲೆ ಆಳ್ವಿಕೆ ನಡೆಸಬಹುದು.
ಆರೋಗ್ಯ ಮತ್ತು ಸುರಕ್ಷಾ ಮುನ್ನೆಚ್ಚರಿಕೆಗಳು.
ನೀವು ಈ ಉಪವಾಸ ಪ್ರಾರ್ಥನೆಯ ಕಾರ್ಯಕ್ರಮಕ್ಕೆ ಜೊತೆಯಾಗಲು ಅದಕ್ಕೆ ಮುಂಚಿತವಾಗಿ ನೀವು ಯಾವುದಾದರೂ ದೀರ್ಘಕಾಲಿಕ ಖಾಯಿಲೆಯಿಂದ ಬಳಲುತ್ತಿದ್ದರೆ, ನೀವು ಗರ್ಭಿಣಿಯಾಗಿದ್ದರೆ ಅಥವಾ ಮೊಲೆಯುಣಿಸುವ ತಾಯಂದರಾಗಿದ್ದಾರೆ ನೀವು ನಿಮ್ಮ ವೈದ್ಯರ ಸಲಹೆಯನ್ನು ಪಡೆಯುವುದು ನಿರ್ಣಾಯಕ.
ಅಗತ್ಯವಿದ್ದಂತೆ ನಿಮ್ಮ ದೇಹದ ಅವಶ್ಯಕತೆಯನ್ನು ಆಲಿಸಿ ಅದಕ್ಕೆ ತಕ್ಕಂತೆ ಹೊಂದಿಸಿಕೊಳ್ಳಿ. ನಿಮ್ಮ ಆತ್ಮೀಕ ಅಭ್ಯಾಸಕ್ಕಾಗಿ ನಿಮ್ಮ ದೇಹವು ಸ್ಪಂಧಿಸುವುದು ಮುಖ್ಯವಾಗಿದೆ ಎಂಬುದನ್ನು ಪರಿಗಣಿಸಿ.
ಪ್ರಾರ್ಥನೆಗಳು
ಪ್ರತಿಯೊಂದು ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದಾಳದಿಂದ ಬರುವ ವರೆಗೂ ಪುನರಾವರ್ತಿಸಿ. ಆನಂತರವೇ ಮುಂದಿನದಕ್ಕೆ ತೆರಳಿ. ಗಡಿಬಿಡಿ ಬೇಡ.
1.ಈ 40 ದಿನಗಳ ಉಪವಾಸ ಪ್ರಾರ್ಥನೆಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಲು ವಿರೋದಿಸುವ ಎಲ್ಲಾ ಶಕ್ತಿಗಳು ಯೇಸುನಾಮದಲ್ಲಿ ಯೇಸುವಿನ ರಕ್ತದ ಮೂಲಕ ನಿರ್ನಾಮವಾಗಿ ಹೋಗಲಿ.
2. ತಂದೆಯೇ ಈ 40 ದಿನಗಳ ಉಪವಾಸ ಪ್ರಾರ್ಥನೆಯು ನಿನಗೆ ನಾನು ಇನ್ನಷ್ಟು ಸಮೀಪ ವಾಗಲೂ ನಾನು ಇನ್ನಷ್ಟು ನಂಬಿಕೆಯಲ್ಲಿ ಆಳವಾಗಿ ಬೇರೂರಲು ಯೇಸುನಾಮದಲ್ಲಿ ಉಪಯೋಗಿಸು.ಈ ಉಪವಾಸದಿನಗಳ ಪ್ರತಿಯೊಂದು ದಿನವೂ ನಾನು ನಿನ್ನೊಂದಿಗೆ ಇನ್ನಷ್ಟು ಗಾಡವಾದ ಸಂಬಂಧವನ್ನು ಹೊಂದುವಂತೆಯೂ ತಿಳುವಳಿಕೆ ಭಕ್ತಿಯಲ್ಲಿ ಬೆಳೆಯುವಂತೆಯೂ ಆಗಲಿ.
3. ತಂದೆಯೇ, ಈ ಒಂದು ಉಪವಾಸ ಪ್ರಾರ್ಥನಾ ಅವಧಿಯಲ್ಲಿ ನನಗೆ ವಿರುದ್ಧವಾಗಿ ಏಳಬಹುದಾದ ಎಲ್ಲಾ ಆತ್ಮೀಕ ದಾಳಿಗೆ ವಿರುದ್ದವಾಗಿ ನಿನ್ನ ಸುರಕ್ಷೆ ಉಂಟಾಗಲೆಂ ದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ನಿನ್ನ ದೂತರನ್ನು ನನ್ನ ಸುತ್ತಲೂ ದಂಡಿಳಿಸು. ನಿನ್ನ ಪ್ರಸನ್ನತೆಯು ನನ್ನ ಸುತ್ತಲೂ ರಕ್ಷಾ ಕವಚವಾಗಿದ್ದು ನನ್ನ ಪ್ರಾಣಾತ್ಮ ಶರೀರಗಳನ್ನು ಯೇಸುನಾಮದಲ್ಲಿ ಕಾಯಲಿ.
Join our WhatsApp Channel
Most Read
● ಪ್ರವಾದನಾ ಪೂರಕ ಮಧ್ಯಸ್ಥಿಕೆ ಪ್ರಾರ್ಥನೆ ಎಂದರೇನು?● ನೀವು ದೇವರನ್ನು ಎದುರಿಸುತ್ತಿದ್ದೀರಾ?
● ನೀವು ಯೇಸುವನ್ನು ಹೇಗೆ ದೃಷ್ಟಿಸುವಿರಿ?
● ಕಳೆದು ಹೋದ ರಹಸ್ಯ
● ಅಂತ್ಯಕಾಲದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು : #1
● ಪ್ರತಿಫಲಿಸಲು ಸಮಯ ತೆಗೆದುಕೊಳ್ಳುವುದು.
● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ.
ಅನಿಸಿಕೆಗಳು