ಅನುದಿನದ ಮನ್ನಾ
2
0
63
ಧೈರ್ಯವಾಗಿರಿ.!
Tuesday, 18th of February 2025
Categories :
ಎಸ್ತರ್ ರಹಸ್ಯಗಳು: ಸರಣಿ (Secrets of Esther: Series)
"ನಿಬಂಧನದ್ರೋಹಿಗಳು ಅವನ ನಯನುಡಿಗಳಿಂದ ಕೆಟ್ಟುಹೋಗುವರು; ತಮ್ಮ ದೇವರನ್ನು ಅರಿತವರೋ ದೃಢಚಿತ್ತರಾಗಿ ಕೃತಾರ್ಥರಾಗುವರು. (ದಾನಿಯೇಲ 11:32)
ಕೆಲವೊಮ್ಮೆ ಜೀವನವು ಭಯಪಡಿಸ ಬಹುದು. ಸತ್ಯವೇದವು ಸೈತಾನನನ್ನು ಯಾರನ್ನಾದರೂ ನುಂಗಲು ಹುಡುಕುತ್ತಿರುವ ಸಿಂಹಕ್ಕೆ ಹೋಲಿಸಿದೆ. ಅವನು ಸಿಂಹವಲ್ಲ, ಆದರೆ ಅವನು ಸಿಂಹದಂತೆ ನಟಿಸದಿದ್ದರೆ ಜನರನ್ನು ಅವರ ಉದ್ದೇಶ ಮತ್ತು ನಿಯೋಜನೆಯನ್ನು ಬಿಟ್ಟುಬಿಡುವಂತೆ ಹೆದರಿಸಲು ಆಗುವುದಿಲ್ಲ ಎಂಬುದು ಅವನಿಗೆ ತಿಳಿದಿದೆ. ಆದ್ದರಿಂದ ಅವನು ಘರ್ಜಿಸುತ್ತಾ ಬರುತ್ತಾನೆ ಇದರಿಂದ ಜನರು ತಮ್ಮ ಅದ್ಭುತ ಉದ್ದೇಶದಿಂದ ಸಾಧಾರಣ ಉದ್ದೇಶದ ಕಡೆಗೆ ಓಡಿಹೋಗುತ್ತಾರೆ. ಆದರೆ ನಿಮ್ಮ ದೇವರು ನಿಮಗೇ ಕೊಟ್ಟಿರುವ ಉದ್ದೇಶಕ್ಕೆ ತಕ್ಕಂತೆ ನಡೆಯಲು ನಿಮಗೆ ಧೈರ್ಯ ಬೇಕು.
ಎಸ್ತರಳು 5:1-2 ರಲ್ಲಿ , "ಮೂರನೆಯ ದಿನದಲ್ಲಿ ಎಸ್ತೇರಳು ರಾಜವಸ್ತ್ರ ಭೂಷಿತಳಾಗಿ ಅರಮನೆಯ ಒಳಗಣ ಪ್ರಾಕಾರವನ್ನು ಪ್ರವೇಶಿಸಿ ರಾಜ ಮಂದಿರದ ಎದುರಿನಲ್ಲಿ ನಿಂತಳು. ಅರಸನು ಆ ಮಂದಿರದಲ್ಲಿ ರಾಜಸಿಂಹಾಸನದ ಮೇಲೆ ಬಾಗಲಿಗೆದುರಾಗಿ ಕೂತುಕೊಂಡಿದ್ದನು. ಅವನು ಪ್ರಾಕಾರದಲ್ಲಿ ನಿಂತಿರುವ ಎಸ್ತೇರ್ ರಾಣಿಯನ್ನು ಕಂಡ ಕೂಡಲೆ ಆಕೆಯ ಮೇಲೆ ದಯವಿಟ್ಟು ತನ್ನ ಕೈಯಲ್ಲಿದ್ದ ಸುವರ್ಣದಂಡವನ್ನು ಆಕೆಯ ಕಡೆಗೆ ಚಾಚಿದನು. "
ಎಂದು ಸತ್ಯವೇದ ಹೇಳುತ್ತದೆ.
ಎಸ್ತರಳು ರಾಜನಿಂದ ಕರೆಯಲ್ಪಡದೆಯೇ ಅವನ ಮುಂದೆ ಹಾಜರಾಗಲು ಅವಳು ತನ್ನ ಮನದಲ್ಲಿ ಧೈರ್ಯ ತೆಗೆದುಕೊಂಡಳು. ಇದೊಂದು ವಿಶೇಷ ಧೈರ್ಯವಾಗಿ ಎಣಿಸಲ್ಪಟ್ಟಿತ್ತು ಏಕೆಂದರೆ ರಾಜ ಅಹಷ್ವೇರೋಷನು ತನ್ನ ರಾಣಿಯರನ್ನು ಚೆನ್ನಾಗಿ ಉಪಚರಿಸುವುದರಲ್ಲಿ ಉತ್ತಮ ಖ್ಯಾತಿಯನ್ನು ಹೊಂದಿರಲಿಲ್ಲ. ಆದರೂ ಅವಳು ಎಲ್ಲವನ್ನೂ ಮರೆತು ತನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಅವನ ಮುಂದೆ ಹೋದಳು. ಅದಕ್ಕೆ ಮುಂಚಿತವಾಗಿ ಅವಳು " ನೀನು ಹೋಗಿ ಶೂಷನಿನಲ್ಲಿ ಸಿಕ್ಕುವ ಎಲ್ಲಾ ಯೆಹೂದ್ಯರನ್ನು ಕೂಡಿಸು; ನೀವೆಲ್ಲರೂ ಮೂರು ದಿನ ಹಗಲಿರುಳು ಅನ್ನಪಾನಗಳನ್ನು ಬಿಟ್ಟು ನನಗೋಸ್ಕರ ಉಪವಾಸ ಮಾಡಿರಿ; ಅದರಂತೆ ನಾನೂ ನನ್ನ ಸೇವಕಿಯರೊಡನೆ ಉಪವಾಸದಿಂದಿರುವೆನು. ಅನಂತರ ನಾನು ವಿಧಿ ಮೀರಿ ಅರಸನ ಬಳಿಗೆ ಹೋಗುವೆನು, ಸತ್ತರೆ ಸಾಯುತ್ತೇನೆ ಎಂದು ಮೊರ್ದೆಕೈಗೆ ಮರಳಿ ಹೇಳಿಸಿದಳು."ಎಂದು ಎಸ್ತರ್ 4:16 ರಲ್ಲಿ ಸತ್ಯವೇದ ಹೇಳುತ್ತದೆ.
ತನ್ನ ಪ್ರಾಣವನ್ನೇ ಪಣಕ್ಕಿಟ್ಟರೂ ಆಕೆ ತಾನಿಟ್ಟ ಹೆಜ್ಜೆಯನ್ನು ಹಿಂದೆಗೆಯಲಿಲ್ಲ. ಹೌದು, ರಾಜನ ಮುಂದೆ ಆಹ್ವಾನವಿಲ್ಲದೆ ಹಾಜರಾಗುವುದು ಆ ದೇಶದ ಕಾನೂನಿಗೆ ವಿರುದ್ಧವಾಗಿತ್ತು. ಆದರೆ ರಾಜನು ಅವಳನ್ನು ಯಾವಾಗ ಕರೆ ಕಳುಹಿಸುತ್ತಾನೆಯೋ ಯಾರಿಗೆ ಗೊತ್ತು? ಆದರೂ, ತನ್ನ ಜನರನ್ನು ಮರಣಕ್ಕೆ ಒಪ್ಪಿಸುವ ಸುಗ್ರೀವಾಜ್ಞೆಗೆ ಈಗಾಗಲೇ ಸಹಿ ಹಾಕಲಾಗಿದ್ದು ಸಮಯವು ವೇಗವಾಗಿ ಚಲಿಸುತ್ತಿತ್ತು.
ಜೀವನದಿಂದ ನಿಮಗೆ ಬೇಕಾದುದನ್ನು ಪಡೆಯಲು ಧೈರ್ಯ ಬೇಕು. ದೇವರು ಹೇಳಿದಾಗ ಉದ್ಯಮವನ್ನು ಪ್ರಾರಂಭಿಸಲು ಧೈರ್ಯವಿದ್ದಿದ್ದರೆ ಇಂದು ಅನೇಕ ಜನರು ಅತ್ತ್ಯುತ್ತಮ ಸ್ಥಿತಿಯಲ್ಲಿ ಇರುತ್ತಿದ್ದರು.ಆದರೆ ಅವರ ಮನಸ್ಸು . "ನಾನು ವಿಫಲವಾದರೆ ಏನು ಗತಿ ?" "ಯಾರೂ ನನ್ನನ್ನು ಬೆಂಬಲಿಸದಿದ್ದರೆ ಏನು ಮಾಡುವುದು ?" "ನಾನು ಹೇಗೆ ತಾನೇ ಪ್ರಾರಂಭಿಸಲಿ?" "ನನಗೆ ಅನುಭವವಿಲ್ಲವಲ್ಲಾ ಎಂದೆಲ್ಲ ಬೇರೆ ಬೇರೆ ಹೆದರಿಕೆಗಳಿಂದ ತುಂಬಿತ್ತು.ಸೈತಾನನು ಆ ಜನರ ಮನಸ್ಸನ್ನು ಅನುಮಾನಗಳು ಮತ್ತು ಅನಿಶ್ಚಿತತೆಯಿಂದ ತುಂಬಿಸಿ ಆ ಉದ್ದೇಶವು ಸ್ಥಗಿತಗೊಳ್ಳುವಂತೆ ಮಾಡಿಬಿಟ್ಟನು.
ಅರಮನೆಯಲ್ಲಿರುವ ಜನರು ಎಸ್ತರಳನ್ನು ಆ ಆತ್ಮಹತ್ಯಾ ಕ್ರಮದಿಂದ ತಪ್ಪಿಸಲು ಪ್ರಯತ್ನಿಸಲಿಲ್ಲ ಎಂದು ನೀವು ಭಾವಿಸುತ್ತೀರಾ? "ಅಯ್ಯೋ ಸ್ತ್ರೀ ಯೇ , ನೀನು ನಿಜವಾಗಿಯೂ ಇದನ್ನು ಮಾಡಲು ಬಯಸುತ್ತೀಯ?" "ನೀನೇ ಮೊದಲು ಸತ್ತುಹೋದರೆ ಏನು ಗತಿ ? ನಿನ್ನ ಸಾವಿನಿಂದ ಏನು ಪ್ರಯೋಜನವಾದೀತು?" "ಯಾಕೆ ಇನ್ನೂ ಸ್ವಲ್ಪ ಸಮಯ ನೀನು ಕಾಯಬಾರದು?" "ಸರಿ, ಹೋಗುವ ಬದಲು, ಪ್ರಾಯಶಃ ನೀನು ರಾಜನಿಗೆ ಒಂದು ಪತ್ರವನ್ನು ಕಳುಹಿಸದರೆ ಆಗುತ್ತದೆ ಅಲ್ಲವೇ." "ಏಕೆ ನನಗೆ ಹುಷಾರಿಲ್ಲ ಎಂದು ನಟಿಸಬಾರದು, ಬಹುಶಃ ಆಗ ನಿನ್ನನ್ನು ನೋಡಲು ರಾಜನು ಬರಬಹುದಲ್ಲವೇ? "ಎಂದೆಲ್ಲಾ ಅವಳೊಂದಿಗಿನ ಸಖಿಯರು ಅವಳನ್ನು ಅನೇಕ ಬಾರಿ ಕೇಳಿರುತ್ತಾರೆ ಎಂದು ನನಗೆ ಖಾತ್ರಿಯಿದೆ, ಆದರೂ, ಎಸ್ತೇರಳು ಗೂಳಿಯ ಕೊಂಬನ್ನು ಹಿಡಿದು ಎದುರಿಸುವಂತೆ ತನ್ನ ದೇವರಲ್ಲಿ ನಂಬಿಕೆಯಿಟ್ಟು, ಖುದ್ದಾಗಿ ಹೋಗಿ ರಾಜನ ಮುಂದೆ ನಿಂತಳು.
ಆ ದಿಟ್ಟ ಹೆಜ್ಜೆಯ ಫಲವೇನು? "ಅರಸನು ಆಕೆಗೆ ಎಸ್ತೇರ್ ರಾಣಿಯೇ, ನಿನಗೇನು ಬೇಕು? ನಿನ್ನ ವಿಜ್ಞಾಪನೆ ಯಾವದು? ನನ್ನ ಅರ್ಧ ರಾಜ್ಯವನ್ನು ಕೇಳಿದರೂ ನಿನಗೆ ಕೊಡುತ್ತೇನೆ ಅಂದನು" ಎಂದು ಸತ್ಯವೇದ ಹೇಳುತ್ತದೆ.ಎಸ್ತೇರಳು 5:3. ಅವಳು ಕೊಲ್ಲಲ್ಪಡುವ ಬದಲು ರಾಜನ ಗಮನವನ್ನು ತನ್ನೆಡೆ ಸೆಳೆದಳು. ಅವಳ ಬಾಯಿ ತೆರೆಯದೆಯೇ, ರಾಜನು ಅವಳಿಗೆ ತನ್ನ ಅರ್ಧದಷ್ಟು ರಾಜ್ಯವನ್ನು ವಾಗ್ದಾನ ಮಾಡಲು ಸಿದ್ದನಾದನು.
ಹಲೋ ಗೆಳೆಯರೇ, ಹಾಗಾಗಿ ಧೈರ್ಯವಾಗಿರಿ. ಇಂದು ನಿಮ್ಮ ಉದ್ದೇಶಗಳನ್ನು ಚಾಲನೆ ಮಾಡಿ, ಯಾವುದಾದರೂ ಕರೆ ಮಾಡಲು ಹಿಂದೆ ಸರಿದಿದ್ದರೆ ಈಗ ಕರೆ ಮಾಡಿ. ಅರ್ಜಿಯನ್ನು ಕಳುಹಿಸಿ. ಆ ವ್ಯವಹಾರವನ್ನು ಪ್ರಾರಂಭಿಸಿ ಮತ್ತು ದೇವರು ನಿಮ್ಮಲ್ಲಿ ಕಾರ್ಯ ಮಾಡುವುದನ್ನು ನೋಡಿ.
ಎಸ್ತೇರಳು ರಾಜನ ಮುಂದೆ ಹೋದದ್ದು 'ಮೂರನೇ ದಿನ' ಎಂಬುದನ್ನೂ ಗಮನಿಸಿ. ಎಲ್ಲಾ ಮೂರನೇ ದಿನ! ಯೇಸು, ಮರಣದ ನಂತರ, ಮೂರನೇ ದಿನದಲ್ಲಿ ಜೀವಂದಿಂದ ಎಬ್ಬಿಸಲ್ಪಟ್ಟನು ಇದು ಮಾನವಕುಲದ ಇತಿಹಾಸದಲ್ಲಿಯೇ ಮಹಾನ್ ಘಟನೆಗೆ ಕಾರಣವಾಯಿತು - ಅದುವೇ ಪುನರುತ್ಥಾನ!
ರಾಜನ ಅನುಗ್ರಹವನ್ನು ಕಂಡುಕೊಂಡ ನಂತರ, ಸುವರ್ಣ ರಾಜದಂಡವನ್ನು ಅವಳೆಡೆಗೆ ಚಾಚಿದ ನಂತರ, ಎಸ್ತರಳು ಈಗ ಅವಳು ಇಷ್ಟಪಡುವ ಯಾವುದನ್ನಾದರೂ ಕೇಳಲು ರಾಜನಿಂದ ಖಾಲಿ ಚೆಕ್ ಅನ್ನು ಹೊಂದಿ ಕೊಂಡಳು. ವಾಹ್! ನೀವು ಏನನ್ನು ಕೇಳಲು ಬಯಸುತ್ತೀರಿ?
Bible Reading Numbers 11-13
ಪ್ರಾರ್ಥನೆಗಳು
ತಂದೆಯೇ, ನೀವು ನನಗೆ ಧೈರ್ಯದ ಆತ್ಮವನ್ನು ಅನುಗ್ರಹಿಸಬೇಕೆಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ನೀವು ನನ್ನ ಹೃದಯವನ್ನು ಧೈರ್ಯದಿಂದ ತುಂಬಿಸಬೇಕೆಂದು ನಾನು ಪ್ರಾರ್ಥಿಸುತ್ತೇನೆ. ನನ್ನಿಂದ ಸಕಲ ರೀತಿಯ ಭಯವನ್ನೂ ಮತ್ತು ಸಂದೇಹವನ್ನು ಯೇಸುನಾಮದಲ್ಲಿ ತೊಡೆದುಹಾಕಿ ಮತ್ತು ನಿಮ್ಮಲ್ಲಿ ನಂಬಿಕೆಯಿಂದ ಜೀವಿಸಲು ನನಗೆ ಸಹಾಯ ಮಾಡಿ. ಇನ್ನು ಮುಂದೆ ಯಾವುದೂ ಸಹ ನನ್ನನ್ನು ತಡೆಯುವುದಿಲ್ಲ ಎಂದು ನಾನು ಯೇಸುವಿನ ಹೆಸರಿನಲ್ಲಿ ಆದೇಶಿಸುತ್ತೇನೆ. ಆಮೆನ್.
Join our WhatsApp Channel

Most Read
● ದೇವರ ಎಚ್ಚರಿಕೆಗಳನ್ನು ಕಡೆಗಣಿಸಬೇಡಿರಿ● ಮಾತನಾಡುವ ವಾಕ್ಯದ ಶಕ್ತಿ
● ದಿನ 23:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಾವು ದೇವದೂತರಿಗೆ ಪ್ರಾರ್ಥನೆ ಮಾಡಬಹುದೇ
● ನಿಮ್ಮ ಗತಿಸಿ ಹೋದ ಕಾಲವು ನಿಮ್ಮ ಹೆಸರಾಗುವುದಕ್ಕೆ ಅವಕಾಶ ಕೊಡಬೇಡಿರಿ.
● ದಿನ 07:40 ದಿನಗಳು ಉಪವಾಸ ಹಾಗೂ ಪ್ರಾರ್ಥನೆ.
● ದಿನ 24:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು