ಅನುದಿನದ ಮನ್ನಾ
2
1
87
ಚಾಣಾಕ್ಷತೆಯಿಂದ ಕೆಲಸ ಮಾಡಿ
Friday, 4th of July 2025
Categories :
ಉದ್ಯೋಗ ಸ್ಥಳ(Workplace)
'ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು? ಅಥವಾ ಮನುಷ್ಯರು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು? "(ಮತ್ತಾಯ 16:26)
ನೀವು ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತೀರಿ ಎಂಬುದು ಮುಖ್ಯವಲ್ಲ; ನೀವು ಎಷ್ಟು ಚಾಣಾಕ್ಷತೆಯಿಂದ ಕೆಲಸ ಮಾಡುತ್ತೀರಿ ಎಂಬುದು ಮುಖ್ಯ:
ಒಬ್ಬ ಮನುಷ್ಯನು ತುಂಬಾ ಕಷ್ಟಪಟ್ಟು ಕೆಲಸ ಮಾಡಿದರೆ ಅವನು ಶ್ರೀಮಂತನಾಗುತ್ತಾನೆ ಎಂದು ಹೇಳಲಾಯಿತು. ಅವನಿಗೆ ತಿಳಿದಿರುವ ಏಕೈಕ ಕಠಿಣ ಕೆಲಸವೆಂದರೆ ಗುಂಡಿಗಳನ್ನು ಅಗೆಯುವುದು. ಆದ್ದರಿಂದ ಅವನು ತನ್ನ ಹಿತ್ತಲಿನಲ್ಲಿ ದೊಡ್ಡ ಗುಂಡಿಗಳನ್ನು ಅಗೆಯಲು ಪ್ರಾರಂಭಿಸಿದನು. ಅವನು ಶ್ರೀಮಂತನಾಗಲಿಲ್ಲ; ಅವನಿಗೆ ಸರಿಯಾಗಿ ಬೆನ್ನುನೋವು ಮಾತ್ರ ಬಂತು. ಅವನು ಕಷ್ಟಪಟ್ಟು ಕೆಲಸ ಮಾಡಿದನು ಆದರೆ ಯಾವುದೇ ಆದ್ಯತೆಗಳಿಲ್ಲದೆ ಗುರಿಯಿಲ್ಲದೆ ಕೆಲಸ ಮಾಡಿದನು.
ಇಂದು ಹೆಚ್ಚಾಗಿ ಕೇಳಲಾಗುವ ಮಿಲಿಯನ್ ಡಾಲರ್ ಪ್ರಶ್ನೆ - ಜನರು, ಸಂಸ್ಥೆಗಳು ಅಥವಾ ವ್ಯವಹಾರಗಳು ಏಕೆ ವಿಫಲಗೊಳ್ಳುತ್ತವೆ?ಅದಕ್ಕೆ ಪ್ರಮುಖ ಕಾರಣವೆಂದರೆ, 'ಆದ್ಯತೆಗಳನ್ನು' ನಿಭಾಯಿಸುವಲ್ಲಿನ ವೈಫಲ್ಯತೆ.
ವಿದ್ಯಾರ್ಥಿ: ಅವನ ಅಥವಾ ಅವಳ ಆದ್ಯತೆಯೊಂದಿಗೆ ವ್ಯವಹರಿಸಲಿಲ್ಲವಾದರೆ - ಅಂದರೆ ಅಧ್ಯಯನಗಳೊಂದಿಗೆ ವ್ಯವಹರಿಸದೆ ತಮ್ಮ ಅನುಕೂಲಕಕ್ಕೆ ತಕ್ಕಂತೆ ಮುಂದೂಡುತ್ತಲೇ ಇದ್ದರೆ. ಅದು ಆದ್ಯತೆ ಯನ್ನು ನಿಭಾಯಿಸುವ ವೈಫಲ್ಯತೆಯಾಗುತ್ತದೆ.
ಮದುವೆಯನ್ನು ಪರಿಗಣಿಸಿ: ಸಂಗಾತಿಗಳಲ್ಲಿ ಒಬ್ಬರು ಪರಸ್ಪರ ಗುಣಮಟ್ಟದ ಸಮಯವನ್ನು ಮತ್ತೊಬ್ಬರೊಂದಿಗೆ ಕಳೆಯದೇ ಇತರ ಪ್ರಮುಖವಾದ ಕೆಲಸಗಳನ್ನು ಮಾಡುತ್ತಲೇ ಇದ್ದರೆ ಅದು ಆದ್ಯತೆ ಯನ್ನು ನಿಭಾಯಿಸುವ ವೈಫಲ್ಯತೆಯಾಗುತ್ತದೆ.
ಅದು ಇಡೀ ಲೋಕವನ್ನೇ ಗಳಿಸಿಕೊಂಡು ತನ್ನ ಪ್ರಾಣವನ್ನೇ ಕಳೆದುಕೊಂಡ ಮನುಷ್ಯನಂತೆ ಆಗುತ್ತದೆ.
ನೀವು ಪ್ರಗತಿ ಹೊಂದುತ್ತಿಲ್ಲ,ಅಥವಾ ನಿಮ್ಮ ಜೀವಿತದಲ್ಲಿ ಒಂದೇ ವೃತ್ತಾಕಾರವಾಗಿ ಸುತ್ತಾಡುತ್ತಿದ್ದೀರಿ ಎಂದು ನಿಮಗೆ ಅನಿಸುತ್ತಿದೆಯೇ? ನಿಮ್ಮ ಜೀವನದ ಕುರಿತು ನಿರಾಶೆಗೊಂಡಿದ್ದೀರಾ? ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ "ಹೌದು" ಆಗಿದ್ದರೆ, ನಿಮ್ಮ 'ಆದ್ಯತೆಗಳೆಲ್ಲವೂ' ಗೊಂದಲಕ್ಕೊಳಗಾಗಿರಬಹುದು.
ಪ್ರಾರ್ಥನೆ ಮತ್ತು ವಾಕ್ಯದೊಂದಿಗೆ ದಿನವನ್ನು ಪ್ರಾರಂಭಿಸುವ ಮೂಲಕ ಕರ್ತನಾದ ಯೇಸುವನ್ನು ನಿಮ್ಮ ಪ್ರಮುಖ ಆದ್ಯತೆಯನ್ನಾಗಿ ಮಾಡಿ. ಇದನ್ನು ಮಾಡುವುದರಿಂದ ನಿಮಗೆ ಬಹಳಷ್ಟು ತೊಂದರೆ ಮತ್ತು ಮನಸ್ಸಿಗೆ ಉಂಟಾಗಬಹುದಾದ ನೋವುಗಳಿಂದ ರಕ್ಷಣೆ ಸಿಗಬಹುದು. ನೀವು ಆತ್ಮನ ಧ್ವನಿಯನ್ನು ಕೇಳುತ್ತಿದ್ದೀರಾ?
Bible Reading: Psalms 77-80
ಪ್ರಾರ್ಥನೆಗಳು
ಓ ದೇವರೇ, ನೀನೇ ನನ್ನ ದೇವರು; ನಾನು ನಿನ್ನನ್ನು ಅತ್ಯಾಸಕ್ತಿಯಿಂದ ಮುಂಜಾನೆಯಲ್ಲಿಯೇ ಹುಡುಕುತ್ತೇನೆ. ನಾನು ನಿನ್ನ ರಾಜ್ಯ ಮತ್ತು ನಿನ್ನ ನೀತಿಗಾಗಿ ತವಕ ಪಡುವಾಗ , ಯೇಸುನಾಮದಲ್ಲಿ ಎಲ್ಲವೂ ನನಗೆ ಒದಗಿಬರುವುದು. ಆಮೆನ್.
Join our WhatsApp Channel

Most Read
● ಭಾನುವಾರದ ಬೆಳಗ್ಗೆ ನಿಗದಿತ ಸಮಯಕ್ಕೆ ಸಭೆಗೆ ಹೋಗುವುದು ಹೇಗೆ● ಒಂದು ಗಂಟೆ ಹಾಗೂ ಒಂದು ದಾಳಿಂಬ ಹಣ್ಣು
● ಯಾರೂ ವಿನಾಯಿತಿ ಹೊಂದಿದವರಿಲ್ಲ.
● ಶುದ್ಧೀಕರಣದ ತೈಲ
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ಬೆಟ್ಟಗಳ ಮತ್ತು ತಗ್ಗಿನ ದೇವರು.
● ಆರಾಧನೆಯನ್ನು ಜೀವನಶೈಲಿಯನ್ನಾಗಿ ಮಾಡಿ ಕೊಳ್ಳುವುದು
ಅನಿಸಿಕೆಗಳು