english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಕನಸುಗಳ ಕೊಲೆಪಾತಕರು
ಅನುದಿನದ ಮನ್ನಾ

ಕನಸುಗಳ ಕೊಲೆಪಾತಕರು

Monday, 13th of January 2025
4 1 161
Categories : ಕನಸುಗಳು (Dreams)
"ಕಳ್ಳನಾದರೋ ಕದ್ದುಕೊಳ್ಳುವುದಕ್ಕೂ, ಕೊಯ್ಯುವುದಕ್ಕೂ ಮತ್ತು ನಾಶಮಾಡುವುದಕ್ಕೂ ಬರುತ್ತಾನೆಯೇ ಹೊರತು ಮತ್ತಾವುದಕ್ಕೂ ಬರುವುದಿಲ್ಲ. ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿರಬೇಕೆಂತಲೂ ಬಂದೆನು.ಯೋಹಾನ  10:10) 

ದೇವರು ನೀಡಿದ ಕನಸುಗಳಿಗೆ ನಿಮ್ಮನ್ನು  ಚಂಡಮಾರುತದಿಂದಲೂ  ಮತ್ತು ಪ್ರವಾಹದಿಂದಲೂ ಎಳೆಯುವ ತಾಕತ್ತಿದೆ. ನಿಮ್ಮ ಸುತ್ತಲಿರುವ ಪ್ರಪಂಚವು ಕುಸಿಯುತ್ತಿರುವಂತೆ ತೋರುತ್ತಿರುವಾಗ  ಅದು ನಿಮಗೆ ಅಗತ್ಯವಿರುವ ಭರವಸೆ ಮತ್ತು ಉತ್ತೇಜನವನ್ನು ನೀಡುತ್ತದೆ. ಆದಾಗ್ಯೂ, ಅನೇಕರು ತಮ್ಮ ಕನಸುಗಳನ್ನು ಮಸುಕಾಗುವಂತೆ ಹಾಗೆಯೇ ಬಿಟ್ಟು ಬಿಟ್ಟಿದ್ದಾರೆ ಅಥವಾ ಅವುಗಳನ್ನು ಕೊಲ್ಲಲು ಅವಕಾಶ ಮಾಡಿಕೊಟ್ಟಿದ್ದಾರೆ. ನಿಮ್ಮ ಕನಸುಗಳ ಜೀವಂತಿಕೆಯನ್ನು ಕಸಿದುಕೊಳ್ಳಲು ಇಚ್ಛೆಸುವ ಕನಸಿನ ಕೊಲೆಪಾತಕರ  ​​ಕುರಿತು ಜಾಗರೂಕರಾಗಿರಿ. ದಯವಿಟ್ಟು ಎಷ್ಟೇ ಕಷ್ಟವಾದರೂ ಹಾಗೆ ಮಾಡಲು ಅಂತವರಿಗೆ ಅನುಮತಿಸಬೇಡಿರಿ. 

"ಒಂದು ದಿನ ಯೋಸೇಫನು ಕನಸು ಕಂಡು ಅದನ್ನು ತನ್ನ ಅಣ್ಣಂದಿರಿಗೆ ತಿಳಿಸಿದಾಗ ಅವರು ಅವನನ್ನು ಇನ್ನೂ ಹೆಚ್ಚಾಗಿ ದ್ವೇಷಿಸಿದರು. (ಆದಿಕಾಂಡ 37:5). ಯೋಸೆಫನು ಆರಂಭದಲ್ಲಿ ಅಪಕ್ವನಾಗಿದ್ದನು ಆದ್ದರಿಂದಲೇ ಅವನು ತನ್ನ ಕನಸುಗಳನ್ನು ತಪ್ಪಾದ ಜನರೊಂದಿಗೆ ಹಂಚಿಕೊಂಡನು. ಹಾಗಾಗಿ  ಅವರು ಯೋಸೆಫನ ಕನಸುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು.

ಯೋಸೆಫನ  ಸಹೋದರರು ಕನಸುಗಳ  ಕೊಲೆಪಾತಕರಿಗೆ  ಒಂದು ಶ್ರೇಷ್ಠ ಉದಾಹರಣೆಯಾಗಿದ್ದಾರೆ. 

ಕರ್ತನು ನಿಮಗೆ ಪ್ರಾರ್ಥನೆಯಲ್ಲಿಯೋ  ಕನಸಿನಲ್ಲಿಯೋ  ಏನನ್ನಾದರೂ ಪ್ರಕಟ ಪಡಿಸಿದಾಗ ಅಥವಾ ದೇವಮನುಷ್ಯರ  ಮೂಲಕ ಏನನ್ನಾದರೂ ಪ್ರಕಟ ಪಡಿಸಿದಾಗ; ಅದನ್ನು ಎಲ್ಲಾ ಕಡೆ ಹೇಳುತ್ತಾ ಹೋಗಬೇಡಿ. ಅದು ಅಪರಿಪಕ್ವವಾದ ಕಾರ್ಯವಾಗಿದ್ದು  ಅದು ನಿಮ್ಮೊಳಗೆ ಗುಪ್ತವಾಗಿ ಅಡಗಿರುವ  ಹೆಮ್ಮೆಯ ಸುಳಿವಾಗಿರುತ್ತದೆ. ನಿಮ್ಮ ಕನಸಗಳನ್ನು , ನಿಮ್ಮ ದೇವರು ನಿಮಗೆ ಕೊಟ್ಟಿರುವ ರಹಸ್ಯಗಳನ್ನು ಆತ್ಮದಲ್ಲಿ ಪ್ರಬುದ್ಧರಾದ ಜನರ ಮುಂದೆ ಮಾತ್ರ ಬಹಿರಂಗಪಡಿಸಿ.

ನಿಮ್ಮ ಸುತ್ತಲಿರುವ ಎಲ್ಲರೂ  ನಿಮ್ಮ ಕನಸುಗಳು  ನನಸಾಗಬೇಕೆಂದು ಬಯಸುವವರಾಗಿರುದಿಲ್ಲ. ಅವರು ನಿಮ್ಮ ಮುಂದೆ ಹಾಗೆ ನಟಿಸಬಹುದು, ಆದರೆ ಕಡೆಗೆ ಒಮ್ಮೆ, ಆ ಸತ್ಯ ನಿಮಗೆ  ತಿಳಿದು ಬರುತ್ತದೆ. ಹೇಗೆ? ಅವರ ಮಾತುಗಳಿಂದ. ಇದು ನಿಮಗೆ ಅಸಾಧ್ಯ, ನೀವು ಸಾಕಷ್ಟು ಬುದ್ಧಿವಂತರಲ್ಲ ಅಥವಾ ಹಿಂದೆಂದೂ ಈ ಕಾರ್ಯ ನೀವು  ಮಾಡಿದವರಲ್ಲ ನಿಮಗೆ ಅನುಭವ ಇಲ್ಲ ಇತ್ಯಾದಿ.. ಎಂದು ಅವರು ನಿಮಗೆ ಹೇಳಬಹುದು. 

ಅಲ್ಲದೆ, ಭಯವು ನಿಮ್ಮನ್ನು ಆವರಿಸಿ ; ಹೆದರಿಕೆ, ಅನುಮಾನ ಮತ್ತು ಹಣಕಾಸಿನ ಕೊರತೆಗಳು  ನಿಮ್ಮ ಕನಸನ್ನು ನೀವು ಪೂರೈಸಲು ಸಾಧ್ಯವಿಲ್ಲ ಎಂದು ನಿಮಗೆ ಹೇಳುತ್ತಿರುತ್ತದೆ. ಈ ಕನಸುಗಳ ಕೊಲೆಗಾರರೊಂದಿಗೆ ಮತ್ತೆ ಮಾತನಾಡಿ.

ದಾವೀದನು ಗೊಲ್ಯಾತನಿಗೆ ಹಿಂತಿರುಗಿ ಮಾತನಾಡಿದನು. ಅದರಂತೆ ನೀವು  "ನನ್ನ ದೇವರು ಕೊಟ್ಟಿರುವ ಗಮ್ಯವನ್ನು ಕ್ರಿಸ್ತ ಯೇಸುವಿನಲ್ಲಿ ನಾನು ಪೂರೈಸುತ್ತೇನೆ" ಎಂದು ಕನಸುಗಳ  ಕೊಲೆಗಾರರಿಗೆ ಹೇಳಿರಿ. ನೀವು ಇದನ್ನು ಪ್ರತಿದಿನ ಮಾಡಬೇಕಾಗಬಹುದು, ಆದರೆ ಅದು ಸರಿಯಾದದ್ದೇ. ನೀವು ಈ ರೀತಿ ಹೆಚ್ಚು ಮಾತನಾಡಿದಷ್ಟೂ ಕನಸುಗಳು  ನಿಮ್ಮೊಳಗೆ ಹುಲುಸಾಗಿ ಬೆಳೆಯಲಾರಾಂಭಿಸಿ  ನಿಮ್ಮೊಳಗೆ ಸುರಕ್ಷಿತವಾಗಿರುತ್ತದೆ. 

"ನಾನು ನಿಮ್ಮನ್ನು ಕಟಾಕ್ಷಿಸಿ, ಈ ಸ್ಥಳಕ್ಕೆ ತಿರುಗಿ ಬರಮಾಡುವೆನೆಂಬ ನನ್ನ ಶುಭವಾಕ್ಯವನ್ನು ನಿಮಗಾಗಿ ನೆರವೇರಿಸುವೆನು. ಇವರಿಗೆ ಒಳ್ಳೆಯದಾಗಲಿ, ನಿರೀಕ್ಷೆಯಿರಲಿ ಎಂದು ನಾನು ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆನು; ಅವು ಅಹಿತದ ಯೋಚನೆಗಳಲ್ಲ, ಹಿತದ ಯೋಚನೆಗಳೇ."
ಎಂದು ಕರ್ತನು ನಮಗೆ ವಾಗ್ದಾನ ಮಾಡಿದ್ದಾನೆ. (ಯೆರೆಮಿಯಾ 29:10-11) 

ಯಾವಾಗಲೂ ನೆನಪಿಡಿ, ದೇವರಲ್ಲಿ, ಕನಸು ಕಾಣಲು ಅಥವಾ ದೇವರು ನಿಮಗೆ ನೀಡಿದ ಕನಸಗಳನ್ನು ಮುಂದುವರಿಸಲು ಮತ್ತು ಅದನ್ನು  ಪೂರೈಸಲು ಎಂದಿಗೂ ಸಮಯ ಮೀರಿ ಹೋಗಿಲ್ಲ. ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು ಕಾರ್ಯಗತರಾಗಿ. ನಿಮ್ಮ ಪಾಲಿನ ಕಾರ್ಯವನ್ನು ನೀವು ಮಾಡಿ; ದೇವರು ಆತನ ಪಾಲಿನ ಕಾರ್ಯವನ್ನು ಆತ ಮಾಡುತ್ತಾನೆ. 

Bible Reading: Genesis 37-39
ಪ್ರಾರ್ಥನೆಗಳು
ನಾನು ಕ್ರಿಸ್ತ ಯೇಸುವಿನಲ್ಲಿ ನನ್ನ ದೇವರು ನನಗೆ ನೀಡಿದ ಕರೆಯನ್ನು  ಪೂರೈಸುತ್ತೇನೆ, ಏಕೆಂದರೆ ನನ್ನನ್ನು ಬಲಪಡಿಸುವ ಕ್ರಿಸ್ತನ ಮೂಲಕ ನಾನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದೇನೆ .

Join our WhatsApp Channel


Most Read
● ಕೃತಜ್ಞತೆಯ ಪಾಠ
● ನೀವು ಯೇಸುವನ್ನು ಹೇಗೆ ದೃಷ್ಟಿಸುವಿರಿ?
● ಇದು ಕೇವಲ ಸಾಂದರ್ಭಿಕವಾಗಿ ಹೇಳುವ ಶುಭಾಶಯವಲ್ಲ
● ಭಾನುವಾರದ ಬೆಳಗ್ಗೆ ನಿಗದಿತ ಸಮಯಕ್ಕೆ ಸಭೆಗೆ ಹೋಗುವುದು ಹೇಗೆ
● ಆತನ ಆವರ್ತನಕ್ಕೆ ಅನುಗುಣವಾಗಿ ನಮ್ಮನ್ನು ಹೊಂದಿಸಿಕೊಳ್ಳುವುದು.
● ದೂರದಿಂದ ಹಿಂಬಾಲಿಸುವುದು
● ಆತನ ನೀತಿಯ ವಸ್ತ್ರದಿಂದ ಭೂಷಿತರಾಗುವುದು
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್