ಅನುದಿನದ ಮನ್ನಾ
ಸ್ತುತಿಯು ಸಮೃದ್ಧಿಯನ್ನುಂಟುಮಾಡುತ್ತದೆ
Saturday, 25th of January 2025
5
2
32
Categories :
ಹೊಗಳುತ್ತಾರೆ (Praise)
"ದೇವರೇ, ಜನಾಂಗಗಳು ನಿನ್ನನ್ನು ಕೀರ್ತಿಸಲಿ;
ಸರ್ವಜನಾಂಗಗಳು ನಿನ್ನನ್ನು ಕೀರ್ತಿಸಲಿ.
ಭೂವಿುಯು ಒಳ್ಳೇ ಬೆಳೆಯನ್ನು ಕೊಟ್ಟಿರುತ್ತದೆ.
ದೇವರು, ನಮ್ಮ ದೇವರೇ ನಮ್ಮನ್ನು ಆಶೀರ್ವದಿಸುವನು; (ಕೀರ್ತನೆ 67:5-6)
'ದೇವ ಜನರು ದೇವರನ್ನು ಸ್ತುತಿಸುವಾಗ' ಎನ್ನುವುದನ್ನು ಎಚ್ಚರಿಕೆಯಿಂದ ಗಮನಿಸಿ, ಆಗ ಮಾತ್ರ ಭೂಮಿಯು ಸಮೃದ್ಧಿಯನ್ನು ತರಲು ಸಾಧ್ಯ. ನಮಗೆ ಸಮೃದ್ಧಿಯಾಗುವವರೆಗೂ ನಾವು ದೇವರನ್ನು ಸ್ತುತಿಸಲು ಕಾಯಬಾರದು.
ಬನ್ನಿ; ಬದಲಾಗಿ, ಅದಕ್ಕಿಂತ ಮುಂಚೆಯೇ ನಾವು ಆತನನ್ನು ಸ್ತುತಿಸೋಣ. ಸ್ತುತಿಯು ಸಮೃದ್ಧಿಯನ್ನು ಉಂಟು ಮಾಡುತ್ತದೆ ಎಂಬುದನ್ನು ಸ್ವತಃ ಅನುಭವಿಸೋಣ.
ಯಾರು ಯಾವಾಗಲೂ ಗೊಣಗುಡುತ್ತಲೇ ಇರುತ್ತಾರೋ ಅವರು ಕರ್ತನಿಂದ ಬರುವ ಈ ಸಮೃದ್ಧಿಯನ್ನು ಅನುಭವಿಸಲು ಸಾಧ್ಯವಿಲ್ಲ. ಗೊಣಗುಟ್ಟುವುದು ಮತ್ತು ದೂರುವುದು ಸಮೃದ್ಧಿ ಹೊಂದಲಿಕ್ಕೆ ಅಡ್ಡಿಯಾಗಿದೆ. ದೈವಿಕ ನಿಬಂಧನೆಯು ಯಾವಾಗಲೂ ದೇವ ಜನರ ಸ್ತುತಿಗೆ ಪ್ರತಿಕ್ರಿಯಿಸುತ್ತದೆ . ಯೇಸು ತಂದೆಯನ್ನು ಸ್ತುತಿಸಿ, ಕೃತಜ್ಞತೆ ಸಲ್ಲಿಸಿದಾಗ ರೊಟ್ಟಿಗಳು ಮತ್ತು ಮೀನುಗಳು ಆಶೀರ್ವದಿಸಲ್ಪಟ್ಟವು. ಆಗ ಸಾವಿರಾರು ಜನರಿಗೆ ಅದನ್ನು ಆಹಾರವಾಗಿ ನೀಡುವಂತ ಮಹತ್ಕಾರ್ಯ ಉಂಟಾಯಿತು.
"ಆಗ ಆತನು ಜನರ ಗುಂಪಿಗೆ - ನೆಲದ ಮೇಲೆ ಕೂತುಕೊಳ್ಳಿರಿ ಎಂದು ಅಪ್ಪಣೆಕೊಟ್ಟು ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಅವುಗಳನ್ನು ಮುರಿದು ಹಂಚುವದಕ್ಕೆ ತನ್ನ ಶಿಷ್ಯರ ಕೈಗೆ ಕೊಟ್ಟನು; ಅವರು ಗುಂಪಿನವರಿಗೆ ಹಂಚಿಕೊಟ್ಟರು. ಇದಲ್ಲದೆ ಅವರಲ್ಲಿ ಕೆಲವು ಸಣ್ಣ ಮೀನುಗಳಿದ್ದವು; ಅವುಗಳನ್ನು ಆತನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ - ಇವುಗಳನ್ನೂ ಹಂಚಿಕೊಡಿರಿ ಅಂದನು. ಅವರು ಊಟಮಾಡಿ ತೃಪ್ತರಾದರು. ವಿುಕ್ಕ ತುಂಡುಗಳನ್ನು ಕೂಡಿಸಲಾಗಿ ಏಳು ಹೆಡಿಗೆ ಆದವು. (ಮಾರ್ಕ್ 8:6-8)
ಅಂತೆಯೇ, ನಾವು ನಮ್ಮ ಜೀವಿತದಲ್ಲಿ ಸಮೃದ್ಧಿಯನ್ನು ಅಥವಾ ಹೆಚ್ಚಳವನ್ನು ನೋಡಲು ಬಯಸಿದರೆ ನಮ್ಮ ಜೀವನದಲ್ಲಿ, ನಾವು ಈಗಾಗಲೇ ಹೊಂದಿರುವುದ್ದಕ್ಕಾಗಿ ದೇವರನ್ನು ಸ್ತುತಿಸುವುದನ್ನೂ ಮತ್ತು ಕೃತಜ್ಞತೆ ಸಲ್ಲಿಸುವುದನ್ನೂ ಕಲಿಯಬೇಕು
"ನೀನು ಪ್ರಜೆಗಳನ್ನು ವೃದ್ಧಿಗೊಳಿಸಿದ್ದೀ, ಅವರಿಗೆ ಸಂತೋಷವನ್ನು ಹೆಚ್ಚಿಸಿದ್ದೀ; ಸುಗ್ಗಿಕಾಲದಲ್ಲಿ ಜನರು ಹರ್ಷಿಸುವ ಹಾಗೂ ಕೊಳ್ಳೆಯನ್ನು ಹಂಚಿಕೊಳ್ಳುವವರು ಹೆಚ್ಚಳಪಡುವ ಹಾಗೂ ನಿನ್ನ ಮುಂದೆ ಆನಂದಿಸುತ್ತಾರೆ. (ಯೆಶಾಯ 9:3).
ಸ್ತುತಿ ಮತ್ತು ಆನಂದ ಯಾವಾಗಲೂ ಜೊತೆಯಾಗಿ ಹೋಗುತ್ತದೆ. ಆದ್ದರಿಂದ, ಸ್ತುತಿಯು ಒಂದು ಕುಡಗೋಲಿನಂತೆ ಅದನ್ನು ಕೊಯ್ಲು ಮಾಡಲು ಬಳಸಲಾಗುತ್ತದೆ. ಇಂದಿನಿಂದ, ಈ ಪ್ರಕಟಣೆಯೊಂದಿಗೆ ದೇವರನ್ನು ಸ್ತುತಿಸಿ ಮತ್ತು ಅದ್ಭುತ ಫಲಿತಾಂಶಗಳನ್ನು ಪಡೆಯಿರಿ.
Bible Reading: Exodus 21-22
ಅರಿಕೆಗಳು
ಕರ್ತನೇ ನನ್ನ ಕುರುಬನು. ಆತನು ನನ್ನನ್ನು ಮುನ್ನಡೆಸುವವನು. ಆದ್ದರಿಂದ ನನ್ನ ಸಂಪತ್ತು ಹೆಚ್ಚಳವಾಗುವಂತ ಎಲ್ಲಾ ಮಾರ್ಗಗಳು ಇಂದು ಯೇಸುನಾಮದಲ್ಲಿ ನನಗೆ ತೆರೆಯಲ್ಪಟ್ಟಿದೆ.
ಕರ್ತನೇ , ನೀನೇ ನನ್ನ ದೇವರು. ಆದ್ದರಿಂದ, ಬೆಳವಣಿಗೆಯನ್ನು ತರುವ ದೈವಿಕ ಪ್ರೇರಿತವಾದ ಸಕಲ ವಿಚಾರಗಳು ಮತ್ತು ಸಮೃದ್ಧಿಯೂ ಈಗ ಯೇಸುನಾಮದಲ್ಲಿ ನನ್ನ ಬಳಿಗೆ ಬರಲಿ.
Join our WhatsApp Channel
Most Read
● ದೇವರಿಗಾಗಿ ದಾಹದಿಂದಿರುವುದು● ಆ ವಾಕ್ಯವನ್ನು ಹೊಂದಿಕೊಳ್ಳಿರಿ
● ಸಾಲದಿಂದ ಹೊರಬನ್ನಿ : ಕೀಲಿಕೈ # 1
● ನಿಮ್ಮ ಆಶೀರ್ವಾದಗಳನ್ನು ಹೆಚ್ಚಿಸಿಕೊಳ್ಳುವ ಖಚಿತವಾದ ಮಾರ್ಗ
● ದಿನ 04:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಿಮ್ಮ ರೂಪಾಂತರವನ್ನು ತಡೆಯುತ್ತಿರುವುದೇನು ಎಂಬುದನ್ನು ತಿಳಿದುಕೊಳ್ಳಿರಿ.
● ಕಾವಲುಗಾರನು
ಅನಿಸಿಕೆಗಳು