ಅನುದಿನದ ಮನ್ನಾ
3
1
90
ಒಂದು ಮುಖಾಮುಖಿ ಭೇಟಿಯಲ್ಲಿ ಇರುವ ಸಾಮರ್ಥ್ಯ
Monday, 3rd of February 2025
Categories :
ಎಸ್ತರ್ ರಹಸ್ಯಗಳು: ಸರಣಿ (Secrets of Esther: Series)
"ಆ ಪುರುಷನು - ನನ್ನನ್ನು ಬಿಡು, ಬೆಳಗಾಗುತ್ತದೆ ಅನ್ನಲು, ಯಾಕೋಬನು - ನೀನು ನನ್ನನ್ನು ಆಶೀರ್ವದಿಸಿದ ಹೊರತು ನಿನ್ನನ್ನು ಬಿಡುವದಿಲ್ಲ ಅಂದನು." (ಆದಿಕಾಂಡ 32:26) ನ
ಮ್ಮ ಜೀವನದಲ್ಲಿ ಜರಗುವ ಕೆಲವು ಕ್ಷಣಗಳು ಇಡೀ ನಮ್ಮ ಜೀವಿತವನ್ನೇ ಬದಲಾಯಿಸಿಬಿಡುತ್ತವೆ. ನಮ್ಮ ಜೀವನದ ಕೆಲವು ಹಂತಗಳಲ್ಲಿ ನಾವು ಕೆಲವು ಜನರನ್ನು ಭೇಟಿಯಾದಾಗ ಆಗುವ ಸಂದರ್ಶನವು ಗಮನಾರ್ಹವಾಗಿರುತ್ತದೆ. ಸಾಮಾನ್ಯವಾಗಿ, ನಮಗೆ ಬೇಕಾಗಿರುವುದು ಆ ಪ್ರಭಾವಶಾಲಿ ವ್ಯಕ್ತಿಯೊಂದಿಗೆ ಕೇವಲ ಒಂದು ಭೇಟಿ ಮಾತ್ರ, ಅದರಿಂದ ನಾವು ಒಪ್ಪಂದವನ್ನು ಜಯಿಸಿಬಿಡುತ್ತೇವೆ.
ಕೆಲವು ಕ್ಲಬ್‌ಗಳು ಮತ್ತು ಸಂಘಗಳಿಗೆ ಸೇರಲು ಜನರು ಹೆಚ್ಚಿನ ಹಣವನ್ನು ಪಾವತಿಸುವುದನ್ನು ನಾನು ಕೇಳಿದ್ದೇನೆ ಏಕೆಂದರೆ ಅವರು ಅಲ್ಲಿನ ಪ್ರಭಾವಿ ವ್ಯಕ್ತಿಗಳಿಗೆ ಹತ್ತಿರವಾಗುತ್ತಾರೆ ಎಂಬ ಇರಾದೆ ಅವರದು. ಇಲ್ಲಿ ನನ್ನ ಪಾಯಿಂಟ್, ಒಂದು ಭೇಟಿಯ ಸಾಮರ್ಥ್ಯವನ್ನು ಎಂದಿಗೂ ಕಡಿಮೆ ಅಂದಾಜು ಮಾಡಬಾರದು . ಒಂದು ಸೇವೆಯ ಸಾಮರ್ಥ್ಯವನ್ನು ಎಂದಿಗೂ ಕಡಿಮೆ ಅಂದಾಜು ಮಾಡಬೇಡಿ. ಇದು ವಾಹ್ ಎನ್ನುವ ಸೇವೆಯಲ್ಲಿ ಸ್ವಲ್ಪ ಸಮಯದ ಹಿಂದೆ ಸಂಭವಿಸಿದೆ ಅಷ್ಟೇ.
ಒಬ್ಬ ಕುಡುಕನು ಭಾನುವಾರ ಸೇವೆಗೆ ಬಂದಿದ್ದ. ಅವನ ತಾಯಿ ಅವನನ್ನು ಬಲವಂತವಾಗಿ ಸೇವೆಗೆ ಕರೆತಂದಿದ್ದಳು. ಕೆಲವು ನಿಮಿಷಗಳ ನಂತರ, ನಾನು ಪ್ರಾರ್ಥಿಸಲು ಪ್ರಾರಂಭಿಸಿದಾಗ, ದೇವರ ಆತ್ಮನು ಅವನನ್ನು ಮುಟ್ಟಿದನು. ಆ ದಿನದಿಂದ ಅವರು ಮದ್ಯವನ್ನು ಮುಟ್ಟಲಿಲ್ಲ. ಕ್ರಿಸ್ತನೊಂದಿಗಿನ ಕೇವಲ ಒಂದು ಮುಖಾಮುಖಿಯ ಭೇಟಿ ಒಂದು ಕಾಲದ ಕುಡುಕನಾಗಿದ್ದ ಮತ್ತು ವ್ಯಸನಿಯಾಗಿದ್ದ ಅಂತವನ ದುರ್ಗುಣಗಳಿಗೆ ವಿಮುಖನಾಗಿ ತನ್ನ ನಾಲಿಗೆಯಲ್ಲಿ ಕುಡಿತದ ರುಚಿಯನ್ನು ಕಳೆದುಕೊಂಡನು. ಅವನು ಹೊಸ ವ್ಯಕ್ತಿಯಾಗಿ ಕ್ರಿಸ್ತನನ್ನು ಅನುಸರಿಸಲು ಪ್ರಾರಂಭಿಸಿದನು. ಇದು ಕರ್ತ ನೊಂದಿಗಿನ ಒಂದು ಮುಖಾಮುಖಿಯ ಭೇಟಿಯಲ್ಲಿರುವ ಶಕ್ತಿ. ನೀವು ಈ ಹಿಂದೆ ಅಂತಹ ಕರ್ತನೋಂದಿಗಿನ ಭೇಟಿಯ ಆ ಕ್ಷಣಗಳನ್ನು ಹೊಂದಿದ್ದೀರಿ ಎಂದು ಒಪ್ಪಿಕೊಳ್ಳುತ್ತೀರಿ.
ಎಸ್ತರಳು ರಾಜನ ಸಮ್ಮುಖದಲ್ಲಿ ನಿಂತ ಕೆಲವು ಕ್ಷಣಗಳು ಅವಳ ಭವಿಷ್ಯವನ್ನು ಬದಲಾಯಿಸಿದವು. ಒಬ್ಬ ರೈತ ಮಹಿಳೆಯನ್ನು ಅರಸನೊಂದಿಗೆ ರಾಣಿಯನ್ನಾಗಿ ಬಾಳುವಂತೆ ಮಾಡಲು ಕೆಲವೇ ಗಂಟೆಗಳನ್ನು ತೆಗೆದುಕೊಂಡಿತು. ಈ ಮೊದಲು, ಅವಳು ಸಾಮಾನ್ಯ ವ್ಯಕ್ತಿಯಾಗಿದ್ದಳು ಆದರೆ ರಾಜನೊಂದಿಗಿನ ಕೇವಲ ಒಂದು ಮುಖಾಮುಖಿ ಭೇಟಿ ಅವಳ ಜೀವನದ ಪಥವನ್ನೇ ಬದಲಾಯಿಸಿತು. ಅವಳ ಜೀವನದ ಅನ್ವೇಷಣೆ ಬದಲಾಯಿತು, ಮತ್ತು ಅವಳ ಜೀವಿತದ ಉದ್ದೇಶವು ತನಗಾಗಿ ಅಲ್ಲ ಆದರೆ ಇಸ್ರಾಯೇಲ್ಯರಿಗಾಗಿ ಎಂಬುದು ತಿಳಿಯಲ್ಪಟ್ಟಿತು.
ಇಂದಿನ ನಮ್ಮ ಅಧ್ಕಯನವು ಯಾಕೋಬನ ಜೀವಿತದ ಕುರಿತಾಗಿದೆ, ಅವನು ಒಬ್ಬ ಏಕಾಂಗಿ ವ್ಯಕ್ತಿಯಾಗಿದ್ದವ ಒಂದು ದಿನ ದೇವರ ದೂತನೊಂದಿಗಿನ ಒಂದು ಮುಖಾಮುಖಿ ಭೇಟಿಯು ಅವನು ಒಂದು ಜನಾಂಗಕ್ಕೆ ಪ್ರಭುವಾಗುವಂತೆ ಮಾಡಿತು.
"ಯಾಕೋಬನು ಒಂಟಿಗನಾಗಿ ಹಿಂದೆ ನಿಂತಿರಲು ಯಾರೋ ಒಬ್ಬ ಪುರುಷನು ಬೆಳಗಾಗುವ ತನಕ ಅವನ ಸಂಗಡ ಹೋರಾಡಿದನು. ಆ ಪುರುಷನು ತಾನು ಗೆಲ್ಲದೆ ಇರುವದನ್ನು ಕಂಡು ಯಾಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಯಾಕೋಬನು ಅವನ ಸಂಗಡ ಹೋರಾಡುತ್ತಿರುವಾಗಲೇ ಅವನ ತೊಡೆಯ ಕೀಲು ತಪ್ಪಿತು. ಆ ಪುರುಷನು - ನನ್ನನ್ನು ಬಿಡು, ಬೆಳಗಾಗುತ್ತದೆ ಅನ್ನಲು, ಯಾಕೋಬನು - ನೀನು ನನ್ನನ್ನು ಆಶೀರ್ವದಿಸಿದ ಹೊರತು ನಿನ್ನನ್ನು ಬಿಡುವದಿಲ್ಲ ಅಂದನು. ಆ ಪುರುಷನು - ನಿನ್ನ ಹೆಸರೇನು ಎಂದು ಕೇಳಿದ್ದಕ್ಕೆ ಅವನು - ಯಾಕೋಬನು ಅಂದಾಗ, ಅವನು ಯಾಕೋಬನಿಗೆ - ಇನ್ನು ಮೇಲೆ ನೀನು ಯಾಕೋಬನೆನ್ನಿಸಿಕೊಳ್ಳುವದಿಲ್ಲ; ದೇವರ ಸಂಗಡಲೂ ಮನುಷ್ಯರ ಸಂಗಡಲೂ ಹೋರಾಡಿ ಗೆದ್ದವನಾದ್ದರಿಂದ ನಿನಗೆ ಇಸ್ರಾಯೇಲೆಂದು ಹೆಸರುಂಟಾಗುವದು ಎಂದು ಹೇಳಿದನು. ಯಾಕೋಬನು - ನಿನ್ನ ಹೆಸರನ್ನು ನನಗೆ ತಿಳಿಸಬೇಕು ಸ್ವಾಮೀ ಅಂದಾಗ ಆ ಪುರುಷನು - ನನ್ನ ಹೆಸರನ್ನು ವಿಚಾರಿಸುವದೇಕೆ ಎಂದು ಹೇಳಿ ಅಲ್ಲಿ ಅವನನ್ನು ಆಶೀರ್ವದಿಸಿದನು. ಯಾಕೋಬನು - ನಾನು ದೇವರನ್ನೇ ಪ್ರತ್ಯಕ್ಷವಾಗಿ ನೋಡಿದ್ದೇನಲ್ಲಾ; ಆದರೂ ನನ್ನ ಪ್ರಾಣ ಉಳಿದದೆ ಅಂದುಕೊಂಡು ಆ ಸ್ಥಳಕ್ಕೆ ಪೆನೀಯೇಲ್ ಎಂದು ಹೆಸರಿಟ್ಟನು."ಆದಿಕಾಂಡ 32:24-30
ಆ ದಿನದಿಂದ ಯಾಕೋಬನ ಬಗ್ಗೆ ಎಲ್ಲವೂ ಬದಲಾಯಿತು. ಕುತೂಹಲಕಾರಿಯಾಗಿ, ದೇವರ ಉಪಸ್ಥಿತಿಯು ಜೀವನದ ಗಮನಾರ್ಹ ಮುಖಾಮುಖಿಯ ಚಿಲುಮೆಯಾಗಿದೆ. ಹೌದು, ನಿಮ್ಮ ಯೋಜನೆಗಳು ಅಥವಾ ಕಲ್ಪನೆಯನ್ನು ಅನುಮೋದಿಸುವ ಜನರನ್ನು ಭೇಟಿ ಮಾಡುವ ನಿಮ್ಮ ಪ್ರಯತ್ನಕ್ಕೆ ನಾನು ವಿರುದ್ಧವಾಗಿಲ್ಲ, ಆದರೆ ಹೆಚ್ಚು ಮುಖ್ಯವಾಗಿ, ದೇವರನ್ನು ಮುಖಾಮುಖಿಯಾಗುವ ಅವಕಾಶವನ್ನು ಎಂದಿಗೂ ಕಡೆಗಣಿಸಬೇಡಿ.
ದುರದೃಷ್ಟವಶಾತ್, ಸಭೆಗೆ ಗೈರುಹಾಜರಾಗುವ ಕುರಿತು ಹೆಚ್ಚು ಚಿಂತಿಸದ ಕ್ರೈಸ್ತರು ನಮ್ಮ ಮಧ್ಯೆ ಇದ್ದಾರೆ; ಅವರು ಸಭೆಗೆ ಹೋಗುವುದನ್ನೇ ಒಂದು ಹೊರೆಯಾಗಿ ನೋಡುತ್ತಾರೆ. ಅವರು ಸಭೆಯನ್ನು ತಪ್ಪಿಸಿಕೊಂಡಾಗ ಆತ್ಮೀಕ ಅಪಾಯಗಳಾಗುತ್ತವೆ ಎಂಬುದು ಅವರಿಗೆ ತಿಳಿದಿಲ್ಲ.
ಯೋಹನ ಅಧ್ಯಾಯ 20 ರಲ್ಲಿ, ಯೇಸುವಿನ ಪುನರುತ್ಥಾನದ ನಂತರ, ಶಿಷ್ಯರ ನಂಬಿಕೆಯನ್ನು ಬಲಪಡಿಸಲು ಆತನು ತನ್ನ ಶಿಷ್ಯರಿಗೆ ಕಾಣಿಸಿಕೊಂಡನು, ಆದರೆ ತೋಮನು ಆ ಭೇಟಿಯನ್ನು ತಪ್ಪಿಸಿಕೊಂಡನು. ಕೆಲವು ಕಾರಣಗಳಿಗಾಗಿ, ಅವನು ಯೇಸುವಿನ ಪುನರುತ್ಥಾನವನ್ನು ಅನುಮಾನಿಸಲು ಪ್ರಾರಂಭಿಸಿದನು, ಆದರೆಕೃಪೆಯಿಂದಲೇ ಅವನಿಗೆ ಎರಡನೇ ಅವಕಾಶ ಸಿಕ್ಕಿತು.
ಆದ್ದರಿಂದ, ಸ್ನೇಹಿತರೇ ಈ ವರ್ಷವು ದೇವರೊಂದಿಗೆ ಭೇಟಿಯಾಗುವ ಸಮಯವಾಗಿದೆ. ನಿಮಗೆ ಮುಖ್ಯವಾದ ಸರಿಯಾದ ಜನರು ಮತ್ತು ನಿಮ್ಮ ಜೀವನವನ್ನು ಬದಲಾಯಿಸುವ ಸರಿಯಾದ ಸಭೆಯನ್ನು ತಿಳಿದ ಜನರೇ ನಿಮಗೆ ಮುಖ್ಯವಾದವರು. ಆದ್ದರಿಂದ, ಆತನ ವಾಕ್ಯದ ಮೂಲಕ ದೇವರನ್ನು ಮುಖಾಮುಖಿಯಾಗುವ ಆ ಭೇಟಿಯ ತಂಗಾಳಿಗೆ ನಿಮ್ಮ ಹೃದಯವನ್ನು ತೆರೆಯಿರಿ.
Bible Reading: Leviticus 11-18
ಪ್ರಾರ್ಥನೆಗಳು
ತಂದೆಯೇ, ನನ್ನ ಜೀವನವನ್ನು ಬದಲಿಸಿದಂತ ನಿಮ್ಮ ಮುಖಾಮುಖಿ ಭೇಟಿಗಾಗಿ ಯೇಸುನಾಮದಲ್ಲಿ ನಿನಗೆ ಸ್ತೋತ್ರ. ನಿನ್ನೊಡನೆ ಮತ್ತೆ ಮತ್ತೆ ಭೇಟಿಯಾಗುವಂತೆ ನನ್ನ ಹೃದಯವನ್ನು ತೆರೆಯಬೇಕೆಂದು ನಾನು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ನಿಮ್ಮ ವಾಕ್ಯದ ಕಿರಣಗಳು ನನ್ನ ಆತ್ಮ-ಮನುಷ್ಯನನ್ನು ಭೇದಿಸುವುದನ್ನು ಮುಂದುವರಿಸಲಿ ಎಂದು ಯೇಸುನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ. ನಾನು ಕರ್ತನನ್ನು ವಿಭಿನ್ನ ರೀತಿಯಲ್ಲಿ ಅದು ಎಸ್ತರಳ ಹಾಗೆ ನನ್ನ ಜೀವಿತದ ಉದ್ದೇಶವನ್ನು ಉತ್ತುಂಗಕ್ಕೆ ಏರಿಸುವಂತ ಮುಖಾಮುಖಿ ಭೇಟಿಯನ್ನು ಅನುಭವಿಸುವೆನು ಎಂದು ನಾನು ಈ ವರ್ಷ ತೀರ್ಮಾನಿಸಿ ಅದನ್ನೇ ಯೇಸುನಾಮದಲ್ಲಿ ಘೋಷಿಸುತ್ತೇನೆ ಆಮೆನ್.
Join our WhatsApp Channel

Most Read
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ● ಯೇಸುವಿನ ಹೆಸರು.
● ಸರಿಯಾದವುಗಳನ್ನು ಶೋಧಿಸಿ ಅವುಗಳನ್ನೇ ಹಿಬಾಲಿಸುವುದು.
● ದೈವೀಕ ಶಿಸ್ತಿನ ಸ್ವರೂಪ: 2
● ದೇವರು ಹೇಗೆ ಒದಗಿಸುತ್ತಾನೆ #2
● ನಿಮ್ಮ ಮನಸ್ಸಿಗೆ ಉಣಬಡಿಸಿರಿ
● ಪುರುಷರು ಯಾಕೆ ಪತನಗೊಳ್ಳುವರು -2
ಅನಿಸಿಕೆಗಳು