"ಆದಕಾರಣ ನೀವು ಕ್ರಿಸ್ತನೊಂದಿಗೆ ಎಬ್ಬಿಸಲ್ಪಟ್ಟಿರುವದರಿಂದ ಮೇಲಿರುವವುಗಳನ್ನು ಹುಡುಕಿರಿ; ಅಲ್ಲಿ ಕ್ರಿಸ್ತನು ದೇವರ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ. ಮೇಲಿರುವಂಥವುಗಳ ಮೇಲೆ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಇಡಬೇಡಿರಿ. ಯಾಕಂದರೆ ನೀವು ಸತ್ತಿರಲ್ಲಾ, ನಿಮ್ಮ ಜೀವವು ಕ್ರಿಸ್ತನೊಂದಿಗೆ ದೇವರಲ್ಲಿ ಮರೆಯಾಗಿಡಲ್ಪಟ್ಟದೆ.".(ಕೊಲೊಸ್ಸೆ 3:1-3)
ಈ ಭೂಮಿಯ ಮೇಲಿರುವ ಪ್ರತಿಯೊಂದು ಪ್ರಭೇದಕ್ಕೂ ಒಂದು ವಿಶಿಷ್ಟ ಸ್ವಭಾವವಿದೆ. ಉದಾಹರಣೆಗೆ, ಒಂದು ಹಂದಿ ಯಾವಾಗಲೂ ಹಂದಿಯಾಗಿಯೇ ಇರುತ್ತದೆ. ಯಾವುದೇ ಉತ್ತಮ ನಡವಳಿಕೆಯ ಬೋದನೆ ಅಥವಾ ತರಬೇತಿಯಿಂದ ಹಂದಿಯನ್ನು ಹೊಸ ಜಾತಿಯಾಗಿ ಬದಲಾಯಿಸಲು ಸಾಧ್ಯವಿಲ್ಲ.
" ನಿಮ್ಮ ಮುತ್ತುಗಳನ್ನು ಹಂದಿಗಳ ಮುಂದೆ ಚೆಲ್ಲಬೇಡಿರಿ. ಬಹುಶಃ ಅವು ತಮ್ಮ ಕಾಲಿನಿಂದ ಅವುಗಳನ್ನು ತುಳಿದು ಹಿಂತಿರುಗಿ ಬಂದು ನಿಮ್ಮನ್ನು ಸೀಳಿಬಿಟ್ಟಾವು.(ಮತ್ತಾಯ 7: 6)ಎಂದು ದೇವರವಾಕ್ಯವು ನಮ್ಮನ್ನು ಎಚ್ಚರಿಸುತ್ತದೆ.
ನೀವು ಹಂದಿಯನ್ನು ತೊಳೆದು ಅದರ ತಲೆಯ ಮೇಲೆ ಕಿರೀಟ ಇಟ್ಟು ಅಲಂಕರಿಸಬಹುದು, ಆದರೆ ನೀವು ಅದನ್ನು ಬಿಟ್ಟ ತಕ್ಷಣವೇ ಅದು ನೇರವಾಗಿ ಕೆಸರಿನ ಕೊಚ್ಚೆಗುಂಡಿಗೆ ಹೋಗುತ್ತದೆ. ಮತ್ತೊಮ್ಮೆ, ದೇವರವಾಕ್ಯವು ಇದನ್ನು ಸ್ಪಷ್ಟವಾಗಿ ಸೂಚಿಸುತ್ತದೇನೆಂದರೆ . “ನಾಯಿ ತಾನು ಕಕ್ಕಿದ್ದನ್ನು ನೆಕ್ಕುವುದಕ್ಕೆ ತಿರುಗಿಕೊಂಡಿತು. ಮತ್ತು ಮೈತೊಳೆದ ಹಂದಿ ಕೆಸರಿನಲ್ಲಿ ಹೊರಳಾಡುವುದಕ್ಕೆ ಹೋಯಿತು.” ಎಂಬ ಗಾದೆ ಅವರಿಗೆ ಸರಿಯಾಗಿ ಅನ್ವಯಿಸುತ್ತದೆ. ಎಂದೆ (2 ಪೇತ್ರ 2:22)
ಮನುಷ್ಯರಾಗಿ , ನಾವು ಹುಟ್ಟಿದಾಗ ಮನುಷ್ಯ ಸಹಜ ಸ್ವಭಾವವನ್ನು ಪಡೆದಿದ್ದೇವೆ. ನಾವು ಪತನಗೊಂಡ ಈ ಪಾಪದ ಜಗತ್ತಿನಲ್ಲಿ ವಾಸಿಸುವ ಕಾರಣ, ನಾವೆಲ್ಲರೂ ಪತನದ ಸ್ವಭಾವದಿಂದಲೇ ಎಲ್ಲವನ್ನು ಪ್ರಾರಂಭಿಸುತ್ತೇವೆ.
ಕೀರ್ತನೆ 51:5 ಹೇಳುವಂತೆ ನಾವೆಲ್ಲರೂ ಪಾಪಿಗಳಾಗಿಯೇ ಈ ಲೋಕಕ್ಕೆ ಬರುತ್ತೇವೆ:
"ಹುಟ್ಟಿದಂದಿನಿಂದ ನಾನು ಪಾಪಿಯೇ; ಮಾತೃಗರ್ಭವನ್ನು ಹೊಂದಿದ ದಿನದಿಂದ ದ್ರೋಹಿಯೇ."
ಎಫೆಸ 2:2 ಕ್ರಿಸ್ತನಲ್ಲಿಲ್ಲದ ಎಲ್ಲಾ ಜನರು "ಅವಿಧೇಯತೆಯ ಮಕ್ಕಳು" ಎಂದು ಹೇಳುತ್ತದೆ. ದೇವರು ಮಾನವ ಜನಾಂಗವನ್ನು ಪಾಪಪೂರ್ಣವಾಗಿ ಸೃಷ್ಟಿಸಲಿಲ್ಲ ಆದರೆ ಸರಿಯಾಗಿಯೇ ಸೃಷ್ಟಿಸಿದ್ದನು. ಆದರೆ ನಾವು ಪಾಪದಲ್ಲಿ ಬಿದ್ದೆವು ಮತ್ತು ಆದಾಮನ ಪಾಪದಿಂದಾಗಿ ನಾವೂ ಪಾಪಿಗಳಾದೆವು. ಆದಾಗ್ಯೂ, ನೀವು ಕರ್ತನಾದ ಯೇಸುಕ್ರಿಸ್ತನನ್ನು ಅನುಸರಿಸುವ ನಿರ್ಧಾರವನ್ನು ಮಾಡಿದಾಗ, ನೀವು ಅದ್ಭುತವಾಗಿ ಹೊಸ ಸ್ವಭಾವವನ್ನು ಪಡೆಯುತ್ತೀರಿ. ಅಸಾಧ್ಯವಾದದ್ದು ಆಗ ಸಾಧ್ಯವಾಗುತ್ತದೆ. ಆದ್ದರಿಂದ ಯಾವುದೇ ವ್ಯಕ್ತಿಯು ಕ್ರಿಸ್ತನಲ್ಲಿದ್ದರೆ (ಮೆಸ್ಸಿಯನಲ್ಲಿ) [ಸೇರಿಸಲ್ಪಟ್ಟಿದ್ದರೆ], ಅವನು ನೂತನ ಸೃಷ್ಟಿ (ಒಟ್ಟಾರೆಯಾಗಿ ಹೊಸ ಜೀವಿ); ಹಳೆಯ [ಹಿಂದಿನ ನೈತಿಕ ಮತ್ತು ಆತ್ಮೀಕ ಸ್ಥಿತಿ] ತೀರಿಹೋಯಿತು. ಇಗೋ, ನೂತನವಾದ ಮತ್ತು ಹೊಸದಾದದ್ದು ಬಂದಿದೆ! (2 ಕೊರಿಂಥ 5:17 ವರ್ಧಿಸಲಾಗಿದೆ)
ಹಾಗಾಗಿ ನೀವು ಇನ್ನು ಪತನ ಗೊಂಡ -ಮಾನವ-ಸ್ವಭಾವದ ಕುಟುಂಬಕ್ಕೆ ಸೇರಿದವರಲ್ಲ; ಈಗ ನೀವು ದೇವರ ಕುಟುಂಬದ ಸದಸ್ಯರಾಗಿದ್ದೀರಿ. ಇದು ಬದಲಾಗುತ್ತಿರುವ ಪ್ರಭೇದಕ್ಕೆ ಹೋಲಿಸಬಹುದಾದ ಸಂಗತಿಯಾಗಿದೆ.
ನಾವು ಈಗ ಹೊಸ ಸ್ವಭಾವವನ್ನು ಹೊಂದಿರುವುದರಿಂದ, ನಾವು ವಿಭಿನ್ನವಾಗಿ ವರ್ತಿಸಬೇಕಾದ ನಿರೀಕ್ಷೆಯಿದೆ. ನಮ್ಮ ಆತ್ಮೀಕ ಮನುಷ್ಯನೇನೋ ಹೊಸದಾಗಿ ಸೃಷ್ಟಿಸಲ್ಪಟ್ಟಿದ್ದಾನೆ. ಆದರೆ ನಮ್ಮ ಮನಸ್ಸುಗಳನ್ನು ಇನ್ನೂ ನವೀಕರಿಸಬೇಕಾದ ಅವಶ್ಯಕತೆ ಇದೆ. ಅದು ಸ್ವಯಂಚಾಲಿತವಾಗುವುದಿಲ್ಲ ಇದಕ್ಕಾಗಿ ಒಂದು ಪ್ರಕ್ರಿಯೆ ಇದೆ. ಕೊಲೊಸ್ಸೆ 3: 1-3 ರಲ್ಲಿ, ಈ ಪ್ರಕ್ರಿಯೆಯನ್ನು ಹೇಗೆ ಪ್ರಾರಂಭಿಸಬೇಕು ಎಂಬುದರ ಕುರಿತು ಪೌಲನು ನಮಗೆ ಸೂಚನೆಗಳನ್ನು ನೀಡುತ್ತಾನೆ:
ಪರಲೋಕದ ವಿಷಯಗಳ ಕುರಿತು ಆಲೋಚಿಸಿ. ನೀವು ಪರಲೋಕದಲ್ಲಿ ನಿತ್ಯತ್ವದಲ್ಲಿ ನಿಮ್ಮ ಜೀವಿತ ಕಳೆಯುತ್ತೀರಿ ಎಂದು ಅರಿತುಕೊಳ್ಳುವಂತದ್ದು ಭೂಮಿಯ ಮೇಲೆ ನಿಮ್ಮ ಗಮನವನ್ನು ಬದಲಾಯಿಸುತ್ತದೆ. ಇಂದಿನಿಂದ ನೀವು ಆ ಆಲೋಚನೆ ಕಡೆಗೆ ನಿಮ್ಮ ಗಮನ ಹರಿಸಿ. ಆಗ ಅದು ನೀವು ಯೋಜಿಸುವ ವಿಧಾನವನ್ನು ಬದಲಾಯಿಸಬಹುದು.
Bible Reading: Genesis 32-33
ಅರಿಕೆಗಳು
ನಾನು ಕ್ರಿಸ್ತನಲ್ಲಿ ನೂತನ ಜೀವನಕ್ಕಾಗಿ ಎಬ್ಬಿಸಲ್ಪಟ್ಟಿದ್ದೇನೆ. ನಾನು ನನ್ನ ದೃಷ್ಟಿಯನ್ನು (ಭೌತಿಕ ಮತ್ತು ಆತ್ಮೀಕ ಎರಡೂ) ಪರಲೋಕದ ವಾಸ್ತವತೆ ಮೇಲೆ ಹರಿಸುತ್ತೇನೆ, ಅಲ್ಲಿ ಕ್ರಿಸ್ತನು ದೇವರ ಬಲಗಡೆಯಲ್ಲಿ ಮಹಿಮೆಯ ಸ್ಥಾನದಲ್ಲಿ ಕುಳಿತುಕೊಂಡಿದ್ದಾನೆ. ನಾನು ಪ್ರತಿದಿನ ಪರಲೋಕದ ವಿಷಯಗಳ ಬಗ್ಗೆ ಯೋಚಿಸುವುದನ್ನೇ ಆಯ್ಕೆ ಮಾಡಿ ಕೊಳ್ಳುತ್ತೇನೆ,ಯೇ ಹೊರತು ಲೌಕಿಕ ವಿಷಯಗಳಲ್ಲ. ಯಾಕಂದರೆ ನಾನು ಈ ಲೋಕಕ್ಕೆ ಸತ್ತಿದ್ದೇನೆ ಮತ್ತು ನನ್ನ ನಿಜ ಜೀವವು ಕ್ರಿಸ್ತನೊಂದಿಗೆ ದೇವರಲ್ಲಿ ಅಡಗಿದೆ.
Join our WhatsApp Channel
Most Read
● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ದೇವರ ಯೋಜನೆಯಲ್ಲಿರುವ ತಂತ್ರಗಾರಿಕೆಯ ಶಕ್ತಿ
● ಅಶ್ಲೀಲತೆಯಿಂದ ಬಿಡುಗಡೆ ಕಡೆಗಿನ ಪಯಣ
● ದಿನ 01 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 30:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ನೀವು ದೇವರಿಂದ ನೇಮಿಸಲ್ಪಡುವ ಮುಂದಿನ ಬಿಡುಗಡೆ ನಾಯಕರು ನೀವಾಗಬಹುದು
ಅನಿಸಿಕೆಗಳು