ಅನುದಿನದ ಮನ್ನಾ
ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Wednesday, 11th of December 2024
2
1
89
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಜೀವನಮಟ್ಟದ ಬದಲಾವಣೆ
"ಯೆಹೋವನು ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಅಭಿವೃದ್ಧಿಪಡಿಸಲಿ"(ಕೀರ್ತನೆಗಳು 115:14).
ಇಂದು ಅನೇಕರು ಜೀವನದಲ್ಲಿ ಮುಂದೆ ಬರಬೇಕು ಎಂದು ಆಶಿಸುತ್ತಾರೆ ಆದರೆ ಯಾವುದು ಅವರನ್ನು ಹಿಂದೆಳೆದು ನಿಲ್ಲಿಸುತ್ತಿದೆಯೋ ಅದನ್ನು ಕಂಡು ಹಿಡಿಯಲಾಗದೆ ಒದ್ದಾಡುತ್ತಿದ್ದಾರೆ.ಇಂದು ಆ ಅದೃಶ್ಯವಾದ ಅಡೆತಡೆಗಳು ಯೇಸುನಾಮದಲ್ಲಿ ನಾಶವಾಗಿ ಹೋಗಲಿ.
ದೇವರು ನಮ್ಮನ್ನು ಜೀವನದಲ್ಲಿ ಮುಂದುವರೆಯಬೇಕು ಎಂದು ಸೃಷ್ಟಿಸಿದ್ದಾನೆ:ನಾವು ನಿಂತನೀರಾಗಿ ಒಂದೇ ಕಡೇ ಶಾತ್ವತವಾಗಿ ನಿಲ್ಲುವುದಕ್ಕಲ್ಲ.ನೀತಿವಂತರ ಮಾರ್ಗವು ಮಧ್ಯಾಹ್ನದ ಬೆಳಕಿನಂತೆ ಹೆಚ್ಚುತ್ತಾ ಹೋಗುತ್ತದೆ ಎನ್ನುವಂಥದ್ದು ಮಟ್ಟದ ಬದಲಾವಣೆಯನ್ನು ಸಂಕೇತಿಸುತ್ತದೆ. (ಜ್ಞಾನೋಕ್ತಿ4:18)
ಯಾರೆಲ್ಲರ ಜೀವನ ಮಟ್ಟ ಬದಲಾಗಬೇಕಾಗಿದೆ
- ಯಾರು ಬಹಳಕಾಲದಿಂದ ಒಂದೇ ಸ್ಥಾನದಲ್ಲಿದ್ದಾರೋ ಅವರ ಜೀವನಮಟ್ಟ.
- ಯಾರು ಬಹುಕಾಲದಿಂದ ಆಶೀರ್ವಾದಗಳಿಂದ ಪ್ರಯೋಜನಗಳಿಂದ ವಂಚಿತಾರಾಗಿದ್ದಾರೋ ಅವರ ಜೀವನಮಟ್ಟ.
- ಯಾರು ಪ್ರಾಮಾಣಿಕವಾಗಿ ಸೇವೆ ಮಾಡಿ ಅದಕ್ಕೆ ದೈವೀಕವಾದ ಪ್ರತಿಫಲವನ್ನು ಇನ್ನೂ ಹೊಂದದೇ ಹೋಗಿದ್ದಾರೋ ಅವರ ಜೀವನಮಟ್ಟ .
- ಯಾರು ಮತ್ತೊಬ್ಬರಿಂದ ವಂಚಿಸಲ್ಪಟ್ಟಿದ್ದಾರೋ ಅವರ ಜೀವನಮಟ್ಟ.
- ಯಾರು ಜೀವನದ ಸಾಲಿನಲ್ಲಿ ಕಡೆಗಣಿಸಲ್ಪಾಟ್ಟಿದ್ದಾರೋ ಅವರ ಜೀವನಮಟ್ಟ.
- ಯಾರೆಲ್ಲಾ ಗಣನೆಗೆ ಬಾರದೆ ಹೋಗಿದ್ದಾರೋ ಅವರ ಜೀವನ ಮಟ್ಟ.
- ಯಾರಿಗೆ ಸಹಾಯಕರಿಲ್ಲವೋ ಅವರ ಜೀವನ ಮಟ್ಟ.
- ಯಾರು ಸಂಕಷ್ಟ -ಪರಿಶ್ರಮ ಪಡುತ್ತಲೇ ಇದ್ದಾರೋ ಅವರ
- ಜೀವನ ಮಟ್ಟ.
- ಯಾರು ಭೂಮಿಯ ಮೇಲೆಲ್ಲಾ ದೇವರ ರಾಜ್ಯವನ್ನು ವಿಸ್ತರಿಸಬೇಕೆಂಬ ಬಯಕೆವುಳ್ಳವರಾಗಿದ್ದಾರೋ ಅವರ ಜೀವನಮಟ್ಟ.
ತಮ್ಮ ಜೀವನಮಟ್ಟದಲ್ಲಿ ಬದಲಾವಣೆ ಕಂಡ ಕೆಲವರ ನಿದರ್ಶನಗಳು.
1. ಮೊರ್ದಕೈ.
ರಾತ್ರೊರಾತ್ರಿ ಮೊರ್ದಕೈನ ಅಂತಸ್ತು ಬದಲಾಗಿ ಹೋಯಿತು. ಅದಂತು ಹೀಗಾಗಬಹುದೆಂಬ ಅಂದಾಜು ಸಹ ಅವನಿಗಿರಲಿಲ್ಲದ ಹಾಗೆ ನಡೆದು ಹೋಯಿತು. ಇದು ನಿಜಕ್ಕೂ ದೈವೀಕವಾದದ್ದು. (ಎಸ್ತೆರಳು 6:1-12,9:3-4ನ್ನು ಓದಿರಿ).
2. ಎಲೀಷ.
ಎಲೀಯನ ಕಂಬಳಿಯು ಅವನ ಮೇಲೆ ಬಿದ್ದು ಎಲೀಯನ ಅಭಿಷೇಕವು ವರ್ಗಾವಣೆಗೊಂಡ ಕೂಡಲೇ ಎಲೀಷನ
ಆತ್ಮೀಕ ಜೀವನಮಟ್ಟ ಬದಲಾವಣೆ ಹೊಂದಿತು.ಪ್ರವಾದಿ ಮಂಡಳಿಯವರು ಬಂದು ಅವನಿಗೆ ಅಡ್ಡಬಿದ್ದರು ಯಾಕೆಂದರೆ ಅವರು ಎಲೀಷನಲ್ಲಾದ ಜೀವನಮಟ್ಟದ ಬದಲಾವಣೆಯನ್ನು ಗಮನಿಸಿದ್ದರು. (2ಅರಸು 2:9-15 ವರೆಗೂ ಓದಿ ನೋಡಿ)
3. ದಾವೀದನು.
ಗೊಲ್ಯಾತನನ್ನು ಸೋಲಿಸಿದ ಮೇಲೆ ದಾವೀದನ ಜೀವನ ಮಟ್ಟವೇ ಬದಲಾಯಿತು. ಜೀವನದಲ್ಲಿ ಬರುವ ಯಾವುದೇ ಹೋರಾಟಗಳು ನಿಮ್ಮನ್ನು ನಾಶ ಪಡಿಸುವುದಿಲ್ಲ ಬದಲಾಗಿ ಅವು ನಿಮ್ಮಜೀವನ ಮಟ್ಟವು ಬದಲಾಯಿತೆಂದು ಘೋಷಿಸಲು ಬರುತ್ತವೆ.
"ಅಂದಿನಿಂದ ಸೌಲನು ದಾವೀದನನ್ನು ಅವನ ತಂದೆಯ ಮನೆಗೆ ಹೋಗಗೊಡದೆ ತನ್ನ ಬಳಿಯಲ್ಲೇ ಇಟ್ಟುಕೊಂಡನು."(1 ಸಮುವೇಲನು 18:2).
"ಇದಲ್ಲದೆ ನೀನು ನನ್ನ ಸೇವಕನಾದ ದಾವೀದನಿಗೆ ಹೇಳಬೇಕಾದದ್ದೇನಂದರೆ - ಸೇನಾಧೀಶ್ವರನಾದ ಯೆಹೋವನು ಹೀಗನ್ನುತ್ತಾನೆ - ಕುರಿಗಳ ಹಿಂದೆ ಹೋಗುತ್ತಿದ್ದ ನಿನ್ನನ್ನು ಅಡವಿಯಿಂದ ತೆಗೆದುಕೊಂಡು ನನ್ನ ಪ್ರಜೆಗಳಾದ ಇಸ್ರಾಯೇಲ್ಯರ ಮೇಲೆ ನಾಯಕನನ್ನಾಗಿ ನೇವಿುಸಿದೆನು."(2 ಸಮುವೇಲನು 7:8).
4. ಪೌಲನು.
ಪೌಲನು ಸಭೆಗಳನ್ನು ಭಯಪಡಿಸುವಂತವನಾಗಿದ್ದನು.ಆದರೆ ಅವನು ತನ್ನ ಜೀವನ ಮಟ್ಟದಲ್ಲಿ ಬದಲಾವಣೆಯನ್ನು ಅನುಭವಿಸಿದನು. ದೇವರ ರಾಜ್ಯಕ್ಕಾಗಿ ಅಪೋಸ್ತಲನಾಗಿ ಸೇವೆ ಸಲ್ಲಿಸಿದನು.
"ಆದರೆ ಇನ್ನು ಮುಂದೆ ನಿತ್ಯಜೀವಕ್ಕಾಗಿ ತನ್ನ ಮೇಲೆ ನಂಬಿಕೆಯಿಡುವವರಿಗೆ ತನ್ನ ದೀರ್ಘಶಾಂತಿಯ ದೃಷ್ಟಾಂತವಿರಬೇಕೆಂದು ಕ್ರಿಸ್ತ ಯೇಸು ಮುಖ್ಯ ಪಾಪಿಯಾದ ನನ್ನನ್ನು ಕರುಣಿಸಿ ನನ್ನಲ್ಲಿ ತನ್ನ ಪೂರ್ಣದೀರ್ಘಶಾಂತಿಯನ್ನು ತೋರ್ಪಡಿಸಿದನು."(."1 ತಿಮೊಥೆಯನಿಗೆ 1:16).
5. ಯೋಸೆಫನು.
ಯೋಸೆಫನು ಮನಷ್ಯನ ಬಲದಲ್ಲಿ ಸಾಧ್ಯವಾಗದಂತ ರೀತಿಯಲ್ಲಿ ತನ್ನ ಸ್ಥಾನದಲ್ಲಿ ಉನ್ನತಕ್ಕೇರಿಸಲ್ಪಟ್ಟನು. ವಿದೇಶಿಯರ ನೆಲದಲ್ಲಿ ದೇವರು ಅವನನ್ನು ಮುಖ್ಯಸ್ಥನಾಗಿ ಮಾಡಿದನು. (ಆದಿಕಾಂಡ 41:14-46ವರೆಗೂ ಓದಿರಿ).
ಜೀವನಮಟ್ಟದಲ್ಲಿ ಬದಲಾವಣೆಯನ್ನು ಹೊಂದುವುದು ಹೇಗೆ?
1. ಯಥಾರ್ಥತೆಯ ಜೀವಿತ ಜೀವಿಸಿರಿ.
ದೇವರು ದಾವೀದನನ್ನು ಆರಿಸಿಕೊಂಡನು. ಏಕೆಂದರೆ ಅವನು ಯಥಾರ್ಥವಾದ ಜೀವಿತವನ್ನು ಜೀವಿಸುವವನಾಗಿದ್ದನು.
"ಇವನು ಅವರನ್ನು ಯಥಾರ್ಥಹೃದಯದಿಂದ ಸಾಕಿ ತನ್ನ ಹಸ್ತಕೌಶಲ್ಯದಿಂದ ನಡಿಸಿದನು."(ಕೀರ್ತನೆಗಳು 78:72).
2. ದೇವರಿಗೆ ಭಯಪಟ್ಟು ಜೀವಿಸಿರಿ.
ದೇವರ ಭಯವೇ ಜ್ಞಾನಕ್ಕೆ ಮೂಲ. ಆ ದೇವರ ಬಲವೇ ನಿಮ್ಮ ಜೀವನ ಮಟ್ಟವನ್ನು ಬದಲಾಯಿಸುವ ಸ್ಥಾನಕ್ಕೆ ನಿಮ್ಮನ್ನು ಒಯುತ್ತದೆ. ಯೋಸೆಫನು ಸಹ ಶೋಧನೆಗೆ ಒಳಗಾದನು. ಅವನೇನಾದರೂ ಆ ಪರೀಕ್ಷೆಯಲ್ಲಿ ಸೋತು ಹೋಗಿದ್ದರೆ ಅವನು ಅರಮನೆ ಹೊಂದಲು ಸಾಧ್ಯವೇ ಇರುತ್ತಿರಲಿಲ್ಲ. ನಿಮಗೂ ಸಹ ಶೋಧನೆಗಳು ಬರುತ್ತವೆ. ನಿಮ್ಮ ಜೀವನ ಮಟ್ಟ ಬದಲಾಗಬೇಕಾದರೆ ದೇವರ ಭಯವು ನಿಮ್ಮ ಹೃದಯವನ್ನು ಆಳ್ವಿಕೆ ಮಾಡಬೇಕು.
3. ನಿಮ್ಮ ಸ್ಥಿತಿ ಬದಲಾವಣೆಗಾಗಿ ಪ್ರಾರ್ಥಿಸಿ.
ನೀವು ಪ್ರಾರ್ಥಿಸಿದರೆ ದೇವರು ನಿಮ್ಮ ಜೀವನಮಟ್ಟವನ್ನು ಬದಲಾಯಿಸಲು ಸಿದ್ದನಿದ್ದಾನೆ.
"ಅಹರ್ಹೇಲನು ಹಾರುಮನ ಮಗನು; ಯಾಬೇಚನು ತನ್ನ ಅಣ್ಣತಮ್ಮಂದಿರಲ್ಲಿ ಘನವಂತನಾಗಿದ್ದನು; ಇವನನ್ನು ಬಹುವೇದನೆಯಿಂದ ಹೆತ್ತೆನೆಂದು ಹೇಳಿ ಇವನ ತಾಯಿ ಇವನಿಗೆ ಯಾಬೇಚೆಂದು ಹೆಸರಿಟ್ಟಳು. 10 ಯಾಬೇಚನು ಇಸ್ರಾಯೇಲ್ ದೇವರಿಗೆ - ನೀನು ನನ್ನನ್ನು ವಿಶೇಷವಾಗಿ ಆಶೀರ್ವದಿಸಿ ನನ್ನ ಪ್ರಾಂತವನ್ನು ವಿಸ್ತರಿಸಿ ನಿನ್ನ ಹಸ್ತದಿಂದ ನನ್ನನ್ನು ಹಿಡಿದು ಯಾವ ವೇದನೆಯೂ ಉಂಟಾಗದಂತೆ ನನ್ನನ್ನು ರಕ್ಷಿಸಬಾರದೇ ಎಂದು ಮೊರೆಯಿಡಲು ದೇವರು ಅವನ ಮೊರೆಯನ್ನು ಲಾಲಿಸಿದನು."(1 ಪೂರ್ವಕಾಲವೃತ್ತಾಂತ 4:9-10).
4. ನಿಮಗೆ ದೇವರ ದಯೆಯ ಅವಶ್ಯಕತೆ ಇದೆ.
ಆ ಕಾಲದಲ್ಲಿ ಸ್ಪರ್ಧೆಯಲ್ಲಿ ಅನೇಕ ಮಂದಿ ಸ್ತ್ರೀಯರಿದ್ದರೂ ದೇವರ ದಯೆ ಎಸ್ತೆರಳಿಗೆ ಲಭಿಸಿದರಿಂದ ಅವಳ ಜೀವನ ಮಟ್ಟವುಬದಲಾಯಿತು.ದಯೆಯು ನಿಮ್ಮ ಜೀವನ ಮಟ್ಟದ ಬದಲಾವಣೆಗೆ ಅರ್ಹತೆಯನ್ನು ತರುತ್ತದೆ.
"ಎಲ್ಲಾ ಕನ್ಯೆಯರಲ್ಲಿ ಆಕೆಯು ಅವನ ದಯೆಗೂ ಪ್ರೀತಿಗೂ ಪಾತ್ರಳಾದದರಿಂದ ಅವನು ರಾಜಮುಕುಟವನ್ನು ಆಕೆಯ ತಲೆಯ ಮೇಲಿಟ್ಟು ಆಕೆಯನ್ನು ವಷ್ಟಿಗೆ ಬದಲಾಗಿ ರಾಣಿಯನ್ನಾಗಿ ಮಾಡಿಕೊಂಡನು "(ಎಸ್ತೇರಳು 2:17).
5. ಯಥಾರ್ಥವಾಗಿ ದೇವರನ್ನು ಸಂಧಿಸಿರಿ.
ಮೋಶೆಯು ದೇವರನ್ನು ಮುಖಮುಖಿ ಸಂಧಿಸಿದ ನಂತರ ಅವನ ಜೀವನದ ಅಂತಸ್ತೇ ಬದಲಾಗಿ ಹೋಯಿತು.ಮೋಶೆಯು ಫರೋಹನಿಗೆ ಹೆದರಿ ಅರಣ್ಯಕ್ಕೆ ಓಡಿಹೋದನು ಆದರೆ ಯಾವಾಗ ಮೋಶೆಯು ದೇವರನ್ನು ಮುಖಮುಖಿ ಸಂಧಿಸಿದನೋ ಆ ಫರೋಹನಿಗೇ ಮೋಶೆಯು ದೇವರಂತಾಗಿ ಬಿಟ್ಟ. (ವಿಮೋಚನಾ ಕಾಂಡ 3:2,4-10ವರೆಗೂ ಓದಿ ನೋಡಿರಿ).
6. ಇತರರ ಸಮಸ್ಯೆಗಳಿಗೆ ಪರಿಹಾರ ನೀಡುವವರಾಗಿರ್ರಿ.
ಫರೋಹನ ಹಾಗೂ ಐಗುಪ್ತದ ಸಮಸ್ಯೆಗೆ ಯೋಸೆಫನು ಪರಿಹಾರ ನೀಡಿದ್ದರಿಂದ ಯೋಸೆಫನು ತನ್ನ ಜೀವನ ಮಟ್ಟದಲ್ಲಿ ಬದಲಾವಣೆಯನ್ನು ಅನುಭವಿಸಿದನು.
ನೀವೂ ಸಹ ನಿಮ್ಮ ಜೀವನ ಮಟ್ಟದಲ್ಲಿ ಬದಲಾವಣೆ ಅನುಭವಿಸಿ ಆನಂದಿಸಲು ಇತರರ ಜೀವಿತದಲ್ಲಿ ಬೆಳಕಾಗಿರ್ರಿ.
7. ವಿವೇಕವನ್ನು ಹೊಂದಿಕೊಳ್ಳಿರಿ.
ವಿವೇಕವು ಮಹತ್ವಪೂರ್ಣವಾಗಿದ್ದು ಸೋಲೋಮನನು ಅದನ್ನೇ ಬೇಡಿಕೊಂಡನು. ದೇವರಿಂದ ಹೊಂದಿದ ವಿವೇಕವೇ ಸೋಲೋಮನ ಜೀವನ ಮಟ್ಟವನ್ನು ಬದಲಾಯಿಸಿ ಬಿಟ್ಟಿತು(1ಅರಸು3:5-15)
ದೇವರು ಯಾವ ಸಮಯದಲ್ಲಿಯಾದರೂ ಯಾರ ಜೀವನಮಟ್ಟವನ್ನಾದರೂ ಬದಲಾಯಿಸಬಲ್ಲನು.ಆದ್ದರಿಂದ ದೇವರ ಮೇಲಿನ ನಂಬಿಕೆಯನ್ನು ಬಿಟ್ಟುಬಿಡಬೇಡಿರಿ.ಆತನನ್ನು ಪ್ರಾಮಾಣಿಕವಾಗಿ ಸೇವಿಸಿರಿ. ಆತನು ತಕ್ಕಕಾಲದಲ್ಲಿ ನಿಮ್ಮನ್ನು ಮೇಲೇಕ್ಕೆತ್ತುವನು.
Bible Reading Plan : Act 10-15
ಪ್ರಾರ್ಥನೆಗಳು
1.ಓ ಕರ್ತನೇ, ನಿನ್ನ ಬಲದಿಂದ ನನ್ನ ಜೀವನಮಟ್ಟದಲ್ಲಿ ಬದಲಾವಣೆಯನ್ನು ಅನುಭವಿಸುವಂತೆ ಯೇಸುನಾಮದಲ್ಲಿ ಅನುಗ್ರಹಿಸು. (ಕೀರ್ತನೆ 75:6-7).
2. ತಂದೆಯೇ, ಈ 40 ದಿನಗಳ ಉಪವಾಸ ಪ್ರಾರ್ಥನೆಯಲ್ಲಿ ನಿರತರಾಗಿರುವ ಎಲ್ಲರ ಜೀವಿತವನ್ನು ಯೇಸುನಾಮದಲ್ಲಿ ಉನ್ನತ ಸ್ಥಿತಿಗೆ ಏರಿಸು. (ಯೆಶಾಯ 40:31).
3.ನನ್ನ ಜೀವಿತದಲ್ಲಿ ವೈಫಲ್ಯದ ದುರಾತ್ಮವನ್ನು ಯೇಸುನಾಮದಲ್ಲಿ ರದ್ದುಮಾಡುತ್ತೇನೆ(ಫಿಲಿಪ್ಪಿ 4:13).
4. ನಾನು ಕೈಹಾಕಿದ ಎಲ್ಲಾ ಕೆಲಸಗಳಲ್ಲಿ ಸಫಲತೆಯನ್ನು ಯೇಸುನಾಮದಲ್ಲಿ ನಾನು ಕಾಣುತ್ತೇನೆ.(ಯೋಹಾನ 15:5)
5. ಯೇಸುನಾಮದಲ್ಲಿ ನನ್ನ ಶ್ರಮವು ವ್ಯರ್ಥವಾಗುವುದಿಲ್ಲ ಜೊತೆಗೆ ನನ್ನ ಪ್ರೀತಿಪಾತ್ರರ ಶ್ರಮವೂ ಸಹ ವ್ಯರ್ಥವಾಗುವುದಿಲ್ಲ.(ಯೆಶಾಯ 65:23)
6. ತಂದೆಯೇ, ನನ್ನ ಮುಂದಿನ ಜೀವನ ಮಟ್ಟಕ್ಕಾಗಿ ನನಗಾಗಿ ಸಿದ್ದಪಡಿಸಿದ ಜನರೊಂದಿಗೆ ಯೇಸುನಾಮದಲ್ಲಿ ಸಂಪರ್ಕ ಸಾಧಿಸುವಂತೆ ಸಹಾಯಮಾಡು. (ಜ್ಞಾನೋಕ್ತಿ 16:9).
7. ತಂದೆಯೇ, ನನ್ನನ್ನು ಉನ್ನತ ಸ್ಥಿತಿಗೆ ಏರಿಸುವ ಪ್ರಗತಿಪರ ಆಲೋಚನೆಗಳನ್ನು ಯೇಸುನಾಮದಲ್ಲಿ ಅನುಗ್ರಹಿಸು. (ಯಾಕೋಬ 1:5).
8. ನನ್ನ ಸಾಕ್ಷಿಯನ್ನು ಪ್ರಸರಿಸುವಂತ ನೂತನ ಅಂತಃ ಜ್ಞಾನವನ್ನು ಯೇಸುನಾಮದಲ್ಲಿ ಹೊಂದಿಕೊಂಡಿದ್ದೇನೆ. (ರೋಮ 12:2)
9. ತಂದೆಯೇ, ಅದ್ಭುತವಾದ ಬಿಡುಗಡೆಯ ದ್ವಾರಗಳನ್ನು ಯೇಸುನಾಮದಲ್ಲಿ ನನಗಾಗಿ ತೆರೆಯಿರಿ. (ಪ್ರಕಟಣೆ 3:8).
10. ಆರ್ಥಿಕ ಬಿಡುಗಡೆಗಾಗಿ ಯೇಸುನಾಮದಲ್ಲಿ ನಿನ್ನ ಕೃಪೆಯನ್ನು ಹೊಂದಿಕೊಳ್ಳುತ್ತೇನೆ. (3ಯೋಹಾನ 1:2).
11. ತಂದೆಯೇ, ಯೇಸುನಾಮದಲ್ಲಿ ಅಂತರಾಷ್ಟ್ರೀಯ ಬಾಗಿಲುಗಳನ್ನು ನನಗಾಗಿ ತೆರೆಯಿರಿ. (ಅಪೋಸ್ತಲರ ಕೃತ್ಯ 16:9)
Join our WhatsApp Channel
Most Read
● ದೇವರು ಹೇಗೆ ಒದಗಿಸುತ್ತಾನೆ #1● ಸತ್ಯವೇದ ಆಧಾರಿತ ಸಮೃದ್ಧಿಯನ್ನು ಹೊಂದಲಿರುವ ರಹಸ್ಯ
● ಎತ್ತಲ್ಪಡುವಿಕೆ ಮತ್ತು ರೋಶ್ ಹಸನ್ನ
● ವಿವೇಚನೆ v/s ತೀರ್ಪು
● ಅಂತ್ಯದಿನಗಳ ಕುರಿತು ಪ್ರವಾದನ ಯುಕ್ತ ಗೂಡಾರ್ಥ ವಿವರಣೆ
● ಆರಂಭಿಕ ಹಂತದಲ್ಲಿಯೇ ಕರ್ತನನ್ನು ಕೊಂಡಾಡಿರಿ
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
ಅನಿಸಿಕೆಗಳು